ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ಆಕೆಯನ್ನು ಕೊಲೆ ಮಾಡಿ, ಆಕೆಯ ಪ್ರಿಯಕರನ ಕಾಲು ಮುರಿದ ಘಟನೆ ನಗರಕ್ಕೆ ಸಮೀಪದ ಮೂಕನಹಳ್ಳಿ ಎಂಬಲ್ಲಿ ಸೆ.30ರ ಮಂಗಳವಾರ ನಡೆದಿದೆ.ಆರೋಪಿ ವಿಜಯ್ ಅವರ ಪತ್ನಿ ಗೀತಾ (29) ಕೊಲೆಯಾದಾಕೆ, ಈತನ ಪ್ರಿಯಕರ ದಿಲೀಪ್ ತೀವ್ರಗಾಯಗೊಂಡು ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ.
Read More »ಫಿಲಿಪೈನ್ಸ್ ನಲ್ಲಿ ತಡರಾತ್ರಿ 6.7 ತೀವ್ರತೆಯ ಪ್ರಬಲ ಭೂಕಂಪ : 22 ಮಂದಿ ಸಾವು.
ತಡರಾತ್ರಿ ಫಿಲಿಪೈನ್ಸ್ ನಲ್ಲಿ ಸಂಭವಿಸಿದ 6.9 ತೀವ್ರತೆಯ ಪ್ರಬಲ ಭೂಕಂಪದ ನಂತರ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಇದು ಈ ವರ್ಷದ ದೇಶದ ಅತ್ಯಂತ ವಿನಾಶಕಾರಿ ವಿಪತ್ತುಗಳಲ್ಲಿ ಒಂದಾಗಿದೆ.ಮಂಗಳವಾರ ರಾತ್ರಿ ಸ್ಥಳೀಯ ಸಮಯ ರಾತ್ರಿ 10 ಗಂಟೆ ಸುಮಾರಿಗೆ ಮಧ್ಯ ಫಿಲಿಪೈನ್ಸ್ನಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಪ್ರಕಾರ, ಪಲೊಂಪನ್ನ ಪಶ್ಚಿಮಕ್ಕೆ ಸಮುದ್ರದಲ್ಲಿ ಸುಮಾರು 10 ಕಿಲೋಮೀಟರ್ ಆಳದಲ್ಲಿ …
Read More »ಹುಡುಗಿಯರನ್ನ ಚುಡಾಯಿಸಿದ ಆರೋಪ: ಕುಟುಂಬಗಳ ನಡುವೆ ಮಾರಾಮಾರಿ.
ಹುಡುಗಿಯರನ್ನು ಚುಡಾಯಿಸಿದ ಆರೋಪ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಥೇಟ್ ಸಿನಿಮೀಯ ರೀತಿಯಲ್ಲಿ ಗಲಾಟೆ ನಡೆದಿದೆ. ಗದಗ ಜಿಲ್ಲೆ ನರಗುಂದ ಪಟ್ಟಣದ ಕೊರವರ ಓಣಿಯಲ್ಲಿ ಘಟನೆ ನಡೆದಿದ್ದು, ಮಾರಾಮಾರಿ ವೇಳೆ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಪರಸ್ಪರ ದೂರು ಆಧರಿಸಿ 75ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಘಟನೆ ಸಂಬಂಧ ಎರಡೂ ಕಡೆಯವರು ಸೇರಿ 6 ಜನರನ್ನ ಪೊಲೀಸರು ಬಂಧಿಸಿದ್ದಾರೆ.
Read More »ಮಹಿಳೆಯರ ಒಳ ಉಡುಪು ಕದ್ದು ವಿಕೃತಾನಂದ: ಹುಬ್ಬಳ್ಳಿಯಲ್ಲಿ ಸೈಕೋ ವ್ಯಕ್ತಿ ಅಂದರ್.
. ಹೊರಗೆ ಒಣಗಲೆಂದು ಹಾಕಲಾಗ್ತಿದ್ದ ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ ಸೈಕೋ ವ್ಯಕ್ತಿಯೋರ್ವನನ್ನು ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ನಗರದ ತಂತಿ ನಗರದ ನಿವಾಸಿ, ಸೌಂಡ್ ಸಿಸ್ಟಂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಎಂದು ಗರುತಿಸಲಾಗಿದೆ.ವಿಷಯ ಬೆಳಕಿಗೆ ಬರ್ತಿದ್ದಂತೆ ಆರೋಪಿ ವಿರುದ್ಧ ಸ್ಥಳೀಯರು ಬೆಂಡಿಗೇರಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿಸಿ ಕ್ಯಾಮರಾ ದೃಶ್ಯಗಳ ಆಧಾರದ ಮೇಲೆ ಕಾರ್ತಿಕ್ ನನ್ನು ಈಗ ಬಂಧಿಸಲಾಗಿದೆ. ಸೈಕೋಪಾತ್ ಕಂಬಿ …
Read More »ಕುಡಿದ ನಶೆಯಲ್ಲಿ ಕಂಡ ಕಂಡವರ ಮೇಲೆ ಮಚ್ಚು ಬೀಸಿದ್ದ ಪುಂಡ ಅರೆಸ್ಟ್..!
ಕುಡಿದ ನಶೆಯಲ್ಲಿ ಕಂಡ ಕಂಡವರ ಮೇಲೆ ಮಚ್ಚು ಬೀಸುತ್ತಿದ್ದವನನ್ನು ವಿವಿಪುರ ಪೊಲೀಸರು ಬಂಧಿಸಿದ್ದಾರೆ. ಚಂದನ್ ಬಂಧಿತ ಆರೋಪಿಯಾಗಿದ್ದು, ಚಂದನ್ ಜೊತೆಗೆ ಲಾಂಗ್ ಬೀಸಿದ್ದ ಒರ್ವ ಕಾನೂನು ಸಂಘರ್ಷಕ್ಕೆ ಒಳಗಾದವನ ಮೇಲೆ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಲಾಗಿದೆ.ವಿವಿಪುರಂ ಬಳಿಯ ಜೆಪ್ಟೊ ಗೋಡನ್ ಬಳಿ ಮಚ್ಚು ಬೀಸಿದ್ದನು. ಏಕಾಏಕಿ ನೇರವಾಗಿ ಬಂದು ಲಾಂಗ್ ಬೀಸಿದ್ದು, ಘಟನೆ ಬಳಿಕ ವಿವಿಪುರ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
Read More »ಧಾರವಾಡದ ಮಾಜಿ ಸೈನಿಕನ ಸೈನಿಕ್ ಮೆಸ್ನಲ್ಲಿ ಗಲಾಟೆ ಕೇಸ್: ಇಬ್ಬರು ಪೊಲೀಸರ ಅಮಾನತು.
ಧಾರವಾಡದ ಸಪ್ತಾಪೂರ ಬಾವಿ ಬಳಿಯ ಮಾಜಿ ಸೈನಿಕರೊಬ್ಬರ ‘ಸೈನಿಕ್ ಮೆಸ್’ನಲ್ಲಿ ಇತ್ತೀಚೆಗೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಠಾಣೆ ಎಎಸ್ಐ ವಿದ್ಯಾನಂದ ಸುಬೇದಾರ್ ಹಾಗೂ ಕಾನ್ಸ್ಟೆಬಲ್ ರಾಚಪ್ಪ ಕಣಬೂರು ಅವರನ್ನು ಅಮಾನತುಗೊಳಿಸಲಾಗಿದೆ.ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
Read More »ಧಾರವಾಡ | ಸಾಧನೆಗೆ ಶ್ರದ್ಧೆ, ಕಠಿಣ ಪರಿಶ್ರಮ ಮುಖ್ಯ: ಎನ್. ಶಶಿಕುಮಾರ್.
ಹುಬ್ಬಳ್ಳಿ-ಧಾರವಾಡ ನಗರದ ಪೊಲೀಸ್ ಆಯುಕ್ತರ ಕಚೇರಿ ವತಿಯಿಂದ ನಗರದ ಮಗದುಮ್ಮ ಆನಂದ ಕಲ್ಯಾಣ ಮಂಟಪದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಭಾನುವಾರ ಆಯೋಜಿಸಿದ್ದ ವಿಶೇಷ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶ್ರದ್ಧೆ, ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಿ ಪರೀಕ್ಷೆ ಎದುರಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ’ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
Read More »ಬೆಂಗಳೂರು ನಿರ್ಮಾಣ ಹಂತದ ಕಟ್ಟಡದ ಬುನಾದಿ ಕುಸಿತ; ಮಣ್ಣಿನಡಿ ಸಿಲುಕಿದ ಕಾರ್ಮಿಕರು ಜೀವಂತ ಸಮಾಧಿ!.
ಸಿಲಿಕಾನ್ ಸಿಟಿ ಬೆಂಗಳೂರಿನ ಮಡಿವಾಳ ಸಿದ್ದಾರ್ಥ ಕಾಲೋನಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಭಾರಿ ದುರಂತ ಸಂಭವಿಸಿದೆ. ಅಡಿಪಾಯಕ್ಕಾಗಿ ತೆಗೆದಿದ್ದ ಆಳವಾದ ಗುಂಡಿಯ ಮೇಲೆ ಏಕಾಏಕಿ ಮಣ್ಣು ಕುಸಿದು ಬಿದ್ದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.ಗುತ್ತಿಗೆದಾರರು ಮತ್ತು ಕಟ್ಟಡ ಮಾಲೀಕರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವೇ ಎಂಬುದರ ಬಗ್ಗೆಯೂ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.
Read More »ಚೆನ್ನೈನ ವಿದ್ಯುತ್ ಸ್ಥಾವರ ಬಳಿ ಕಟ್ಟಡ ಕುಸಿದು 9ಕ್ಕೂ ಹೆಚ್ಚು ಸಾವು!
ತಮಿಳುನಾಡಿನ ಚೆನ್ನೈ ಸಮೀಪದ ತಿರುವಳ್ಳೂರ್ ಜಿಲ್ಲೆಯಲ್ಲಿರುವ ಎಣ್ಣೋರ್ ಥರ್ಮಲ್ ಪವರ್ ಸ್ಟೇಷನ್ನಲ್ಲಿ ಭೀಕರ ದುರ್ಘಟನೆ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದು ಹಲವರು ಸಾವನ್ನಪ್ಪಿದ್ದಾರೆ.ಸ್ಥಳದಲ್ಲೇ ನಾಲ್ವರು ಬಲಿಯಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ಇನ್ನೂ ಐವರು ನಿಧನರಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರುವ ಅಪಾಯ ಇದೆ.
Read More »ಹಾಸನ ಸ್ಫೋಟ ಪ್ರಕರಣ – ಅಸುನೀಗಿದ ದಂಪತಿ, ಮಗು ಅನಾಥ!
ಹಳೆಆಲೂರು ಪಟ್ಟಣದಲ್ಲಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಮೃತರನ್ನು ಸುದರ್ಶನ್ (32) ಮತ್ತು ಪತ್ನಿ ಕಾವ್ಯ (27) ಎಂದು ಗುರುತಿಸಲಾಗಿದೆ. ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ವೈದ್ಯಕೀಯ ಪ್ರಯತ್ನ ಫಲಕಾರಿಯಾಗದೇ ಇಬ್ಬರೂ ಕೂಡ ಕೊನೆಯುಸಿರೆಳೆದಿದ್ದು, ಇದೀಗ ದಂಪತಿಯ 14 ತಿಂಗಳ ಮಗು ಅನಾಥವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





