Breaking News

BigTv News

ಶಿಥಿಲಾವಸ್ಥೆಯಲ್ಲಿ ಸರ್ಕಾರಿ ಶಾಲೆ; ಮೇಲ್ಛಾವಣಿ ಬೀಳುವ ಆತಂಕ. ಕಾಂಪೌಂಡ್‌ನಲ್ಲಿ ಕೂತು ಪಾಠ ಕಲಿಯುತ್ತಿರುವ ಮಕ್ಕಳು..!

ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸರ್ಕಾರ ಹೊಸ, ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೂ ರಾಜ್ಯದಲ್ಲಿ ಹಲವಾರು ಶಾಲೆಗಳು ಶಿಥಿಲಾ ವ್ಯವಸ್ಥೆಯಲ್ಲಿವೆ. ಒಳ್ಳಾರಿಯಲ್ಲಿ ಸರ್ಕಾರಿ ಶಾಲೆಯೊಂದು ಶಿಥಿಲಾ ವ್ಯವಸ್ಥೆಯಲ್ಲಿದ್ದು, ಕಟ್ಟಡದ ಮೇಲ್ಛಾವಣಿ ಕುಸಿಯುವ ಆತಂಕದಲ್ಲಿಯೇ ಮಕ್ಕಳು ಪಾಠ ಕೇಳುವಂತಹ ಸ್ಥಿತಿ ಎದುರಾಗಿದೆ.ಹೀಗಾಗಿ, ಯಾವಾಗ ಕಟ್ಟಡ ಬೀಳುತ್ತದೋ ಎಂಬ ಭಯದಲ್ಲಿಯೇ ಶಿಕ್ಷಕರು ಶಾಲಾ ಕಾಂಪೌಂಡ್‌ನಲ್ಲಿ ಮಕ್ಕಳನ್ನು ಕುಳ್ಳಿರಿಸಿ ಪಾಠ ಮಾಡುತ್ತಿದ್ದಾರೆ.

Read More »

ಪ್ರಧಾನಿ ಮೋದಿ 75ನೇ ಹುಟ್ಟುಹಬ್ಬ: ಬುರ್ಜ್ ಖಲೀಫಾ ಲೈಟ್ ಶೋ ಮೂಲಕ ಶುಭ ಕೋರಿದ ದುಬೈ.

ಪ್ರಧಾನಿ ನರೇಂದ್ರ ಮೋದಿ ಅವರ 75 ನೇ ಹುಟ್ಟುಹಬ್ಬದ ಅಂಗವಾಗಿ ಬುಧವಾರ ರಾತ್ರಿ ದುಬೈನ ಐತಿಹಾಸಿಕ ಬುರ್ಜ್ ಖಲೀಫಾದಲ್ಲಿ ಮೋದಿ ಚಿತ್ರಗಳೊಂದಿಗೆ ಬೆಳಗಿತು.ನರೇಂದ್ರ ಮೋದಿಯವರಿಗೆ ನಿಮ್ಮ ಹುಟ್ಟುಹಬ್ಬದ ಹೃತ್ಪೂರ್ವಕ ಅಭಿನಂದನೆಗಳು. ನೀವು ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಮುಂದುವರಿಸಲಿ ಮತ್ತು ಭಾರತದ ಪ್ರಗತಿ ಮತ್ತು ಅದರ ಜನರ ಸಮೃದ್ಧಿಯನ್ನು ಮುನ್ನಡೆಸುವಲ್ಲಿ ನಿರಂತರ ಯಶಸ್ಸನ್ನು ನಾನು ಬಯಸುತ್ತೇನೆ” ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

Read More »

ಪರೀಕ್ಷೆ ವೇಳೆ ಶೌಚಾಲಯಕ್ಕೆ ಹೋಗಿದ್ದ ಬಾಲಕನಿಗೆ ಥಳಿತ.

ಪಟ್ಟಣದ ಎಸ್‌ಡಿವಿಎಸ್‌ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 5ನೇ ತರಗತಿ ವಿದ್ಯಾರ್ಥಿ ಗುರು ಪ್ರಸಾದ್‌ ಎಂಬಾತನ ಮೇಲೆ ಶಿಕ್ಷಕಿ ಭಾನುಮತಿ ಹಲ್ಲೆ ಮಾಡಿದ್ದು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಶಿಕ್ಷಕಿ ಈತನಿಗೆ ಅನುಮತಿ ಕೊಟ್ಟಿಲ್ಲ. ಆದರೂ, ಈತ ಶೌಚಾಲಯಕ್ಕೆ ತೆರಳಿದ್ದರಿಂದ ಕುಪಿತಗೊಂಡ ಶಿಕ್ಷಕಿ ಜಾಮಿಟ್ರಿ ಬಾಕ್ಸ್, ಕಡ್ಡಿ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ‌ಈ ವೇಳೆ ವಿದ್ಯಾರ್ಥಿ ತೀವ್ರ ಗಾಯಗೊಂಡು, ಕುಸಿದು ಬಿದ್ದಿದ್ದಾನೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More »

3ನೇ ಮಹಡಿಯಿಂದ ತಳ್ಳಿದ ಮಲತಾಯಿ! ಸಾವಿನ ಸತ್ಯ ಬಿಚ್ಚಿಟ್ಟ ಸಿಸಿಟಿವಿ!

ತಾಯಿಯ ಪ್ರೀತಿಯಿಂದ ವಂಚಿತಳಾದ ಪುಟ್ಟ ಬಾಲಕಿ, ತನ್ನ ಮಲತಾಯಿಯ ಕ್ರೂರ ಕೃತ್ಯಕ್ಕೆ ಬಲಿಯಾದ ದುರಂತ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ ಒಂದು ವಾರದಲ್ಲಿ ಸಿಸಿಟಿವಿ ದೃಶ್ಯಾವಳಿಯಿಂದ ಈ ಘೋರ ಅಪರಾಧದ ಸತ್ಯ ಬಯಲಾಗಿದೆ.ಮೃತ ಬಾಲಕಿ ಶಾನವಿ, ಕೇವಲ ಒಂದು ವರ್ಷದವಳಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಆಕೆಯ ತಂದೆ, ಅಜ್ಜ ಮತ್ತು ಅಜ್ಜಿಯ ಪೋಷಣೆಯಲ್ಲಿ ಬೆಳೆಯುತ್ತಿದ್ದಳು. ಪೊಲೀಸ್ ತನಿಖೆಯ ಸಮಯದಲ್ಲಿ, ರಾಧಾ ಅವರ ಕ್ರೂರತೆಗೆ ಕಾರಣ ಆಸ್ತಿ ಆಸೆ ಎಂಬುದು ತಿಳಿದುಬಂದಿದೆ. …

Read More »

ಡಿಜಿಟಲ್‌ ವಂಚಕರ ಕಾಟ ತಡೆಯಲಾಗದೇ ಹಣ ಪ್ರಾಣ ಎರಡೂ ಕಳೆದುಕೊಂಡ ನಿವೃತ್ತ ವೈದ್ಯೆ.

ಬೆಂಗಳೂರು ಪೊಲೀಸರು ಹೆಸರಿನಲ್ಲಿ ಡಿಜಿಟಲ್‌ ವಂಚಕರು ಸ್ಥಳೀಯ ನಿವೃತ್ತ ಸರ್ಕಾರಿ ವೈದ್ಯೆಯನ್ನು ಮೂರು ದಿನಗಳ ಕಾಲ ಡಿಜಿಟಲ್‌ ಅರೆಸ್ಟ್‌ಗೆ ಒಳಪಡಿಸಿದ ಕಾರಣ ಅವರು ಒತ್ತಡ ತಾಳಲಾಗದೇ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.ನಿಮ್ಮ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕೇಸು ದಾಖಲಾಗಿದೆ ಎಂದು ಆರೋಪಿಸಿದ್ದಾರೆ. ಮೊದಲಿಗೆ ವೈದ್ಯೆ ಈ ಕುರಿತು ಒಪ್ಪದೇ ಹೋದರೂ ಆಕೆಗೆ ಪದೇ ಪದೇ ಮೂರು ದಿನಗಳ ಕಾಲ ಇನ್‌ಸ್ಟಂಟ್‌ …

Read More »

ಇನ್ನೇನು ಪರೀಕ್ಷೆ ಬರೆದು ಪೊಲೀಸ್ ಆಗಬೇಕಾದವನು, ಅಪ್ಪನನ್ನು ಕೊಂದು ಜೈಲುಪಾಲಾದ.

ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಅಜಯ್ ಪಾಂಚಾಲ್ ಎಂದು ಗುರುತಿಸಲಾದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ದೇವಿದಾಸ್ ಕಾಶಿರಾಮ್ ಪಾಂಚಾಲ್ ಎಂದು ಗುರುತಿಸಲಾದ ವ್ಯಕ್ತಿ ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ಹೇಗೋ ಹೆಂಡತಿ ಮಗನನ್ನು ಸಾಕುತ್ತಿದ್ದರು.ಅವರ ಮಗ ಅಜಯ್ ಪಾಂಚಾಲ್ 12 ನೇ ತರಗತಿಯವರೆಗೆ ಓದಿದ್ದು, ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ. ಚಾಕೂರ್ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ, ಅಜಯ್ ತನ್ನ ತಂದೆಯಿಂದ ಪರೀಕ್ಷಾ ಶುಲ್ಕವನ್ನು …

Read More »

ಬೀದಿ ನಾಯಿ ಕೊಂದು, ಕಣ್ಣುಗುಡ್ಡೆ ಕಿತ್ತು ಅದರೊಂದಿಗೆ ಆಟವಾಡಿದ ವ್ಯಕ್ತಿ.!

ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಕೊಂದಿದ್ದು, ನಂತರ ಅದರ ಕಣ್ಣುಗುಡ್ಡೆಯೊಂದಿಗೆ ಆಟವಾಡುತ್ತಿದ್ದಾಗ ರಸ್ತೆಯಲ್ಲಿ ಪತ್ತೆಯಾಗಿದ್ದಾನೆ. ಮುಂಬೈ ಹೊರವಲಯದಲ್ಲಿರುವ ಮುಂಬ್ರಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.ಪೊಲೀಸರ ಪ್ರಕಾರ, ಮಂಗಳವಾರ ಸಂಜೆ ಸಾರ್ವಜನಿಕ ರಸ್ತೆಯಲ್ಲಿ ಬೀದಿ ನಾಯಿಯ ಮೇಲೆ ದಾಳಿ ನಡೆಸಲಾಗಿದೆ.ತೀವ್ರ ನೋವುಂಟುಮಾಡುವ ಅಪರಾಧಗಳನ್ನು ಒಳಗೊಂಡಿರುವ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 325 ರ ಅಡಿಯಲ್ಲಿ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More »

ನೆಲ್ಲೂರಿನಲ್ಲಿ ಭೀಕರ ರಸ್ತೆ ಅಪಘಾತ; ಮಗು ಸೇರಿದಂತೆ 7 ಜನ ಸಾವು.

ನೆಲ್ಲೂರಿನ ಸಂಗಮ್ ಮಂಡಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆರಮನ್ ಬಳಿ ಇಂದು ಟಿಪ್ಪರ್ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮದಿಂದ ಮಗು ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ.ರಸ್ತೆಯಲ್ಲಿ ಅತಿ ವೇಗವಾಗಿ ಬರುತ್ತಿದ್ದ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮದಿಂದ ವಾಹನವು ಲಾರಿಯ ಕೆಳಗೆ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದವರು ಮೃತಪಟ್ಟಿದ್ದಾರೆ. ಈ ಅಪಘಾತದ ಸಮಯದಲ್ಲಿ ಕಾರು ನೆಲ್ಲೂರಿನಿಂದ ಕಡಪದ ಕಡೆಗೆ ಸಾಗುತ್ತಿತ್ತು.ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಈ ದುರಂತ ಅಪಘಾತದ ಬಗ್ಗೆ ಆಘಾತ …

Read More »

2 ಬಾರಿ ಕಚ್ಚಿದ ನಾಯಿಗೆ ಜೀವಾವಧಿ ಶಿಕ್ಷೆ, ರಾಗಾ ಹೈಡ್ರೋಜನ್ ಬಾಂಬ್, ಇವಿಎಂಲ್ಲಿ ಅಭ್ಯರ್ಥಿಗಳ ಕಲರ್ ಪೊಟೋ.

ದೆಹಲಿಯನ್ನು ಬೀದಿನಾಯಿ ಮುಕ್ತ ಮಾಡಿ ಎಂಬ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ದೇಶಾದ್ಯಂತ ಸಂಚಲನ ಸೃಷ್ಟಿಸಿ ಚರ್ಚೆ ಹುಟ್ಟು ಹಾಕಿದ್ದ ನಿರಾಶ್ರಿತ ಶ್ವಾನಗಳಿಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರ ಹೊಸ ಆದೇಶ ಹೊರಡಿಸಿದೆ.ಉತ್ತರ ಪ್ರದೇಶ ಸರ್ಕಾರದಲ್ಲಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಅಮೃತ್ ಅಭಿಜಿತ್ ಅವರು ಈ ಆದೇಶ ಹೊರಡಿಸಿದ್ದಾರೆ. ಯಾರಿಗಾದರೂ ನಾಯಿ ಕಚ್ಚಿದ್ದು ತಿಳಿದುಬಂದರೆ, ಆ ಶ್ವಾನವನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಲಾಗುವುದು. ಬಳಿಕ 10 ದಿನ …

Read More »

ಬಸ್ ಇಳಿಯುತ್ತಿದ್ದಂತೆ ಅಟ್ಯಾಕ್ ಮಾಡಿ ಯುವಕನ ಕೊಚ್ಚಿ ಕೊಲೆ.

ಬಸ್ ಇಳಿಯುತ್ತಿದ್ದಂತೆ ಯುವಕನ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ದಾಳಿ ನಡೆಸಿ ಕೊಚ್ಚಿ ಕೊಲೆಗೈದ ಪ್ರಕರಣ ಹುಕ್ಕೇರಿ ಶಹಾಬಂದರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಮಹಾಂತೇಶ್ ಬುಕನಟ್ಟಿ (24) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ.ಯುವಕ ಕೆಲಸ ಮುಗಿಸಿ ಊರಿಗೆ ವಾಪಸ್ ಆಗಿದ್ದ. ಈ ವೇಳೆ ಬಸ್ ಇಳಿಯುತ್ತಿದ್ದಂತೆ ಹಿಂದಿನಿಂದ ಬಂದು ಮಚ್ಚಿನಿಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

Read More »