ಕ್ಯಾನ್ಸರ್ ಪೀಡಿತ ಕಣ್ಣಿನಿಂದ ತೀವ್ರ ಬಾಧೆಗೊಳಗಾಗಿದ್ದ ಹಸುವಿನ ಕಣ್ಣನ್ನು ಸಮೀಪದ ದಾಗಿನಕಟ್ಟೆಯ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಮೊಹ್ಮದ್ ಉಮರ್ ಫಾರೂಕ್ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ತೆಗೆದು ಹಾಕಿ ಹಸುವಿನ ಪ್ರಾಣ ಉಳಿಸಿದ್ದಾರೆ.ಹಸುವಿನ ಮಾಲೀಕ ದ್ಯಾಮಣ್ಣ, ‘ಇದು ಏಳು ವರ್ಷದ ಹಸುವಾಗಿದ್ದು, ಈಗ ಮೂರನೇ ಸೂಲಿನ ಗರ್ಭ ಧರಿಸಿದೆ. ಈಗಲೂ ಪ್ರತಿದಿನ 15 ಲೀಟರ್ ಹಾಲು ಕೊಡುತ್ತಿದೆ. ಡಾ.ಫಾರೂಕ್ ಅವರು ಇಂತಹ ಕ್ಯಾನ್ಸರ್ ಪೀಡಿತ ಹಸುವನ್ನು …
Read More »ದೊಡ್ಡಬಳ್ಳಾಪುರ: ರೈತನ ಮೇಲೆ ದಾಳಿ ನಡೆಸಿದ ಕರಡಿ.
ತಾಲ್ಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಕಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸುವಾಗ ರೈತನ ಮೇಲೆ ಕರಡಿ ದಾಳಿ ನಡೆಸಿ, ಗಾಯಗೊಳಿಸಿದೆ.ತಕ್ಷಣ ಎಚ್ಚೆತ್ತ ರೈತ ರಮೇಶ್ ಸಮೀಪದಲ್ಲೇ ಇದ್ದ ಮರವನ್ನು ಏರಿ ಕುಳಿತಿದ್ದಾರೆ. ಕರಡಿಯು ಸಹ ಮರ ಹತ್ತಿ ರಮೇಶ್ ಅವರ ತೊಡೆಯನ್ನು ಗಾಯಗೊಳಿಸಿದೆ. ರಮೇಶ್ ಅವರ ಕೂಗಾಟ ಕೇಳಿಸಿಕೊಂಡ ಅಕ್ಕಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಸ್ಥಳಕ್ಕೆ ದೌಡಾಯಿಸಿ ಬಂದು ಕರಡಿ ದಾಳಿಯಿಂದ ರಮೇಶ್ ಅವರನ್ನು …
Read More »ಅಕ್ರಮ ಸಾಗಾಟ: 210 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ.
ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು 210 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆಜೂರ ಗ್ರಾಮದ ನಿವಾಸಿ, ಲಾರಿ ಚಾಲಕ ಗಜಾನನ ಮಕಾಳೆ ಎಂಬಾತನನ್ನು ಬಂಧಿಸಲಾಗಿದೆ.ವಿಜಯಪುರದಲ್ಲಿರುವ ಎಫ್ಸಿಐ ರೈಲ್ವೆ ಗೂಡ್ಸ್ ಶೆಡ್ಡಿನಿಂದ ಅಕ್ಕಿ ಸಾಗಿಸುತ್ತಿರುವುದು ಗೊತ್ತಾಗಿದೆ.ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 4.76 ಲಕ್ಷ ರೂ. ಮೌಲ್ಯದ 210.43 ಕ್ವಿಂಟಲ್ ಅಕ್ಕಿ ಹಾಗೂ ಲಾರಿ ಸೇರಿದಂತೆ ಒಟ್ಟು …
Read More »ಹೈದರಾಬಾದ್ | ಶಾಲೆಯೊಳಗೆ ಅಕ್ರಮ ಕಾರ್ಖಾನೆ ಪತ್ತೆ: ಲಕ್ಷಾಂತರ ರೂ.ಮೌಲ್ಯದ ಮಾದಕ ದ್ರವ್ಯಗಳು ವಶ.
ಹೈದರಾಬಾದ್ ನ ಈಗಲ್ (ಎಲೈಟ್ ಆಯಕ್ಷನ್ ಗ್ರೂಪ್ ಫಾರ್ ಡ್ರಗ್ ಲಾ ಎನ್ ಫೋರ್ಸ್ ಮೆಂಟ್) ತಂಡವು ಬೊವೇನಪಲ್ಲಿಯಲ್ಲಿನ ಖಾಸಗಿ ಶಾಲೆಯಲ್ಲಿ ಕಾರ್ಯಾಚರಿಸುತ್ತಿದ್ದ ಅಲ್ಪ್ರಝೋಲಂ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿದ್ದು, ಸ್ಥಳದಿಂದ ಮಾದಕ ದ್ರವ್ಯಗಳು, ನಗದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳನ್ನು ವಶಪಡಿಸಿಕೊಂಡಿದೆ.
Read More »ಹೈದರಾಬಾದ್ | ಶಾಲೆಯೊಳಗೆ ಅಕ್ರಮ ಕಾರ್ಖಾನೆ ಪತ್ತೆ: ಲಕ್ಷಾಂತರ ರೂ.ಮೌಲ್ಯದ ಮಾದಕ ದ್ರವ್ಯಗಳು ವಶ.
ಹೈದರಾಬಾದ್ ನ ಈಗಲ್ (ಎಲೈಟ್ ಆಯಕ್ಷನ್ ಗ್ರೂಪ್ ಫಾರ್ ಡ್ರಗ್ ಲಾ ಎನ್ ಫೋರ್ಸ್ ಮೆಂಟ್) ತಂಡವು ಬೊವೇನಪಲ್ಲಿಯಲ್ಲಿನ ಖಾಸಗಿ ಶಾಲೆಯಲ್ಲಿ ಕಾರ್ಯಾಚರಿಸುತ್ತಿದ್ದ ಅಲ್ಪ್ರಝೋಲಂ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿದ್ದು, ಸ್ಥಳದಿಂದ ಮಾದಕ ದ್ರವ್ಯಗಳು, ನಗದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳನ್ನು ವಶಪಡಿಸಿಕೊಂಡಿದೆ.
Read More »ಅಸ್ಥಿ ವಿಸರ್ಜಿಸಿ ಹಿಂದಿರುಗುತ್ತಿದ್ದ ಕಾರ್ ಅಪಘಾತ; ಇಬ್ಬರು ಮಕ್ಕಳು ಸೇರಿದಂತೆ ಏಳು ಜನರ ಸಾವು.
ಹರಿದ್ವಾರದಲ್ಲಿ ಹಿರಿಯರ ಅಸ್ಥಿ ವಿಸರ್ಜನೆ ಮಾಡಿ ಹಿಂದಿರುಗುತ್ತಿದ್ದ ಕಾರ್ ಅಪಘಾತಕ್ಕೊಳಗಾಗಿ ಏಳು ಜನರು ಸಾವನ್ನಪ್ಪಿದ್ದಾರೆ. ಭಾನುವಾರ ತಡರಾತ್ರಿ ಜೈಪುರದ ಶಿವದಾಸಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ಭೀಕರತೆ ಎಷ್ಟಿತ್ತೆಂದ್ರೆ ಕಾರ್ನಲ್ಲಿದ್ದ ಎಲ್ಲಾ ಏಳು ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲಾ ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಅಪಘಾತಕ್ಕೊಳಗಾದ ಕಾರ್ ತೆರವುಗೊಳಿಸಿದ್ದಾರೆ.
Read More »ಭಾರತೀಯ ವಾಯುಸೇನೆಯಲ್ಲಿ ಇಂಜಿನೀಯರ್ ಆಗಿದ್ದ 25 ವರ್ಷದ ಯುವಕ ಆತ್ಮಹತ್ಯೆ!
ಭಾರತೀಯ ವಾಯುಸೇನೆಯಲ್ಲಿ ಇಂಜಿನೀಯರ್ ಆಗಿದ್ದ 25 ವರ್ಷದ ಲೋಕೇಶ್ ಪವನ್ ಕೃಷ್ಣ ಆತ್ಮಹತ್ಯೆ ಮಾಡಿಕೊಂಡ ಯುವಕ. ಬೆಂಗಳೂರಿನ ಚಿಕ್ಕಬಿದರಕಲ್ಲು ಪ್ರೆಸ್ಟೇಜ್ ಜಿಂದಾಲ್ ಸಿಟಿ ಅಪಾರ್ಟ್ಮೆಂಟ್ನಲ್ಲಿ ಈ ಪ್ರಕರಣ ನಡೆದಿದೆ. ಮೂಲತಃ ಆಂದ್ರದ ಕಡಪ ಜಿಲ್ಲೆಯ ನಿವಾಸಿ ಮೃತ ಲೋಕೇಶ್ ಪವನ್ ಕೃಷ್ಣ, ಹಲಸೂರಿನ ಮಿಲಿಟರಿ ಕ್ವಾಟರ್ಸ್ ನಲ್ಲಿ ವಾಸವಾಗಿದ್ದರು. 24ನೆ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ತನಿಖೆ ವೇಳೆ ಮೃತ ಲೋಕೇಶ್, ಹಲವು ದಿನಗಳಿಂದ ಊಟ ಸೇರುತ್ತಿರಲಿಲ್ಲ, ಹಾಗಾಗಿ …
Read More »ತಾಯಿ ಬೈದಿದ್ದಕ್ಕೆ ಆರನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!
ತಾಯಿ ಬೈದಿದ್ದಕ್ಕೆ ಆರನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು 6ನೇ ತರಗತಿ ವಿದ್ಯಾರ್ಥಿ ಕೃಷ್ಣ ಎಂದು ಗುರುತಿಸಲಾಗಿದೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದುವರೆಗೆ ಯಾರ ವಿರುದ್ಧವೂ ಪೊಲೀಸ್ ವರದಿ ದಾಖಲಾಗಿಲ್ಲ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಕೋಟ್ವಾಲಿ ಪೊಲೀಸ್ ಠಾಣೆಯ ಎಸ್ಎಚ್ಒ ದೇವೇಂದ್ರ ಸಿಂಗ್ ಹೇಳಿದ್ದಾರೆ.
Read More »ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೆರವಣಿಗೆ ನೋಡಲು ತೆರಳುತ್ತಿದ್ದ ಇಬ್ಬರು ದುರ್ಮರಣ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಡ್ಡರಬಂಡೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಇಬ್ಬರು ದುರ್ಮರಣ ಹೊಂದಿದ್ದಾರೆ.ಮೃತರನ್ನು ಗೆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎಫ್ ಡಿಎ ಶಶಿ(42), ದಂಡಿಗಾನಹಳ್ಳಿಯ ಮೆಕ್ಯಾನಿಕ್ ಮುನಿರಾಜು(28) ಎಂಬುದಾಗಿ ಗುರುತಿಸಲಾಗಿದೆ. ಮಂಚೇನಹಳ್ಳಿಯ ರಮೇಶ್ ಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Read More »ಮಗನ ಮಾನಸಿಕ ಅಸ್ವಸ್ಥತೆ; 13ನೇ ಮಹಡಿಯಿಂದ ಪುತ್ರನೊಂದಿಗೆ ಹಾರಿ ತಾಯಿ ಆತ್ಮಹತ್ಯೆ!
ಗ್ರೇಟರ್ ನೋಯ್ಡಾ ಏಸ್ ಸಿಟಿಯಲ್ಲಿರುವ ತಮ್ಮ ಅಪಾರ್ಟ್ಮೆಂಟ್ನ 13 ನೇ ಮಹಡಿಯ ಬಾಲ್ಕನಿಯಿಂದ ಹಾರಿ 37 ವರ್ಷದ ಮಹಿಳೆ ಮತ್ತು ಅವರ 11 ವರ್ಷದ ಮಗ ಶನಿವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.ಮಗನ ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ಮಹಿಳೆ ಸಾಕ್ಷಿ ಚಾವ್ಲಾ ತನ್ನ 11 ವರ್ಷ ಮಗನೊಂದಿಗೆ (ಮಗ ದಕ್ಷ) 13ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





