Breaking News

BigTv News

ನನಗೆ ಬದುಕೋಕೆ ಆಗ್ತಿಲ್ಲ ವಿಷ ಕೊಡಿ : ಕೋರ್ಟ್ ನಲ್ಲಿ ಜಡ್ಜ್ ಗೆ ಮನವಿ ಮಾಡಿದ ನಟ ದರ್ಶನ್!

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಕುರಿತು ಇಂದು ಆದೇಶ ಹೊರ ಬರಲಿದೆ. ಆದರೆ ದರ್ಶನ್ ಕೋರ್ಟ್ ನಲ್ಲಿ ನನಗೆ ವಿಷ ಕೊಡಿ ಅಂತ ಹೇಳಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ಹಾಸಿಗೆ ದಿಂಬು ಮನೆಯ ಊಟ ವಿಚಾರಕ್ಕೆ ಸಂಬಂಧಪಟ್ಟಂತೆ ಮನವಿ ಸಲ್ಲಿಸಿದ್ದು ಅಲ್ಲದೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುವ ಕುರಿತು ಇವೆರಡರ ಕುರಿತು ಆದೇಶ ಹೊರಬೀಳಲಿದೆ.ಮಧ್ಯಾಹ್ನ ಆದೇಶ ನೀಡುತ್ತೇವೆ ಎಂದು …

Read More »

ಸತೀಶ್ ಜಾರಕಿಹೊಳಿಯನ್ನ ಬೆಂಬಲಿಸಿದ ಪತಿಗೆ ಸಚಿವರ ಎದುರೇ ಪತ್ನಿಯಿಂದ ಕಪಾಳಮೋಕ್ಷ!

ಬಿಡಿಸಿಸಿ ಬ್ಯಾಂಕ್ ಚುನಾವಣಾ ಕಣ ರಂಗೇರುತ್ತಿದ್ದು, ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಎದುರೇ, ಅ‍ವರನ್ನು ಬೆಂಬಲಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿರ್ದೇಶಕನನ್ನು ಆತನ ಪತ್ನಿಯೇ ಕೊರಳಪಟ್ಟಿ ಹಿಡಿದು ಎಳೆದಾಡಿ, ಕಪಾಳಮೋಕ್ಷ ಮಾಡಿರುವ ಘಟನೆ ಸೋಮವಾರ ನಡೆದಿದೆ.

Read More »

ಯುವಕನ ಹೆಗಲ ಮೇಲೆ ಹತ್ತಿ ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಿದ ಕಾಂಗ್ರೆಸ್ ಸಂಸದ.

ಕತಿಹಾರ್ ಸಂಸದ ತಾರಿಕ್ ಅನ್ವರ್ ತಮ್ಮ ಬೆಂಬಲಿಗರು ಮತ್ತು ಕಾರ್ಮಿಕರೊಂದಿಗೆ ಬರಾರಿ ಮತ್ತು ಮಣಿಹರಿ ವಿಧಾನಸಭೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಸಂಸದರು ತಮ್ಮ ಬೆಂಬಲಿಗರೊಂದಿಗೆ ದೋಣಿ ಮತ್ತು ಟ್ರ್ಯಾಕ್ಟರ್ ಹತ್ತಿ ಗ್ರಾಮಸ್ಥರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದರು.ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಸದ ಸಮಯದಲ್ಲಿ, ಸಂಸದ ತಾರಿಕ್ ಅನ್ವರ್ ಮಣ್ಣು ಮತ್ತು ನೀರನ್ನು ನೋಡಿದ ನಂತರ ಯುವಕನ ಹೆಗಲ ಮೇಲೆ ಹತ್ತಿದರು. ಅದರ ವೀಡಿಯೊ ಕೂಡ …

Read More »

ಬೆಂಗಳೂರಿನಲ್ಲಿ ಕಾರು ಓಡಿಸಿ ಜೀವನ ನಡೆಸುತ್ತಿದ್ದ ರೌಡಿಶೀಟರ್‌ ಭೀಕರ ಹತ್ಯೆ !

ಸಿಲಿಕಾನ್ ಸಿಟಿಯ ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ ಕಾರ್ ಡ್ರೈವರ್‌ ಒಬ್ಬನನ್ನು ಕಲ್ಲಿನಿಂದ ಹೊಡೆದು ಕೊ8ಲೆ ಮಾಡಲಾಗಿದೆ. ಈ ಭೀಕರ ಹತ್ಯೆ ಪ್ರಕರಣವು ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಸಾವನ್ನಪ್ಪಿರುವ ವ್ಯಕ್ತಿ ರೌಡಿಶೀಟರ್‌ ಕೌಶಿಕ್ (25) ಎಂದು ಗುರುತಿಸಲಾಗಿದೆ.ಹತ್ಯೆಯ ಮಾಹಿತಿ ದೊರಕುತ್ತಿದ್ದಂತೆ ಬ್ಯಾಟರಾಯನಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಪೋಸ್ಟ್‌ಮಾರ್ಟಂ ವರದಿ ಆಧಾರದ ಮೇಲೆ ಹೆಚ್ಚಿನ ಮಾಹಿತಿಗಳು ಹೊರಬರುವ ನಿರೀಕ್ಷೆಯಿದೆ. ಈ …

Read More »

ಹುಡುಗಿ ವಿಷಯದಲ್ಲಿ ಜಗಳ – ಕೊಲೆ ಮಾಡಲು ಬಂದವನೇ ಕೊಲೆಯಾಗಿ ಹೋದ!

ಪ್ರೇಯಸಿಯ ವಿಷಯದಲ್ಲಿ ಮೂವರು ಸ್ನೇಹಿತರ ನಡುವೆ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯಕಂಡಿರುವ ಘಟನೆ ಬೆಂಗಳೂರಿನ ಮಹದೇವಪುರದಲ್ಲಿ ನಡೆದಿದೆ. ಬಿಜಾಪುರದ ಇಸ್ಮಾಯಿಲ್‌ (26) ಮೃತ ಯುವಕನಾಗಿದ್ದು, ಚಿತ್ರದುರ್ಗ ಮೂಲದ ಪ್ರತಾಪ್‌ ಆರೋಪಿಯಾಗಿದ್ದಾನೆ.

Read More »

ಪ್ರೇಯಿಸಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ವಿದ್ಯಾರ್ಥಿಯೋರ್ವ ಡೆತ್‌ನೋಟ್ ಬರೆದಿಟ್ಟು ಸೂಸೈಡ್.

ಪೇರೇಸಂದ್ರ ಗ್ರಾಮದ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದೆ.ವಯನಾಡು ಮೂಲದ ಮೊಹಮ್ಮದ್ ಶಬ್ಬೀರ್ (26) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಅಲೈಡ್ ಸೈನ್ಸ್ ಕೋರ್ಸ್‌ನ ಫೈನಲ್ ಇಯರ್ ಅಧ್ಯಯ ನ ಮಾಡುತ್ತಿದ್ದನು ಎನ್ನಲಾಗಿದೆ.ಇನ್ನು, ರೂಮ್‌ನ ಕಿಟಕಿಗೆ ಟವೆಲ್‌ ಕಟ್ಟಿ ಅದರಿಂದ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಪೇರೇಸಂದ್ರ ಠಾಣಾ ಪೊಲೀಸರು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ರೂಮ್‌ ಪರಿಶೀಲನೆ ನಡೆಸಿದಾಗ …

Read More »

ತವರು ಮನೆಯಿಂದ ವಾಪಸ್ ಬರಲಿಲ್ಲ ಎಂದು ಪತ್ನಿಗೆ ಚಾಕುವಿನಿಂದ ಇರಿದ ಪತಿ.

ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಚಾಕುವಿನಿಂದ ಇರಿದ ಘಟನೆ ಭಾನುವಾರ ನಡೆದಿದೆ. ಹೇಮಾವತಿ (26) ಇರಿತಕ್ಕೊಳಗಾಗಿ ಗಾಯಗೊಂಡ ಮಹಿಳೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆಯ ಪತಿಯಾದ ಆರೋಪಿ ನಾಗರಾಜು ಅವರನ್ನು ವಶಕ್ಕೆ ಪಡೆದು, ವಿಚಾರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ಸೇಡಂನಲ್ಲಿ ಛತ್ತೀಸಗಡದ ಇಬ್ಬರು ಕಾರ್ಮಿಕರ ಹತ್ಯೆ.

ಕ್ಷುಲ್ಲಕ ಕಾರಣಕ್ಕೆ ಆರಂಭಗೊಂಡ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಾಲ್ಲೂಕಿನ ಕೋಡ್ಲಾ-ಬೆನಕನಹಳ್ಳಿ ಗ್ರಾಮದ ಶ್ರೀ ಸಿಮೆಂಟ್ ಕಂಪನಿಯ ಕಾಲೊನಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮಧ್ಯೆ ಅಡುಗೆ ವಿಷಯಕ್ಕೆ ಸಂಬಂಧಿಸಿದಂತೆ ನಿತ್ಯ ಜಗಳವಾಗುತ್ತಿತ್ತು.ಭಾನುವಾರ ರಾತ್ರಿ ಜಗಳ ತಾರಕ್ಕೇರಿದ್ದು, ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಛತ್ತೀಸಗಡ ರಾಜ್ಯದ ಗೋಪಾಲ ಪಟೇಲ್ (31), ಗೋಪಾಲ‌ ವರ್ಮಾ (29) ಮೃತ ಕಾರ್ಮಿಕರು. ವಿಜಯ ನಶಾದ ಎಂಬ …

Read More »

ಪ್ರೀತಿ ವಿಚಾರಕ್ಕೆ ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಯ ಕಣ್ಣಿಗೆ ಖಾರದಪುಡಿ ಎರಚಿ ಚಾಕು ಇರಿದ ಯುವಕ!

ಪ್ರೀತಿ-ಮೇಮ ಎಂದು ಯುವತಿಯೊಂದಿಗೆ ಸುತ್ತಾಡುತ್ತಿದ್ದ ಯುವಕನಿಗೆ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡ ಯುವಕ, ವ್ಯಕ್ತಿಗೆ ಖಾರದ ಪುಡಿ ಎರಚಿ ಚಾಕು ಇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ದರ್ಶನ್ ಎಂಬ ಯುವಕ ಮಡಿವಾಳಪ್ಪ ಎಂಬುವವರಿಗೆ ಕಣ್ಣಿಗೆ ಖಾರದಪುಡಿ ಎರಚಿ ಚಾಕು ಇರಿದು ಕೊಲೆಗೆ ಯತ್ನಿಸಿದ್ದಾನೆ.ಗಂಭೀರವಾಗಿ ಗಾಯಗೊಂಡಿರುವ ಮಡಿವಾಳಪ್ಪ ಅವರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ನೇಪಾಳ ಪ್ರತಿಭಟನೆ: ರಾಷ್ಟ್ರಪತಿ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಸರ್ವಪಕ್ಷ ಸಭೆ ಕರೆದ ಪ್ರಧಾನಿ

ಭ್ರಷ್ಟಾಚಾರದ ವಿರುದ್ಧ ನೇಪಾಳದ ಜನರೇಷನ್ ಝೆಡ್ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮಂಗಳವಾರ ಸರ್ವಪಕ್ಷ ಸಭೆ ಕರೆದಿದ್ದಾರೆ.ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಅರ್ಥಪೂರ್ಣ ತೀರ್ಮಾನವನ್ನು ಕಂಡುಹಿಡಿಯಲು ನಾನು ಸಂಬಂಧಿತ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ.ಕಠ್ಮಂಡು ಪೋಸ್ಟ್ ಪ್ರಕಾರ, ಪ್ರತಿಭಟನಾಕಾರರು ರಾಜಕೀಯ ನಾಯಕರು ಮತ್ತು ಮಂತ್ರಿಗಳ ಹಲವಾರು ನಿವಾಸಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದರು. ಪ್ರತಿಭಟನಾಕಾರರು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪೃಥ್ವಿ ಸುಬ್ಬಾ ಗುರುಂಗ್ ಅವರ ಮನೆಗೆ …

Read More »