Breaking News

BigTv News

ಅಜಿತ್‌ ಹನುಮಕ್ಕನವರ್‌ ವಿರುದ್ಧ ಸೇರಿ 2 ಠಾಣೆಯಲ್ಲಿ 7 ಪ್ರಕರಣ ದಾಖಲು!

ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿದ ಪ್ರಕರಣದ ಕುರಿತು ಎಸ್‌ ಐಟಿ ತನಿಖೆ ನಡೆಯುತ್ತಿರುವಾಗಲೇ ನಡೆದ ಹಲ್ಲೆ ಹಾಗೂ ಸುಳ್ಳು ಸುದ್ದಿಗೆ ಸಂಬಂಧಿಸಿ ಅಜಿತ್‌ ಹನುಮಕ್ಕನವರ್‌ ವಿರುದ್ಧ ಸೇರಿ ಧರ್ಮಸ್ಥಳ ಹಾಗೂ ಬೆಳ್ತಂಗಡಿ ಪೊಲೀಸ್‌ ಠಾಣೆಗಳಲ್ಲಿ ಒಟ್ಟಾರೆ 7 ಪ್ರಕರಣಗಳು ದಾಖಲಾಗಿವೆ.ಧರ್ಮಸ್ಥಳ ಪಾಂಗಳ ಕ್ರಾಸ್‌ನಲ್ಲಿ ನಡೆದ ಹಲ್ಲೆಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಿದ್ದ ಉಜಿರೆಯ ಬೆನಕ ಆಸ್ಪತ್ರೆಯ ಬಳಿ ಸಾರ್ವಜನಿಕರು ಜಮಾವಣೆಗೊಂಡಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ …

Read More »

ಅಮೃತಹಳ್ಳಿ: ಸೂಟ್‌ಕೇಸ್‌ನಲ್ಲಿ ₹30 ಲಕ್ಷ ನಗದು ಪತ್ತೆ!

ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಂಕ್ಷನ್‌ನಲ್ಲಿ ಬುಧವಾರ ರಾತ್ರಿ ಅನುಮಾನಾಸ್ಪದವಾಗಿ ಪತ್ತೆಯಾದ ಸೂಟ್‌ಕೇಸ್‌ವೊಂದರಲ್ಲಿ ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ.ಮೆಜೆಸ್ಟಿಕ್‌ನಲ್ಲಿ ಇಳಿದಾಗ ತನ್ನ ಸೂಟ್‌ಕೇಸ್‌ ನಾಪತ್ತೆ ಆಗಿರುವುದು ಆ ವ್ಯಕ್ತಿಯ ಗಮನಕ್ಕೆ ಬಂದಿತ್ತು. ತಕ್ಷಣವೇ ಬಸ್‌ ಕ್ಲೀನರ್‌ಗೆ ಮಾಹಿತಿ ನೀಡಿದ್ದರು. ಕ್ಲೀನರ್‌ ಜತೆಗೆ ಅಮೃತಹಳ್ಳಿ ಠಾಣೆಗೆ ಬಂದು ನಗದು ತುಂಬಿದ್ದ ಸೂಟ್‌ಕೇಸ್‌ ತೆಗೆದುಕೊಂಡು ಹೋಗಿದ್ದಾರೆ. ಬ್ಯಾಂಕ್‌ನಿಂದ ಹಣ ಡ್ರಾ ಮಾಡಿದ್ದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಸಲ್ಲಿಸಿದರು. ದಾಖಲೆ ನೀಡಿದ ಬಳಿಕ ಹಣ ವಾಪಸ್‌ …

Read More »

ಫ್ರೀ ಫೈರ್ ಗೇಮ್ ಚಟ: ಅಕ್ಕನ ಮಗನನ್ನೇ ಕತ್ತು ಸೀಳಿ ಕೊಂದ ಮಾವ..!

ಬಾಲಕ ಅಮೋಘ ಕೀರ್ತಿ ಕಳೆದ 8 ತಿಂಗಳಿನಿಂದ ಮಾವ ನಾಗಪ್ರಸಾದ್ ಜೊತೆಗೆ ವಾಸವಿದ್ದ. ಈ ವೇಳೆ ಮೊಬೈಲ್​ನಲ್ಲಿ ಫ್ರೀಫೈರ್ ಗೇಮ್​​ಗೆ ಅಡಿಕ್ಟ್ ಆಗಿದ್ದ. ಗೇಮ್ ಚಟಕ್ಕೆ ಬಿದ್ದು ಪದೇ ಪದೇ ಹಣ ಕೇಳುತ್ತಿದ್ದ. ವಾರದ ಹಿಂದೆ ಹಣ ಕೊಡುವಂತೆ ಮಾವನ ಮೇಲೆ ಹಲ್ಲೆ ಕೂಡ ಮಾಡಿದ್ದ. ಇದರಿಂದ ಬೇಸತ್ತ ನಾಗಪ್ರಸಾದ್ ಬಾಲಕನ ಕತ್ತು ಸೀಳಿ ಕೊಂದಿದ್ದಾರೆ.ಮೋಘ ಕೀರ್ತಿ(14) ಮೃತ ದುರ್ಧೈವಿಯಾಗಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಕುಂಬಾರಹಳ್ಳಿಯ ವಿನಾಯಕ ಲೇಔಟ್​​ನಲ್ಲಿ …

Read More »

ಲವರ್’ ಜೊತೆ ಸೇರಿ ಪತಿಯನ್ನೇ ಬರ್ಬರ ಹತ್ಯೆಗೈದ ಪತ್ನಿ!

ಪ್ರೇಮ ಸಂಬಂಧವೇ ಕೊಲೆಗೆ ಕಾರಣವಾಯಿತು. ಮಾಹಿತಿಯ ಪ್ರಕಾರ, 35 ವರ್ಷದ ರಾಜಶ್ರೀ ಅಹಿರೆ ತನ್ನ ಪತಿ ಭರತ್ ಲಕ್ಷ್ಮಣ್ ಅಹಿರೆ ಜೊತೆ ಬಹಳ ದಿನಗಳಿಂದ ಜಗಳವಾಡುತ್ತಿದ್ದಳು. ರಾಜಶ್ರೀ ಚಂದ್ರಶೇಖರ್ ಎಂಬ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಈ ಸಂಬಂಧದ ಬಗ್ಗೆ ಪತಿ ಭರತ್ಗೆ ತಿಳಿದು ಪ್ರಶ್ನೆಗಳನ್ನು ಎತ್ತಿದಾಗ, ರಾಜಶ್ರೀ ಅವರ ಮೇಲೆ ಕಿರುಕುಳದ ಆರೋಪ ಹೊರಿಸಿದರು. ಇದರ ನಂತರ, ರಾಜಶ್ರೀ ಮತ್ತು ಚಂದ್ರಶೇಖರ್ ಒಟ್ಟಾಗಿ ಭರತ್ನನ್ನು ಕೊಲೆ ಮಾಡಲು ಸಂಚು ರೂಪಿಸಿದರು.ಆರೋಪಿಗಳು …

Read More »

ಕನ್ನಡ ಕೋಗಿಲೆ ಶೋ’ ಸ್ಪರ್ಧಿ, ಗಾಯಕಿ ಸವಿತಾರ 14 ವರ್ಷದ ಮಗ ಆತ್ಮಹತ್ಯೆ!!

ಜಾನಪದ ಗಾಯಕಿ, ಕನ್ನಡ ಕೋಗಿಲೆ ಶೋ ಸ್ಪರ್ಧಿ ಸವಿತಾ ಹಾಗೂ ಗಣೇಶ್‌ ಪ್ರಸಾದ್‌ ಮಗ ಗಾಂಧಾರ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಆದರೆ ಇದಕ್ಕೆ ನಿಖರವಾದ ಕಾರಣ ಏನು ಎಂದು ರಿವೀಲ್‌ ಆಗಿರಲಿಲ್ಲ. ಈಗ ಈ ಸಾವಿಗೆ ವೆಬ್‌ ಸಿರೀಸ್‌ ಕಾರಣ ಎಂಬ ಮಾಹಿತಿ ಹೊರಬಂದಿದೆ.ಬನಗಿರಿಯಲ್ಲಿ ಗಾಂಧಾರನ ಮನೆಯಿತ್ತು. ಬನಶಂಕರಿಯ ಶಾಲೆಯಲ್ಲಿ ಆತ ಓದುತ್ತಿದ್ದನು. ಆಗಸ್ಟ್‌ 3ರ ರಾತ್ರಿ ಗಾಂಧಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ. ಚೆನ್ನಮ್ಮನ ಕೆರೆಅಚ್ಚು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ …

Read More »

ಕಾಂತಾರ ಚಾಪ್ಟರ್ 1 ರಲ್ಲಿ ಕನಕವತಿ ಆದ ರುಕ್ಮಿಣಿ ವಸಂತ್ – ಫಸ್ಟ್ ಲುಕ್ ರಿಲೀಸ್

ಇಡೀ ದೇಶದಲ್ಲೇ ಭಾರೀ ಕುತೂಹಲ ಮೂಡಿಸಿರುವ ಕಾಂತಾರ ಚಾಪ್ಟರ್ 1 ಸಿನೆಮಾ ಈಗಾಗಲೇ ಶೂಟಿಂಗ್ ಕಾರ್ಯ ಮುಗಿಸಿದೆ. ಇದೀಗ ಈ ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್ ಕನಕವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಈ ಶುಭದಿನದಂದು, ಚಿತ್ರತಂಡವು ಅವರ ಫಸ್ಟ್ ಲುಕ್ ರಿಲೀಸ್ ಮಾಡಿದೆ.ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶಿಸಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಶೂಟಿಂಗ್ ಸಂಪೂರ್ಣವಾಗಿದ್ದು, ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ನಾಯಕ ನಟ ರಿಷಬ್ …

Read More »

ಬೀಳಗಿ | ಸಮುದಾಯ ಭವನ ನಿರ್ಮಾಣಕ್ಕೆ ₹20 ಲಕ್ಷ: ಶಾಸಕ ಜೆ.ಟಿ. ಪಾಟೀಲ

ಹಡಪದ ಅಪ್ಪಣ್ಣ ಸಮಾಜ ಬಾಂಧವರು ಸಮಾಜದ ಕಾರ್ಯಚಟುವಟಿಕೆಗಳಿಗಾಗಿ ಸಮುದಾಯ ಭವನ ನಿರ್ಮಿಸುವ ಉದ್ದೇಶ ಹೊಂದಿದ್ದು, ಇದಕ್ಕೆ₹20 ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.ನಿರಂತರ ದುಡಿಮೆ ಕಾಯಕ ಮಾಡುವ ಹಡಪದ ಅಪ್ಪಣ್ಣ ಸಮಾಜ, ನಿತ್ಯ ಕ್ಷೌರಿಕ ವೃತ್ತಿ ಮಾಡಿ ಜೀವನ ಸಾಗಿಸುವರು. ಈ ಸಮಾಜದ ಬಹುತೇಕ ಕುಟುಂಬಗಳಲ್ಲಿ ಜಮೀನು ಇಲ್ಲದೆ ಜೀವನ ಸಾಗಿಸುತ್ತಿರುವರು.ಇಂತಹ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯ ನೀಡಲಾಗುವುದು ಜೊತೆಗೆ ಹಡಪದ ಅಪ್ಪಣ್ಣ …

Read More »

ಚಾಮುಂಡಿ ಬೆಟ್ಟದ ತಿರುವಿನಲ್ಲಿ ಮಗುಚಿದ ಬಸ್‌!

ಚಾಮುಂಡಿ ಬೆಟ್ಟದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.ನಗರ ಬಸ್ ನಿಲ್ದಾಣದಿಂದ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದ ಬಸ್‌ ಬೆಟ್ಟದ ಮಧ್ಯ ಭಾಗದ ರಸ್ತೆಯಲ್ಲಿನ ಗೆಸ್ಟ್ ಹೌಸ್ ಬಳಿ ಗುರುವಾರ ಸಂಜೆ ಮಗುಚಿ ಬಿದ್ದಿದೆ.ಸ್ಥಳಕ್ಕೆ ಬಂದ ಪೊಲೀಸರು, ಬಸ್ ತೆರವುಗೊಳಿಸಿ ಗಾಯಗೊಂಡಿದ್ದ ಪ್ರಯಾಣಿಕನನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಿದರು. ಅಪಘಾತದಿಂದ ಕೆಲ ಕಾಲ ಬೆಟ್ಟದ ರಸ್ತೆಯಲ್ಲಿ ಸಂಚಾರ ವ್ಯತ್ಯಯಗೊಂಡಿತು. ಕೆ.ಆರ್ ಸಂಚಾರ …

Read More »

ಮಂಗಳೂರು | ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ; ಮೂವರ ವಿರುದ್ಧ ಪ್ರಕರಣ

ಸಾಮಾಜಿಕ ಜಾಲತಾಣದಲ್ಲಿ ಅಪರಾಧಕ್ಕೆ ಪ್ರೇರಣೆಯಾಗುವಂತೆ ಹೇಳಿಕೆ ನೀಡಿದ, ಅಶ್ಲೀಲವಾಗಿ ಮಾತನಾಡಿದ ಹಾಗೂ ದ್ವೇಷ ಹುಟ್ಟಿಸುವಂತೆ ಹೇಳಿಕೆ ನೀಡಿದ ಆರೋಪದ ಮೇಲೆ ಮೂವರ ವಿರುದ್ಧ ಬೆಳ್ತಂಗಡಿ ಠಾಣೆಯ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಅಪರಾಧ ಕೃತ್ಯಗಳನ್ನು ನಡೆಸಲು ಪ್ರೇರಣೆಯಾಗುವಂತಹ, ಅಶ್ಲೀಲ ಹಾಗೂ ಸಾರ್ವಜನಿಕರಿಗೆ ಕಿರಿ ಕಿರಿಯುಂಟಾಗುವಂತೆ ಆರೋಪಿ ಗಿರೀಶ್ ಮಟ್ಟಣ್ಣನವರ್ ಮಾತನಾಡಿರುವ ವಿಡಿಯೊವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಬುಧವಾರ (ಆ.6ರಂದು) ಪ್ರಸಾರಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ನಿವಾಸಿ ಚರಣ್ ಶೆಟ್ಟಿ (32) ದೂರು …

Read More »

ಕಲಬುರಗಿ | ʼಲವ್ ಜಿಹಾದ್ʼ ಆರೋಪ ಸುಳ್ಳು ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಯುವತಿ

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಫಜಲಪುರ ಮೂಲದ ಯುವತಿಯೋರ್ವಳು ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದ್ದು, ಸ್ವತಃ ಯುವತಿಯೇ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.’ಲವ್ ಜಿಹಾದ್’ ಎನ್ನುತ್ತಿರುವ ಆರೋಪ ಸುಳ್ಳು, ʼಹಿಂದುತ್ವ ಸಂಘಟನೆಯವರೇ ನಮ್ಮ ಕುಟುಂಬದವರ ತಲೆ ಕೆಡುಸುತ್ತಿದ್ದಾರೆʼ ಎನ್ನುವ ಮೂಲಕ ಯುವತಿಯು ಆರೋಪವನ್ನು ನಿರಾಕರಣೆ ಮಾಡಿದ್ದಾರೆ.ʼನಾನು ಕಾಣೆಯಾಗಿಲ್ಲ, ನಾನು ಇಷ್ಟಪಟ್ಟಂತೆ ನನ್ನ ಸ್ವ ಇಚ್ಛೆಯಿಂದ ಪ್ರೀತಿಸಿದ ಹುಡುಗನ ಜೊತೆಗೆ ಮದುವೆಯಾಗಿದ್ದೇನೆ. ನಾನು ಕಾಣೆಯಾಗಿದ್ದೇನೆ ಎಂದು …

Read More »