Breaking News

ಅಮೃತಹಳ್ಳಿ: ಸೂಟ್‌ಕೇಸ್‌ನಲ್ಲಿ ₹30 ಲಕ್ಷ ನಗದು ಪತ್ತೆ!

ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಂಕ್ಷನ್‌ನಲ್ಲಿ ಬುಧವಾರ ರಾತ್ರಿ ಅನುಮಾನಾಸ್ಪದವಾಗಿ ಪತ್ತೆಯಾದ ಸೂಟ್‌ಕೇಸ್‌ವೊಂದರಲ್ಲಿ ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ.ಮೆಜೆಸ್ಟಿಕ್‌ನಲ್ಲಿ ಇಳಿದಾಗ ತನ್ನ ಸೂಟ್‌ಕೇಸ್‌ ನಾಪತ್ತೆ ಆಗಿರುವುದು ಆ ವ್ಯಕ್ತಿಯ ಗಮನಕ್ಕೆ ಬಂದಿತ್ತು. ತಕ್ಷಣವೇ ಬಸ್‌ ಕ್ಲೀನರ್‌ಗೆ ಮಾಹಿತಿ ನೀಡಿದ್ದರು. ಕ್ಲೀನರ್‌ ಜತೆಗೆ ಅಮೃತಹಳ್ಳಿ ಠಾಣೆಗೆ ಬಂದು ನಗದು ತುಂಬಿದ್ದ ಸೂಟ್‌ಕೇಸ್‌ ತೆಗೆದುಕೊಂಡು ಹೋಗಿದ್ದಾರೆ. ಬ್ಯಾಂಕ್‌ನಿಂದ ಹಣ ಡ್ರಾ ಮಾಡಿದ್ದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಸಲ್ಲಿಸಿದರು. ದಾಖಲೆ ನೀಡಿದ ಬಳಿಕ ಹಣ ವಾಪಸ್‌ ನೀಡಲಾಗಿದೆ. ಮದುವೆ ಸಮಾರಂಭದ ಖರ್ಚಿಗೆ ಆಂಧ್ರಪ್ರದೇಶದಿಂದ ಹಣ ತಂದಿದ್ದಾಗಿ ಆ ವ್ಯಕ್ತಿ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share News

About BigTv News

Check Also

ಪಿಎಸ್‌ಐ ಜೊತೆ ಮಾತಿನ ಚಕಮಕಿ ಪ್ರಕರಣ: ಐಶ್ವರ್ಯಗೌಡರಿಂದ ಬೇಷರತ್ ಕ್ಷಮೆಯಾಚನೆ

ಮಂಡ್ಯ ಜಿಲ್ಲೆಯ ಪಾಂಡವಪುರದ ಉಕ್ಕಡ ಮಾರಮ್ಮ ದೇವಸ್ಥಾನದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಸವಿತಾ ಪಾಟೀಲ್ ಅವರೊಂದಿಗೆ ನಡೆದ ಮಾತಿನ ಚಕಮಕಿಗೆ …

Leave a Reply

Your email address will not be published. Required fields are marked *