ಸಾಲಗಾರರ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾಚಿಗೊಂಡನಹಳ್ಳಿ ಈ ಒಂದು ಘಟನೆ ಸಂಭವಿಸಿದೆ.ಮನೆ ಜಪ್ತಿ ಮಾಡುವುದಾಗಿ ಫೈನಾನ್ಸ್ ಸಿಬ್ಬಂದಿಗಳು ಯುವಕನಿಗೆ ಬೆದರಿಕೆ ಹಾಕಿದ್ದರು. ಫೈನಾನ್ಸಿ ಒಂದರಲ್ಲಿ ಯಶವಂತ ಐದು ಲಕ್ಷ ರೂಪಾಯಿ ಸಾಲ ಪಡೆದಿದ್ದ.ಸುನಿಲ್ ನಾಯಕ್ ಎನ್ನುವವರ ಬಳಿ ಯಶವಂತ 40,000 ಸಾಲ ಮಾಡಿದ್ದ ಹಣ ವಾಪಸ್ ನೀಡದಿದ್ದಕ್ಕೆ ಸುನಿಲ್ ನಾಯಕ ಗಲಾಟೆ ಮಾಡಿದ್ದಾನೆ. ಹೀಗಾಗಿ ಡೆತ್ ನೋಟ್ ಬರೆದಿಟ್ಟು ಯಶವಂತ …
Read More »ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಮನನೊಂದು ಬೆಂಕಿ ಹಚ್ಚಿಕೊಂಡು ಮಹಿಳೆ!
ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಮನನೊಂದು ಬಡ ಮಹಿಳೆಯೋರ್ವಳು ಬೆಂಕಿ ಹಚ್ಚಿಕೊಂಡ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅನಗೋಡಿನ ಬೆಳ್ತೆರಗದ್ದೆಯಲ್ಲಿ ನಡೆದಿದೆ.ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿದ್ದು, ಆದರೆ ದೇಹವೆಲ್ಲ ಸುಟ್ಟು ನರಳಾಟಕ್ಕೆ ಸ್ಥಳೀಯರು ಸಹಕಾರದಿಂದ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಈ ಘಟನೆ ಆರ್ಥಿಕ ಸಂಕಷ್ಟ ಮತ್ತು ಸಾಮಾಜಿಕ …
Read More »ಮೋದಿ ವಿನಾಶಕಾರಿ ವಿದೇಶಾಂಗ ನೀತಿಯಿಂದ ಭಾರತ ಟ್ರಂಪ್ ಸುಂಕ ಎದುರಿಸುತ್ತಿದೆ : ಖರ್ಗೆ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸುವ ನಿರ್ಧಾರವು ವಿದೇಶಾಂಗ ನೀತಿಯ ವಿನಾಶಕಾರಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಮತ್ತು ಅದನ್ನು ಹೇಗೆ ಎದುರಿಸಬೇಕೆಂದು ಮೋದಿ ಸರ್ಕಾರಕ್ಕೆ ತಿಳಿದಿಲ್ಲ ಎಂದಿದ್ದಾರೆ.ನರೇಂದ್ರ ಮೋದಿ ಜಿ, ಟ್ರಂಪ್ ಕದನ ವಿರಾಮಕ್ಕೆ ಮಧ್ಯವರ್ತಿ ಎಂದು ಹೇಳಿಕೊಂಡಾಗ ನೀವು ಮೌನವಾಗಿದ್ದೀರಿ. ಅವರು ಕನಿಷ್ಠ 30 ಬಾರಿ ಹೇಳಿಕೊಂಡಿದ್ದಾರೆ ಮತ್ತು ಎಣಿಸುತ್ತಿದ್ದಾರೆ. ನವೆಂಬರ್ 30, 2024 ರಂದು, …
Read More »ಮತಾಂತರ, ಮದುವೆಗೆ ನಿರಾಕರಣೆ; ಕತ್ತು ಸೀಳಿ ಹತ್ಯೆ!
ಮಧ್ಯಪ್ರದೇಶದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ಧಾರ್ಮಿಕ ಮತಾಂತರ ಮತ್ತು ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬರನ್ನು ಧಾರುಣವಾಗಿ ಕತ್ತು ಸೀಳಿ ಕೊಲೆ ಮಾಡಲಾಗಿದೆ.ನೇಪಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನವರಾದಲ್ಲಿ ಹಿಂದೂ ಮಹಿಳೆಗೆ ಇಸ್ಲಾಂಗೆ ಮತಾಂತರವಾಗುವಂತೆ ರಯೀಸ್ ಒತ್ತಡ ಹಾಕುತ್ತಿದ್ದ, ಆಕೆ ನಿರಾಕರಿಸಿದ್ದಕ್ಕೆ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಸಂತ್ರಸ್ತೆ ಭಾಗ್ಯಶ್ರೀ ನಾಮದೇವ್ ಧನುಕ್ ಮನೆಯಲ್ಲಿದ್ದಾಗ ಆಕೆಯ ಮನೆಯೊಳಗೆ ನುಗ್ಗಿದ ಶೇಖ್ ರಯೀಸ್ (42) ಹಲ್ಲೆ ನಡೆಸಿ, ಆಕೆಯ …
Read More »ನಕಲಿ ಸ್ವಾಮೀಜಿ ನಿಸಾರ ವಿರುದ್ಧ ತಾಯಿಯಿಂದ ಭಾರಿ ಆರೋಪ!
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ವಿರಕ್ತ ಮಠದ ಮಠಾಧೀಪತಿ ಮುಸ್ಲಿಂ ವ್ಯಕ್ತಿ ಎನ್ನುವ ಹಿನ್ನಲೆಯಲ್ಲಿ ಗ್ರಾಮಸ್ಥರು ನಿಜಲಿಂಗ ಸ್ವಾಮಿಜಿ ಎನ್ನುವ ಹೆಸರಿನ ಮುಸ್ಲಿಂ ವ್ಯಕ್ತಿಯನ್ನು ಪೀಠದಿಂದ ಕೆಳಗಿಳಿಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.ನನ್ನ ಮಗ ನನ್ನ ಪಾಲಿಗೆ ಸತ್ತಿದ್ದಾನೆ ಎಂದುಕೊಂಡು ಬಿಟ್ಟಿದ್ದೇವೆ.ಈಗಲೂ ಅವನು ಮರಳಿ ಮನೆಗೆ ಬಂದರೆ ಸ್ವೀಕರಿಸುವುದಿಲ್ಲ. ನಾವು ಹುಟ್ಟಿ ಬೆಳೆದ ಮುಸ್ಲಿಂ ಧರ್ಮ ಬಿಟ್ಟು ಬೇರೆ ಧರ್ಮದ ದಾರಿ ಹಿಡಿದಿದ್ದಾನೆ.ಬೇರೆ ಧರ್ಮ ಪಾಲಿಸ್ತಿದಾನೆ ಎಂದ ಮೇಲೆ ಅವನನ್ನು …
Read More »ಪ್ರೀತಿಸುವುದಾಗಿ ನಂಬಿಸಿ ಬಾಲಕಿ ಗರ್ಭಿಣಿ ಮಾಡಿದ್ದವನ ಬಂಧನ!
ಜಾಲತಾಣದಲ್ಲಿ ಬಾಲಕಿಯನ್ನು ಪರಿಚಯ ಮಾಡಿಕೊಂಡು ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರೀತಿಸುತ್ತೇನೆಂದು ನಂಬಿಸಿ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ. ಈ ವೇಳೆ, ಸಂತ್ರಸ್ತ ಬಾಲಕಿ ಈಗ ಗರ್ಭಿಣಿಯಾಗಿದ್ದು, ಈ ಬಗ್ಗೆ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಸ್ಟಾಗಾಂ ಐ.ಡಿ ಮುಖಾಂತರ ಆರೋಪಿಯ ಬೆನ್ನತ್ತಿದ ಪೊಲೀಸರು ತುಮಕೂರು ಮೂಲದ ನರಸಿಂಹಮೂರ್ತಿಯನ್ನು ಪತ್ತೆ ಹಚ್ಚಿ, ದಸ್ತಗಿರಿ ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Read More »ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ!
ಅಂತರ್ಜಾತಿ ವಿವಾಹ ಆಗಿದ್ದಕ್ಕೆ ವ್ಯಕ್ತಿಯೊಬ್ಬ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ದರ್ಭಾಂಗಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.ಗುಂಡಿನ ದಾಳಿಯ ನಂತರ, ರಾಹುಲ್ನ ಸ್ನೇಹಿತರು ಮತ್ತು ಇತರ ಹಾಸ್ಟೆಲ್ನವರು ಝಾಗೆ ಥಳಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಪ್ರಾಥಮಿಕ ತನಿಖೆಗಳ ಪ್ರಕಾರ, ಮೃತ ವಿದ್ಯಾರ್ಥಿ ಅದೇ ಕಾಲೇಜಿನ ವಿದ್ಯಾರ್ಥಿನಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಇದರಿಂದ ಹುಡುಗಿಯ ತಂದೆ ಕೋಪಗೊಂಡು ಕೊಂದಿರುವುದು ಬೆಳಕಿಗೆ ಬಂದಿದೆ ಎಂದು ದರ್ಭಾಂಗದ SSP ಜಗುನಾಥ್ …
Read More »ಮಧ್ಯಪ್ರದೇಶದ ಜಬಲ್ಪುರದಲ್ಲಿ ಬೃಹತ್ ಚಿನ್ನದ ನಿಕ್ಷೇಪ ಪತ್ತೆ
ಮಹಾಂಗ್ವಾ ಕೆವಾಲ್ರಿ ಪ್ರದೇಶದಲ್ಲಿ ವರ್ಷಗಳ ಭೂವೈಜ್ಞಾನಿಕ ಸಮೀಕ್ಷೆಗಳು ಮತ್ತು ಮಣ್ಣಿನ ಪರೀಕ್ಷೆಯ ನಂತರ ಮಾಡಲಾದ ಈ ಆವಿಷ್ಕಾರವು ಭಾರತದ ಖನಿಜ ಪರಿಶೋಧನಾ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ.ಪ್ರಾಥಮಿಕ ವರದಿಗಳ ಪ್ರಕಾರ, ಚಿನ್ನದ ನಿಕ್ಷೇಪಗಳು ಸುಮಾರು 100 ಹೆಕ್ಟೇರ್ಗಳಲ್ಲಿ ಹರಡಿಕೊಂಡಿವೆ ಮತ್ತು ತಜ್ಞರು ಈ ಪ್ರಮಾಣವು ಲಕ್ಷ ಟನ್ಗಳಷ್ಟು ಇರಬಹುದು ಎಂದು ಸೂಚಿಸುತ್ತಾರೆ. ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲ ಇಲಾಖೆಯ ಪ್ರಾದೇಶಿಕ ಕಚೇರಿಯ ನೇತೃತ್ವದ ವ್ಯಾಪಕ ಸಮೀಕ್ಷೆಯಿಂದ ದೃಢೀಕರಣ ಬಂದಿದೆ. ಸ್ಥಳದಿಂದ …
Read More »ತುಂಗಾ ನದಿ ಸೇತುವೆ ಮೇಲೆಯೇ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು.
ಚಲಿಸುತ್ತಿರುವಾಗಲೇ ರೈಲಿನ ಬೋಗಿಗಳು ಬೇರ್ಪಟ್ಟು ಸೇತುವೆ ಮೇಲೆಯೇ ನಿಂತಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ದೊಡ್ಡ ದುರಂತವೊಂದು ತಪ್ಪಿದೆ. ರೈಲು ಸಂಖ್ಯೆ 16205 ತಾಳಗುಪ್ಪದಿಂದ ಮೈಸೂರಿಗೆ ಹೊರಟಿತ್ತು. ರೈಲು ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣ ಬಳಿ ಇರುವ ತುಂಗಾ ಸೇತುವೆ ಮೇಲೆ ಬರುತ್ತಿದ್ದಂತೆ ಏಕಾಏಕಿ 6 ಬೋಗಿಗಳು ರೈಲಿನಿಂದ ಬೇರ್ಪಟ್ಟಿವೆ.
Read More »-ಮಗನ ಜಗಳ ಬಿಡಿಸಲು ಹೋದ ಸಬ್ ಇನ್ಸ್ ಪೆಕ್ಟರ್ ಓರ್ವರನ್ನು ಹತ್ಯೆ
ತಂದೆ-ಮಗನ ಜಗಳ ಬಿಡಿಸಲು ಹೋದ ಸಬ್ ಇನ್ಸ್ ಪೆಕ್ಟರ್ ಓರ್ವರನ್ನು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಗುಡಿಮಂಗಲಮ್ ಜಿಲ್ಲೆಯಲ್ಲಿ ನಡೆದಿದೆ.ಎಂ.ಷಣ್ಮುಗವೇಲು (57) ಕೊಲೆಯಾದ ಸಬ್ ಇನ್ಸ್ ಪೆಕ್ಟರ್. ತಿರುಪ್ಪುರ ಜಿಲ್ಲೆಯ ಗುಡಿಮಂಗಲಂ ಠಾಣೆಯ ಸ್ಪೆಷಲ್ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





