ಕ್ಯಾಂಟರ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಹಿಂಬದಿ ಸವಾರರೊಬ್ಬರು ಮೃತಪಟ್ಟಿರುವ ಘಟನೆ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು. ಸವಾರನಿಗೆ ಸಣ್ಣ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಆಡುಗೋಡಿ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಾಲಕ ಹಾಗೂ ಕ್ಯಾಂಟರ್ ಅನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read More »ಅಭಿನಯ ಸರಸ್ವತಿ, ಬಹುಭಾಷಾ ಹಿರಿಯ ನಟಿ ಬಿ.ಸರೋಜಾದೇವಿ ಇನ್ನಿಲ್ಲ!
ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ಬಿ ಸರೋಜಾದೇವಿ ಸಾವನ್ನಪ್ಪಿದ್ದಾರೆ. ಸರೋಜಾದೇವಿಯವರು ವಯೋ ಸಹಜ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು ಅಭಿನಯ ಸರಸ್ವತಿಯಂದೆ ಸರೋಜಾದೇವಿ ಖ್ಯಾತಿ ಹೊಂದಿದ್ದರು. ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಐದು ಭಾಷೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಸರೋಜಾ ದೇವಿ ನಟಿಸಿದ್ದಾರೆ.ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ನಾಳೆ ಬೆಳಗ್ಗೆ 11 ಕ್ಕೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು …
Read More »ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಯನ್ನು ಎಳೆದು ಕಪಾಳಮೋಕ್ಷ ಮಾಡಿದ ಐಎಎಸ್ ಅಧಿಕಾರಿ
ದೀನದಯಾಳ್ ದಂಗ್ರೌಲಿಯಾ ಮಹಾವಿದ್ಯಾಲಯದಲ್ಲಿ ನಡೆದ ಈ ಘಟನೆ ಇದು. ತುಂಬಿದ್ದ ತರಗತಿಯಲ್ಲಿ ವಿದ್ಯಾರ್ಥಿಯನ್ನು ಕುರ್ಚಿಯಿಂದ ಎಳೆದು ಹೊಡೆದಿದ್ದಾರೆ. ಬಿಎಸ್ಸಿಯ ಎರಡನೇ ವರ್ಷದ ಗಣಿತ ಪರೀಕ್ಷೆ ವೇಳೆ ತಪಾಸಣೆಗೆಂದು ಸಂಜೀವ್ ರಾಥೋಡ್ ಹೋಗಿದ್ದರು. ರೋಹಿತ್ ರಾಥೋಡ್ ಎಂದು ಗುರುತಿಸಲಾದ ವಿದ್ಯಾರ್ಥಿಯನ್ನು ಎಂಬ ವಿದ್ಯಾರ್ಥಿಯನ್ನು ಥಳಿಸಿ ಕಪಾಳಮೋಕ್ಷ ಮಾಡುತ್ತಾರೆ. ಅಧಿಕಾರಿ ಕ್ರಮವನ್ನು ಸಮರ್ಥಿಸಿಕೊಂಡರು, ಪರೀಕ್ಷಾ ಹಗರಣ ನಡೆಯುತ್ತಿದೆ ಎಂದು ಹೇಳಿದ್ದು, ಕಾಪಿ ಹೊಡೆಯುತ್ತಿದ್ದ ಹಾಗಾಗಿ ಹೊಡೆದಿದ್ದೇನೆ ಎಂದು ಹೇಳಿದ್ದಾರೆ.
Read More »ತಾಯಿ ಬದುಕಿರುವಾಗಲೇ ಶವ ಪೆಟ್ಟಿಗೆ ತಂದು ಆಕೆಯನ್ನು ಕೂರಿಸಿ ಮೆರವಣಿಗೆ ಮಾಡಿದ ವ್ಯಕ್ತಿ!
ವ್ಯಕ್ತಿ ಶವಪಟ್ಟಿಗೆಯನ್ನು ಖರೀದಿಸಿದ ಬಳಿಕ 70 ವರ್ಷದ ತಾಯಿಯನ್ನು ಅದರಲ್ಲಿ ಕೂರಿಸಿ ಮನೆಯವರೆಗೆ ಮೆರವಣಿಗೆ ಮಾಡಿಸಿದ್ದಾರೆ.ಶವಪೆಟ್ಟಿಗೆಯನ್ನು ಶವವಾಹನದ ಮೇಲೆ ಇರಿಸಲಾಯಿತು. ಶವ ಪೆಟ್ಟಿಗೆಯ ಒಳಗೆ ಮಹಿಳೆ ಕುಳಿತಿದ್ದರು. ಬ್ಯಾಂಡ್ ನುಡಿಸಲಾಗುತ್ತಿತ್ತು. ಇದು ನೋಡಲು ನಿಜವಾದ ಶವ ಮೆರವಣಿಗೆಯಂತೆಯೇ ಇತ್ತು. ಇದು ಚೀನಾದ ಗ್ರಾಮೀಣ ಭಾಗದಲ್ಲಿ ಆಚರಿಸುವ ಸಾಂಪ್ರದಾಯಿಕ ಆಚರಣೆಯಾಗಿದೆ. ದಕ್ಷಿಣ ಚೀನಾದ ಹುನಾನ್ ಪ್ರಾಂತ್ಯದ ಚಾಂಗ್ಡೆಯ ಟಾವೊಯುವಾನ್ ಕೌಂಟಿಯ ಶುವಾಂಗ್ಕ್ಸಿಕೌ ಪಟ್ಟಣದ ವ್ಯಕ್ತಿಯೊಬ್ಬರು ಈ ರೀತಿ ಮಾಡಿದ್ದಾರೆ. ಈ ಆಚರಣೆ …
Read More »ಪೊಲೀಸ್ ಮುಂದೆ ಬಂದಿರುವ ಹೆಣ ಹೂಳುತ್ತಿದ್ದ ವ್ಯಕ್ತಿ ಯಾರು? ಧರ್ಮಸ್ಥಳದಿಂದ ಆತ ತಪ್ಪಿಸಿಕೊಂಡಿದ್ದೇಗೆ?
ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಧರ್ಮಸ್ಥಳದಲ್ಲಿ ನಡೆದಿದ್ದ ಅತ್ಯಾಚಾರ, ಕೊಲೆಯಾದ ಶವಗಳನ್ನು ತಾನು ಹೂತಿದ್ದಾಗಿ ಹೇಳಿಕೊಂಡಿದ್ದು, ಪಾಪಪ್ರಜ್ಞೆ ಕಾಡುತ್ತಿರುವ ಕಾರಣ ಅವುಗಳನ್ನು ಪೊಲೀಸರ ಮುಂದೆ ಹೊರತೆಗೆದು ತೋರಿಸಿ ಶರಣಾಗುತ್ತೇನೆ ಎಂದು ಪತ್ರ ಬರೆದಿದ್ದಾನೆ ಹಾಗೂ ಸ್ವತಃ ಎಫ್ಐಆರ್ ಅನ್ನೂ ಸಹ ದಾಖಲಿಸಿದ್ದಾನೆ.ಇನ್ನು ಸೌಜನ್ಯ ಪ್ರಕರಣದಲ್ಲಿ ಸತ್ಯ ಒಪ್ಪಿಕೊಳ್ಳಲು ಸಿದ್ಧನಾಗಿ ಬಳಿಕ ನಿಗೂಢವಾಗಿ ಸಾವನ್ನಪ್ಪಿದ ರವಿ ಪೂಜಾರಿ ಈ ಭೀಮನಿಗೆ ಆಪ್ತ ಸ್ನೇಹಿತ. ಸೌಜನ್ಯ ಕೊಲೆಯ ಬಳಿಕ ಮದ್ಯಪಾನಕ್ಕೆ …
Read More »20 ಕಿ.ಮೀ ನಡೆದುಕೊಂಡು ಬಂದ 95 ವರ್ಷದ ವೃದ್ಧೆ ! ಇದೆಲ್ಲಾ ಒಂದು ಇಂಜೆಕ್ಷನ್’ಗಾಗಿ.
ಒಡಿಶಾದಾದ್ಯಂತ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿದ ಚಾಲಕರ ಮುಷ್ಕರ ನಡೆಯಿತ್ತು, ಪ್ರಯಾಣಿಸಲು ವಾಹನಗಳ ಕೊರತೆಯಾಗಿತ್ತು. 95 ವರ್ಷ ವಯಸ್ಸಿನ ವೃದ್ಧೆಯೊಬ್ಬರು ನಾಯಿ ಕಚ್ಚಿದ್ದರಿಂದ ರೇಬೀಸ್ ಲಸಿಕೆ ಪಡೆಯಲು 20 ಕಿಲೋಮೀಟರ್ ನಡೆಯುವ ಮೂಲಕ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಂಡರು. ಘಟನೆಗೆ ಪ್ರತಿಕ್ರಿಯಿಸಿದ ಚಾಲಕರ ಸಂಘದ ಜಿಲ್ಲಾಧ್ಯಕ್ಷ ದುರ್ಗಾ ಚರಣ್ ಬಿಶಿ, ತಾವು ಮುಷ್ಕರದಲ್ಲಿದ್ದರೂ ಅಗತ್ಯ ಸೇವೆಗಳಿಗೆ ಅಡ್ಡಿಪಡಿಸಲಿಲ್ಲ ಎಂದು ಹೇಳಿದರು. ಸಂತ್ರಸ್ತೆಯ ಕುಟುಂಬವು ಈ ವಿಶೇಷ ಪರಿಸ್ಥಿತಿಯ ಬಗ್ಗೆ ಅವರಿಗೆ ತಿಳಿಸಿದ್ದರೆ, ಅವರು …
Read More »ಹೃದಯಾಘಾತದಿಂದ ಬೆಳೆದು ನಿಂತ ಮಗ ಸಾವು – ಅಪ್ಪ ಮಾಡಿದ ಕೆಲಸ ಊರೇ ಮೆಚ್ಚುವಂಥದ್ದು!
ಹೃದಯಾಘಾತದಿಂದ ಮಗ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆತನ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಇಂಥಾ ದುರ್ಘಟನೆ ಮತ್ತೆ ಯಾರ ಬಾಳಲ್ಲೂ ನಡೆಯದಿರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ತುಮಕೂರು ತಾಲೂಕಿನ ಹೆಬ್ಬಾಕ ಗ್ರಾಮದ ನೀಲಕಂಠಸ್ವಾಮಿ ಎಂಬುವರು ಕಳೆದ ಎರಡು ವಾರಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಆತನ ಪೋಷಕರು ಮಗನ ಅಕಾಲಿಕ ಸಾವಿನಿಂದ ತೀವ್ರ ನೊಂದಿದ್ದ ಹೆತ್ತವರು ನಮ್ಮ ಮಗನಿಗೆ ಬಂದ ಸ್ಥಿತಿ ಮತ್ಯಾರಿಗೂ ಬಾರದಿರಲಿ ಅಂತ ಗ್ರಾಮದ ಪ್ರತಿಯೊಬ್ಬರಿಗೂ …
Read More »ಧರ್ಮಸ್ಥಳ: ಯುಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಪ್ರಕರಣ ದಾಖಲು!
ಧರ್ಮಸ್ಥಳದಲ್ಲಿ ಹಲವಾರು ಹೆಣಗಳನ್ನು ಹೂತು ಹಾಕಿರುವುದರ ಬಗ್ಗೆ ಸಾಕ್ಷಿ ದೂರುದಾರ ನೀಡಿರು ದೂರಿನ ಬಗ್ಗೆ ಕಾಲ್ಪನಿಕವಾಗಿ ಎ.ಐ ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಗಳನ್ನು ಒಳಗೊಂಡಿರುವ ವೀಡಿಯೋ ಬಹಿರಂಗಪಡಿಸಿ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಮಾಡಿರುವ ಬಗ್ಗೆ ಯುಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Read More »ಗದಗ :ಲಾರಿ, ಬಸ್ ಮತ್ತು ಕಾರು ನಡುವೆ ಸರಣಿ ಅಪಘಾತ !
ಲಾರಿ, ಬಸ್ ಮತ್ತು ಕಾರು ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ. ಸ್ವಲ್ಪದರಲ್ಲೇ ಅನಾಹುತ ತಪ್ಪಿದ ಘಟನೆ ಗದಗ ನಗರದ ಟಿಪ್ಪು ಸುಲ್ತಾನ್ ಸರ್ಕಲ್ನಲ್ಲಿ ನಡೆದಿತ್ತು. ಲಾರಿ ಚಾಲಕನ ಯಡವಟ್ಟಿನಿಂದ ಸರಣಿ ಅಪಘಾತ ನಡೆದಿದೆ ಎನ್ನಲಾಗಿತ್ತು. ಸರಣಿ ಅಪಘಾತದಿಂದ ಬಸ್, ಕಾರು ಜಖಂ ಆಗಿತ್ತು. ಸಿಗ್ನಲ್ ಗಮನಿಸದೇ ಮುಂದೆ ನಿಂತಿದ್ದ ಬಸ್ಗೆ ಮೊದಲು ಲಾರಿ ಡಿಕ್ಕಿ ಹೊಡೆದಿದೆ. ಬಳಿಕ ಬಸ್, ಕಾರಗೆ ಡಿಕ್ಕಿ ಹೊಡೆದಿದ್ದು, ಎರಡು …
Read More »ಗಾಳಿ ಆಂಜನೇಯ ದೇಗುಲ ಮುಜರಾಯಿ ವಶಕ್ಕೆ: ಕಾನೂನು ಹೋರಾಟ ಎಂದ ತೇಜಸ್ವಿ ಸೂರ್ಯ
ಬೆಂಗಳೂರಿನ ಗಾಳಿ ಆಂಜನೇಯಸ್ವಾಮಿ ದೇಗುಲವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿದೆ. ಇದರ ವಿರುದ್ಧ ನ್ಯಾಯಾಲಯ ಮತ್ತು ಜನ ಹೋರಾಟ ಎರಡನ್ನೂ ರೂಪಿಸಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.ಸರ್ಕಾರಕ್ಕೆ ಅಲ್ಲಿ ನಡೆಯುವ ಭ್ರಷ್ಟಾಚಾರ ನಿಲ್ಲಿಸಲು ಆಗುವುದಿಲ್ಲ. ದೇವಸ್ಥಾನವನ್ನು ಯಾವ ನಂಬಿಕೆ ಇಟ್ಟು ಕೊಡುವುದು. ಯಾವುದೇ ಕಾರಣಕ್ಕೂ ಭಕ್ತರು ವಿಚಲಿತರಾಗುವುದು ಬೇಡ. ಸರ್ಕಾರವೇ ಸಾಚಾ ಅಲ್ಲ, ದೇಗುಲದ ಬಗ್ಗೆ ಮಾತನಾಡಲು ಹೊರಟಿದೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿವೆ, ದೇವಸ್ಥಾನದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





