ಬೆಂಗಳೂರು ಗ್ರಾಮಾಂತರದ ನೆಲಮಂಗಲ ಸಮೀಪದ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವಜಾತ ಶಿಶುವನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟುಹೋದ ಅಮಾನವೀಯ ಘಟನೆ ನಡೆದಿದೆ. ಬೆಳಗ್ಗೆ ವಾಕಿಂಗ್ಗೆ ತೆರಳಿದ್ದ ಮಂಜುನಾಥ್ ಅವರಿಗೆ ಹಳ್ಳದ ಪಕ್ಕದಲ್ಲಿ ಮಗುವಿನ ಅಳುವಿನ ಸದ್ದು ಕೇಳಿಸಿದ್ದು, ಹತ್ತಿರ ಹೋಗಿ ನೋಡಿದಾಗ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಶಿಶು ಪತ್ತೆಯಾಗಿದೆ. ಮಗು ಆಗತಾನೇ ಜನಿಸಿರುವಂತೆ ಕಂಡುಬಂದಿದ್ದು, ದೇಹದ ಮೇಲಿನ ರಕ್ತದ ಕಲೆಗಳು ಕೂಡ ಆರಿರಲಿಲ್ಲ. ಮಂಜುನಾಥ್ ಹಾಗೂ ಸ್ನೇಹಿತರು ತಕ್ಷಣ ಮಗುವನ್ನು ರಾಜಾನುಕುಂಟೆ …
Read More »ಮಂಡ್ಯ| ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ
ಪಾಂಡವಪುರದ ಪ್ರಕಾಶ ಬಿನ್ ಮುದ್ದೇಗೌಡ ಎಂಬಾತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ನಗರದ 2ನೇ ತ್ವರಿತಗತಿ ನ್ಯಾಯಾಲಯ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ₹2 ಲಕ್ಷ ದಂಡ ವಿಧಿಸಿದೆ. 2015ರಲ್ಲಿ ಕೆ.ಆರ್.ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಶಾಲೆಯ ಬಾಲಕಿಯನ್ನು ಹಣ ನೀಡುವುದಾಗಿ ಪುಸಲಾಯಿಸಿ ಶಾಲಾ ಕೊಠಡಿಗೆ ಕರೆದೊಯ್ದು ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಳಿಕ ಬಾಲಕಿಯ ತಲೆಯನ್ನು ನೆಲಕ್ಕೆ ಜೋರಾಗಿ ಅಪ್ಪಳಿಸಿ, ಕುತ್ತಿಗೆಗೆ …
Read More »ಗಂಡನನ್ನು ಬಿಟ್ಟು ಬಂದವಳ ಅನುಮಾನಾಸ್ಪದ ಸಾವು, ಕೊಂದು ನೇಣು ಹಾಕಿದ್ನಾ ಪ್ರಿಯಕರ?
ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ ಗ್ರಾಮದ ಬಾಡಿಗೆ ಮನೆಯಲ್ಲಿ ಚೈತ್ರಾ ಎಂಬ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಗಂಡನನ್ನು ತೊರೆದು 10 ಮತ್ತು 12 ವರ್ಷದ ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಚೈತ್ರಾಗೆ ಕೋಲಾರ ಮೂಲದ ಶಬ್ಬೀರ್ ಎಂಬಾತನೊಂದಿಗೆ ಪರಿಚಯವಿತ್ತು ಎನ್ನಲಾಗಿದೆ. ಚೈತ್ರಾ ಹಾಗೂ ಶಬ್ಬೀರ್ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಹಲ್ಲೆ ನಡೆಸಿ ಬಳಿಕ ನೇಣು ಬಿಗಿದು ಕೊಲೆ ಮಾಡಲಾಗಿದೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. …
Read More »ವಿಟ್ಲ | ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಆರೋಪಿಗಳ ಬಂಧನ
ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಜವಾದ್, ಶಹೀದ್ ಹಾಗೂ ರಿಯಾಝ್ ಎಂಬ ಮೂವರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. 2026ರ ಫೆಬ್ರವರಿಯಿಂದ ಆಗಸ್ಟ್ವರೆಗೆ ದೌರ್ಜನ್ಯ ನಡೆದಿರುವುದಾಗಿ ಬಾಲಕ ದೂರಿನಲ್ಲಿ ಆರೋಪಿಸಿದ್ದಾನೆ. ಸೆ.4ರಂದು ದೂರು ದಾಖಲಾಗಿದ್ದು, ಒಟ್ಟು ಆರು ಪ್ರಕರಣಗಳನ್ನು ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಮೂವರಿಗೂ …
Read More »ಶಿಕ್ಷಕನೋ.. ರಾಕ್ಷಸನೋ.. ತಳ್ಳಿದ ರಭಸಕ್ಕೆ ವಿದ್ಯಾರ್ಥಿ ಕಣ್ಣು ರಕ್ತ ಹೆಪ್ಪುಗಟ್ಟಿ ಗಂಭೀರ ಗಾಯ!
ಮೈಸೂರು: 16 ವರ್ಷದ ವಿದ್ಯಾರ್ಥಿ ರೇಹಾನ್ ಶರೀಫ್ ಮೇಲೆ ಶಿಕ್ಷಕ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಶಿಕ್ಷಕನ ಮುಷ್ಟಿಯೇಟಿನಿಂದ ರೇಹಾನ್ ಕಣ್ಣಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಗಾಯಗೊಂಡಿದ್ದಾನೆ. ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಟಿಸಿ ನೀಡಿ ಶಾಲೆಯಿಂದ ಹೊರಹಾಕುವುದಾಗಿ ಶಿಕ್ಷಕ ಬೆದರಿಕೆ ಹಾಕಿದ್ದರಿಂದ ವಿದ್ಯಾರ್ಥಿ ಆರಂಭದಲ್ಲಿ ವಿಷಯ ಮುಚ್ಚಿಟ್ಟಿದ್ದ ಎನ್ನಲಾಗಿದೆ. ಬಳಿಕ ಗಾಯಗಳನ್ನು ಗಮನಿಸಿದ ತಂದೆಗೆ ಘಟನೆ ತಿಳಿದುಬಂದಿದೆ. ತಂದೆ ವಾಸಿಮ್ ಶರೀಫ್ ಪೊಲೀಸರಿಗೆ ದೂರು ನೀಡಿದ್ದು, ಶಿಕ್ಷಕನ ವಿರುದ್ಧ ಕ್ರಮಕ್ಕೆ …
Read More »ನಿಯಮ ಬಾಹಿರವಾಗಿ 143 ಶಾಲೆ ಆರಂಭಿಸಲು ಅನುಮತಿ: ಅಧಿಕಾರಿ ಅಮಾನತು
ವಿಜಯಪುರ: 2025-26ನೇ ಸಾಲಿನಲ್ಲಿ 143 ಶಾಲೆಗಳನ್ನು ಆರಂಭಿಸಲು ನಿಯಮಬಾಹಿರವಾಗಿ ಅನುಮತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಹಿಂದಿನ ಪ್ರಭಾರ ಡಿಡಿಪಿಐ ಟಿ.ಎಸ್. ಕೊಲ್ಹಾರ ಅವರನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ. ಪ್ರಸ್ತುತ ಜಿಲ್ಲಾ ಉಪ ಯೋಜನಾ ಸಮನ್ವಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೊಲ್ಹಾರ ವಿರುದ್ಧ ಧಾರವಾಡ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಅಮಾನತು ಆದೇಶ ಹೊರಡಿಸಿದ್ದಾರೆ. ನಿಯಮಬಾಹಿರವಾಗಿ ಶಾಲೆಗಳಿಗೆ ಅನುಮತಿ …
Read More »ಬೇಳೂರು: ಅಕ್ರಮ ಸಕ್ರಮಕ್ಕೆ ಸುಳ್ಳು ಮಾಹಿತಿ; ಇಬ್ಬರು ಗ್ರಾಮ ಆಡಳಿತಾಧಿಕಾರಿಗಳಿಗೆ ದಂಡನೆ
ಉಡುಪಿ: ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಸರ್ಕಾರಿ ಸರ್ವೆ ನಂ. 292ರ 3 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಅಕ್ರಮ ಸಕ್ರಮಕ್ಕೆ ತಪ್ಪು ಮಾಹಿತಿ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಗ್ರಾಮ ಆಡಳಿತಾಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ದಂಡ ವಿಧಿಸಿದೆ. ಲೋಕಾಯುಕ್ತ ಆದೇಶದ ಮೇರೆಗೆ ನಡೆದ ಇಲಾಖಾ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು, ನಿವೃತ್ತ ಗ್ರಾಮ ಆಡಳಿತಾಧಿಕಾರಿ ಲಕ್ಷ್ಮೀನಾರಾಯಣ ಭಟ್ ಅವರ ನಿವೃತ್ತಿ ವೇತನದಲ್ಲಿ ಶೇ.5ರಷ್ಟನ್ನು ಶಾಶ್ವತವಾಗಿ ತಡೆಹಿಡಿಯಲು ಆದೇಶಿಸಲಾಗಿದೆ. ಮತ್ತೊಬ್ಬ …
Read More »ದೂರು ಕೊಡಲು ಹೋದಾಗ ದೌರ್ಜನ್ಯ: ಭೂಮಿ ಮಾಲೀಕರ ಆರೋಪ
ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದ ಸರ್ವೆ ನಂಬರ್ 242/10ರಲ್ಲಿರುವ ತಮ್ಮ ಜಮೀನು ಒತ್ತುವರಿ ಮಾಡಿಕೊಂಡು ಮಠವೊಂದರ ಪ್ರವೇಶದ್ವಾರ ನಿರ್ಮಿಸಲಾಗಿದೆ ಎಂದು ಭೂಮಾಲೀಕ ಡಿ.ಎಸ್.ಸಿದ್ದೇಶ್ವರ ಆರೋಪಿಸಿದ್ದಾರೆ. ಜಮೀನಿನ ಬೇಲಿ, ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸದನ್ನು ಅಳವಡಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಹಾಗೂ ಸಹೋದರನ ಮೇಲೆ ಹಲ್ಲೆ ನಡೆಸಲಾಗಿದೆ. ಗಾಯಗೊಂಡರೂ ಪೊಲೀಸರು ದೂರು ಸ್ವೀಕರಿಸದೆ, ತಮ್ಮ ವಿರುದ್ಧವೇ ಪ್ರಕರಣ ದಾಖಲಿಸಿ ತಿಂಗಳ ಕಾಲ ಜೈಲಿಗೆ ಕಳುಹಿಸಿದ್ದಾರೆ ಎಂದು ಅವರು ದೂರಿದ್ದಾರೆ. ಕೋರ್ಟ್ನಲ್ಲಿ ತಮ್ಮ …
Read More »ರಾತ್ರಿ ಮಲಗಿದ್ದವಳು ಬೆಳಗ್ಗೆ ಹೆಣವಾಗಿ ಪತ್ತೆ! ಗಂಡನಿಲ್ಲದ ಮಹಿಳೆಯ ಸಂಗ ಮಾಡಿದವನೇ ಮುಗಿಸಿಬಿಟ್ನಾ?
ಕಲಬುರಗಿ: ಗಂಡ ಸಾವನ್ನಪ್ಪಿ ಎಂಟು ವರ್ಷಗಳಿಂದ ಒಂಟಿಯಾಗಿ ಜೀವನ ನಡೆಸುತ್ತಿದ್ದ ನಾಗಮ್ಮ ಎಂಬ ಮಹಿಳೆ ಭೀಕರವಾಗಿ ಕೊಲೆಯಾಗಿರುವ ಘಟನೆ ಆಳಂದ ತಾಲೂಕಿನ ನರೋಣ ಗ್ರಾಮದಲ್ಲಿ ನಡೆದಿದೆ. ಅರೆನಗ್ನ ಸ್ಥಿತಿಯಲ್ಲಿ ಮಂಚದ ಮೇಲೆ ಆಕೆಯ ಮೃತದೇಹ ಪತ್ತೆಯಾಗಿದೆ. ಅದೇ ಗ್ರಾಮದ ರಾಜಪ್ಪ ಎಂಬಾತ ಆಗಾಗ್ಗೆ ನಾಗಮ್ಮ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಇಬ್ಬರ ನಡುವೆ ಸಂಬಂಧವಿತ್ತು ಎನ್ನಲಾಗಿದ್ದು, ಆತ ನಾಗಮ್ಮಗೆ ಆಗಾಗ್ಗೆ ಹಲ್ಲೆ ಮಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿ ಕೊಲೆಯ …
Read More »ಹೊಸಂಗಡಿ ಕೊಲೆ: ಮಂಗಳೂರಲ್ಲಿ ಆರೋಪಿ ಸೆರೆ
ಮಂಜೇಶ್ವರದ ಅಂಗಡಿಪದವಿನಲ್ಲಿ ಬಾಡಿಗೆ ಮನೆಯಲ್ಲಿ ಕೂಲಿ ಕಾರ್ಮಿಕ ರಮೇಶ್ (38) ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಪರಪ್ಪನಹಳ್ಳಿ ಮೂಲದ ರಾಮ್ ನಾಯ್ಕ್ ಅಲಿಯಾಸ್ ರಮೇಶ್ (31) ಬಂಧಿತ ಆರೋಪಿ. ರಮೇಶ್ ಹಾಗೂ ರಾಮ್ ನಾಯ್ಕ್ ಸ್ನೇಹಿತರಾಗಿದ್ದು, ಶುಕ್ರವಾರ ಸಂಜೆ ಇಬ್ಬರೂ ಮದ್ಯಪಾನ ಮಾಡಿದ್ದರು. ಈ ವೇಳೆ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ರಾಮ್ ನಾಯ್ಕ್ ಚೂರಿಯಿಂದ ಇರಿದು ರಮೇಶ್ನನ್ನು ಕೊಲೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





