ದ್ವಿಚಕ್ರ ವಾಹನಕ್ಕೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದು 19 ವರ್ಷದ ಯುವಕ ಮೃತಪಟ್ಟಿರುವ ಘಟನೆ ಮೈಸೂರು ರಸ್ತೆಯಲ್ಲಿ ಬುಧವಾರ ನಡೆದಿದೆ. ಮೃತರನ್ನು ವಿನಯ್ ಬಿ ಎಂದು ಗುರುತಿಸಲಾಗಿದ್ದು, ಪೊಲೀಸರು ಟ್ರಕ್ ಚಾಲಕ ಮಹೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Read More »ನಿಯಂತ್ರಣ ತಪ್ಪಿ ಬೈಕ್ ಬಸ್ ಗೆ ಡಿಕ್ಕಿ; ಜಿಮ್ ಟ್ರೈನರ್ ಸ್ಥಳದಲ್ಲೇ ಸಾವು!
ರಸ್ತೆ ಅಂಚಿನಲ್ಲಿ ಸಾಗುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಏಕಾಏಕಿ ಬಸ್ ಗೆ ಢಿಕ್ಕಿ ಹೊಡೆದಿದೆ.ಹೆಲ್ಮೆಟ್ ಹಾಕಿದ್ದರೂ ಅನಂತಭೂಷಣ್ ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಅನಂತಭೂಷಣ್ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು.
Read More »ಹುಬ್ಬಳ್ಳಿ :ಬಸ್ಗಳ ನಡುವೆ ಅಪಘಾತ, ಚಾಲಕರಿಗೆ ಹಾರ ಹಾಕಿ ಅವಮಾನ ಮಾಡಿದ ಅಧಿಕಾರಿಗಳು!
ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗದ ಹುಬ್ಬಳ್ಳಿ ಘಟಕಕ್ಕೆ ಸೇರಿದ ಬಸ್ಗಳು ಸರಿಯಾಗಿ ಬ್ರೇಕ್ ಹಿಡಿಯದ ಕಾರಣ ಒಂದು ಚಿಗರಿ ಬಸ್ ಇನ್ನೊಂದು ಚಿಗರಿ ಬಸ್ಗೆ ಡಿಕ್ಕಿ ಹೊಡೆದಿದ್ದು, ಟೋಲ್ ನಾಕಾ ಹತ್ತಿರ ಸಣ್ಣ ಅಪಘಾತವಾಗಿದೆ.ಚಾಲಕರನ್ನ ಕಚೇರಿಗೆ ಕರೆಸಿಕೊಂಡಿರುವ ಡಿಸಿ ಸಿದ್ದಲ್ಲಿಂಗೇಶ್ ಹಾಗೂ ಡಿಇಎಂ ಪ್ರವೀಣ್ ಅವರು ಇಬ್ಬರಿಗೂ ಹಾರ ಹಾಕಿ ಫೋಟೋ ತೆಗೆದಿದ್ದಾರೆ. ಇದಿಷ್ಟೇ ಅಲ್ಲದೇ, ಆ ಫೋಟೋಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಸಹ ಹಾಕಿದ್ದು, ಇದರಿಂದ ಅವರಿಗೆ ಅವಮಾನವಾಗಿದೆ. …
Read More »ಬೆಳಗಾವಿ :ಬೈಕ್ ಅಪಘಾತ – ವಚನಾನಂದ ಶ್ರೀಗಳ ಸಹೋದರ ಸಾವು!
ಅಥಣಿ ತಾಲೂಕಿನ ತಾಂವಶಿ ಗ್ರಾಮದಿಂದ ಅಥಣಿಗೆ ಹೋಗುವಾಗ ಭರಮೋಕೋಡಿ ಬಳಿ ನಾಯಿಯೊಂದು ಬೈಕ್ ಗೆ ಅಡ್ಡ ಬಂದಿದೆ.ಬೈಕ್ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಅಶೋಕ್ ಗಂಭೀರ ಗಾಯಗೊಂಡಿದ್ದರು. ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
Read More »ದಾವಣಗೆರೆ ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂ. ಕಳೆದುಕೊಂಡ ಯುವಕ ಆತ್ಮಹತ್ಯೆ!
ದಾವಣಗೆರೆ ನಗರದ ಸರಸ್ವತಿ ನಗರದ 25 ವರ್ಷದ ಯುವಕ ಶಶಿಕುಮಾರ್ ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂಪಾಯಿ ತೊಡಗಿಸಿಕೊಂಡು ಮೋಸ ಹೋಗಿ ಸಾವಿಗೆ ಶರಣಾದವನು.ಸುಮಾರು ಆರು ಪುಟಗಳ ಸುದೀರ್ಫ ಡೆತ್ ನೋಟ್ ಬರೆದಿಟ್ಟಿದ್ದು, ಮುಖ್ಯ ನ್ಯಾಯಾಧೀಶರಿಗೂ ಎರಡು ಪುಟಗಳ ಮನವಿ ಪತ್ರ ಬರೆದಿದ್ದಾನೆ.ಆನ್ ಲೈನ್ ಗೇಮ್ ನಲ್ಲಿ 19 ಕೋಟಿ ರೂಪಾಯಿ ಗೆದ್ದಿದ್ದೇನೆ ಎಂದು ಶಶಿಕುಮಾರ್ ಹೇಳಿಕೊಂಡಿದ್ದಾನೆ. ಆನ್ ಲೈನ್ ಗೇಮ್ ಕಂಪೆನಿ ನೀಡಿಲ್ಲ. ದೂರು ನೀಡಿದ್ದೆ ಎಂದು …
Read More »ಮರಕ್ಕೆ ಕಾರು ಡಿಕ್ಕಿಯಾಗಿ ಗರ್ಭಿಣಿ ಸ್ಥಳದಲ್ಲೇ ಸಾವು.!
ಗರ್ಭಿಣಿ ಅರ್ಚನಾ ಅವರನ್ನು ಅವರ ಮಾವ ನಾರಾಯಣಸ್ವಾಮಿ ಅವರ ಗ್ರಾಮ ಕೊರಚನೂರಿಗೆ ಕರೆದುಕೊಂಡು ಹೋಗುತ್ತಿದ್ದರು.ಎದುರಿಗೆ ಲಾರಿಯೊಂದು ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಅರ್ಚನಾ ದೇಹದಿಂದ ರುಂಡ ಹಾಗೂ ಎಡಗೈ ಭಾಗ ಪ್ರತ್ಯೇಕವಾಗಿದೆ.ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
Read More »ಮದ್ವೆಯಾದ ರಾತ್ರಿಯೇ ನವವಿವಾಹಿತ ದುರಂತ ಸಾವು!
ಮದುವೆಯಾದ ರಾತ್ರಿಯೇ ನವವಿವಾಹಿತ ಯುವಕನೋರ್ವ ದುರಂತ ಸಾವು ಕಂಡಿದ್ದಾನೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದ ಯುವಕ ಹರೀಶ್ ಬಾಬು ರಾತ್ರಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ಹತ್ತು ವರ್ಷಗಳಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಬಾಬು, ನಿನ್ನೆ ರಾತ್ರಿಯೇ ಜಿಲ್ಲಾಸ್ಪತ್ರೆಯ ಇ.ಎನ್.ಟಿ ವಿಭಾಗದ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Read More »ಅಮೇರಿಕಾದ ಇಸ್ಕಾನ್ ರಾಧಾಕೃಷ್ಣ ದೇವಸ್ಥಾನದ ಮೇಲೆ ಗುಂಡಿನ ದಾಳಿ!
ಸ್ಪ್ಯಾನಿಷ್ ಫೋರ್ಕ್, ಯುಟಾ ನಲ್ಲಿರುವ ಇಸ್ಕಾನ್ನ ಶ್ರೀ ಶ್ರೀ ರಾಧಾಕೃಷ್ಣ ದೇವಸ್ಥಾನದ ಮೇಲೆ 20 ರಿಂದ 30 ಗುಂಡುಗಳನ್ನು ಹಾರಿಸಿರುವ ಘಟನೆ ನಡೆದಿದೆ. ಗುಂಡಿನ ದಾಳಿ ರಾತ್ರಿ ಸಮಯದಲ್ಲಿ ನಡೆದಿದ್ದು, ಆಗ ದೇವಸ್ಥಾನದಲ್ಲಿ 20 ರಿಂದ 30 ಭಕ್ತರು ಇದ್ದರು. ಈ ಘಟನೆಯಿಂದ ದೇವಸ್ಥಾನದ ಕಮಾನುಗಳು ಸೇರಿದಂತೆ ಸಾವಿರಾರು ಡಾಲರ್ಗಳಷ್ಟು ನಷ್ಟವಾಗಿದೆ.ಜೂನ್ ತಿಂಗಳಲ್ಲಿ ದೇವಸ್ಥಾನದ ಕಟ್ಟಡದ ಮೇಲೆ 3 ಬೇರೆ-ಬೇರೆ ಸಮಯದಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು. ಈಗ ಗೋಡೆಗಳು, ಕಿಟಕಿಗಳು …
Read More »ವಿಡಿಯೋ ಮಾಡಿ ನೇಣಿಗೆ ಶರಣಾದ ಯುವಕ!
ರಾಜ್ಯದಲ್ಲಿ ಆನ್ಲೈನ್ ಗೇಮ್ ಗೆ ಇದೀಗ ಮತ್ತೊಂದು ಜೀವ ಬಲಿಯಾಗಿದ್ದು, ದಾವಣಗೆರೆಯಲ್ಲಿ ಆನ್ಲೈನ್ ಗೇಮ್ ಗೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ದಾವಣಗೆರೆಯ ಸರಸ್ವತಿ ನಗರದ ಶಶಿಕುಮಾರ್ (25) ನೇಣಿಗೆ ಶರಣಾದ ಯುವಕ ಎಂದು ತಿಳಿದುಬಂದಿದೆ.
Read More »ವಾಯುಭಾರ ಕುಸಿತ, ಮುಂದಿನ 1 ವಾರ ರಾಜ್ಯಾದ್ಯಂತ ಗಾಳಿ ಸಹಿತ ಭಾರೀ ಮಳೆ : ‘IMD’ ಮುನ್ಸೂಚನೆ
ಮುಂದಿನ ಏಳು ದಿನಗಳಲ್ಲಿ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಹಲವಾರು ಜಿಲ್ಲೆಗಳಲ್ಲಿ “ಭಾರೀ ಮಳೆ” ಮತ್ತು ಪ್ರತ್ಯೇಕ ಸ್ಥಳಗಳಲ್ಲಿ “ಅತ್ಯಂತ ಭಾರೀ ಮಳೆ” ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.ಧಾರವಾಡದಲ್ಲಿಯೂ “ಭಾರೀ ಮಳೆ” ಬೀಳುವ ನಿರೀಕ್ಷೆಯಿದೆ. ಬೀದರ್, ಬಾಗಲಕೋಟೆ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಗಳಲ್ಲಿ ಈ ಮುನ್ಸೂಚನೆಯ ಅವಧಿಯಲ್ಲಿ ಬಿರುಗಾಳಿಯೊಂದಿಗೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





