ಜಾಹೀರಾತು ಚಿತ್ರೀಕರಣಕ್ಕಾಗಿ ಉದಯಪುರಕ್ಕೆ ಬಂದಿದ್ದ ಫ್ರೆಂಚ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಚಿತ್ತೋರ್‌ಗಢದ 29 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.ಬಂಧಿತ ವ್ಯಕ್ತಿಯನ್ನು ಚಿತ್ತೋರ್‌ಗಢದ ಗ್ಯಾಂಗ್ರಾರ್ ನಿವಾಸಿ ಪುಷ್ಪರಾಜ್ ಅಲಿಯಾಸ್ ಸಿದ್ಧಾರ್ಥ್ ಓಜಾ ಎಂದು ಗುರುತಿಸಲಾಗಿದ್ದು, ಆರೋಪಿಯು ಕಾಸ್ಟಿಂಗ್ ಕಂಪನಿಯ ಮಾಲೀಕನಾಗಿದ್ದು, ಸಿನಿಮಾ, ಮ್ಯೂಸಿಕ್ ಆಲ್ಬಂ ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Read More »ಬೆಂಗಳೂರು: ಯುವತಿ ಮೇಲೆ ಅತ್ಯಾಚಾರ ಎಸಗಿದ ಪಿಜಿ ಮಾಲೀಕ ಅರೆಸ್ಟ್.!
ಯುವತಿ ತನ್ನ ಸಹ ನಿವಾಸಿಯ 3 ಉಂಗುರಗಳನ್ನು ಕದ್ದಿದ್ದಳು. ಕಳ್ಳತನದ ವಿಷಯ ಮುಚ್ಚಿ ಹಾಕಲು ರೆಡ್ಡಿ ಸಹಾಯ ಕೇಳಿದ್ದಳು. ಉಂಗುರದ ಬಗ್ಗೆ ವಿಚಾರಿಸುವ ನೆಪದಲ್ಲಿ ರೆಡ್ಡಿ ಆಕೆಯ ಖಾಸಗಿ ಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಆತ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ನಂತರ ಆಕೆಯನ್ನು ಜಯನಗರದ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆಸ್ಪತ್ರೆಯು ಮೆಡಿಕೋ-ಲೀಗಲ್ ಕೇಸ್ (MLC) ದಾಖಲಿಸಿತು, ಅದರ ಆಧಾರದ ಮೇಲೆ ಪೊಲೀಸರು ಅತ್ಯಾಚಾರದ FIR …
Read More »ಸೀಟು ಬ್ಲಾಕಿಂಗ್ ದಂಧೆ: 3 ಕಾಲೇಜಿಗೆ ಇ.ಡಿ. ಶಾಕ್!
ನಿರ್ದೇಶನಾಲಯ ವಿಭಾಗದ 60ಕ್ಕೂ ಹೆಚ್ಚು ಅಧಿಕಾರಿ ಗಳು ಪ್ರತ್ಯೇಕವಾಗಿ ಕಾಲೇಜುಗಳು ಹಾಗೂ ಪ್ರಕರಣದ 12 ಮಂದಿ ಆರೋಪಿಗಳಿಗೆ ಸೇರಿದ ಮನೆ ಹಾಗೂ ಕೆಲವರ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ಇ.ಡಿ. ಮೂಲಗಳು ತಿಳಿಸಿವೆ.ಈ ಅಕ್ರಮ ಸಂಬಂಧ ಕೆಇಎ ಅಧಿಕಾರಿಗಳು ಕಳೆದ ವರ್ಷ ಮಲ್ಲೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿತ 3 ಕಾಲೇಜು ಗಳ ಮುಖ್ಯಸ್ಥರು, ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರನ್ನು ಪೊಲೀ ಸರು ತೀವ್ರ …
Read More »ನದಿಗೆ ಬಿದ್ದ ಪ್ರಯಾಣಿಕರಿದ್ದ ಬಸ್, ಹಲವರು ಸಾವಿನ ಶಂಕೆ!
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಘೋಲ್ತಿರ್‌ನಲ್ಲಿ ಇಂದು ಬೆಳಿಗ್ಗೆ ಒಂದು ದೊಡ್ಡ ಅಪಘಾತ ಸಂಭವಿಸಿದೆ. ಅಲಕನಂದಾ ನದಿಯಲ್ಲಿ ಇಡೀ ಬಸ್ ಮುಳುಗಿತು. ಸುಮಾರು ಐದು ಜನರು ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ವರದಿಯಾಗಿದೆ.ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಸಂಸ್ಥೆಗಳು ಸ್ಥಳಕ್ಕೆ ತಲುಪಿವೆ. ಆದಾಗ್ಯೂ, ಆಡಳಿತಾತ್ಮಕ ದೃಢೀಕರಣ ಇನ್ನೂ ಮಾಡಲಾಗಿಲ್ಲ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಈ ಅಪಘಾತ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
Read More »ಬೆಂಗಳೂರಲ್ಲಿ ‘ಗಾಂಜಾ’ ಮಿಶ್ರಿತ ಚಾಕೊಲೇಟ್ ಮಾರಾಟ, ಇಬ್ಬರು ಅರೆಸ್ಟ್!
ಜೆಲ್ಲಿ ಚಾಕೊಲೇಟ್ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಮೆಡಿಕಲ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಒಂದು ಪ್ಯಾಕ್ ಜೆಲ್ಲಿ ಗಾಂಜಾಗೆ ಬರೋಬ್ಬರಿ 6 ಸಾವಿರ ರೂ. ಜೆಲ್ಲಿ ಬಾಯಿಗೆ ಇಟ್ಟ ಬಳಿಕ ಕರಗುತ್ತೆ. ಆಮೇಲೆ ಅಗೆದಷ್ಟು ಮತ್ತಲ್ಲಿ ತಲೆತಿರುಗುತ್ತಂತೆ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಇದೀಗ ಜೆಲ್ಲಿ ಗಾಂಜಾ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಮೊಹಮದ್ ಜಾಹೀದ್ ಹಾಗೂ ಇಸ್ಮಾಯಿಲ್ ಅದ್ನಾನ್ ಬಂಧಿತ ಆರೋಪಿಗಳು. …
Read More »ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಬಟ್ಟೆ ಮಾರಾಟ: ಗೋಡೌನ್ ಮೇಲೆ ಖಾಕಿ ದಾಳಿ!
ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ಬ್ರ್ಯಾಂಡ್ ಬಟ್ಟೆ ಮಾರಾಟ ಮಾಡುತ್ತಿದ್ದ ಗೋಡೌನ್ ಮೇಲೆ ಸಿದ್ಧಾಪುರ ಪೊಲೀಸರು ದಾಳಿ ಮಾಡಿದ್ದಾರೆ.ಅವಿನಾಶ್ ಎಂಬುವವರು ಸಿದ್ದಾಪುರದ ಭೈರಸಂದ್ರದಲ್ಲಿ ನಕಲಿ ಬಟ್ಟೆ ಗೋಡೌನ್ ಹೊಂದಿದ್ದರು. ದೆಹಲಿಯಿಂದ ನಕಲಿ ಬ್ರಾಂಡೆಂಡ್ ಬಟ್ಟೆ ತರಿಸಿ ಬೆಂಗಳೂರಿಗೆ ಸರಬರಾಜು ಮಾಡ್ತಿದ್ದ. ನೈಕಿ ಪೂಮಾ ಸಂಸ್ಥೆ ಪ್ರತಿನಿಧಿ ಶ್ರೀಜಿತ್ ಎಂಬುವವರು ನೀಡಿದ ದೂರಿನನ್ವಯ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಲಕ್ಷಾಂತರ ಮೌಲ್ಯದ ಪೂಮಾ ನೈಕಿ ಬ್ರಾಂಡ್ ನ ನಕಲಿ ಸ್ಫೊರ್ಟ್ಸ್ ವೇರ್, …
Read More »ಬಿಸಿಯೂಟಕ್ಕೆ ದಲಿತ ಮಹಿಳೆ ನೇಮಿಸಿದ್ದಕ್ಕೆ ಶಾಲೆ ತೊರೆದ ಮಕ್ಕಳೂರಿಗೆ ಅಧಿಕಾರಿಗಳು!
ಸರ್ಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆ ದಲಿತ ಮಹಿಳೆಯನ್ನು ನೇಮಿಸಿದ್ದಕ್ಕೆ ಚಾಮರಾಜನಗರ ಜಿಲ್ಲೆಯ ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯ 21 ಮಕ್ಕಳು ಶಾಲೆ ತೊರೆದಿದ್ದ ಘಟನೆ ಬೆನ್ನಲ್ಲೇ ಬುಧವಾರ ಶಾಲೆಗೆ ಪೊಲೀಸ್ ವರಿಷ್ಠಾಧಿಕಾರಿ, ಪ್ರಭಾರ ಜಿಲ್ಲಾಧಿಕಾರಿ, ಡಿಡಿಪಿಐ ಹಾಗೂ ಶಿಕ್ಷಣ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರು ಹಾಗೂ ಪೋಷಕರೊಂದಿಗೆ ಸಂಧಾನ ಸಭೆ ನಡೆಸಿದ್ದಾರೆ.ಸಭೆಯಲ್ಲಿ ಡಿಡಿಪಿಐ ರಾಮಚಂದ್ರೇ ಅರಸ್ ಮಾತನಾಡಿ, ನಿಮ್ಮ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸಲಿದೆ. ಶಾಲೆಯಲ್ಲಿ ಶಿಕ್ಷಕರಿಂದ ತಪ್ಪು ನಡೆದಿದ್ದರೆ ಅವರ ವಿರುದ್ಧ …
Read More »ಹುಬ್ಬಳ್ಳಿ :ಜೈನ್ ಕಾಲೇಜಿನ ಜಿಹಾದಿ ಮನಸ್ಸಿನ ವಿದ್ಯಾರ್ಥಿಗಳನ್ನು ವಜಾ ಮಾಡುವಂತೆ ಆಗ್ರಹ!
ಹುಬ್ಬಳ್ಳಿಯಲ್ಲಿ ಈಗಾಗಲೇ ಲವ್ ಜಿಹಾದ್ ಕುರಿತಂತೆ, ಹಲವಾರು ಹತ್ಯೆ, ಹತ್ಯೆ ಬೆದರಿಕೆ, ಗಲಾಟೆ ನಡೆದಿದೆ. ಅಲ್ಲದೇ ಈಗಲೂ ಇಂಥ ಘಟನೆ ಮುಂದುವರೆದಿದ್ದು, ನಮ್ಮ ಹೆಲ್ಪ್ ಲೈನ್‌ಗೆ ತುಂಬ ಕರೆ ಬರುತ್ತಿದೆ ಎಂದು ಶ್ರೀ ರಾಮ ಸೇನೆ ಮತ್ತು ದುರ್ಗಾ ಸೇನೆ ದೂರು ಹೇಳಿದೆ.ಇಂದು ಹುಬ್ಬಳ್ಳಿಯ ಜೈನ್ ಕಾಲೇಜ್ ಗೆ ಹೋಗಿ ಶ್ರೀ ರಾಮ ಸೇನೆ ಮತ್ತು ದುರ್ಗಾ ಸೇನೆ ಜಂಟಿಯಾಗಿ, ಕಾಲೇಜಿನ ಪ್ರಿನ್ಸಿಪಲ್ ಬಳಿ ಹೋಗಿ ಮನವಿ ಸಲ್ಲಿಸಿದೆ.
Read More »ಸೇತುವೆ ಮೇಲೆ ಸಾಗುತ್ತಿದ್ದ ಟ್ರಕ್‌ವೊಂದು ಬ್ಯಾಲೆನ್ಸ್ ತಪ್ಪಿ ಸೇತುವೆಯ ತುದಿಯಲ್ಲಿ ನೇತಾಡಿದೆ!!
ಕ್ಸಿಯಾಮೆನ್-ಚೆಂಗ್ಡು ಎಕ್ಸ್‌ಪ್ರೆಸ್‌ವೇಯ ಹೌಜಿಹೆ ಸೇತುವೆಯ ಮೇಲೆ ಈ ಅಪಘಾತ ಸಂಭವಿಸಿದೆ. ಈ ವೇಳೆ ಟ್ರಕ್ ಮಾತ್ರ ಸೇತುವೆಯ ಮೇಲೆ ಸಾಗುತ್ತಿತ್ತು. ಟ್ರಕ್ ಒಳಗೆ ಸಿಲುಕಿಕೊಂಡಿದ್ದ ಚಾಲಕನನ್ನು ನಂತರ ರಕ್ಷಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.ನಗರಗಳಲ್ಲಿ ನದಿಗಳ ದಂಡೆಯಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಬೇರೆ ಕಡೆ ಹೋಗುವಂತೆ ಸ್ಥಳೀಯ ಅಧಿಕಾರಿಗಳು ತುರ್ತು ಎಚ್ಚರಿಕೆ ನೀಡಿದ್ದಾರೆ.
Read More »ಓದಿಸ್ತೀನಿ ಅಂತಾ ಕರೆದೊಯ್ದು ಕ್ಲಿನಿಕ್‌ನಲ್ಲಿ ರೇಪ್ ಮಾಡಿದ ಡಾಕ್ಟರ್!
ವೈದ್ಯನೆಂದು ನಟಿಸಿ 17 ವರ್ಷದ ಬಾಲಕಿಯ ಮೇಲೆ ಖಾಸಗಿ ಕ್ಲಿನಿಕ್‌ನಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಬಾಲಕಿಯ ಸಂಬಂಧಿಕರ ದೂರಿನ ಮೇರೆಗೆ ಬೈದ್ಯಾನಂದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ಬಬಾನಿ ಶಂಕರ್ ದಾಸ್ ಸೇರಿದಂತೆ ಮೂವರನ್ನು ಬಂಧಿಸಿ, ವಿಚಾರಣೆ ಮಾಡಲಾಗುತ್ತಿದೆ.ಬಾಲಕಿ ತನ್ನ ಸಂಬಂಧಿಕರ ಮನೆಗೆ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನಂತರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಾಗಿದೆ. ಪೋಕ್ಸೊ ಕಾಯ್ದೆಯಡಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





