Breaking News

ಹುಬ್ಬಳ್ಳಿಯ ಹಳೆ ಸಿಎಆರ್ ಮೈದಾನದಲ್ಲಿ ಮಾದಕ ವಸ್ತು ಪೆಡ್ಲರ್ಸ್ ಪರೇಡ್..

ಹುಬ್ಬಳ್ಳಿ: ದುಷ್ಕರ್ಮಿಗಳ ವಿರುದ್ಧದ ನಿರಂತರ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಳೆದ 10 ವರ್ಷಗಳಲ್ಲಿ ದಾಖಲಾದ ಮಾದಕ ದ್ರವ್ಯ ಮತ್ತು ಮಾನಸಿಕ ಮಾದಕ (ಎನ್‌ಡಿಪಿಎಸ್) ಪ್ರಕರಣಗಳ ಆರೋಪಿಗಳ ಒಟ್ಟು 200 ಕ್ಕೂ ಹೆಚ್ಚು ವ್ಯಕ್ತಿಗಳ ಪರೇಡ್ ಅನ್ನು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃದಲ್ಲಿ ನಡೆಸಿದರು.

ಎಲ್ಲಾ ಆರೋಪಿಗಳನ್ನು ನಗರದ ಕಾರವಾರ ರಸ್ತೆಯಲ್ಲಿರುವ ಸಿಎಆರ್ ಮೈದಾನಕ್ಕೆ ಕರೆಸಿ ಪೆಡ್ಲರ್ಸ್ ಗಳಿಗೆ ಕಮಿಷನರ್ ಖಡಕ್ ವಾರ್ನಿಂಗ್ ನೀಡಿದರು ಹಾಗೂ ಅಯ್ಯಪ್ಪ ಮಾಲಾಧರಿಸಿದ್ದ ಪೆಡ್ಲರ್ ಗೆ ಬುದ್ದಿವಾದ ಹೇಳಿದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಮಿಷನರ್ ಎನ್ ಶಶಿಕುಮಾರ್, ಹೊಸ ವರ್ಷ ನಿಮಿತ್ತ ಎಲ್ಲಾ ಚಟುವಟಿಕೆಗಳು ಹೆಚ್ಚಾಗಿರುತ್ತವೆ. ಬೇರೆ ಬೇರೆ ಊರುಗಳಿಂದ ಹುಬ್ಬಳ್ಳಿಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿರುತ್ತೆ, ಅಪರಾಧ ಕೃತ್ಯಗಳು ಸಹ ಹೆಚ್ಚಾಗುವ ಸಾಧ್ಯತೆ ಇರುತ್ತೆ ಹಳೆ ದ್ವೇಷದ ಮೇಲೆ ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಅಷ್ಟೇ ಅಲ್ಲದೇ ಈ ವೇಳೆ ಹಲವು ರೀತಿಯ ಕಾರ್ಯಕ್ರಮಗಳಿರುತ್ತೆ, ಅವುಗಳನ್ನ ಬಳಸಿಕೊಂಡು ಇಂತಹ ಸಂಧರ್ಭದಲ್ಲಿ ಅಪರಾಧ ಕೃತ್ಯಗಳು ನಡಿಯುತ್ತವೆ ಹೀಗಾಗಿ ಹಲವಾರು ರೀತಿಯ ಕ್ರಮ ಕೈಗೊಳ್ಳಲಾಗಿದೆ.

ಈ ಹಿನ್ನೆಲೆ ಇಂದು ಹುಬ್ಬಳ್ಳಿಯಲ್ಲಿ ಪೆಡ್ಲರ್ಸ್ ಪರೇಡ್ ಮಾಡಿದ್ದೇವೆ 50 ಪೆಡ್ಲರ್ಸ್ ಮೇಲೆ ದೂರು ದಾಖಲಿಸಿಕೊಂಡಿದ್ದೇವೆ. 200 ಕ್ಕೂ ಹೆಚ್ಚು ಪೆಡ್ಲರ್ಸ್ ಗಳನ್ನು ವಶಕ್ಕೆ ಪಡೆದು ಎನ್ ಡಿ ಪಿ ಎಸ್ ಕಾಯ್ದೆ ಅಡಿ ಕ್ರಮ ಕೈಗೊಂಡಿದ್ದೇವೆ ಕಳೆದ 4-5 ತಿಂಗಳಿಂದ ವ್ಯಸನಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಬಂದಿವೆ. ಕಳೆದ 10 ವರ್ಷದಲ್ಲಿ ದಾಖಲಾದ ಪ್ರಕರಣಗಳ ಆಧಾರದ ಮೇಲೆ 440 ಪೆಡ್ಲರ್ಸ್ ಗುರುತಿಸಲಾಗಿದೆ ಅದರಲ್ಲಿ 210 ಪೆಡ್ಲರ್ಸ್ ಗಳನ್ನ ನಮ್ಮ ಅಧಿಕಾರಿಗಳು ಮನೆಗೆ ಹೋಗಿ ಕರೆದುಕೊಂಡು ಬಂದಿದ್ದಾರೆ, ಅವರೆಲ್ಲರ ಮೇಲೆ ಡೊಸಿಯಸ್ ಮಾಡಿದ್ದೇವೆ. ಇನ್ನು 230 ಕ್ಕೂ ಹೆಚ್ಚು ಜನ ಬಂದಿಲ್ಲ, ಅದರಲ್ಲಿ 50ಕ್ಕೂ ಹೆಚ್ಚು ಜನ ಹೊರ ರಾಜ್ಯದವರಿದ್ದಾರೆ. 30ಕ್ಕೂ ಹೆಚ್ಚು ಜನ ಜೂಡಿಶಿಯಲ್ ಕಸ್ಟಡಿಯಲ್ಲಿದ್ದಾರೆ, 8-10 ಜನ ಮೃತ ಪಟ್ಟರೆ, 110 ಜನ ಸಿಕ್ಕಿಲ್ಲ.

ಅಷ್ಟೇ ಅಲ್ಲದೇ ನಮ್ಮ ಪೊಲೀಸ್ ಇಲಾಖೆಯಿಂದ ಹೊಸ ವರ್ಷ ನಿಮಿತ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮೇಲೆ ನಿಗಾ ಇಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ, ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ ಇತರೆ ಇಲಾಖೆಗಳೊಂದಿಗೆ ಸಭೆ ಇಟ್ಟುಕೊಳ್ಳಲು ನಾಳೆ ಮನವಿ ಮಾಡಿಕೊಳ್ಳಲಾಗಿದೆ. ಲೌಡ್ ಸ್ಪೀಕರ್ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇರುತ್ತೆ. 10 ಗಂಟೆ ಮೇಲೆ ಯಾವುದೇ ಲೌಡ್ ಸ್ಪೀಕರ್ ಹಚ್ಚದೆ ಪಾಲನೆ ಮಾಡಬೇಕು, ಖಾಸಗಿ ಜಾಗಗಳಲ್ಲಿ ಇಂದು ಪಾರ್ಟಿ ಮಾಡಿಕೊಳ್ಳಲು ಯಾವುದೇ ನಿರ್ಬಂಧನೆ ಇಲ್ಲ ಡ್ರಿಂಕ್ ಅಂಡ್ ಡ್ರೈವ್ ಕೂಡ ಕ್ರಮ ಕೈಗೊಳ್ಳಲಾಗುತ್ತೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *