Breaking News

BigTv News

ಮಗ ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ಮನನೊಂದು ಸಾವಿಗೆ ಶರಣಾದ ವೃದ್ಧ ದಂಪತಿ!

ಕಳೆದ ವಾರ ವೃದ್ಧ ದಂಪತಿಯನ್ನು ಅವರ ಮಗನೇ ಬಂದು ಖಾಸಗಿ ವೃದ್ದಾಶ್ರಮಕ್ಕೆ ಸೇರಿಸಿ ಹೋಗಿದ್ದನು. ಆದರೆ, ಮಂಗಳವಾರ ರಾತ್ರಿ ದಂಪತಿ ಅವರ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬುಧವಾರ ಬೆಳಗ್ಗೆ ಕೋಣೆಯ ಬಾಗಿಲು ತೆರೆಯದ ಕಾರಣ ಶಂಕೆಗೊಂಡ ಆಶ್ರಮ ಸಿಬ್ಬಂದಿ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಬಳಿಕ ಸ್ಥಳೀಯ ಪೊಲೀಸರ ನೆರವಿನಿಂದ ಬಾಗಿಲು ತೆರೆಯಲಾಗಿದ್ದು, ದಂಪತಿಯ ಶವ ಪತ್ತೆಯಾಗಿದೆ.ಕುಟುಂಬದಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದರಿಂದ ಮನನೊಂದು ದಂಪತಿಯ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪ್ರಾಥಮಿಕ ಮಾಹಿತಿಯಿಂದ …

Read More »

ಶ್ರೀಮುತ್ತು ನಿವಾಸದ ಬಳಿ ಮಡೆನೂರು, ಸಿಗ್ಲಿಲ್ಲ ಶಿವ ದರ್ಶನ.

ಶಿವಣ್ಣನಿಗೆ ಸಾವು ಬಯಸಿದ್ದಂತಹ ಮಡೆನೂರು ಮನುಗೆ ಇತ್ತೀಚೆಗೆ ಕೊಂಚ ರಿಲ್ಯಾಕ್ಸ್ ಸಿಕ್ಕಿತ್ತು.ಜೈಲಲ್ಲಿ ಇದ್ದಾಗ ಶಿವಣ್ಣ, ದರ್ಶನ್ ಹಾಗೂ ಧ್ರುವ ಸರ್ಜಾಗೆ ಸಾವು ಬಯಸಿದ್ದ ಮನುವಿನ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದ್ರಿಂದ ಆತನ ಮೇಲೆ ಮೂವರೂ ಸ್ಟಾರ್ ನಟರ ಫ್ಯಾನ್ಸ್ ಆಕ್ರೋಶಗೊಂಡಿದ್ದರು. ಅಭಿಮಾನಿ ಸಂಘಗಳಿಂದಲೇ ರಾಜ್ಯಾದ್ಯಂತ ನೂರಾರು ಕೇಸ್‌ಗಳು ಮನು ಮೇಲೆ ದಾಖಲಾಗಿದ್ದವು.ಶಿವಣ್ಣನ ನಿವಾಸಕ್ಕೆ ಮನು ಪತ್ರ ಕೂಡ ಬರೆದಿದ್ದು, ಬದುಕೋಕೆ ಒಂದು ಚಾನ್ಸ್ ಕೇಳಿದ್ದಾರೆ. ತಪ್ಪು ಎಲ್ಲರೂ …

Read More »

ರೀಲ್ಸ್ ಮಾಡುವಾಗ 14ನೇ ಮಹಡಿ ಮೇಲಿನಿಂದ ಜಾರಿ ಬಿದ್ದು ಯುವತಿ ಸಾವು!

ತನ್ನ ಸ್ನೇಹಿತೆ ಹಾಗೂ ಇಬ್ಬರು ಸ್ನೇಹಿತರ ಜತೆ ಪಾರ್ಟಿ ಮಾಡಲು ರಾಯಸಂದ್ರ ಮುಖ್ಯರಸ್ತೆ ಸಮೀಪವಿರುವ ನಿರ್ಮಾಣ ಹಂತದಲ್ಲಿಯೇ ಇರುವ ಅಪಾರ್ಟ್‌ಮೆಂಟ್‌ ವೊಂದಕ್ಕೆ ಹೋಗಿದ್ದರು. ನಾಲ್ವರು ರಾತ್ರಿ 9 ಗಂಟೆಯವರೆಗೂ ಮದ್ಯದ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮುಗಿದ ಬಳಿಕ “ತಾನು ಬೇಜಾರಿ ನಲ್ಲಿದ್ದು, ರೀಲ್ಸ್‌ ಮಾಡಬೇಕು’ ಎಂದು ಹಠಹಿಡಿದ ಈಕೆ, ಸ್ನೇಹಿತೆಯ ಮೊಬೈಲ್‌ ಪಡೆದು ಕಟ್ಟಡದ 14ನೇ ಮಹಡಿಗೆ ತೆರಳಿ ರೀಲ್ಸ್‌ ಮಾಡುತ್ತಿದ್ದಳು. ಈ ವೇಳೆ ಕಾಲುಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ.ಚಿತ್ತೂರು ಮೂಲದ …

Read More »

4 ಕೋಟಿ ಮೌಲ್ಯದ ಆಸ್ತಿಯನ್ನು ದೇವಸ್ಥಾನದ ಹುಂಡಿಗೆ ಹಾಕಿದ ಮಾಜಿ ಯೋಧ.

ಜೂನ್ 24 ರಂದು ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿತ್ತು ಈ ವೇಳೆ ಹುಂಡಿಯಲ್ಲಿ ಮನೆಗೆ ಸಂಬಂಧಿಸಿದ ಕಾಗದ ಪತ್ರಗಳು ಕಂಡುಬಂದಿದ್ದು ಇದನ್ನು ತೆರೆದು ನೋಡಿದಾಗ ಸುಮಾರು ನಾಲ್ಕು ಕೋಟಿ ಮೌಲ್ಯದ ಆಸ್ತಿ ಸೇರಿದ್ದು ಇದನ್ನು ನೋಡಿದ ದೇವಸ್ಥಾನದ ಆಡಳಿತ ಅಧಿಕಾರಿಗಳು ದಂಗಾಗಿದ್ದಾರೆ.ವಿಜಯನ್ ಅವರೇ ತಮಗೆ ಸೇರಿದ ನಾಲ್ಕು ಕೋಟಿಯ ಆಸ್ತಿಯನ್ನು ದೇವಸ್ಥಾನದ ಹುಂಡಿಗೆ ಹಾಕಿರುವ ವ್ಯಕ್ತಿಯಾಗಿದ್ದಾರೆ.ಇನ್ನು ಮನೆಯ ಕಾಗದ ಪತ್ರಗಳನ್ನು ದೇವಸ್ಥಾನದ ಹುಂಡಿಗೆ ಹಾಕಿರುವ ವಿಚಾರ ಗೊತ್ತಾಗುತ್ತಿದ್ದಂತೆ ಪತ್ನಿ, …

Read More »

ಲವರ್ ಜೊತೆ ಸೇರಿ ತಾಯಿಯನ್ನೇ ಕೊಂದ ‘SSLC’ ಬಾಲಕಿ!

ಜೀಡಿಮೆಟ್ಲಾದಲ್ಲಿ ಹತ್ತನೇ ತರಗತಿಯ ಬಾಲಕಿಯೊಬ್ಬಳು ತನ್ನ ಗೆಳೆಯನೊಂದಿಗೆ ಸೇರಿ ತನ್ನ ಮಲತಾಯಿಯನ್ನು ಕೊಲೆ ಮಾಡಿದ್ದಾಳೆ.ತಮ್ಮ ಪ್ರೇಮ ಸಂಬಂಧವನ್ನು ವಿರೋಧಿಸಿ ಖಂಡಿಸಿದ್ದಕ್ಕಾಗಿ ತನ್ನ ತಾಯಿಯನ್ನು ಆಕೆ ಬರ್ಬರವಾಗಿ ಕೊಂದಿದ್ದಾಳೆ.ಸೋಮವಾರ ಸಂಜೆ (ಜೂನ್ 23) ನಲ್ಗೊಂಡದಿಂದ ಬಂದಿದ್ದ ಶಿವ ತನ್ನ ಗೆಳೆಯ ಮತ್ತು ತಮ್ಮ ಯಶವಂತ್ ಜೊತೆ ಹುಡುಗಿಯ ಮನೆಗೆ ತಲುಪಿದ್ದ. ಅಂಜಲಿ ಮನೆಯಲ್ಲಿ ಪೂಜೆ ಮಾಡುತ್ತಿದ್ದಾಗ ಶಿವ ಹಿಂದಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಶಿವ ಅಂಜಲಿಯ ಮುಖವನ್ನು ಬೆಡ್ಶೀಟ್ನಿಂದ …

Read More »

ಹಿಂದೂ ಹುಡುಗಿಗೆ ಪ್ರಪೋಸ್‌, ಒಪ್ಪದ್ದಕ್ಕೆ ಬುರ್ಖಾ ಧರಿಸಿ ಬಂದು ಹತ್ಯೆ!

ನೇಹಾ ಹಾಗೂ ತೌಫಿಕ್ ಆಗಾಗ ಭೇಟಿಯಾಗುತ್ತಿದ್ದರು, ಅಲ್ಲದೇ ತೌಫಿಕ್ ನನ್ನು ಅಣ್ಣ ಎಂದು ಕರೆಯುತ್ತಿದ್ದಳು ಅಷ್ಟೇ ಅಲ್ಲ ರಕ್ಷಾ ಬಂಧನಕ್ಕೆ ರಾಖಿ ಕೂಡ ಕಟ್ಟಿದ್ದಳು. ಆದರೆ ಕೆಲ ದಿನಗಳಿಂದ ಆರೋಪಿಯು ನೇಹಾಳನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ.ಇದಕ್ಕೆ ನೇಹಾ, ನಿನ್ನನ್ನು ಅಣ್ಣ ಎಂದು ಭಾವಿಸಿದ್ದೇನೆ, ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಹೇಳಿ ಹೋಗಿದ್ದಳು.ಮದುವೆಗೆ ಒಪ್ಪುವುದಿಲ್ಲ ಎಂದು ತಿಳಿದು ಆಕೆಯನ್ನು 5 ನೇ ಮಹಡಿಯಿಂದ ಕೆಳಕ್ಕೆ ನೂಕಿ ಪರಾರಿಯಾಗಿದ್ದಾನೆ. ಇತ್ತ ಗಂಭೀರ ಗಾಯಗೊಂಡಿದ್ದ ಮಗಳನ್ನು …

Read More »

ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ಆರೋಪ: SIT ತನಿಖೆಗೆ ಹೈಕೋರ್ಟ್ ತಡೆ!

ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಸರ್ಕಾರಿ ಜಮೀನು ಒತ್ತುವರಿ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.ಪ್ರಕರಣದಲ್ಲಿ ಆರು ಎಕರೆ ಅತಿಕ್ರಮಣವನ್ನು ತೆರವುಗೊಳಿಸಲು ತಹಶೀಲ್ದಾರ್ ಆದೇಶ ನೀಡಿದ್ದರು. ಸರ್ಕಾರವು ಹಿರಿಯ ಐಎಎಸ್ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ಎಸ್‌ಐಟಿ ಮುಖ್ಯಸ್ಥನಾನು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ. ಆ ಭೂಮಿ ನನ್ನ ಆಸ್ತಿ ಎಂದು ಸಾಬೀತುಪಡಿಸಲು ನನ್ನ ಬಳಿ ಎಲ್ಲಾ ದಾಖಲೆಗಳಿವೆ. ರಾಜ್ಯ …

Read More »

ಡಿಕೆ ಶಿವಕುಮಾರ್ ಸುರಂಗ ರಸ್ತೆಗೆ ವಿರೋಧ: ಬೆಂಗಳೂರಿಗೆ ಭೂಗತ ರಸ್ತೆ ಜಾಲಕ್ಕಾಗಿ ಗಡ್ಕರಿಗೆ HDK ಮನವಿ.

ಬೆಂಗಳೂರು ಮಹಾನಗರದಲ್ಲಿ ಅತ್ಯಾಧುನಿಕ ಭೂಗತ ರಸ್ತೆ ಜಾಲ ನಿರ್ಮಾಣ ಸೇರಿದಂತೆ ಪೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿ ಹಾಗೂ ರಾಜ್ಯದ ಪ್ರಮುಖ ಸಾರಿಗೆ ಯೋಜನೆಗಳ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಗರದಾದ್ಯಂತ ಪ್ರಮುಖ ವಲಯಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿರುವ ಈ ಯೋಜನೆಗಳು ಸಂಚಾರ ಬಿಕ್ಕಟ್ಟಿಗೆ, ವಿಶೇಷವಾಗಿ ನಗರ ಕೇಂದ್ರದಲ್ಲಿ ಶಾಶ್ವತ ಪರಿಹಾರಗಳಾಗಿ …

Read More »

ಹಾವೇರಿ :ಕೊಲೆ ಆರೋಪಿ ಮನೆಗೆ ಬೆಂಕಿ ಹಚ್ಚಿ ಸಂಬಂಧಿಕರ ಆಕ್ರೋಶ!

ಹಾವೇರಿಯಲ್ಲಿ ಗುತ್ತಿಗೆದಾರ ಶಿವಾನಂದ ಕುನ್ನೂರು(40) ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ನಾಗರಾಜ್ ಸವದತ್ತಿ ಮನೆಗೆ ಬೆಂಕಿ ಹಚ್ಚಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಾಗರಾಜ್ ಸವದತ್ತಿ, ಹನುಮಂತ, ಆಶ್ರಫ್, ಸುದೀಪ್, ಸುರೇಶ್ ಕೃತ್ಯವೆಸಗಿದ ಆರೋಪಿಗಳಾಗಿದ್ದಾರೆ.ಹಾವೇರಿ ಜಿಲ್ಲೆ ಶಿಗ್ಗಾಂವಿ ಗಂಗೆಬಾವಿ ಕ್ರಾಸ್ ಬಳಿ ಕೊಲೆ ಮಾಡಿದ್ದರು. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Read More »

ಕಲಬುರಗಿ :ಮಚ್ಚಿನಿಂದ ಕೊಚ್ಚಿ ಮೂವರ ಬರ್ಬರ ಹತ್ಯೆ!!

ಮಂಗಳವಾರ ತಡರಾತ್ರಿ ರಾತ್ರಿ 11.30 ರ ಸುಮಾರಿಗೆ ಡಾಬಾಗೆ ನುಗ್ಗಿದ ಸುಮಾರು 8-10 ದುಷ್ಕರ್ಮಿಗಳು ಮಾಲೀಕ ಮತ್ತು ನೌಕರರು ಕೆಲಸ ಮಾಡುತ್ತಿದ್ದಾಗ ಮೂವರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಮೃತರನ್ನು ಡಾಬಾದ ಮಾಲೀಕರು ಸಿದ್ಧಾರೂಢ (32), ಜಗದೀಶ್ (25) ಮತ್ತು ರಾಮಚಂದ್ರ (35) ಎಂದು ಗುರುತಿಸಲಾಗಿದೆ.ಕಲಬುರಗಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ.

Read More »