Breaking News

ಮಕ್ಕಳಾಗಿಲ್ಲ, ತವರಿನಿಂದ ಹಣ ತಂದಿಲ್ಲವೆಂದು ಪತಿಯಿಂದಲೇ ಹೆಂಡತಿಯ ಭೀಕರ ಕೊಲೆ!

ಕಲಬುರಗಿ: ಮಕ್ಕಳಾಗಿಲ್ಲ ಹಾಗೂ ತವರು ಮನೆಯಿಂದ ಹೆಚ್ಚುವರಿ ಹಣ ತರಲಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯೊಬ್ಬ, ಜಗಳದ ವೇಳೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ. ಮೃತರನ್ನು ಪ್ರಿಯಾಂಕಾ ಹಡಪದ್ (30) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ವಕೀಲನಾಗಿರುವ ಸೂರ್ಯಕಾಂತ್‌ ಪತ್ನಿಯನ್ನು ಕೊಲೆ ಮಾಡಿದ ಬಳಿಕ, ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದಾನೆ ಎಂದು ಪ್ರಿಯಾಂಕಾ ಕುಟುಂಬಸ್ಥರು ಆರೋಪಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಕುಟುಂಬಸ್ಥರ ದೂರಿನ ಆಧಾರದ ಮೇಲೆ ಸೂರ್ಯಕಾಂತ್‌ನನ್ನು ವಶಕ್ಕೆ ಪಡೆದಿದ್ದಾರೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Share News

About BigTv News

Check Also

ಬೆಂಗಳೂರಿನ 8ನೇ ಮೈಲಿಯಲ್ಲಿ KSRTC ಬಸ್ ಚಾಲಕರ ಕಳ್ಳಾಟ ಬಯಲು: ಕಾದು ಕಾದು ಸುಸ್ತಾಗಿ ಬಸ್ ಅಡ್ಡಗಟ್ಟಿ ಪ್ರತಿಭಟಿಸಿದ ಮಹಿಳೆ

ಬೆಂಗಳೂರು: ನಗರದ ಹೊರವಲಯದ 8ನೇ ಮೈಲಿ ಸಿಗ್ನಲ್ ಬಳಿ ಸಂಜೆ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸ್ಥಳೀಯ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ದೂರದ …

Leave a Reply

Your email address will not be published. Required fields are marked *