ಇರಾಕ್ನಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿ ಆರಂಭಿಸಿದೆ. ಈ ಮೂಲಕ, ಇಸ್ರೇಲ್ – ಇರಾನ್ಗೆ ಸೀಮಿತವಾಗಿದ್ದ ಸಂಘರ್ಷವು ಈಗ 5 ದೇಶಗಳಿಗೆ ವ್ಯಾಪಿಸಿದಂತಾಗಿದ್ದು, ಜಗತ್ತಿನಲ್ಲಿ “ಮಿನಿ ಮಹಾಯುದ್ಧ’ ಆರಂಭವಾದಂತಾಗಿದೆ. ಅಮೆರಿಕವು ರವಿವಾರ ಬೆಳಗಿನ ಜಾವ ಇರಾನ್ನ ಮೂರು ಪರಮಾಣು ಸ್ಥಾವರಗಳ ಮೇಲೆ “ಆಪರೇಷನ್ ಮಿಡ್ನೈಟ್ ಹ್ಯಾಮರ್’ ಎಂಬ ಹೆಸರಿನಲ್ಲಿ ದಿಢೀರ್ ದಾಳಿ ನಡೆಸಿತ್ತು. ಇದಾದ 48 ಗಂಟೆಯಲ್ಲೇ ಇರಾನ್ ತಿರುಗೇಟು ನೀಡಿದೆ. “ಆಪರೇಷನ್ ಅಲ್-ಬಸತ್’ ಹೆಸರಿನಲ್ಲಿ ಇರಾನ್ ಪ್ರತಿದಾಳಿ ಆರಂಭಿಸಿದ್ದು, …
Read More »ಧಾರವಾಡ : ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ!
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಗದಗ, ಧಾರವಾಡ, ಕಲಬುರಗಿ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ಧಾರವಾಡ ಜಿಲ್ಲೆಯಲ್ಲೂ ಲೋಕಾಯುಕ್ತ ದಾಳಿ ನಡೆದಿದೆ. ಮಲಪ್ರಭಾ ಪ್ರಾಜೆಕ್ಟ್ನ ಇಂಜಿನಿಯರ್ ಅಶೋಕ್ ವಲ್ಸಂದ ಅವರ ಮನೆ ಮೇಲೂ ಲೋಕಾ ದಾಳಿ ಮಾಡಲಾಗಿದೆ. ಧಾರವಾಡ ನಗರದ ಕೆವಿಜಿ ಬ್ಯಾಂಕ್ ಬಳಿಯಿರುವ ಕ್ವಾಟರ್ಸ್ ಸೇರಿ …
Read More »ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ!!
ಬೆಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಬಿಬಿಎಂಪಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.ಕಚೇರಿ, ನಿವಾಸ ಸೇರಿದಂತೆ ನಗರದ ಒಟ್ಟು ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋವಿಂದರಾಜನಗರ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್, ನಾಗರಬಾವಿ, ಗೋವಿಂದರಾಜನಗರ, ಯಲಹಂಕ ಭಾಗದಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಸಿದ್ದಾರೆ.
Read More »ಮಹಾನಗರ ಪಾಲಿಕೆ : ನಿವೃತ್ತನಾಗಿ 15 ವರ್ಷ ಕಳೆದರೂ ಕುರ್ಚಿ ಬಿಡದ ಅಧಿಕಾರಿ!!
ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕ ಡಾ.ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ ಮತ್ತು ಪೊಲೀಸ್ ನಿರೀಕ್ಷಕಿ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಮತ್ತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ, ರಾಜೇಂದ್ರ ನಾಯ್ಕ್ ಎಂ.ಎನ್ ರವರು ಮಂಗಳೂರು ಮತ್ತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ಸಿಬಂದಿಗಳೊಂದಿಗೆ ಮಂಗಳೂರು ಮಹಾನಗರ ಪಾಲಿಕೆಗೆ ಲೋಕಾಯುಕ್ತರಿಂದ ಸರ್ಚ್ ವಾರಂಟ್ ಪಡೆದು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ …
Read More »ಭ್ರಷ್ಟ ಇನ್ಸ್ಪೆಕ್ಟರ್ಗೆ ಲೋಕಾಯುಕ್ತ ಶಾಕ್: 7 ಜಾಗಗಳಲ್ಲಿ ರೇಡ್!!
ಗದಗ ಶಹರ ಪೊಲೀಸ್ ಠಾಣೆ ಸಿಪಿಐ ಡಿ ಬಿ ಪಾಟೀಲ್ಗೆ ಸೇರಿದ, ಗದಗ ನಗರದ ಶಿವಾನಂದ ನಗರದ ಬಾಡಿಗೆ ಮನೆ ಮತ್ತು ಕಚೇರಿ ಮೇಲೆ, ಇಂದು ಬೆಳ್ಳಂಬೆಳಿಗ್ಗೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.ಬಾಗಲಕೋಟೆ, ಜಮಖಂಡಿ, ಕೆರೂರ ಮನೆಗಳ ಮೇಲೂ ದಾಳಿ ಮಾಡಿ, ಲೋಕಾಯುಕ್ತ ಅಧಿಕಾರಿಗಳು ಇಂಚಿಂಚು ಪರಿಶೀಲನೆ ನಡೆಸಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿ ಎಸ್ ಪಾಟೀಲ, ಸಿಪಿಐ ಪರಶುರಾಮ ಕವಟಗಿ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.
Read More »ಜುಲೈ 1 ರಿಂದ ರೈಲ್ವೆ ಪ್ರಯಾಣ ದರ ಏರಿಕೆ ಸಾಧ್ಯತೆ!
ಜುಲೈ 1 ರಿಂದ ಜಾರಿಗೆ ಬರುವಂತೆ ಎಸಿ ಮತ್ತು ಎಸಿಯೇತರ ಎಕ್ಸ್ಪ್ರೆಸ್ ಮತ್ತು ಎರಡನೇ ದರ್ಜೆಯ ಬೋಗಿಗಳ ಟಿಕೆಟ್ ದರಗಳಲ್ಲಿ ಭಾರತೀಯ ರೈಲ್ವೆ ಅಲ್ಪ ಹೆಚ್ಚಳ ಮಾಡಲಿದೆ.ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಮಂಗಳವಾರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ, ಉಪನಗರ ದರ ಸುಂಕಗಳು ಅಥವಾ ಮಾಸಿಕ ಸೀಸನ್ ಟಿಕೆಟ್ (MST) ಬೆಲೆಗಳಲ್ಲಿ ಯಾವುದೇ ಹೆಚ್ಚಳವನ್ನು ಜಾರಿಗೆ ತರುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದರು.
Read More »ಮಧ್ಯರಾತ್ರಿ OYOಗೆ ಬಂದ ಪ್ರೇಯಸಿ, ಯುವಕ ಶಾಕ್!
ಯುವತಿ ತನ್ನ ಬ್ಯಾಗ್ ಒಳಗಿಡಲು ಹೇಳುತ್ತಾ, ‘ನನ್ನ ಪೋಷಕರು ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ನಾನು ಗರ್ಭಿಣಿ ಎಂಬ ವಿಷಯ ತಿಳಿದು ನೇರವಾಗಿ ಇಲ್ಲಿಗೆ ಬಂದೆ,’ ಎಂದು ಬಾಂಬ್ ಸಿಡಿಸುತ್ತಾಳೆ. ಈ ಸುದ್ದಿಯಿಂದ ಗಾಬರಿಯಾದ ಯುವಕ, ‘ಅದೇಗೆ? ನಾನೇನೂ ಮಾಡಿಲ್ಲವಲ್ಲ’ ಎಂದು ಆಕ್ಷೇಪಿಸುತ್ತಾನೆ. ಯುವತಿ ತಾಳ್ಮೆಯಿಂದ, ‘ಮದುವೆಯಾಗುವೆ ಎಂದು ಮನೆಯಲ್ಲಿ ಹೇಳಿದ್ದೆ ಅಲ್ವಾ? ಈಗ ಹೋಗಿ ಹೇಳು. ನಾನಿಲ್ಲಿಂದ ಹೋಗಲ್ಲ. ನೀನು ಹೇಳದಿದ್ದರೆ, ನಾನೇ ಹೋಗಿ ಎಲ್ಲವನ್ನೂ ಹೇಳುತ್ತೇನೆ,’ ಎಂದು …
Read More »ಅನ್ಯಧರ್ಮದ ಯುವಕನೊಂದಿಗೆ ಮದುವೆ, ಮಗಳು ಬದುಕಿದ್ದಾಗಲೇ ಪಿಂಡ ಇಟ್ಟ ಪೋಷಕರು!
ಪಶ್ಚಿಮ ಬಂಗಾಳದ ನಾಡಿಯಾದ ಕೃಷ್ಣಗಂಜ್ನ ಶಿಬ್ನಿಬಾಸ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹುಡುಗಿಯ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಮುಂದಾಳತ್ವದಲ್ಲಿ ಈ ಶ್ರಾದ್ಧ ಕಾರ್ಯ ಮಾಡಲಾಗಿದೆ ಎನ್ನಲಾಗುತ್ತಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿ ಹನ್ಸ್ಖಾಲಿ ಘಜ್ನಾ ಪ್ರದೇಶದ ಬೇರೆ ಧರಮದ ಯುವಕನನ್ನ ಪ್ರೀತಿಸಿ ಓಡಿ ಹೋಗಿ ಮದುವೆಯಾಗುತ್ತಾಳೆ. ಇದನ್ನ ತಿಳಿದ ಕುಟುಂಬಕ್ಕೆ ಕೋಪ ಬರುತ್ತದೆ. ಮಗಳ ಈ ನಿರ್ಧಾರ ಸಹಿಸದ ಕುಟುಂಬಸ್ಥರು, ಮಗಳ ಮದುವೆಯಾದ 12 ದಿನಗಳ ನಂತರ …
Read More »ಹಿರಿಯೂರ: ಮುರಿದು ಬಿದ್ದ ವಿವಾಹ, ಮದುವೆಯೇ ಬೇಡವೆಂದ ವಧು!
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದ ಯುವತಿ ಹಾಗೂ ಜಗಳೂರು ಪಟ್ಟಣದ ಯುವಕನ ವಿವಾಹ ನಿಶ್ಚಯವಾಗಿತ್ತು.ವರನ ಕಡೆಯ ಕೆಲವರಿಗೆ ಕುಡಿಯುವ ನೀರು ಸಿಕ್ಕಿಲ್ಲ. ಇದೇ ವಿಚಾರಕ್ಕೆ ವಧು ಹಾಗೂ ವರನ ಕಡೆಯವರ ನಡುವೆ ಜಗಳ ನಡೆದಿದೆ. ನೀರಿನ ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಮದುವೆಯೇ ನಿಲ್ಲುವ ಸೂಚನೆ ಕಂಡು ಬಂದಿದೆ.ಜಗಳ ಮರೆತು ಹಸೆಮಣೆ ಎರುವಂತೆ, ವಧು-ವರರ ಪೋಷಕರು ಹಾಗೂ ಸಂಬಂಧಿಕರು ಮನವೊಲಿಸುವ ಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಭಾನುವಾರ ಮಧ್ಯಾಹ್ನ 12 …
Read More »ಮನೆಯಲ್ಲಿ ಸಿಲಿಂಡರ್ ಗ್ಯಾಸ್ ಸ್ಫೋಟ!!
ಸಿಲಿಂಡರ್ ಸೋರಿಕೆಯಾಗಿ ಸ್ಫೋಟಗೊಂಡಿರುವ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಮಧ್ಯಾಹ್ನದ ಸಮಯ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ದೊಡ್ಡ ದುರ್ಘಟನೆ ಸಂಭವಿಸಿಲ್ಲ. ಅನಿಲ ಸೋರಿಕೆಯ ಸಂದರ್ಭದಲ್ಲಿ ಮಹಿಳೆಯು ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆದಿಟ್ಟಿದ್ದರಿಂದ ಸ್ಫೋಟದ ತೀವ್ರತೆ ಕಡಿಮೆಯಾಗಿದೆ.ಮಹಿಳೆ ಹಾಗೂ ಪುರುಷ ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





