ರಾತ್ರಿ ಬೈಕ್ ನಲ್ಲಿ ಶಿಡ್ಲಘಟ್ಟ ಕಡೆಯಿಂದ ಚಿಂತಾಮಣಿಗೆ ಬರುತ್ತಿದ್ದರು.ಬೆಂಗಳೂರಿನ ರಾಜಾಜಿ ನಗರದ ಇನೋವಾ ಕಾರು ಚಿಂತಾಮಣಿಯ ಮದುವೆಯೊಂದರಲ್ಲಿ ಭಾಗವಹಿಸಲು ಆಗಮಿಸಿದ್ದು, ಮುಗಿಸಿಕೊಂಡು ವಾಪಸ್ ಹೋಗುವಾಗ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದವರ ವಿವರ ಇನ್ನೂ ದೊರೆತಿಲ್ಲ.ವೇಗವಾಗಿ ಬಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಗೊಂಡಿದ್ದ ಇಬ್ಬರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷಿಸಿದ ವೈದ್ಯರು ನಾರಾಯಣಸ್ವಾಮಿ ಮೃತಪಟ್ಟಿದ್ದಾನೆ ಎಂದು ತಿಳಿಸಿ ಗಾಯಾಳು ಮಧು ವನ್ನು ದಾಖಲಿಸಿಕೊಂಡು …
Read More »ಬೆಂಗಳೂರು :ಶಾಲಾ ಕಟ್ಟಡದಲ್ಲಿ ವ್ಯಕ್ತಿ ಆತ್ಮಹತ್ಯೆ..!
ಕಾಮಗಾರಿಗೆ ಎಂದು ಬಂದಿದ್ದ ರಾಜೇಂದ್ರ ಕೆಲಸ ಮಾಡಿ ಶಾಲೆಯ ಕಟ್ಟಡದಲ್ಲಿ ಮಲಗುತ್ತಿದ್ದರು. ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ಶಾಲೆಗೆ ಮಕ್ಕಳು ಬಂದಾಗ ವಿಚಾರ ಬೆಳಕಿಗೆ ಬಂದಿದೆ.ಶಾಲೆ ಒಳಗೆ ಹೋಗ್ತಿದ್ದಂತೆ ಮೃತದೇಹ ನೋಡಿ ಮಕ್ಕಳು ಚೀರಿಕೊಂಡಿದ್ದಾರೆ. ಶಾಲಾ ಆಡಳಿತ ಮಂಡಳಿ ಶಾಲೆಗೆ ರಜೆ ನೀಡಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ,ಪರಿಶೀಲನೆ ನಡೆಸಿದ್ದಾರೆ.
Read More »ಫ್ರಿಡ್ಜ್ ನಲ್ಲಿಟ್ಟ ಕೇಕ್ ತಿಂದು ಮಗು ಸಾವು!
ಭುವನೇಶ್ವರಿನಗರದಲ್ಲಿ ಕೇಕ್ ತಿಂದು ಮಗು ಸತ್ತಿತ್ತು. ಫುಡ್ ಪಾಯ್ಸನ್ನಿಂದ 5 ವರ್ಷದ ಮಗು ಮೃತ ಪಟ್ಟಿತ್ತು. ಅಲ್ಲದೆ, ತಂದೆ-ತಾಯಿ ಸ್ಥಿತಿ ಗಂಭೀರವಾಗಿ, ಇಬ್ಬರಿಗೂ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದ ಕೇಕ್ ತಿಂದು ಫುಡ್ ಪಾಯ್ಸನ್ ಆಗಿದೆ ಅನ್ನೋ ವಿಚಾರ ಹರಿದಾಡಿತ್ತು. ಇದೀಗ ಎಫ್ಎಸ್ಎಲ್ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ನಡೆಸಿದ ತನಿಖೆಯಲ್ಲಿ ಇದೀಗ ಅಚ್ಚರಿ ವಿಚಾರ ಬಯಲಾಗಿದೆ. ಮಗು ಮನೆಯ ಫ್ರಿಜ್ಡ್ ನಲ್ಲಿಟ್ಟ ವಾಂಗಿಬಾತ್ …
Read More »ಕೆಎಸ್ಆರ್ಟಿಸಿ ಬಸ್ ಬ್ರೇಕ್ ಫೇಲ್, ತಪ್ಪಿದ ಭಾರೀ ದುರಂತ!!
ಕನಕಪುರ ಡಿಪೋದಿಂದ ಪ್ರಯಾಣಿಕರನ್ನು ಕರೆದುಕೊಂಡು ತಮಿಳುನಾಡಿಗೆ ಹೋಗುತ್ತಿದ್ದು 9 ಗಂಟೆ ಸುಮಾರಿಗೆ ಈ ಬಸ್ ತಗ್ಗಟ್ಟಿ ಗ್ರಾಮದ ಬಳಿ ಬ್ರೇಕ್ ನಿಯಂತ್ರಣ ಕಳೆದುಕೊಂಡಿದೆ.ತಕ್ಷಣ ಚಾಲಕ ಬಸ್ಸನ್ನು ರಸ್ತೆ ಬದಿಯ ಮಣ್ಣಿನ ಗುಡ್ಡೆಗೆ ಗುದ್ದಿಸಿ ಬಸ್ನ್ನು ನಿಲ್ಲಿಸುವ ಮೂಲಕ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ.ಈ ಸುದ್ದಿ ತಿಳಿಯುತ್ತಿದ್ದಂತೆ ಕನಕಪುರದ ಕೆಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read More »ಐಪಿಎಸ್ ಅಧಿಕಾರಿ ರವೀಂದ್ರ ಕಾಶಪ್ಪ ವಿರುದ್ಧ ಅಕ್ರಮವಾಗಿ ಆಸ್ತಿ ಸಂಪಾದನೆ ಆರೋಪ!
ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ರವೀಂದ್ರ ಕಾಶಪ್ಪ ಅವರು ಪ್ರಸ್ತುತ ಬೆಳಗಾವಿ ವಲಯದ ಡಿಸಿಆರ್ಇ ಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ತಮ್ಮ ಪತ್ನಿ, ಸಂಬಂಧಿಕರು ಹಾಗೂ ಬೇನಾಮಿ ಹೆಸರಿನಲ್ಲಿ ಕೃಷಿ ಜಮೀನು ಸೇರಿದಂತೆ ಹಲವು ವ್ಯವಹಾರಗಳಲ್ಲಿ ತೊಡಗಿದ್ದಾರೆ ಎಂದು ದೂರಲಾಗಿದೆ.ಇವರ ಕುಟುಂಬ ಸದಸ್ಯರು ಸಹಕಾರ ಸಂಘವನ್ನು ಕೂಡ ಆರಂಭಿಸಿ ನಿಯಮ ಬಾಹಿರವಾಗಿ ಸಾಲ ನೀಡಿಕೆ ಹಾಗೂ ಹೂಡಿಕೆ ಮಾಡಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ …
Read More »ಪತ್ನಿಗೆ ಮಂಗಳಸೂತ್ರ ಉಡುಗೊರೆ ನೀಡಿದ 93 ವರ್ಷದ ವೃದ್ಧ..!
ವೃದ್ಧ ದಂಪತಿ ಅಂಗಡಿಯೊಳಗೆ ಹೋದಾಗ, ಆ ವ್ಯಕ್ತಿಯ ಬಳಿ ಕೇವಲ 1,120 ರೂ.ಗಳಿದ್ದವು. ಆ ವ್ಯಕ್ತಿಯ ಬಳಿ ತನ್ನ ಹೆಂಡತಿಗೆ ಮಂಗಳಸೂತ್ರ ಖರೀದಿಸಬೇಕೆಂದು ಹೇಳಿದ್ದ. ಅಂಗಡಿ ಮಾಲೀಕರು ಅವರ ಆಸೆಯಿಂದ ಆಶ್ಚರ್ಯಚಕಿತರಾದರು. ಇದಲ್ಲದೆ, ಆಶೀರ್ವಾದದ ಸಂಕೇತವಾಗಿ ಅವರಿಂದ 20 ರೂ.ಗಳನ್ನು ತೆಗೆದುಕೊಂಡು ಅವರಿಗೆ ಮಂಗಳಸೂತ್ರ ನೀಡಿದರು. ಈ ಘಟನೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ವೃದ್ಧ ದಂಪತಿಗಳ ಪ್ರೀತಿಯಿಂದ ಪ್ರಭಾವಿತರಾದ ಅಂಗಡಿ ಮಾಲೀಕರು, ಅವರಿಂದ ಕೇವಲ 20 ರೂಪಾಯಿಗಳನ್ನು ತೆಗೆದುಕೊಂಡು …
Read More »ತಂದೆಯ ಸಾವಿಗೆ ಸಾಕ್ಷ್ಯ ನುಡಿದ ಮಗ!
ರಾಜಸ್ಥಾನದ ಅಲ್ವಾರ್ನ ಖೇರ್ಲಿ ಪ್ರದೇಶದಲ್ಲಿ ಜೂನ್ 7 ರ ರಾತ್ರಿ ಈ ಕೊಲೆ ನಡೆದಿದ್ದು, ತನ್ನ ಪ್ರಿಯಕರ ಮತ್ತು ಬಾಡಿಗೆ ಹಂತಕರ ಜೊತೆ ಸೇರಿಗೊಂಡು ಪತ್ನಿಯ ಪತಿಯ ಹತ್ಯೆ ಮಾಡಿದ್ದಾರೆ. ಮೃತ ವ್ಯಕ್ತಿಯನ್ನ ವೀರು ಅಥವಾ ಮಾನ್ ಸಿಂಗ್ ಜಾತವ್ ಎಂದು ಗುರುತಿಸಲಾಗಿದ್ದು, ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಪ್ರಕರಣದ ತನಿಖೆ ಮಾಡುವಾಗ ವೀರು ಪತ್ನಿ ಅನಿತಾ, ಗಂಡನ ಆರೋಗ್ಯದಲ್ಲಿ ಏರುಪೇರಾಗಿತ್ತು ಎಂದು ಹೇಳಿದ್ದರು. ಆದರೆ ಕೇವಲ 48 …
Read More »ಜಾಲಿಬೆಂಚಿ: ವಿಷ ಸೇವಿಸಿ ರೈತ ಆತ್ಮಹತ್ಯೆ!
ಜಾಲಿಬೆಂಚಿ ಗ್ರಾಮದ ರೈತ ಅಂಬ್ರೇಶ ರಾಚಯ್ಯ ಮಠಪತಿ (44) ಬುಧವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಒಂದು ಎಕರೆ ಜಮೀನು ಇದೆ. ಬ್ಯಾಂಕ್ ಮತ್ತು ಖಾಸಗಿಯವರ ಬಳಿ ₹10 ಲಕ್ಷ ಸಾಲ ಇದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಸಂಜೆ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
Read More »ಹೆದ್ದಾರಿ ವಿಭಜಕಕ್ಕೆ ಕಾರು ಡಿಕ್ಕಿ; ಯುವ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರ ಸಾವು!!
ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಫೋಕ್ಸ್ ವ್ಯಾಗನ್ ಕಾರು ಜಪ್ಪಿನಮೊಗರು ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಓಂಶ್ರೀ ಪೂಜಾರಿ ತನ್ನ ನಾಲ್ವರು ಗೆಳೆಯರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿದ್ದ ಐವರೂ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಓಂಶ್ರೀ ಪೂಜಾರಿ ಹಾಗೂ ಅಮನ್ ರಾವ್ ಆಸ್ಪತ್ರೆ ಗೆ ಕರೆಯೊಯ್ಯುವಷ್ಟರಲ್ಲಿ ಅಸುನೀಗಿದ್ದಾರೆ. ಉಳಿದ ಮೂವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ …
Read More »ಬೆಸ್ಕಾಂ ನಿರ್ಲಕ್ಷ್ಯ, ವಿದ್ಯುತ್ ಶಾಕ್ ನಿಂದ ವ್ಯಕ್ತಿ ಸಾವು!
ಬೆಸ್ಕಾಂ ಅಧಿಕಾರಿಗಳಿಂದ ಇದೀಗ ಮತ್ತೊಂದು ಎಡವಟ್ಟು ಸಂಭವಿಸಿದ್ದು, ಪದೇ ಪದೇ ವಿದ್ಯುತ್ ಕೈ ಕೊಟ್ಟಾಗ ಬೆಸ್ಕಾಂ ಸಿಬ್ಬಂದಿಗಳು ಮಾಡಬೇಕಾದ ಅಂತಹ ಕೆಲಸವನ್ನು ಜಯರಾಮ್ ಮಾಡಿದ್ದಾರೆ. ಆದರೆ ಜಯರಾಮ್ ಲೈಟ್ ಕಂಬ ದುರಸ್ತಿ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆ ಸಂಭಂದ ಸಾರ್ವಜನಿಕರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





