Breaking News

BigTv News

ತಲೆ ಮೇಲೆ ಬಿದ್ದ ಮರದ ಕೊಂಬೆ, ಯುವಕ ಚಿಂತಾಜನಕ

ಬೆಂಗಳೂರಿನ ಬನಶಂಕರಿ ಬ್ರಹ್ಮ ಚೈತನ್ಯ ಮಂದಿರದ ಬಳಿ ಭಾನುವಾರ ಒಣಗಿದ ಮರದ ಕೊಂಬೆ ಬಿದ್ದು ದ್ವಿಚಕ್ರ ವಾಹನ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.ಅಕ್ಷಯ್‌ನ ಚಿಕಿತ್ಸೆಗೆ ಈಗಾಗಲೇ ಕುಟುಂಬ 1.5 ಲಕ್ಷ ರೂಪಾಯಿಗಳನ್ನು ಆಸ್ಪತ್ರೆಗೆ ಕಟ್ಟಿದೆ. ಆದರೆ, ಇನ್ನೂ ಸುಮಾರು ಒಂದು ಲಕ್ಷ ರೂಪಾಯಿಗಳನ್ನು ಕಟ್ಟಲು ಕುಟುಂಬಸ್ಥರು ಆರ್ಥಿಕವಾಗಿ ಪರದಾಡುತ್ತಿದ್ದಾರೆ. ಚಿಕಿತ್ಸೆ ಮುಂದುವರಿಸಲು ಸಾಕಷ್ಟು ತೊಂದರೆಯನ್ನು ಎದುರಿಸುತ್ತಿರುವ ಕುಟುಂಬ, ಆರ್ಥಿಕ ನೆರವಿಗಾಗಿ ಕಾಯುತ್ತಿದೆ.

Read More »

ಸ್ನೇಹಿತರ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..!

ಜಲಜೀವನ್ ಮಿಷನ್ ಯೋಜನೆಯಲ್ಲಿ‌ ಗಾರೆ ಕೆಲಸ ಮಾಡುತ್ತಿದ್ದರು. ಕ್ಷುಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದ್ದು, ತಲೆಗೆ ಮಾರಕಾಸ್ತ್ರದಿಂದ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದಾನೆ.ವಿಜಯ್ ಕುಮಾರ್ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರಕಾರಿ ಆಸ್ಪತ್ರೆಗೆ ರವಾನೆ‌ ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸುವ ವೇಳೆ ಸಾವನ್ನಪ್ಪಿದ್ದು, ಆರೋಪಿಯನ್ನು ವಶಕ್ಕೆ ಪಡೆದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಹುಬ್ಬಳ್ಳಿ : ಪಾರ್ಕಿಂಗ್ ವಿಷಯಕ್ಕೆ ನಡೆದ ಗಲಾಟೆ, ಠಾಣೆ ಮೆಟ್ಟಿಲಿನಲ್ಲಿ ಅಂತ್ಯ!!

ಕ್ಷುಲ್ಲಕ ಕಾರಣಕ್ಕಾಗಿ ಎರಡೂ ಕೋಮಿನ ಗುಂಪುಗಳು ಪರಸ್ಪರ ಹೊಡೆದಾಡಿಕೊಂಡು ಗಲಾಟೆ ಮಾಡಿರುವ ಘಟನೆ ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ನಡೆದಿದೆ.‌ ಅಂಗಡಿಗಳ ಪಾರ್ಕಿಂಗ್ ಜಾಗಕ್ಕಾಗಿ ಎರಡೂ ಕೋಮುಗಳ ಯುವಕರು ಪರಸ್ಪರ ಹೊಡೆದಾಡಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಭಯಾನಕ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ.‌ಹುಬ್ಬಳ್ಳಿಯ ತಾರಿಹಾಳದಲ್ಲಿ ನಡೆದಿದ್ದ ಘಟನೆಯಲ್ಲಿ ತಂದೆ ಮಲ್ಲಿಕಾರ್ಜುನ ಯತ್ತಿನಮನೆ, ಮಗ ರವಿ ಯತ್ತಿನಮನೆ ಮೇಲೆ ಹಲ್ಲೆ ಮಾಡಿದ್ದಾರೆ. ಪಾರ್ಕಿಂಗ್ ವಿಚಾರಕ್ಕೆ ಜಗಳವಾಗಿದೆ. ಅಂಗಡಿಗೆ ನುಗ್ಗಿ ದಾಂದಲೆ …

Read More »

ಹುಬ್ಬಳ್ಳಿ ಬ್ರೇಕಿಂಗ್‌ : ಹುಬ್ಬಳ್ಳಿಯಲ್ಲಿ ಪ್ರವೀಣ ಭಾಯಿ ತೂಗಾಡಿಯಾ ಹೇಳಿಕೆ…

ಅಂತರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಪ್ರವೀಣ ಭಾಯಿ ತೂಗಾಡಿಯಾ ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಹಿಂದೂಗಳು ಆಶಿರ್ವಾದದಿಂದ ನಾನು ಸುರಕ್ಷಿತವಾಗಿದ್ದೇನೆ ಎಂದರು.ಹಿಂದೂಗಳ ಮೇಲೆ ಸುಳ್ಳು ಕೇಸ್ ಹಾಕಬಾರದು. ಹಾಕಿದರೆ ನಾವು ಹೋರಾಟ ಮಾಡುತ್ತೇವೆ.ರಾಮ ಮಂದಿರ ನಿರ್ಮಾಣ ಮಾಡಬೇಕು ಅನ್ನೋದು ನಮ್ಮ ಉದ್ದೇಶವಾಗಿತ್ತು. ಆ ಕಾರ್ಯ ಇದೀಗ ಪೂರ್ಣಗೊಂಡಿದೆ. ಇಂದು ಕೋಟ್ಯಂತರ ಹಿಂದೂಗಳಿಗೆ ಸಹಾಯ ಮಾಡೋ ಕೆಲಸ ಆರಂಭವಾಗಿದೆ. ಅದಕ್ಕಾಗಿ ಬಡ ಹಿಂದೂಗಳಿಗೆ ಉಚಿತ ಆಹಾರ ಧಾನ್ಯ ನೀಡುತ್ತಿದ್ದೇವೆ. ಹಿಂದೂಗಳಿಗೆ ಉಚಿತ …

Read More »

ಸಂತೇಮರಹಳ್ಳಿ: ಪಡಿತರ ಅಕ್ಕಿ ಅಕ್ರಮ ಸಾಗಾಣೆ, ಆರೋಪಿ ಬಂಧನ!

ತೆಳ್ಳನೂರು ಹಾಗೂ ಆಲಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಪಡಿತರ ಅಕ್ಕಿಯನ್ನು ಜನರಿಂದ ಖರೀದಿಸಿ ಅಕ್ರಮವಾಗಿ ಸಾಗಣೆ ಮಾಡುತಿದ್ದ. ಖಚಿತ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿ 1,569 ಕೆ.ಜಿ ಪಡಿತರ ಅಕ್ಕಿ ಹಾಗೂ ಸಾಗಣೆ ಮಾಡಲು ಬಳಸಿದ ಆಟೊವನ್ನು ವಶಪಡಿಸಿಕೊಳ್ಳಲಾಗಿದೆ.ಮೊಮ್ಮದ್ ಅಪಾನ್ ಎಂಬಾತನನ್ನು ತೆಳ್ಳನೂರು ಗ್ರಾಮದಲ್ಲಿ ಸಂತೇಮರಹಳ್ಳಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

Read More »

ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ!!

ಪತ್ನಿ ಜೊತೆ ಜಗಳವಾಡುತ್ತಿದ್ದ ಗಂಡ ಆಕೆಯ ಕೈ ಹಿಡಿದು ಬಾಲ್ಕನಿಯಿಂದ ಕೆಳಗೆ ನೇತಾಡುವ ಸ್ಥಿತಿಯಲ್ಲಿ ನಿಲ್ಲಿಸಿದ್ದಾನೆ.ಅಪ್ಪಿ ತಪ್ಪಿ ಏನಾದರೂ ಕೆಳಗೆ ಬಿದ್ದರೆ ಪತ್ನಿಯ ಪ್ರಾಣ ಹೋಗೋದು ಗ್ಯಾರಂಟಿ. ಪತ್ನಿಯ ಎರಡೂ ಕೈಹಿಡಿದುಕೊಂಡು ಆತ ಮತ್ತಷ್ಟು ಜಗಳವಾಡುತ್ತಿದ್ದರೆ ಭಯಗೊಂಡಿರುವ ಪತ್ನಿ ಪ್ರಾಣಕ್ಕಾಗಿ ಅಂಗಲಾಚುತ್ತಿದ್ದಾಳೆ.ಈ ಭಯಾನಕ ದೃಶ್ಯವನ್ನು ನೋಡಿ ಅಲ್ಲಿದ್ದವರು ಕಿರುಚಿಕೊಳ್ಳುತ್ತಿದ್ದು, ಆಕೆಯನ್ನು ಕಾಪಾಡುವಂತೆ ಗಂಡನಿಗೆ ಗೋಗೆರೆಯುತ್ತಿದ್ದಾರೆ. ಆದರೆ ಅಕ್ಕಪಕ್ಕದವರು ಏನೇ ಹೇಳಿದರೂ ಕಿವಿ ಮೇಲೇ ಹಾಕದೇ ಗಂಡ ಹೆಂಡತಿಯ ಪ್ರಾಣದ ಜೊತೆ …

Read More »

ಹಿರಿಯೂರು : ಮನೆಯಲ್ಲಿದ್ದ ಚಿನ್ನಾಭರಣ ಕಳವು.!

ಮನೆಯಲ್ಲಿ ದಂಪತಿ ಸಮೇತ ಚಿತ್ರದುರ್ಗಕ್ಕೆ ಆಸ್ಪತ್ರೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಮನೆಯಲ್ಲಿದ್ದ 25 ಸಾವಿರ ನಗದು ಹಣ ಹಾಗೂ 60 ಗ್ರಾಂ ತೂಕದ ಚಿನ್ನಾಭರಣ ಕದ್ದು ಕಳ್ಳರು ಪಾರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಅಬ್ಬಿನಹೊಳೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More »

ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ವರು ಸಜೀವ ದಹನ!

ರಾತ್ರಿ 12 ಗಂಟೆ ಸುಮಾರಿಗೆ ಗುಡುಗು ಸಹಿತ ಮನೆಗೆ ಸಿಡಿಲು ಬಡಿದಿದೆ. ಮನೆಯ ಮೇಲೆ ಸಿಡಿಲು ಬಿದ್ದು ಹುಲ್ಲಿನ ಛಾವಣಿಗೆ ಬೆಂಕಿ ಹೊತ್ತಿಕೊಂಡಿತು. ವೀರೇಂದ್ರ ಮತ್ತು ಅವರ ಕುಟುಂಬಕ್ಕೆ ಪ್ರಜ್ಞೆ ಬರುವ ಹೊತ್ತಿಗೆ, ಬೆಂಕಿ ಭಯಾನಕ ರೂಪ ಪಡೆದುಕೊಂಡಿತು.ನೆರೆಹೊರೆಯವರು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಲು ಪ್ರಾರಂಭಿಸಿದರು. ನೆರೆಹೊರೆಯವರು ಬೆಂಕಿಯನ್ನು ನಿಯಂತ್ರಿಸುವ ಹೊತ್ತಿಗೆ, ನಾಲ್ವರೂ ಜೀವಂತವಾಗಿ ಸುಟ್ಟುಹೋಗಿದ್ದರು. ಅವರ ದೇಹಗಳು ಅಸ್ಥಿಪಂಜರಗಳಾಗಿ ಮಾರ್ಪಟ್ಟಿದ್ದವು. ಗ್ರಾಮಸ್ಥರ ಮಾಹಿತಿಯ ಮೇರೆಗೆ ಬಾರಾ ಪೊಲೀಸರು, ಎಸ್‌ಡಿಎಂ ಕರ್ಚನಾ, …

Read More »

ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಯನ್ನು ಮಾತುಕತೆಗೆ ಕರೆಸಿ, ಕೊಲೆ!!

ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಯನ್ನು ಮಾತುಕತೆಗೆ ಕರೆಸಿ, ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ, ಜೆ.ಜೆ‌. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿಸಲು ತೆರಳಿದ ಪೊಲೀಸ್ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ ದೀಪು (28) ಹಾಗೂ ಅರುಣ್ (27) ಅವರ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ನಿಯಂತ್ರಣ ಕಳೆದುಕೊಂಡ ಕಾರು ಆಟೋಗೆ ಡಿಕ್ಕಿ!

ಹೊಸಕೋಟೆಯಿಂದ ಕೆಆರ್ ಪುರಂ ಮಾರ್ಗವಾಗಿ ಬರುತ್ತಿದ್ದ ಇಂಡಿಕಾ ಕಾರು ನಿಯಂತ್ರಣ ಸಿಗದೇ ಮುಂದೆ ಹೋಗುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ.ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಡಹಳ್ಳಿ ಮೇಲ್ಸೇತುವೆ ಶನಿವಾರ ತಡರಾತ್ರಿ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಆಟೋ ಪಲ್ಟಿ ಹೊಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ.ಆಟೋದಲ್ಲಿ ಮಗು ಕೂಡಾ ಇದ್ದು, ತರಚಿದ ಗಾಯಗಳಿಂದ ಬಚಾವ್ ಆಗಿದೆ. ಕಾರಿನಲ್ಲಿದ್ದ ಮೂವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Read More »