ಚನ್ನಪಟ್ಟಣ ತಾಲೂಕಿನ ಸಿಂಗರಾಜಿಪುರ ಕೆರೆಯ ಬಳಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯೊಬ್ಬಳ ಬ್ಯಾಗ್ ಮತ್ತು ಐಡಿ ಕಾರ್ಡ್ ಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದರು. ಇದೀಗ ವಿದ್ಯಾರ್ಥಿನಿಯು ಶವವಾಗಿ ಪತ್ತೆಯಾಗಿದ್ದಾಳೆ. ಮಹಾಲಕ್ಷ್ಮೀ (20) ಮೃತ ವಿದ್ಯಾರ್ಥಿನಿ.ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. ಇಂದು ಬೆಳಗ್ಗೆ ಕೆರೆಯಲ್ಲಿ ವಿದ್ಯಾರ್ಥಿನಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಕಾರು ತೆರವುಗೊಳಿಸುತ್ತಿದ್ದ ವೇಳೆ ಮುಖ್ಯಪೇದೆಗೆ ಲಾರಿ ಡಿಕ್ಕಿ,ಸಾವು!
ಗುರುವಾರ ಲಿಂಗರಾಜು ಹಾಗೂ ಮಲ್ಲೇಶ್-ಮುಖ್ಯ ಪೇದೆಗಳು 112 ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 75ರ ಶೆಟ್ಟಿಹಳ್ಳಿ ಯೂಟರ್ನ್ ಬಳಿ ಯಾರೋ ಅಪರಿಚಿತ ವ್ಯಕ್ತಿಗಳು ಕಾರನ್ನು ರಸ್ತೆಯಲ್ಲಿ ನಿಲ್ಲಿಸಿದರು.ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಗಿದನ್ನು ಗಮನಿಸಿದ ಮುಖ್ಯಪೇದೆ ಲಿಂಗರಾಜು ಕಾರು ಚಾಲಕನಿಗೆ ಕಾರು ತೆರವುಗೊಳಿಸುವಂತೆ ಸೂಚಿಸಿದರು. ಬಳಿಕ 112 ವಾಹನ ಬಳಿ ಬರುತ್ತಿದ್ದ ಸಂದರ್ಭ ಲಿಂಗರಾಜು ಅವರಿಗೆ ಬೆಂಗಳೂರು ಕಡೆಯಿಂದ ಹಾಸನ ಕಡೆಗೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಈ …
Read More »ವಿಮಾನ ದುರಂತ ; ಮೃತಪಟ್ಟವರ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ಘೋಷಿಸಿದ ‘ಟಾಟಾ ಗ್ರೂಪ್’.
ಗುಜರಾತ್’ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಘೋರ ಅಪಘಾತಕ್ಕೀಡಾಗಿದ್ದು, ಇದ್ರಲ್ಲಿದ್ದ ಎಲ್ಲಾ 241 ಜನರು ಸಾವನ್ನಪ್ಪಿದ್ದಾರೆ.ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಟಾಟಾ ಗ್ರೂಪ್ 1 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ.
Read More »ಗೋವಾ: ಪಾರ್ಟಿಗೆಂದು ಆಹ್ವಾನಿಸಿ ಮೂವರು ಬಾಲಕಿಯರ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ!
ಪಾರ್ಟಿಗೆಂದು ಮೂವರು ಬಾಲಕಿಯರನ್ನು ಆಹ್ವಾನಿಸಿ ಸ್ನೇಹಿತರೇ ಅತ್ಯಾಚಾರವೆಸಗಿರುವ ಘಟನೆ ಉತ್ತರ ಗೋವಾದಲ್ಲಿ ನಡೆದಿದೆ. ಮೂವರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಜೂನ್ 8 ರಂದು ಈ ಘಟನೆ ನಡೆದಿದ್ದು, ಹುಡುಗಿಯರ ಪೋಷಕರು ಪೊಲೀಸರ ಬಳಿ ನಾಪತ್ತೆ ದೂರು ದಾಖಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.ಕ್ಯಾಲಂಗುಟ್ ಬೀಚ್ನಲ್ಲಿರುವ ಹೋಟೆಲ್ನಿಂದ ಅವರನ್ನು ರಕ್ಷಿಸಲಾಯಿತು.ಪೊಲೀಸರು ಅಲ್ತಾಫ್ (19) ಮತ್ತು ಓಂ (21) ಎಂದು ಗುರುತಿಸಲಾದ ಆರೋಪಿಗಳನ್ನು ಸಹ ಬಂಧಿಸಿದ್ದಾರೆ.
Read More »ಬೆಂಗಳೂರು: ಪದೇಪದೇ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ; ಬೇಸರಗೊಂಡು ಪತಿ ಆತ್ಮಹತ್ಯೆ!
ಪ್ರಿಯಾ ಅವರು ಪದೇ ಪದೇ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗುತ್ತಿದ್ದರು. ತಿಂಗಳ ಹಿಂದೆಯೂ ಪ್ರಿಯಾ ಮನೆ ಬಿಟ್ಟು ಹೋಗಿದ್ದರು. ಇದರಿಂದ ಬೇಸತ್ತ ಗೋವರ್ಧನ್ ಅವರು ಮನೆಯಲ್ಲಿ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.ಆತ್ಮಹತ್ಯೆ ಮಾಡಿಕೊಳ್ಳಲು ಪ್ರಿಯಾ ಅವರೇ ಕಾರಣ ಎಂಬುದಾಗಿ ಗೋವರ್ಧನ್ ಅವರ ಪೋಷಕರು ಆರೋಪಿಸಿದ್ದಾರೆ.ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಉತ್ತರಪ್ರದೇಶ: ಅಶ್ಲೀಲ ವೀಡಿಯೊ ವೈರಲ್, ಬಿಜೆಪಿ ಜಿಲ್ಲಾಧ್ಯಕ್ಷನ ಉಚ್ಚಾಟನೆ!
ಬಿಜೆಪಿಯ ಗೊಂಡಾ ಜಿಲ್ಲಾಧ್ಯಕ್ಷ ಅಮರ ಕಿಶೋರ ಕಶ್ಯಪ್ ಮಹಿಳಾ ಕಾರ್ಯಕರ್ತೆಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಬುಧವಾರ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
Read More »ಬಾಲಕಿಯರ ಮೇಲೆ ಅತ್ಯಾಚಾರ, ಹೋಟೆಲ್ ಮಾಲೀಕ ಸೇರಿ ನಾಲ್ವರ ಸೆರೆ!
ಈದ್ ಹಬ್ಬದ ಆಚರಣೆಗೆಂದು 3 ಹೆಣ್ಣುಮಕ್ಕಳನ್ನು ಹೋಟೆಲಿಗೆ ಕರೆಸಿಕೊಂಡು, ಅವರ ಮೇಲೆ ಇಬ್ಬರು ಯುವಕರು ಅತ್ಯಾಚಾರಗೈದ ಘಟನೆ ಗೋವಾದಲ್ಲಿ ನಡೆದಿದೆ. ಘಟನೆ ಸಂಬಂಧ ಅಲ್ತಾಫ್ ಮುಜಾವರ್(19) ಮತ್ತು ಓಂ ನಾಯಕ್(21) ಎಂಬವರನ್ನು ಬಂಧಿಸಲಾಗಿದ್ದು, ಅವರಿಗೆ ರೂಂ ಕೊಟ್ಟ ಅತಿಥಿ ಗೃಹದ ಮಾಲೀಕ ರಜತ್ ಚೌಹಾಣ್(31) ಮತ್ತು ಮ್ಯಾನೇಜರ್ ಮನ್ಸೂರ್ ಪೀರ್(35) ಎಂಬವರನ್ನೂ ಬಂಧಿಸಲಾಗಿದೆ.
Read More »ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ!
ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣದ ಸಮೀಪದ ಆಶಾ ಬಾರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು, ಆರೋಪಿ ಶಂಭುಲಿಂಗನನ್ನು ಬಂಧಿಸಿದ್ದಾರೆ.ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮದ್ಯ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಆರೋಪಿಯನ್ನು ಬಂಧಿಸಿ ಆತನಿಂದ ಒಟ್ಟು ರೂ. 2,600/- ಮೌಲ್ಯದ ವಿವಿಧ ಬ್ರ್ಯಾಂಡ್ ನ ಮದ್ಯದ ಸಾಚೇಟ್ ಮತ್ತು ನಗದು ರೂ. 3,960/-ನ್ನು …
Read More »ಮಳೆಗೆ ಕುಸಿದು ಬಿದ್ದ ಮನೆ, ಕುಟುಂಬಸ್ಥರು ಪಾರು!
ಧಾರಾಕಾರ ಮಳೆಗೆ ಮನೆಗೆ ಗೋಡೆ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಹನುಮನಪುರ ಗ್ರಾಮದಲ್ಲಿ ನಡೆದಿದೆ.ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ದವಸಧಾನ್ಯಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಯಾಗಿದ್ದು ನಷ್ಟ ಅನುಭವಿಸುವಂತಾಗಿದೆ. ಈ ಕೂಡಲೇ ಸರ್ಕಾರ ಮನೆ ಪರಿಹಾರ ನೀಡಬೇಕು ಎಂದು ಸಿದ್ದರಾಜು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಎಂ.ಪಿ ರಾಜಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Read More »ಬಿಬಿಎಂಪಿ ನಿರ್ಲಕ್ಷ್ಯ, ರಸ್ತೆ ಅಪಘಾತದಲ್ಲಿ ಯುವಕ ಸ್ಥಿತಿ ಗಂಭೀರ!
ಬಿಬಿಎಂಪಿ ಅಗೆದ ರಸ್ತೆಯಿಂದ ಅಪಘಾತ ಸಂಭವಿಸಿ ಯುವಕನೋರ್ವ ಸ್ಥಿತಿ ಗಂಭೀರವಾಗಿದ್ದು, ರಸ್ತೆ ಪಕ್ಕದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದ ಹಿನ್ನಲೆ ಈ ಅವಘಡ ಸಂಭವಿಸಿದೆ ಎಂದು ಯುವಕನ ಪೋಷಕರು ಆರೋಪಿಸಿದ್ದಾರೆ.ಕೂಡಲೇ ಮಂಜುನಾಥ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ತೀರ್ವ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಸಂಬಂಧ ಬಿಬಿಎಂಪಿ ಜಲಮಂಡಳಿ ಹಾಗೂ ಗುತ್ತಿಗೆದಾರನ ವಿರುದ್ಧ ರಾಜಾಜಿನಗರ ಸಂಚಾರ ಠಾಣೆಯಲ್ಲಿ ಯುವಕನ ಪೋಷಕರು ದೂರು ನೀಡಿದ್ದು, ದೂರಿನ ಅನ್ವಯ ಎಫ್.ಐ.ಆರ್ ದಾಖಲಿಸಲಾಗಿದೆ. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





