ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ದುರುಳರು ಸೋಮವಾರ ಸಂಜೆ ಬಸ್ ಗಾಗಿ ಕಾದು ಕುಳಿತಿದ್ದ 80 ವರ್ಷದ ವೃದ್ಧೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ, ಬಳಿಕ 15,೦೦೦ ರೂಪಾಯಿ ಹಣ ದೋಚಿ ಪರಾರಿಯಾಗಿದ್ದಾರೆ.ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸಪುರದ ಹೆಚ್.ಜಿ.ಹೊಸೂರು ಗ್ರಾಮದ ಲಕ್ಷ್ಮೀದೆವಮ್ಮ ಕೊಲೆಯಾದ ಮಹಿಳೆ.
Read More »ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗೆ ಗುಂಡು!!
ಆರೋಪಿ ಶ್ಯಾಡೊ ಸಚಿನ್ ಎಂಬಾತನ ಮೇಲೆ ಸುಮಾರು 30 ಪ್ರಕರಣಗಳಿದ್ದು ಈತ ಕಳೆದ 6 ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ನಡೆಸಿದ್ದ.ಆತನನ್ನು ಬಂಧಿಸಲು ಯತ್ನಿಸಿದಾಗ ಹೆಡ್ ಕಾನ್ಸ್ ಸ್ಟೇಬಲ್ ಅಶೋಕ್ ಎಂಬವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಪಿಎಸ್ಐ ಯುವರಾಜ್ ಕಂಬಳಿ ಅವರ ಮೇಲೆಯೂ ಹಲ್ಲೆಗೆ ಯತ್ನಿಸಿದಾಗ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿರುವುದಾಗಿ ಪೊಲೀಸ್ ಮಾಹಿತಿ ದೊರೆತಿದೆ.
Read More »ವಿಷ ಹಾಕಿ ಕುಟುಂಬದವರ ಕೊಲೆಗೆ ಯತ್ನ, ಮಹಿಳೆಯ ಬಂಧನ!!
ತನ್ನ ಅನೈತಿಕ ಸಂಬಂಧಕ್ಕೆ ತೊಂದರೆಯಾಗುತ್ತಾರೆ ಎಂದು ಮಹಿಳೆ, ತನ್ನ ಪತಿ, ಮಕ್ಕಳು, ಅತ್ತೆ, ಮಾವನಿಗೆ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಲು ಯತ್ನಿಸಿರುವ ಆರೋಪದಡಿ ಮಹಿಳೆಯನ್ನು ಬಂಧಿಸಿರುವ ಘಟನೆ ತಾಲೂಕಿನ ಕೆರಳೂರು ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.ಬಂಧಿತ ಆರೋಪಿಯನ್ನು ಕೆರಳೂರು ಗ್ರಾಮದ ನಿವಾಸಿ ಗಜೇಂದ್ರ ಎಂಬವರ ಪತ್ನಿ ಚೈತ್ರಾ ಎಂದು ಗುರುತಿಸಲಾಗಿದೆ. ಮಹಿಳೆಯನ್ನು ವಶಕ್ಕೆ ಪಡೆದಿರುವ ಬೇಲೂರು ಪಿಎಸ್ಐ ಎಸ್.ಜಿ. ಪಾಟೀಲ್ ಹಾಗೂ ಸಿಬ್ಬಂದಿ ವಿಚಾರಣೆಗೆ ಒಳಪಡಿಸಿದ್ದಾರೆ.
Read More »ಟ್ರೋಫಿ ಗೆಲ್ಲುತ್ತಿದ್ದತೆ ಚೇಸಿಂಗ್ ಸ್ಟಾರ್ ಭಾವುಕ, ವಿರಾಟ್ ತಬ್ಬಿ ಕಣ್ಣಿರು ಒರೆಸಿದ ಅನುಷ್ಕಾ…
ಬರೋಬ್ಬರಿ 18 ವರ್ಷಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಎತ್ತಿ ಹಿಡಿದಿರುವ ರಾಯಲ್ ಚಾಲೆಂಜರ್ಸ್ ಹೊಸ ಇತಿಹಾಸ ಬರೆದಿದೆ. ಆರ್ಸಿಬಿ ಅಭಿಮಾನಿಗಳು ಐತಿಹಾಸಿಕ ಗೆಲುವಿನ ಗುಂಗಿನಿಂದ ಹೊರಬರಲು ಇನಷ್ಟು ದಿನಗಳೇ ಬೇಕೋ ಗೊತ್ತಿಲ್ಲ. 18 ವರ್ಷಗಳ ಅಭಿಮಾನಿಗಳ ಕನಸನ್ನು ಕೊನೆಗೂ ನನಸು ಮಾಡುವಲ್ಲಿ ನಮ್ಮ ಹೆಮ್ಮೆಯ ಆರ್ಸಿಬಿ ಆಟಗಾರರು ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಫೈನಲ್ ಪಂದ್ಯದ ಬಳಿಕ, ವಿರಾಟ್ ಕೊಹ್ಲಿ ಅವರು ಓಡಿಬಂದು ತಮ್ಮ ಪತ್ನಿ ಅನುಷ್ಕಾ ಶರ್ಮಾ …
Read More »ಚಿಕ್ಕಬಳ್ಳಾಪುರ : ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಕೊಲೆ!!
ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಭೀಕರವಾದ ಕೊಲೆ ನಡೆದಿದ್ದು ವ್ಯಕ್ತಿ ಒಬ್ಬರನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಬಿ.ಬಿ ರಸ್ತೆಯ SBI ಬ್ಯಾಂಕ್ ಬಳಿ ಇಂದು ಮುಂಜಾನೆ ನಡೆದಿದೆ.ಹತ್ಯೆಯಾದ ವ್ಯಕ್ತಿಯನ್ನು ನಗರದ ಚಾಮರಾಜಪೇಟೆ ಕಾಲೊನಿಯ ಶ್ರೀಕಾಂತ್ (29) ಎಂದು ತಿಳಿದುಬಂದಿದೆ.ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಮೊಳಕಾಲ್ಮುರು :ಆಕಳ ಕರುವಿನ ಮೇಲೆ ದಾಳಿ ಮಾಡಿದ್ದ ಚಿರತೆ!!
ಸೋಮವಾರ ಕಾಣಿಸಿದ್ದ ಚಿರತೆಯು ಕಲ್ಲಿನ ಬಂಡೆಯೊಂದರ ಮೇಲೆ ಒಂದು ಗಂಟೆಗೂ ಹೆಚ್ಚು ಸಮಯ ಕುಳಿತಿತ್ತು. ಮೇಯಲು ಹೋಗಿದ್ದ ಸಮೀಪದ ಹಟ್ಟಿಯ ಸಣ್ಣಬೋರಯ್ಯ ಅವರ ಆಕಳ ಕರುವಿನ ಮೇಲೆ ದಾಳಿ ಮಾಡಿದ್ದು, ಕುತ್ತಿಗೆ ಹಾಗೂ ಕಾಲಿನ ಭಾಗದಲ್ಲಿ ತೀವ್ರ ಗಾಯವಾಗಿದೆ ಎಂದು ಗ್ರಾಮಸ್ಥ ಓಬಯ್ಯ ಮಾಹಿತಿ ನೀಡಿದರು.ಅನಾಹುತ ಆಗುವ ಮೊದಲು ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿನ ಬೋನು ಇಟ್ಟು ಚಿರತೆ ಸೆರೆ ಹಿಡಿಯಬೇಕು ಎಂದು ಮನವಿ ಮಾಡಲಾಗಿದೆ.
Read More »ಕೊಪ್ಪಳ : ಗೃಹಲಕ್ಷ್ಮಿ ಹಣದಲ್ಲಿ ಜೆಸಿಬಿ ತರಿಸಿ ಸಾರ್ವಜನಿಕ ರಸ್ತೆ ಸರಿಪಡಿಸಿದ ಮಹಿಳೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಯರೇಹಂಚಿನಾಳ ಗ್ರಾಮದ ರೈತ ಮಹಿಳೆ ಸವಿತಾ ನಾಗರಡ್ಡಿ ಎಬವರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣ ವಿನಿಯೋಗಿಸಿ ಸಾರ್ವಜನಿಕ ರಸ್ತೆಯನ್ನು ಸ್ವಚ್ಛಗೊಳಿಸಿ ಗಮನ ಸೆಳೆದಿದ್ದಾರೆ.ರಸ್ತೆಯುದ್ದಕ್ಕೂ ಮುಳ್ಳು ಕಂಟಿಗಳು ಬೆಳೆದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ತೆರವು ಮಾಡಿಕೊಡಿ ಎಂದು ಸ್ಥಳೀಯಾಡಳಿತಕ್ಕೆ ಅವರು ಮನವಿ ಮಾಡಿದ್ದರು. ಬಹಳ ದಿನಗಳಾದರೂ ಆಡಳಿತ ಕ್ರಮ ಕೈಗೊಳ್ಳದ ಕಾರಣ ತಾವೇ ಕ್ರಮ ಕೈಗೊಂಡಿದ್ದಾರೆ.
Read More »ಬೆಂಗಳೂರು :ಮಗಳ ಮೇಲೆ ಹಲ್ಲೆ ಮಾಡಿದ ತಂದೆ!
ಬಾಲಾಜಿ ಲೇಔಟ್ನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ನೇಪಾಳ ಮೂಲದ ದಂಪತಿಗಳಾದ ಲೋಕೇಶ್ ಮತ್ತು ಅಮೃತ ದಂಪತಿಗಳ ಮಗುವಿನ ಮೇಲೆ ಈ ದೌರ್ಜನ್ಯ ನಡೆದಿದೆ.ತಂದೆಯೊಬ್ಬ ತನ್ನ ಹೆಣ್ಣು ಮಗುವಿನ ಮೇಲೆ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಕ್ರೂರವಾಗಿ ಹಲ್ಲೆ ಮಾಡಿದ್ದಾನೆ.ವಿದ್ಯಾರಣ್ಯಪುರ ಹೊಯ್ಸಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ತಂದೆ ಲೋಕೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 323 …
Read More »ಪುಂಜಾಲಕಟ್ಟೆ :ಹಾವು ಕಡಿದು ಯುವಕ ಸಾವು!!
ಪಾಂಡವರಕಲ್ಲಿನ ಮನೆಯೊಂದರಲ್ಲಿ ಮಧಾಹ್ನದ ಹೊತ್ತು ಅಡಿಕೆ ಸುಲಿಯುತ್ತಿದ್ದಾಗ ಕಾಲಿನ ಬೆರಳಿಗೆ ವಿಷದ ಹಾವೊಂದು ಕಡಿದ ಪರಿಣಾಮ ನವವಿವಾಹಿತ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಪಾದೆಮನೆ ಎಂಬಲ್ಲಿ ನಡೆದಿದೆ.ಇಸ್ಮಾಯಿಲ್ ಅವರ ಪುತ್ರ ಅಶ್ರಫ್ (28) ಮೃತಪಟ್ಟವರು
Read More »ಹಾಸನ: ಡಿವೈಡರ್ಗೆ ಬೈಕ್ ಢಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು!!
ಮೂವರು ಒಂದೇ ಬೈಕ್ನಲ್ಲಿ ಹೊಳೆನರಸೀಪುರದಿಂದ ಹಾಸನದ ಕಡೆಗೆ ಬರುತ್ತಿದ್ದ ವೇಳೆ ಬೈಕ್ ಡಿವೈಡರ್ಗೆ ಢಿಕ್ಕಿ ಹೊಡೆದಿದೆ.ಮೃತ ಹುಸೈಫ್ ಹಾಸನ ನಗರದ ಪೆನ್ಷನ್ ಮೊಹಲ್ಲಾದ ನಿವಾಸಿ. ಸಮೀರ್ ಹೊಳೆನರಸೀಪುರ ಪಟ್ಟಣದ ಗಾಂಧಿನಗರದ ನಿವಾಸಿ. ತೀವ್ರವಾಗಿ ಗಾಯಗೊಂಡಿರುವ ಅಪ್ರಾಪ್ತ ಮುಹಮ್ಮದ್ ಸೂಫಿಯಾನ್ ಕೂಡ ಪೆನ್ಷನ್ ಮೊಹಲ್ಲಾ ನಿವಾಸಿ.ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





