ಬೆಂಗಳೂರು: ಎಚ್ಎಸ್ಆರ್ ಲೇಔಟ್ನ ಅಗರ ಕೆರೆ ಆವರಣದಲ್ಲಿ ಜಾಗಿಂಗ್ ಮಾಡುತ್ತಿದ್ದ ಮಹಿಳೆಯರಿಗೆ ತಿಳಿಯದಂತೆ ಮೊಬೈಲ್ನಲ್ಲಿ ವಿಡಿಯೋ ಹಾಗೂ ಫೋಟೋ ಸೆರೆಹಿಡಿಯುತ್ತಿದ್ದ ಆರೋಪದಡಿ ಗೊಲ್ಡನ್ ಕುಮಾರ್ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯ ಅನುಮಾನಾಸ್ಪದ ವರ್ತನೆ ಗಮನಿಸಿದ ಮಹಿಳೆಯರು ಆತನನ್ನು ತಡೆದು ಪ್ರಶ್ನಿಸಿದ್ದು, ಮೊಬೈಲ್ ಪರಿಶೀಲಿಸಿದಾಗ ಹಲವು ಮಹಿಳೆಯರ ವಿಡಿಯೋಗಳು ಪತ್ತೆಯಾಗಿವೆ. ಬಳಿಕ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಎಚ್ಎಸ್ಆರ್ ಲೇಔಟ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು …
Read More »16 ಗಂಭೀರ ಪ್ರಕರಣಗಳ ಖತರ್ನಾಕ್ ಆರೋಪಿ ಬಂಧನ; ಕೆರೆಗೆ ಧುಮುಕಿ ಹೆಡೆಮುರಿಕಟ್ಟಿದ ಭದ್ರಾವತಿ ಪೊಲೀಸರು!
ಶಿವಮೊಗ್ಗ: ಕಳ್ಳತನ, ಕೊಲೆ ಯತ್ನ ಸೇರಿದಂತೆ 16 ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯಕ್ಕೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ದಿಲೀಪ ಅಲಿಯಾಸ್ ಕರಿಯಾ ಎಂಬ ಆರೋಪಿಯನ್ನು ಭದ್ರಾವತಿ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಮೂರು ಬಾರಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದರೂ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಪೊಲೀಸರು ಬಂಧಿಸಲು ತೆರಳಿದಾಗ ತಪ್ಪಿಸಿಕೊಳ್ಳಲು ಕೆರೆಗೆ ಹಾರಿ ನೀರಿನಲ್ಲಿ ಅಡಗಿ ಕುಳಿತಿದ್ದಾನೆ. ಆರೋಪಿಯ ಸುಳಿವು ಪತ್ತೆಹಚ್ಚಿದ ಬಳಿಕ ಪಿಎಸ್ಐಗಳಾದ ರಮೇಶ್ …
Read More »ನಡುರಸ್ತೆಯಲ್ಲೇ ರ್ಯಾಪಿಡೋ ಬೈಕ್ ಸವಾರನ ಮೇಲೆ ಆಟೋ ಚಾಲಕರಿಂದ ಹಲ್ಲೆ
ಬೆಂಗಳೂರು: ಎಲೆಕ್ಟ್ರಾನಿಕ್ಸಿಟಿಯ ಸೀಸನ್ಸ್ ಹೋಟೆಲ್ ಸಮೀಪ ರ್ಯಾಪಿಡೋ ಬೈಕ್ ಸವಾರನ ಮೇಲೆ ಮೂವರು ಆಟೋ ಚಾಲಕರು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಗ್ರಾಹಕರಿಗಾಗಿ ಕಾಯುತ್ತಿದ್ದ ಯುವಕನಿಗೆ ಬೈಕ್ ಸೈಡ್ಗೆ ಹಾಕುವಂತೆ ಹೇಳಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದು, ಬಳಿಕ ಇನ್ನಿಬ್ಬರು ಚಾಲಕರು ಸೇರಿಕೊಂಡಿದ್ದಾರೆ. ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಾಮಪುರ ಠಾಣೆ ಪೊಲೀಸರು ಮಂಡ್ಯದ ಸುಪ್ರೀತ್ (26) ಹಾಗೂ ರವಿ (24) ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 11 ದ್ವಿಚಕ್ರ ವಾಹನಗಳು ಹಾಗೂ …
Read More »ಚೂಡಿ ಪೂಜೆ ವೇಳೆ ಬೆಂಕಿ ಅಕಸ್ಮಿಕ: ಮಹಿಳೆ ಮೃತ್ಯು
ಉಡುಪಿ: ಚೂಡಿ ಪೂಜೆ ವೇಳೆ ಸೀರೆಗೆ ಬೆಂಕಿ ತಗಲಿ ಮಹಿಳೆ ಯೊಬ್ಬರು ಮೃತಪಟ್ಟ ಘಟನೆ ಕಿನ್ನಿಮುಲ್ಕಿಯ ವೇಗಸ್ ಟೌನ್ಶಿಪ್ನಲ್ಲಿ ನಡೆದಿದೆ. ಮೃತರನ್ನು ವೇಗಸ್ ಟೌನ್ಶಿಪ್ನ ಪದ್ಮನಾಭ ಮಲ್ಯ ಎಂಬವರ ಪತ್ನಿ ಜಯಂತಿ ಮಲ್ಯ(80) ಎಂದು ಗುರುತಿಸಲಾ ಗಿದೆ. ಇವರು ಆ.16ರಂದು ಮನೆಯಲ್ಲಿ ಶ್ರಾವಣ ಮಾಸದ ಚೂಡಿ ಪೂಜೆಯನ್ನು ತುಳಿಸಿಕಟ್ಟೆಯಲ್ಲಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಸೀರೆಗೆ ಬೆಂಕಿ ತಾಗಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಸೆ.1ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ …
Read More »ಜಾನುವಾರು ಅಕ್ರಮ ಸಾಗಾಟ, ಇಬ್ಬರ ಬಂಧನ
ಮೂಲ್ಕಿ:ಉತ್ತರ ಕರ್ನಾಟಕದ ಹಾವೇರಿಯಿಂದ ಕೇರಳದ ಕಾಸರಗೋಡು ಕಡೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಮೂಲ್ಕಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಸಮೀಪದ ಬಪ್ಪನಾಡು ದ್ವಾರದ ಬಳಿ ಪತ್ತೆ ಹಚ್ಚಿ, ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಹಾವೇರಿ ನಿವಾಸಿಗಳಾದ ಚಾಲಕ ಮಹಾಂತೇಶ್(26), ನಿರ್ವಾಹಕ ರಾಜು(26) ಬಂಧಿತರು. ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಚೆಕ್ ಪಾಯಿಂಟ್ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಆರೋಪಿಗಳು ವಾಹನದಲ್ಲಿ 16 ಜಾನುವಾರು(13 ಕೋಣ, 1 ಎಮ್ಮೆ, …
Read More »ಆಸ್ತಿ ವಿವಾದ: ಹಾಡಹಗಲೇ ಬಿಯರ್ ಬಾಟಲ್ ಎಸೆದು ಕಾಂಗ್ರೆಸ್ ಮುಖಂಡನ ಸಹೋದರನಿಂದ ಗೂಂಡಾಗಿರಿ!
ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಯಪ್ಪನಹಳ್ಳಿಯಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮನೆಯೊಂದರ ಮೇಲೆ ಬಿಯರ್ ಬಾಟಲಿ ಎಸೆದು ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ. ಥಾರ್ ರಾಕ್ಸ್ ಕಾರಿನಲ್ಲಿ ಬಂದ ಕೆಲವರು ಹಾಡಹಗಲೇ ಬಾಟಲಿ ಎಸೆದು ಪರಾರಿಯಾಗಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಎಸ್ಬಿಐ ಮಂಜುನಾಥ್ ಮತ್ತು ಸಿ.ಮಂಜುನಾಥ್ ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದ್ದು, ಕಳೆದ ಭಾನುವಾರ ಎರಡೂ ಕಡೆಯವರು ಬನ್ನೇರುಘಟ್ಟ ಠಾಣೆಯಲ್ಲಿ ಕೌಂಟರ್ ಕೇಸ್ ದಾಖಲಿಸಿದ್ದರು. ಇದೇ …
Read More »ಮದುವೆ ವಿಚಾರಕ್ಕೆ ವ್ಯಕ್ತಿಯ ಮೇಲೆ ದೊಣ್ಣೆ, ಬಾಟಲಿಯಿಂದ ಹಲ್ಲೆ ನಡೆಸಿದ್ದ ಶಿಕ್ಷಕಿಗೆ ಜೈಲು ಶಿಕ್ಷೆ!
ಶಿವಮೊಗ್ಗದಲ್ಲಿ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ದೊಣ್ಣೆ ಹಾಗೂ ಗಾಜಿನ ಬಾಟಲಿಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಶಿಕ್ಷಕಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಮಲವಗೊಪ್ಪ ನಿವಾಸಿ ನಸೀನಾ ಬಾನು ಶಿಕ್ಷೆಗೆ ಗುರಿಯಾದವರು. ಸಕ್ರೀಯ ಅವರ ಕಿರಿಯ ಸಹೋದರಿಯ ವಿವಾಹ ವಿಚಾರದಲ್ಲಿ ನಸೀನಾ ಬಾನು ಹಾಗೂ ಮತ್ತೊಬ್ಬ ವ್ಯಕ್ತಿ ತಕರಾರು ತೆಗೆದಿದ್ದರು. ಮಾತಿಗೆ ಮಾತು ಬೆಳೆದು ಸಕ್ರೀಯ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದರು. …
Read More »ಪೊಲೀಸ್ ಅಧಿಕಾರಿಗಳ ವಿರುದ್ಧ ಹಣ ವಂಚನೆ ಆರೋಪ – ಲೈವ್ನಲ್ಲಿ ಆತ್ಮಹತ್ಯೆ ಯತ್ನ
ಹಾಸನ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಮಾಡಿರುವ ಅಮರ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೊಳೆನರಸೀಪುರ ತಾಲೂಕಿನ ಕೊಡುವಿನ ಹೊಸಹಳ್ಳಿ ನಿವಾಸಿಯಾಗಿರುವ ಅಮರ್, ಬೆಟ್ಟದಪುರ ಠಾಣೆ ಸಿಬ್ಬಂದಿ ವಿರುದ್ಧ ಆರೋಪ ಮಾಡಿದ್ದಾರೆ. ಅಪಘಾತ ಪ್ರಕರಣದಲ್ಲಿ ಪೊಲೀಸರು ಆರೋಪಿಗಳ ಪರವಾಗಿ ವರ್ತಿಸಿ, ತಮಗೆ ನ್ಯಾಯ ಒದಗಿಸದೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ಅಮರ್ ಆರೋಪಿಸಿದ್ದಾರೆ. ತಮ್ಮ ಸಾವಿಗೆ ಹುಣಸೂರು ಡಿವೈಎಸ್ಪಿ ರವೀಶ್ …
Read More »ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಜಮೀನು ಮಾರಾಟ – 80ರ ಕಿಲಾಡಿ ಅಜ್ಜಿ ಅರೆಸ್ಟ್!
ಬೆಳಗಾವಿಯಲ್ಲಿ ಅಪಾರ ಮೌಲ್ಯದ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇಲೆ 80 ವರ್ಷದ ಮಂದಾಕಿನಿ ಪರಿಶವಾಡಕರ ಎಂಬ ವೃದ್ಧೆಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಣಬರ್ಗಿ ರಸ್ತೆಯ ಮಹಾಂತೇಶ ನಗರದಲ್ಲಿನ ಜಾಗದ ಮಾಲೀಕರಾದ ರತ್ನಾ ಯಶವಂತ ಮಲ್ಲೂಕರ ಅವರಂತೆ ನಟಿಸಿದ ಮಂದಾಕಿನಿ, ನಕಲಿ ದಾಖಲೆ ಸೃಷ್ಟಿಸಿ 2023ರಲ್ಲಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜಮೀನನ್ನು ಬೇರೊಬ್ಬರ ಹೆಸರಿಗೆ ಸೇಲ್ಡೀಡ್ ಮಾಡಿಸಿದ್ದರು. ವಂಚನೆ ತಿಳಿದು ರತ್ನಾ ಅವರು ದೂರು …
Read More »ಬೆಂಗಳೂರು ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಭರ್ಜರಿ ಬೇಟೆ – 1.07 ಕೋಟಿ ರೂ. ಮೌಲ್ಯದ ಗಾಂಜಾ ವಶ!
ಬೆಂಗಳೂರು: ಥೈಲ್ಯಾಂಡ್ನ ಫುಕೆಟ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನೊಬ್ಬನಿಂದ ಸುಮಾರು ₹1.07 ಕೋಟಿ ಮೌಲ್ಯದ 3.05 ಕೆ.ಜಿ. ಹೈಡ್ರೋಪೋನಿಕ್ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿ ತನ್ನ ಚೆಕ್ಇನ್ ಬ್ಯಾಗೇಜ್ನಲ್ಲಿ ಗಾಂಜಾವನ್ನು ಸೂಕ್ಷ್ಮವಾಗಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ಎನ್ನಲಾಗಿದೆ. ತಪಾಸಣೆ ವೇಳೆ ಮಾದಕ ವಸ್ತು ಪತ್ತೆಯಾಗಿದ್ದು, ಕಸ್ಟಮ್ಸ್ ಕಾಯ್ದೆ ಹಾಗೂ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಗಾಂಜಾವನ್ನು ನಗರದಲ್ಲಿ ಯಾರಿಗೆ ತಲುಪಿಸಲು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





