ಖಾಸಗಿ ವೈದ್ಯಕೀಯ ಮಹಾವಿದ್ಯಾಲಯದ ಪರವಾಗಿ ತಪಾಶೀಲನಾ ವರದಿ ನೀಡುವುದಕ್ಕಾಗಿ, ₹10 ಲಕ್ಷ ಲಂಚ ಪಡೆಯುತ್ತಿದ್ದ ವೈದ್ಯಾಧಿಕಾರಿಯೊಬ್ಬರನ್ನು ಸಿಬಿಐ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ ಮೌಲ್ಯಮಾಪಕರಾಗಿರುವ, ಹಿರಿಯ ವೈದ್ಯಾಧಿಕಾರಿಯಿಂದ ಲಂಚದ ಹಣ ಕೂಡ ವಶಪಡಿಸಿಕೊಂಡಿದ್ದಾರೆ.ಆರೋಪಿ ವೈದ್ಯ ಹಾಗೂ ಖಾಸಗಿ ಸಂಸ್ಥೆಯ ಇಬ್ಬರು ಪ್ರತಿನಿಧಿಗಳು ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ.
Read More »ಮದ್ಯದ ಅಮಲಿನಲ್ಲಿ ಹಣ್ಣಿನ ವ್ಯಾಪಾರಿಗೆ ಕಟ್ಟಿಗೆಯಿಂದ ಹೊಡೆದು ಕೊಲೆ!
ಅಬ್ದುಲ್ ರೆಹಮಾನ್ ಬಳಿ ತೆರಳಿದ್ದ ಹನುಮಂತ ಹಣ ನೀಡುವಂತೆ ಕೇಳಿದ್ದ. ತನ್ನ ಹಣ್ಣಿನ ಅಂಗಡಿ ಪಕ್ಕದಲ್ಲಿಯೇ ಮಲಗಿದ್ದ ಅಬ್ದುಲ್ ಅವರು ಇದರಿಂದ ಕೋಪಗೊಂಡು ಬೈಯ್ದಿದ್ದರು. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ ತೆರಳಿದೆ. ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಕಟ್ಟಿಗೆ ತೆಗೆದುಕೊಂಡು ಅಬ್ದುಲ್ ರೆಹಮಾನ್ ಅವರಿಗೆ ಹನುಮಂತನು ಬಲವಾಗಿ ಹೊಡೆದಿದ್ದಾನೆ. ಬಳಿಕ ಅಬ್ದುಲ್ ರೆಹಮಾನ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ನಿವಾಸಿ …
Read More »ಪಾರ್ಕ್ನಲ್ಲಿ ಸಾಮೂಹಿಕ ಗುಂಡಿನ ದಾಳಿ, ಇಬ್ಬರು ಸಾವು, 9 ಜನರಿಗೆ ಗಾಯ!
ಫೇರ್ಮೌಂಟ್ ಪಾರ್ಕ್ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಒಂಬತ್ತು ಜನರು ಗಾಯಗೊಂಡಿರುವ ಘಟನೆ ಫಿಲಡೆಲ್ಫಿಯಾದಲ್ಲಿ ನಡೆದಿದೆ.ಇದು ಈ ವರ್ಷ ನಗರದಲ್ಲಿ ನಡೆದ ಅತ್ಯಂತ ಮಾರಕ ಗುಂಡಿನ ದಾಳಿಗಳಲ್ಲಿ ಒಂದಾಗಿದೆ.ಗಾಯಗೊಂಡವರಲ್ಲಿ ಕನಿಷ್ಠ ಇಬ್ಬರು ಅಪ್ರಾಪ್ತ ವಯಸ್ಕರು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಗುಂಡಿನ ದಾಳಿಗೆ ಸಂಬಂಧಿಸಿದಂತೆ ಯಾರನ್ನಾದರೂ ಬಂಧಿಸಲಾಗಿದೆಯೇ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ, ಮತ್ತು ಗುಂಡಿನ ದಾಳಿಯ ಉದ್ದೇಶ ಸ್ಪಷ್ಟವಾಗಿಲ್ಲ.
Read More »ಸ್ಟುಡಿಯೋದಲ್ಲೇ ನೇಣಿಗೆ ಶರಣಾದ ಡ್ಯಾನ್ಸ್ ಮಾಸ್ಟರ್!
ಡ್ಯಾನ್ಸ್ ಸ್ಟುಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಿಯಾಪುರದಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಸಾಗರ್ ಎಂದು ಗುರುತಿಸಲಾಗಿದ್ದು, ಮಿಯಾಪುರದ ಡೆಲಾಯ್ಟ್ ಡ್ಯಾನ್ಸ್ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಮತ್ತು ರಾತ್ರಿಯಲ್ಲಿ ಸ್ಟುಡಿಯೋದ ಒಂದು ರೂಮಿನಲ್ಲೇ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿಸುಕೊಂಡಿದ್ದಾನೆ.ಸಾಗರ್ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದ ಈ ಬಗ್ಗೆ ಇತ್ತೀಚೆಗೆ ಡ್ಯಾನ್ಸ್ ಸ್ಟುಡಿಯೋ ಮಾಲೀಕ ಪರಮೇಶ್ ಜೊತೆ ತನ್ನ ಲವ್ ಫೇಲ್ಯೂರ್ ಬಗ್ಗೆ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Read More »ಪಾರು ಸೀರಿಯಲ್ ಖ್ಯಾತಿಯ ಶ್ರೀಧರ್ ನಾಯಕ್ ಇನ್ನಿಲ್ಲ!
ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಶ್ರೀಧರ್ ನಾಯಕ್ ನಿಧನ ರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು.ಗುರುತೇ ಸಿಗದಷ್ಟು ಬದಲಾಗಿದ್ದನ್ನು ನೋಡಿ ಹಲವರಿಗೆ ಶಾಕ್ ಆಗಿತ್ತು. ಈಗ ಶ್ರೀಧರ್ ಅವರು ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳೆದಿದ್ದಾರೆ ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರ pativra ಇಡಲಾಗಿದೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.ಜೀ ಕನ್ನಡದ ‘ಪಾರು’ ಧಾರಾವಾಹಿ, ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಅಂತಹ ಸಿನಿಮಾದಲ್ಲಿ ನಟಿಸಿದ್ದ ಶ್ರೀಧರ್ ನಾಯಕ್ …
Read More »ಅಧಿಕ ಆಸ್ತಿ ಹೊಂದಿದ್ದ ಸರ್ಕಾರಿ ನೌಕರನಿಗೆ 4 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡ!
ಜಿಲ್ಲಾಧಿಕಾರಿಗಳ ಕಚೇರಿಯ ಡಿ ಗ್ರೂಪ್ ನೌಕರನಿಗೆ 4 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡ ಹಾಗೂ 1.35 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲಿಗೆ ಆದೇಶಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ ಗ್ರೂಪ್ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀರಾಮಯ್ಯ ವಿರುದ್ದ ಆದಾಯಕ್ಕಿಂತಲೂ ಅಧಿಕ ಆಸ್ತಿ ಸಂಪಾದಿಸಿದ್ದರ ಬಗ್ಗೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಹೋರಾಟ ಸಮಿತಿ ಈಗಾಗಲೇ ಗೃಹ …
Read More »ಅತ್ಯಾಚಾರ ಆರೋಪಿ ಮಡೆನೂರು ಮನುಗೆ ಈಗ ಶುರುವಾಯ್ತು ಸಂಕಷ್ಟ!!
ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನು ವಿರುದ್ಧ ಗಂಭೀರ ಆರೋಪಗಳಿವೆ. ಚಿತ್ರರಂಗ ಕೂಡ ಮನು ವಿರುದ್ಧ ಗರಂ ಆಗಿದೆ. ಸ್ನೇಹಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮನು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಮನು ಕೇಸ್ ತನಿಖೆ ವೇಳೆ ಹಲವು ಶಾಕಿಂಗ್ ವಿಚಾರಗಳು ಬಹಿರಂಗ ಆಗುತ್ತಿವೆ. ಈಗ ಜೈಲುವಾಸ ಅನುಭವಿಸಬೇಕಿರುವ ಕಾರಣ ಮನುಗೆ ಅಸಲಿ ಸಂಕಷ್ಟ ಶುರುವಾಗಿದೆ.
Read More »ಪ್ರಜ್ವಲ್ ಕಾರು ಚಾಲಕ ಸ್ಪೋಟಕ ಹೇಳಿಕೆ!!
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಕೋರ್ಟ್ ನಲ್ಲಿ ಡ್ರೈವರ್ ಕಾರ್ತಿಕ್ ಸಾಕ್ಷಿ ನುಡಿದಿದ್ದಾನೆ. ಅಶ್ಲೀಲ ದೃಶ್ಯಾವಳಿ ಸಿಕ್ಕಿದ್ದು ಹೇಗೆ ಎಂಬ ಮಾಹಿತಿಯನ್ನು ಕಾರ್ತಿಕ್ ಕೋರ್ಟ್ ನಲ್ಲಿ ಸಾಕ್ಷಿ ನುಡಿದಿದ್ದಾನೆ.ವಿಡಿಯೋ ಬಗ್ಗೆ ತಿಳಿಸಿದ್ದು ಯಾರೆಂದು ಕೇಳಿದಾಗ ಅವರು ನನ್ನ ಹೆಸರು ಹೇಳಿದರು. ಪ್ರಜ್ವಲ್ ನನಗೆ ಆಗ ಬೈದರು. ನಮ್ಮ ನಡುವೆ ಜಗಳವಾಗಿ 2022 ರಲ್ಲಿ ನಾನು ಕೆಲಸ ಬಿಟ್ಟೆ, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ …
Read More »ಹೊಸ ವಿದ್ಯುತ್ ಸಂಪರ್ಕಕ್ಕೆ “ಸ್ಮಾರ್ಟ್ ಮೀಟರ್ ” ಕಡ್ಡಾಯ!
ರಾಜ್ಯದಲ್ಲಿ ಕೃಷಿ ಪಂಪ್ಸೆಟ್ ಹೊರತುಪಡಿಸಿ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಯಾವುದೇ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿರುವುದನ್ನು ಪುನರುಚ್ಚರಿಸಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ), ಈ ಮೂಲಕ ಸ್ಮಾರ್ಟ್ ಮೀಟರ್ ವಿಷಯದಲ್ಲಿ ಉಂಟಾದ ಗೊಂದಲಕ್ಕೆ ತೆರೆ ಎಳೆದಿದೆ.ಈಗಾಗಲೇ ಸಾಂಪ್ರದಾಯಿಕ ಮೀಟರ್ಗಳನ್ನು ಹೊಂದಿರುವವರಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯವಲ್ಲ. ಗ್ರಾಹಕರು ಪ್ರಿಪೇಯ್ಡ ಮೀಟರ್ ಬಿಲ್ಲಿಂಗ್ ಇಚ್ಛಿಸಿದಲ್ಲಿ ಅವರ ಸ್ವಂತ ಖರ್ಚಿನಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬಹುದು ಎಂದೂ ಆದೇಶದಲ್ಲಿ ಹೇಳಿದೆ.
Read More »ಗೋವಾದಿಂದ ತರುತ್ತಿದ್ದ ₹4.9 ಲಕ್ಷ ಮೌಲ್ಯದ ಔಷಧಿ ಕಳ್ಳತನ!
ಔಷಧಿ ಸಾಗಣೆ ಮಾಡಲು ಬಳಸಿದ ಮುಚ್ಚಿದ ಕಂಟೇನರ್ ಟ್ರಕ್ನಿಂದ 4.9 ಲಕ್ಷ ರೂ. ಮೌಲ್ಯದ ನೋವು ನಿವಾರಕ ಮಾತ್ರೆಗಳನ್ನು ಕಳ್ಳತನ ಮಾಡಿದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.ಕಂಪನಿಯ ವ್ಯವಸ್ಥಾಪಕ ಬಸವರಾಜ್ ನೀಡಿದ ದೂರಿನಲ್ಲಿ, ಎರಡು ಪ್ರಮುಖ ಸ್ಥಳಗಳಾದ ಬನಕಾಪುರ ಟೋಲ್ ಹಾಗೂ ಬೊಮ್ಮನಹಳ್ಳಿ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಆದರೆ ಅಲ್ಲಿ ಯಾವುದೇ ಅನುಮಾನಾಸ್ಪದ ಚಲನೆ ಕಂಡುಬಂದಿಲ್ಲ. ಇದರಿಂದಾಗಿ ದೂರು ದಾಖಲಿಸಲು ಕೆಲ ದಿನಗಳ ಕಾಲ ವಿಳಂಬವಾಯಿತು. ಆದರೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





