ಅಳವಂಡಿ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿ-ಜಿಟಿ ಮಳೆಗೆ ಸಮೀಪದ ಹನಕುಂಟಿ ಗ್ರಾಮದ ರೈತರ ಜಮೀನಿಗಳಲ್ಲಿ ಕಟಾವು ಮಾಡಿರುವ ಈರುಳ್ಳಿ ಕೊಳೆಯುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬಿತ್ತನೆ ಮಾಡಿದ್ದು, ಮಳೆಯಿಂದ ಈರುಳ್ಳಿ ಕೊಳೆತು ಹಾಳಾಗುತ್ತಿದೆ.
ಸಂಬಂಧ ಪಟ್ಟ ಅಧಿಕಾರಿಗಳು ನಮ್ಮ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ರೈತರ ಕಷ್ಟಗಳನ್ನು ಪರಿಹರಿಸಬೇಕು ಎಂದು ಹನಕುಂಟಿ ಗ್ರಾಮದ ಗೋಣೆಪ್ಪ ಕೋಳಿ ಹಾಗೂ ನಾಗಪ್ಪ ಮರಿಬಸಣ್ಣರ ಅವರು ಮನವಿ ಮಾಡಿದ್ದಾರೆ.
ಉತ್ತಮ ಈರುಳ್ಳಿ ಬೆಳೆಯ ನೀರೀಕ್ಷೆಯಲ್ಲಿದ್ದ ನಮಗೆ ಮಳೆಯಿಂದ ಹಾನಿ ಉಂಟಾಗಿದೆ. ಇದರಿಂದ ನಷ್ಟದ ಭೀತಿ ಎದುರಾಗಿದೆ ಕೂಡಲೇ ಸರ್ಕಾರ ರೈತರಿಗೆ ನೆರವಿಗೆ ಬರಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





