Breaking News

BigTv News

ಬಸ್-ದ್ವಿಚಕ್ರ ವಾಹನ ನಡುವೆ ಅಪಘಾತ, ಸವಾರ ಸಾವು!

ಕಂಪ್ಲಿ ಪಟ್ಟಣದ ಹೊರವಲಯದ ಹೊಸಪೇಟೆ ಬೈಪಾಸ್ ರಸ್ತೆಯ ಯಲ್ಲಮ್ಮ ಕ್ಯಾಂಪಿನ ಹತ್ತಿರ ಸರ್ಕಾರಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದು, ಇನ್ನೋರ್ವನಿಗೆ ಗಾಯಗಳಾದ ಘಟನೆ ನಡೆದಿದೆ.ಅಪಘಾತದಲ್ಲಿ ಸಾವನ್ನಪ್ಪಿದ ಯುವಕನನ್ನು ಪಟ್ಟಣದ ಎಂ.ಡಿ.ಕ್ಯಾಂಪಿನ ಸೋಮು (23) ಎಂದು ಗುರುತಿಸಲಾಗಿದ್ದು, ಗಾಯಗೊಂಡವನನ್ನು ಎಂ.ಡಿ.ಕ್ಯಾಂಪಿನ ಕುಮಾರ ಎಂದು ಗುರುತಿಸಲಾಗಿದ್ದು, ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಬಿಮ್ಸ್ ಗೆ ದಾಖಲಿಸಲಾಗಿದೆ

Read More »

ಕೂಡ್ಲಿಗಿ :ವಿದ್ಯುತ್ ಅವಘಡ! 4 ಮೇಕೆ, 1 ಎಮ್ಮೆ ಸಾವು!!

ಹೊಲದಲ್ಲಿ ಮೇಯುತ್ತಿದ್ದ ಪಾಲಯ್ಯ ಅವರಿಗೆ ಸೇರಿದ ಮೇಕೆಗಳ ಮೇಲೆ ಗಾಳಿಗೆ ವಿದ್ಯುತ್ ತಂತಿ ಏಕಾ ಏಕಿ ತುಂಡಾಗಿ ಬಿದ್ದಿದೆ.ಇದರಿಂದ ನಾಲ್ಕು ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿವೆ. ಇದರಿಂದ ₹40 ಸಾವಿರದಷ್ಟು ನಷ್ಟವಾಗಿದೆ. ಮೇಕೆ ಮೇಯಿಸುತ್ತಿದ್ದ ಪಾಲಯ್ಯ ಹಾಗೂ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಗುಡೇಕೋಟೆ ಪೊಲೀಸರು ಹಾಗೂ ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಕೂಡ್ಲಿಗಿ ತಾಲ್ಲೂಕಿನ ಜರಿಮಲೆ ಗ್ರಾಮದ ಬಳಿ ವಿದ್ಯುತ್ ತಂತಿ ತಾಗಿ ಎಮ್ಮೆ ಮೃತಪಟ್ಟಿರುವುದು

Read More »

ರಾಯಚೂರ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು!

ರಾಯಚೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ಮತ್ತೋರ್ವ ಬಾಣಂತಿಯ ಸಾವಾಗಿದ್ದು, ಇದರಿಂದ ಆಕ್ರೋಶಗೊಂಡ ಬಾಣಂತಿಯ ಸಂಬಂಧಿಕರು ಆಸ್ಪತ್ರೆಯ ಬಳಿಯಿದ್ದ ಆಂಬುಲೆನ್ಸ್ ಅನ್ನು ಇದೀಗ ಧ್ವಂಸ ಮಾಡಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Read More »

ಬಳ್ಳಾರಿ : ಹೃದಯಾಘಾತದಿಂದ ಹೆಡ್ ಕಾನ್‌ಸ್ಟೇಬಲ್ ಸಾವು!

ಕಳೆದ 26 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ದಾದಾಸಾಹೇಬ್ ಅವರು ಪ್ರಸ್ತುತ ವಿಜಯನಗರ ಜಿಲ್ಲೆಯ ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹೃದಯಾಘಾತದಿಂದ ಮೃತಪಟ್ಟ ದಾದಾಸಾಹೇಬ್ ಅವರ ಅಕಾಲಿಕ ಸಾವಿಗೆ ಪೊಲೀಸ್ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ಹೊಸಪೇಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಶವ ಹಸ್ತಾಂತರಿಸಲಾಗಿದೆ.

Read More »

ರಾಯಚೂರು : ಮುರಿದು ಬಿದ್ದ ಆಂಜನೇಯ ದೇವಸ್ಥಾನದ ಗರುಡಗಂಬ!

ಬಿಜನಗೇರಾ ಗ್ರಾಮದಲ್ಲಿ ರವಿವಾರ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಪ್ರಯುಕ್ತ ರವಿವಾರ ಆಯೋಜಿಸಿದ್ದ ಗರುಡಗಂಬ ಪ್ರತಿಷ್ಠಾಪನೆ ವೇಳೆಯೇ ಮುರಿದು ಬಿದ್ದ ಘಟನೆ ನಡೆದಿದೆ. ಶ್ರೀ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ, ಗರುಡಗಂಬ ಪ್ರತಿಷ್ಠಾಪನೆ, ಗೋಪುರ ಮತ್ತು ಕಳಸ ಪೂಜೆ ಸೇರಿ ಇತ್ಯಾದಿ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಕ್ರೇನ್ ನೆರವಿನೊಂದಿಗೆ ಗರುಡಗಂಬ ನಿಲ್ಲಿಸುವಾಗ ಮುರಿದು ಬಿದ್ದಿದೆ. ಈ ವೇಳೆ ಶಾಸಕ ಡಾ.ಶಿವರಾಜ ಪಾಟೀಲ್ ಸೇರಿದಂತೆ ವಿವಿಧ ಗಣ್ಯರು, ಸ್ವಾಮೀಜಿಗಳು …

Read More »

ಪೊಲೀಸರ ಮೇಲೆಯೇ ಕಾರು ಹತ್ತಿಸಿದ ಆರೋಪಿ!

ಮದ್ಯಪಾನ ಮಾಡಿದ ಮತ್ತಿನಲ್ಲಿವ್ಯಕ್ತಿ ಒಬ್ಬ ಒನ್​ ವೇಯಲ್ಲಿ ಕಾರು ನುಗ್ಗಿಸಿ ಹಲವು ವಾಹನಗಳಿಗೆ ಹಾನಿ ಉಂಟು ಮಾಡಿದ್ದಲ್ಲದೆ, ತಡೆಯಲು ಬಂದ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದಾನೆ. ಬೆಂಗಳೂರಿನ ಕೋರಮಂಗಲದ ಜ್ಯೋತಿ ನಿವಾಸ ಕಾಲೇಜು ಬಳಿ ಶನಿವಾರ ತಡರಾತ್ರಿ ಘಟನೆ ಸಂಭವಿಸಿದೆ.ಆರೋಪಿ ನಂದಕೃಷ್ಣ ಎಂಬಾತ ಪೊಲೀಸ್ ಬ್ಯಾರುಕೇಡ್​ಗೆ ಕಾರು ಗುದ್ದಿಸಿದ್ದಾನೆ. ಇದರಿಂದಾಗಿ ಪೊಲೀಸರೊಬ್ಬರ ಕಾಲಿಗೆ ಗಾಯವಾಗಿದೆ. ನಂತರ ಕಾರಿನ ಬಾಗಿಲು ತೆರೆಯುವಂತೆ ಪೊಲೀಸರು ಸೂಚನೆ ನೀಡಿದರೂ ನಂದಕೃಷ್ಣ ಪ್ರತಿಕ್ರಿಯಿಸುತ್ತಲೇ ಇರಲಿಲ್ಲ. …

Read More »

ಲೈಬೀರಿಯನ್ ಹಡಗಿನ ಕಂಟೈನರ್‌ಗಳು ಕೇರಳ ದಡದಲ್ಲಿ ಪತ್ತೆ!

ಕೇರಳ ಕರಾವಳಿಯಲ್ಲಿ ಮುಳುಗಿದ ಲೈಬೀರಿಯನ್ ಸರಕು ಹಡಗಿನ ಕಂಟೈನರ್‌ಗಳು ಸೋಮವಾರ ದಡಕ್ಕೆ ಬರಲು ಪ್ರಾರಂಭಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಹಡಗಿನಲ್ಲಿದ್ದ 24 ಸಿಬ್ಬಂದಿಯನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ.ಸರಕು ಹಡಗು ಮಗುಚಿ ಬಿದ್ದು, ಗಮನಾರ್ಹ ತೈಲ ಸೋರಿಕೆಗೆ ಉಂಟಾಗಿದೆ. ಇಂಧನ ಸೋರಿಕೆಯಿಂದಾಗಿ ರಾಜ್ಯಾದ್ಯಂತ ಎಚ್ಚರಿಕೆ ನೀಡಲಾಗಿದೆ. ಏಕೆಂದರೆ ಇಂಧನ ಗಂಟೆಗೆ ಸುಮಾರು ಮೂರು ಕಿಲೋಮೀಟರ್ ವೇಗದಲ್ಲಿ ತೇಲುತ್ತಿದೆ ಮತ್ತು ಶೀಘ್ರದಲ್ಲೇ ಪರಿಸರ ಸೂಕ್ಷ್ಮ ಕೇರಳ ಕರಾವಳಿಯ ಮೇಲೆ ಪರಿಣಾಮ ಬೀರುವ …

Read More »

ವ್ಯಕ್ತಿಯನ್ನು ಜೆಸಿಬಿಗೆ ನೇತುಹಾಕಿ ಚಿತ್ರಹಿಂಸೆ ನೀಡಿದ ರೌಡಿಶೀಟರ್‌!

ಬೇವಾರ್ ಜಿಲ್ಲೆಯ ರಾಯಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ಥಳೀಯ ರೌಡಿಶೀಟರ್ ಒಬ್ಬ ತನ್ನದೇ ಡ್ರೈವರ್‌ನನ್ನು ಜೆಸಿಬಿ ಯಂತ್ರಕ್ಕೆ ತಲೆಕೆಳಗಾಗಿ ನೇತುಹಾಕಿ, ಬೆಲ್ಟ್‌ನಿಂದ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾನೆ.ವಿಡಿಯೋ ವೈರಲ್ ಆದ ಕೂಡಲೇ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಾಸರಾ ಅವರು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ರಾಜಸ್ಥಾನದಲ್ಲಿ ಬಿಜೆಪಿ ಅಲ್ಲ, ಮಾಫಿಯಾಗಳ ಆಡಳಿತ ನಡೆಯುತ್ತಿದೆ” …

Read More »

ಬೆಂಗಳೂರ: ಒಂಟಿ ಮಹಿಳೆ ಕೊಂದು, 1 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ!

40 ವರ್ಷದ ಒಂಟಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ ಅಂದಾಜು ಒಂದು ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಕಾಟನ್ ಪೇಟೆ ದರ್ಗಾ ರಸ್ತೆಯಲ್ಲಿನ ಮನೆಯೊಂದರಲ್ಲಿ ಈ ಒಂದು ಭೀಕರ ಹತ್ಯೆ ನಡೆದಿದೆ.ಹೋಲ್ಸೇಲ್ ಬಟ್ಟೆ ವ್ಯಾಪಾರಿ ಪ್ರಕಾಶ್ ಎನ್ನುವವರ ಪತ್ನಿ ಲತಾ ಅವರ ಕೊಲೆಯಾಗಿದೆ. ಲತಾ ಅವರನ್ನು ಕೊಲೆಗೈದು ದುಷ್ಕರ್ಮಿಗಳು 1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸರು ಭೇಟಿ …

Read More »

ಬಳ್ಳಾರಿ :ಟಿಪ್ಪರ್ ಗೆ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ದುರ್ಮರಣ.!

ಮೈನಿಂಗ್ ಸಾಗಿಸುತ್ತಿದ್ದ ಟಿಪ್ಪರ್ ಗೆ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಸಂಡೂರಿನ ಜೈ ಸಿಂಗಪುರ ಬಳಿ ಈ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಮತ್ತೋರ್ವ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಸಂಡೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »