Breaking News

BigTv News

ಪಶು ವೈದ್ಯಾಧಿಕಾರಿ ಆಯ್ತು ಈಗ ‘DYSP’ ನೇಮಕಾತಿಯಲ್ಲೂ ಅಕ್ರಮ? : CID ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು!

KPSC ನೇಮಕಾತಿ ಅಕ್ರಮ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಪಶುವೈದ್ಯಾಧಿಕಾರಿ ಹುದ್ದೆಯ ಬಳಿಕ ಇದೀಗ DySP ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಬಂಧಿತರಾಗಿದ್ದು, ಸಿಐಡಿ ವಿಚಾರಣೆ ನಡೆಸುತ್ತಿದೆ. ವಿಚಾರಣೆ ವೇಳೆ ಕನ್ನಾಳೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯ ಅಭ್ಯರ್ಥಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಾಹಿತಿ ಹೊರಬಂದಿದೆ ಎನ್ನಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳೊಂದಿಗೆ ಕನ್ನಾಳೆ …

Read More »

ಒಂದು ಕೋಟಿಗೆ ಡೀಲ್ , ನಲವತ್ತು‌ ಲಕ್ಷಕ್ಕೆ ಸೇಲ್ – ಕೆಪಿಎಸ್‌ಸಿ ಹಗರಣ ಬಗೆದಷ್ಟೂ ಬಯಲು!

KPSC ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಹುದ್ದೆ ಕೊಡಿಸುವುದಾಗಿ ಹಣದ ವ್ಯವಹಾರ ನಡೆದಿರುವ ಆರೋಪ ಸಿಐಡಿ ತನಿಖೆಯಲ್ಲಿ ಬಹಿರಂಗವಾಗಿದೆ. ಆರಂಭದಲ್ಲಿ ₹1.10 ಕೋಟಿ ಕೇಳಲಾಗಿದ್ದು, ಬಳಿಕ ₹90 ಲಕ್ಷ, ₹80 ಲಕ್ಷಕ್ಕೆ ಇಳಿಸಿ ಕೊನೆಗೆ ₹40 ಲಕ್ಷಕ್ಕೆ ಡೀಲ್ ಮಾಡಲಾಗಿತ್ತು ಎನ್ನಲಾಗಿದೆ. 2025ರ ಡಿಸೆಂಬರ್ 20ರಂದು ಅಭ್ಯರ್ಥಿ ಮೊಹಮ್ಮದ್ ಸುಹೇಲ್ ಬಂಡೇಕೋಳ್ ಜೊತೆ ₹40 ಲಕ್ಷಕ್ಕೆ ವ್ಯವಹಾರ ಕುದುರಿಸಿ, ₹20 ಲಕ್ಷ ಮುಂಗಡ ಪಡೆದ ಆರೋಪವಿದೆ. ಒಟ್ಟು 21 ಅಭ್ಯರ್ಥಿಗಳೊಂದಿಗೆ ಹುದ್ದೆಗಾಗಿ ವ್ಯವಹಾರ …

Read More »

ಪರಸ್ಪರ ಜಗಳಕ್ಕೆ ಮನನೊಂದು ಕೆರೆಗೆ ಹಾರಿದ ಪುತ್ರಿ! ಮಗಳ ಹಿಂದೆಯೇ ಜಿಗಿದು ತಾಯಿಯೂ ಸಾವಿಗೆ ಶರಣು

ಭಾಗಮಂಡಲ ಸಮೀಪದ ತಲಕಾವೇರಿ ಗ್ರಾಮದಲ್ಲಿ ತಾಯಿ-ಮಗಳು ಕೆರೆಗೆ ಹಾರಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೃತರನ್ನು ಪ್ರೇಮ (45) ಹಾಗೂ ಪುತ್ರಿ ಪ್ರಿಯಾಂಕ (14) ಎಂದು ಗುರುತಿಸಲಾಗಿದೆ. ಮನೆಯಲ್ಲಿ ತಾಯಿಯೊಂದಿಗೆ ಜಗಳ ಮಾಡಿಕೊಂಡಿದ್ದ ಪ್ರಿಯಾಂಕಾ ಮನನೊಂದು ಕೆರೆಗೆ ಹಾರಿದ್ದಾಳೆ. ಮಗಳನ್ನು ರಕ್ಷಿಸಲು ಆಕೆಯ ಹಿಂದೆ ಪ್ರೇಮ ಕೂಡ ನೀರಿಗೆ ಜಿಗಿದಿದ್ದಾರೆ. ಆದರೆ ಸ್ಥಳೀಯರು ರಕ್ಷಣೆಗೆ ಮುಂದಾದರೂ ಇಬ್ಬರನ್ನೂ ಉಳಿಸಲು ಸಾಧ್ಯವಾಗಲಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ …

Read More »

ರಾಜ್ಯದಲ್ಲಿ ಖೋಟಾ ನೋಟು ತಯಾರಿಕಾ ಜಾಲ ಪತ್ತೆ : ರಾಮನಗರದಲ್ಲಿ 7 ಆರೋಪಿಗಳು ಅರೆಸ್ಟ್!

ರಾಮನಗರ: ಜೀಗೇನಹಳ್ಳಿ ಬಡಾವಣೆಯ ನಿರ್ಮಾಣ ಹಂತದ ಮನೆಯೊಂದರಲ್ಲಿ ಅಕ್ರಮವಾಗಿ ನಕಲಿ ನೋಟು ತಯಾರಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಐಜೂರು ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಸಂತೋಷ್, ಸಂಪತ್, ಗೋವಿಂದರಾಜ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹5 ಲಕ್ಷ ಮೌಲ್ಯದ ತಯಾರಿಕಾ ಹಂತದ ನಕಲಿ ನೋಟುಗಳ ಪೇಪರ್ ಬಂಡಲ್‌ಗಳು ಹಾಗೂ ನೋಟು ಮುದ್ರಣಕ್ಕೆ ಬಳಸುತ್ತಿದ್ದ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಂಧೆಯ ಹಿಂದೆ ಹೊರರಾಜ್ಯದ ವ್ಯಕ್ತಿಗಳ ಕೈವಾಡವಿರುವ ಶಂಕೆ …

Read More »

ಕರ್ತವ್ಯಲೋಪ, 1.5 ಕೋಟಿ ರೂ. ದುರ್ಬಳಕೆ ಆರೋಪ: ಪಿಡಿಒ ಅಮಾನತು

ಮಂಡ್ಯ: ಕರ್ತವ್ಯಲೋಪ ಹಾಗೂ ₹1.5 ಕೋಟಿಗೂ ಅಧಿಕ ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಮದ್ದೂರು ತಾಲೂಕಿನ ಆತಗೂರು ಗ್ರಾಮ ಪಂಚಾಯಿತಿ ಪಿಡಿಒ ಶಶಿಧರ್ ಅವರನ್ನು ಅಮಾನತು ಮಾಡಲಾಗಿದೆ. ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ ಅಮಾನತು ಆದೇಶ ಹೊರಡಿಸಿದ್ದಾರೆ.bಆತಗೂರು ಹಾಗೂ ತಗ್ಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 15ನೇ ಹಣಕಾಸು ಯೋಜನೆಯ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು. ದೂರು ಆಧರಿಸಿ ಜಿಲ್ಲಾ ಪಂಚಾಯಿತಿ ಸಿಇಒ ತನಿಖಾ ತಂಡ ರಚಿಸಿದ್ದು, …

Read More »

ಮಾದಕ ವಸ್ತು ಸೇವನೆ: ನಾಲ್ವರ ಬಂಧನ

ಮಂಗಳೂರು: ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಡಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ತಲಪಾಡಿ ಟೋಲ್ ಗೇಟ್ ಬಳಿ ಅಬ್ದುಲ್ ಹಾದಿ ಅಲಿಯಾಸ್ ಅಬ್ದುಲ್ ರಹೇಮಾನ ಅಲಿಯಾಸ್ ಅಬ್ದುಲ್ ಖಾದರ್ ಹಾಗೂ ಕುತ್ತಾರು ಜಂಕ್ಷನ್ ಸಮೀಪ ಅಕ್ಷತ್ ಅಲಿಯಾಸ್ ಅಕ್ಷತ್ ಕುಮಾರ್ (39)ನನ್ನು ಉಳ್ಳಾಲ ಪೊಲೀಸರು ಆ.30ರಂದು ಬಂಧಿಸಿದ್ದಾರೆ. ಇನ್ನು ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪತ್ತನಂತಿಟ್ಟ ಜಿಲ್ಲೆಯ ಅನುಜಿತ್ ಕೆ.ಎ. (25) ಮತ್ತು …

Read More »

ಹುಬ್ಬಳ್ಳಿ ವ್ಯಕ್ತಿ ಹತ್ಯೆ ಕೇಸ್‌ಗೆ ರೋಚಕ ಟ್ವಿಸ್ಟ್.. 2015ರಲ್ಲಿ ಮಗನ ಸಾವಿಗೆ ಸೇಡು ತೀರಿಸಿಕೊಂಡ ತಾಯಿ

ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡು ರಸ್ತೆಯಲ್ಲಿ ದಾದಾಪೀರ್‌ನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. 2015ರಲ್ಲಿ ನಡೆದ ಮಾರುತಿ ಹತ್ಯೆ ಪ್ರಕರಣದ ಹಳೆಯ ದ್ವೇಷವೇ ದಾದಾಪೀರ್ ಕೊಲೆಗೆ ಕಾರಣ ಎನ್ನಲಾಗಿದ್ದು, ಪೊಲೀಸರು ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ. ದಾದಾಪೀರ್ ಸಣ್ಣ ಪ್ರಮಾಣದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದನು. 2015ರ ಮಾರುತಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಎನ್ನಲಾಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳೂ ದಾಖಲಾಗಿದ್ದವು ಎನ್ನಲಾಗಿದೆ. ಮಾರುತಿಯ …

Read More »

ಬೆಳ್ತಂಗಡಿ | ಭ್ರಷ್ಟಾಚಾರ ಪ್ರಕರಣ: ಎಸ್‌ಐಟಿಯಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ವಿನೋದ್ ರೆಡ್ಡಿ ಅಮಾನತು

ವರ್ಗಾವಣೆ ಡೀಲಿಂಗ್ ಹಾಗೂ ತಿಂಗಳ ಮಾಮೂಲಿ ವಿಚಾರದ ಆಡಿಯೋ ವೈರಲ್‌ ಆದ ಬೆನ್ನಲ್ಲೇ ಬೆಳ್ತಂಗಡಿ ಎಸ್‌ಐಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ವಿನೋದ್ ರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ. ಉತ್ತರ ಕನ್ನಡದ ಹಳಿಯಾಳ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ವಿನೋದ್ ರೆಡ್ಡಿ ಬಳಿಕ ಮುಂಡಗೋಡ ಠಾಣೆಗೆ ವರ್ಗಾವಣೆಯಾಗಿದ್ದರು. ಆದರೆ ವಿಶೇಷ ತನಿಖಾ ದಳ ರಚನೆಯಾದ ಬಳಿಕ ಒಂದು ವರ್ಷದಿಂದ ಬೆಳ್ತಂಗಡಿಯಲ್ಲಿ ಎಸ್‌ಐಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಡಿಯೋ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲಾ …

Read More »

ಚೆನ್ನಾಗಿ ಓದುವಂತೆ ಪೋಷಕರು ಬುದ್ಧಿ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಶಿವಮೊಗ್ಗದಲ್ಲಿ ಚೆನ್ನಾಗಿ ಓದುವಂತೆ ಪೋಷಕರು ನೀಡಿದ ಸಲಹೆಗೆ ಮನನೊಂದ 14 ವರ್ಷದ ಬಾಲಕಿಯೊಬ್ಬಳು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಖಾಸಗಿ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿ ಓದುತ್ತಿದ್ದ ಸೃಷ್ಟಿ ಮೃತ ಬಾಲಕಿ. ತಂದೆ-ತಾಯಿ ದೇವಸ್ಥಾನದ ಪೂಜೆಗೆ ತೆರಳಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಲಕಿ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಪೂಜೆ ಮುಗಿಸಿ ಪೋಷಕರು ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಓದಿನ ಬಗ್ಗೆ ಪದೇಪದೇ …

Read More »

ಮೊಬೈಲ್‌ ಟವರ್ ಏರಿ ಪ್ರೇಯಸಿಯನ್ನು ಕರೆಸುವಂತೆ ಪಟ್ಟು ಹಿಡಿದ ಯುವಕ!

ಗಂಗಾವತಿಯಲ್ಲಿ ಪ್ರೇಯಸಿಯನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದು ಯುವಕನೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಹಣವಾಳ ಗ್ರಾಮದ ರಾಜಾ ಎಂಬ ಯುವಕ ಟವರ್ ಏರಿ ಎರಡು ಗಂಟೆಗೂ ಹೆಚ್ಚು ಕಾಲ ಆತಂಕ ಸೃಷ್ಟಿಸಿದ್ದಾನೆ. ದೇವದುರ್ಗ ಮೂಲದ ಯುವತಿಯನ್ನು ಪ್ರೀತಿಸುತ್ತಿರುವ ರಾಜಾ, ಆಕೆಯನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದಿದ್ದ. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಸಾರ್ವಜನಿಕರು ಮನವೊಲಿಸಲು ಪ್ರಯತ್ನಿಸಿದರೂ ಆತ ಕೆಳಗಿಳಿಯದೆ ಟವರ್‌ನ ತುದಿಯಲ್ಲಿ …

Read More »