Breaking News
Oplus_131072

ಸರ್ಪ ದೋಷ ನಿವಾರಣೆಗೆ ಮಗಳನ್ನೇ ನರಬಲಿ ನೀಡಿದ ತಾಯಿ!!!

ತನ್ನ ಅತಿಯಾದ ಮೂಢನಂಬಿಕೆಯಿಂದ ಸ್ವಂತ ಮಗಳನ್ನೇ ತಾಯಿಯೊಬ್ಬಳು ಬಲಿ ನೀಡಿದ್ದಾಳೆ. ಈ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮೋತೆ ಮಂಡಲದ ಮೇಕಲ ತಾಂಡಾದಲ್ಲಿ ನಡೆದಿದೆ.ಭಾರತಿಗೆ ಮೊದಲಿನಿಂದಲ್ಲೂ ದೇವರ ಬಗ್ಗೆ ಅಥವಾ ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆ, ಆ ಕಾರಣಕ್ಕೆ ಆಕೆಗೆ ಒಬ್ಬ ಜ್ಯೋತಿಷ್ಯರು ಸರ್ಪ ದೋಷ ಇದೆ ಎಂದು ಹೇಳಿದರು.ಸ್ವಲ್ಪ ದಿನಗಳ ನಂತರ ಭಾರತಿ ಈ ಸರ್ಪ ದೋಷದಿಂದ ಮುಕ್ತಿ ಪಡೆಯಲು ನರಬಲಿ ಪೂಜೆ ಮಾಡಬೇಕು ಎಂದು ನಿರ್ಧಾರಿಸಿದಳು. ಯಾರೂ ಇಲ್ಲದ ಸಮಯ ನೋಡಿ, ಸರ್ಪ ದೋಷದಿಂದ ಮುಕ್ತಿಗೆ ಈ ದಾರಿ ಸರಿ ಎಂದು ಭಾರತಿ ತನ್ನ ಏಳು ವರ್ಷ ಮಗಳ ನಾಲಿಗೆ ಮತ್ತು ಗಂಟಲನ್ನು ಕತ್ತರಿಸಿ ಕ್ರೂರವಾಗಿ ಕೊಂದು ಹಾಕಿದ್ದಾಳೆ. ನಂತರ ಸ್ಥಳದಿಂದ ಭಾರತಿ ಪರಾರಿಯಾಗಿದ್ದಾಳೆ.ಪೊಲೀಸರು ತನಿಖೆಯನ್ನು ನಡೆಸಿ, ತಾಯಿ ಭಾರತಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು, ಆಕೆಯನ್ನು ಕೋರ್ಟ್​​ ಮುಂದೆ ಹಾಜರು ಪಡಿಸಿದ್ದಾರೆ. ನ್ಯಾಯಾಧೀಶ ಎಂ. ಶ್ಯಾಮ್ ಶ್ರೀ ತೀರ್ಪು ನೀಡಿದ್ದಾರೆ. ಹಾಗೂ ಆಕೆಗೆ 5 ಸಾವಿರ ದಂಡ ವಿಧಿಸಲಾಯಿತು. ಒಂದು ವೇಳೆ ದಂಡ ಪಾವತಿಸದಿದ್ದಾರೆ. 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸುತ್ತದೆ ಎಂದು ಹೇಳಿದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *