Breaking News

BigTv News

ಧಾರವಾಡ: ಮಗುವಿನ ಎದುರೆ ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣು

ಧಾರವಾಡ: ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ. ಮೌಲಾಸಾಬ್ (28) ತನ್ನ ಪತ್ನಿ ಸಲ್ಮಾ (21) ಅವರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಂಪತಿಗೆ ಒಂದೂವರೆ ವರ್ಷದ ಮಗು ಇದ್ದು, ಮಗುವಿನ ಎದುರೇ ಕೃತ್ಯ ನಡೆದಿದೆ ಎನ್ನಲಾಗಿದೆ. ತಡರಾತ್ರಿವರೆಗೂ ಮನೆಯಿಂದ ಯಾವುದೇ ಶಬ್ದ ಕೇಳದ ಹಿನ್ನೆಲೆಯಲ್ಲಿ ವೃದ್ಧೆಯೊಬ್ಬರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸಲ್ಮಾ ಕುಟುಂಬಸ್ಥರು …

Read More »

ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ಆರೋಪಿಗೆ ಪೊಲೀಸರ ಗುಂಡೇಟು

ಬೆಂಗಳೂರು: ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ಬೈಕ್‌ನಲ್ಲಿ ಸಂಚರಿಸುತ್ತಿದ್ದ ಸೈಯ್ಯದ್‌ ಜಿಶಾನ್‌ (34) ಎಂಬ ಆರೋಪಿಗೆ ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಮಡಿವಾಳ ಮೆಡಿಕಲ್‌ ಸ್ಟೋರ್‌ ಮಾಲೀಕನ ಕೊಲೆ ಪ್ರಕರಣದ ಆರೋಪಿಗಳಿಗೆ ಜಿಶಾನ್‌ ಮಾರಕಾಸ್ತ್ರ ಪೂರೈಸಿದ್ದ ಎನ್ನಲಾಗಿದೆ. ಗುರುವಾರ ರಾತ್ರಿ ಸೋಮಸುಂದರಪಾಳ್ಯ ಕೆರೆ ಬಳಿ ಜಿಶಾನ್‌ನನ್ನು ಬಂಧಿಸಲು ಪೊಲೀಸರು ಮುಂದಾದಾಗ, ಆತ ಮಾರಕಾಸ್ತ್ರದಿಂದ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಎಚ್ಚರಿಕೆ ನೀಡಿದರೂ ದಾಳಿ ಮುಂದುವರಿಸಿದ್ದರಿಂದ ಆತ್ಮರಕ್ಷಣೆಗಾಗಿ ಎಸ್‌ಐ ಸಚಿನ್‌ ಗುಂಡು ಹಾರಿಸಿದ್ದು, …

Read More »

ಹುಬ್ಬಳ್ಳಿಯಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ..! ಸಾಯೋವರೆಗೂ ಕೊಚ್ಚಿ ಕೊಂದ ದುಷ್ಕರ್ಮಿಗಳು

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಾಡಹಗಲೇ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಸಿದ್ದೇಶ್ವರ ಪಾರ್ಕ್‌ ಬಳಿ ನಡೆದಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಏಕಾಏಕಿ ದಾಳಿ ನಡೆಸಿದ್ದಾರೆ. ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡದ ಆರೋಪಿಗಳು ಮಾರಕಾಸ್ತ್ರಗಳಿಂದ ಸಾಯುವವರೆಗೂ ಕೊಚ್ಚಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಮೃತ ಯುವಕನ ಗುರುತು ಹಾಗೂ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವೈಯಕ್ತಿಕ ದ್ವೇಷವೇ ಕಾರಣವೇ ಅಥವಾ ಬೇರೆ …

Read More »

ಧಾರವಾಡದಲ್ಲಿ ಘೋರ ದುರಂತ : ಪತ್ನಿಗೆ ಚಾಕು ಇರಿದು ಕೊಂದು ಪತಿ ನೇಣಿಗೆ ಶರಣು

ಧಾರವಾಡ: ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತಿ-ಪತ್ನಿ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಗರಗ್ ಗ್ರಾಮದಲ್ಲಿ ನಡೆದಿದೆ. ಮೃತ ಪತ್ನಿಯನ್ನು ಸಲ್ಮಾ (22) ಎಂದು ಗುರುತಿಸಲಾಗಿದ್ದು, ಪತಿ ಮೌಲಾಸಾಬ್ (28) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ಅನೈತಿಕ ಸಂಬಂಧದ ಶಂಕೆ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಮೌಲಾಸಾಬ್ ಚಾಕುವಿನಿಂದ …

Read More »

ಬೆಂಗಳೂರಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿ ಸರಗಳ್ಳತನ : ಇಬ್ಬರು ನಟೋರಿಯಸ್ ಕಳ್ಳರು ಅರೆಸ್ಟ್!

ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಇಬ್ಬರು ನಟೋರಿಯಸ್ ಸರಗಳ್ಳರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಪ್ರೇಮ್ ಕುಮಾರ್ ಹಾಗೂ ಯಶವಂತ್ ಬಂಧಿತ ಆರೋಪಿಗಳು. ಆಗಸ್ಟ್ 12ರಂದು ದೊಡ್ಡಬಿದರಕಲ್ಲು ಬಳಿ ಒಂಟಿಯಾಗಿ ತೆರಳುತ್ತಿದ್ದ ವಿಜಯಮ್ಮ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿ ಬಂದ ಆರೋಪಿಗಳು ಕುತ್ತಿಗೆ ಹಿಡಿದು ಕೆಳಗೆ ಬೀಳಿಸಿ ಚಿನ್ನದ ಸರ ಕದ್ದು ಪರಾರಿಯಾಗಿದ್ದರು.bಆರೋಪಿಗಳು ಅಪ್ರಾಪ್ತರಾಗಿದ್ದಾಗಲೇ ಬೈಕ್ ಕಳ್ಳತನಕ್ಕೆ ಇಳಿದಿದ್ದು, ಈ ಹಿಂದೆ ಸುಮಾರು 8 ವಾಹನಗಳನ್ನು …

Read More »

ನಾ ಮಾಡಿದ ತಪ್ಪೇನು ಅಪ್ಪ…? ಆಟವಾಡ್ತಾ 4 ವರ್ಷದ ಮಗನನ್ನ ಕೊಂದು ಜಲಾಶಯಕ್ಕೆ ಎಸೆದ ಪಾಪಿ ತಂದೆ

ಕಲಬುರಗಿ: ಸ್ವಂತ 4 ವರ್ಷದ ಮಗನನ್ನು ತಂದೆಯೇ ಜಲಾಶಯಕ್ಕೆ ಎಸೆದು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ಬಾಲಕನನ್ನು ಗುಂಡೇಶ್ ಎಂದು ಗುರುತಿಸಲಾಗಿದೆ. ಮಗನ ಜೊತೆ ಆಟವಾಡುತ್ತಿದ್ದ ತಂದೆ ಸೋಮರಾವ್ ಹೂಗಾರ್, ಬಳಿಕ ಯಾರಿಗೂ ತಿಳಿಸದೆ ಮಗುವನ್ನು ಕರೆದುಕೊಂಡು ಹೋಗಿ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯಕ್ಕೆ ಎಸೆದಿದ್ದಾನೆ ಎಂದು ತಾಯಿ ಕಲ್ಪನಾ ಆರೋಪಿಸಿದ್ದಾರೆ. ಈ ಕುರಿತು ಅವರು ಚಿಂಚೋಳಿ ಪೊಲೀಸ್ ಠಾಣೆಗೆ …

Read More »

ದಯಾಮರಣ ಕೋರಿದ್ದ ಮಹಿಳೆ ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆ

ಶಿರಾ: ಇಬ್ಬರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾ ನಗರದ ಹೊರವಲಯದಲ್ಲಿ ನಡೆದಿದೆ. ಮೃತರನ್ನು ರಾಬಿಯಾ (32) ಹಾಗೂ ಅವರ ಮಕ್ಕಳಾದ ತಮನ್ನಾ (9) ಮತ್ತು ಸಿಮ್ರಾನ್ (4) ಎಂದು ಗುರುತಿಸಲಾಗಿದೆ. ರಾಬಿಯಾ ಅವರಿಗೆ ನಿವೇಶನ ಮಂಜೂರಾಗಿದ್ದರೂ ಅಧಿಕಾರಿಗಳು ನೀಡಲು ವಿಳಂಬ ಮಾಡಿದ್ದರಿಂದ ಅವರು ಹಲವು ಬಾರಿ ಹೋರಾಟ ನಡೆಸಿದ್ದರು ಎನ್ನಲಾಗಿದೆ. ಇತ್ತೀಚೆಗೆ ನಗರಸಭೆ ಸಭೆಯಲ್ಲೂ ರಾಬಿಯಾಗೆ ನೀಡಿದ್ದ ನಿವೇಶನದ …

Read More »

ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದ ಮಹಿಳೆಯರು: ವೇಶ್ಯಾವಾಟಿಕೆ ನಡೆಸುತ್ತಿದ್ದೀರ, ನಾವು ಪೊಲೀಸರು ಎಂದು ಮನೆಗೆ ನುಗ್ಗಿದ ಕಳ್ಳರು!

ಮೈಸೂರು: ಪೊಲೀಸರು ಎಂದು ಹೇಳಿಕೊಂಡು ಮನೆಗೆ ನುಗ್ಗಿದ ಐವರು ದುಷ್ಕರ್ಮಿಗಳು, ಮಹಿಳೆಯರಿಗೆ ಬೆದರಿಕೆ ಹಾಕಿ ಮೂರು ಮೊಬೈಲ್‌ಗಳನ್ನು ಕಸಿದು ಪರಾರಿಯಾಗಿರುವ ಘಟನೆ ಶಾರದಾದೇವಿನಗರದಲ್ಲಿ ನಡೆದಿದೆ. ಆಗಸ್ಟ್ 25ರಂದು ಸವಿತಾ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ಸವಿತಾ ಅವರು ಸ್ನೇಹಿತೆಯರಾದ ಕೆಂಡಮ್ಮ ಹಾಗೂ ಸರಸ್ವತಿ ಜೊತೆ ಮನೆಯಲ್ಲಿದ್ದಾಗ ಮುಖಕ್ಕೆ ಮಾಸ್ಕ್ ಧರಿಸಿದ್ದ ಐವರು ಏಕಾಏಕಿ ಒಳನುಗ್ಗಿದ್ದಾರೆ. ತಾವು ಸರಸ್ವತಿಪುರಂ ಠಾಣೆಯ ಪೊಲೀಸರು ಎಂದು ಹೇಳಿ, ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ …

Read More »

‘ಪೊಲೀಸರಿಗೆ ಶರಣಾಗೋ ಮುಂಚೆ ನಿನ್ನ ಕೊಲ್ಲದೆ ಬಿಡುವುದಿಲ್ಲ’: ಮಂಗಳೂರಿನ ನರ್ಸ್‌ಗೆ ವಾಟ್ಸಾಪ್​ನಲ್ಲಿ ಜೀವಬೆದರಿಕೆ

ಮಂಗಳೂರು: ದೌರ್ಜನ್ಯ ಆರೋಪದಡಿ ಯುವತಿಯೊಬ್ಬಳು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಆರೋಪಿ ನೌಶದ್ ಆಕೆಗೆ ವಾಟ್ಸ್‌ಆ್ಯಪ್‌ನಲ್ಲಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. “ನಿನ್ನ ತಲೆ ತೆಗೀತೀನಿ, ಕೊಲ್ಲದೇ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾಗಿ ಯುವತಿ ಆರೋಪಿಸಿದ್ದಾಳೆ. ನಂದಿನಿ ಎಂಬ ನರ್ಸ್ ನೀಡಿದ ದೂರಿನ ಬಳಿಕವೂ ಹಲವು ದಿನಗಳಾದರೂ ಆರೋಪಿ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಮತ್ತೊಬ್ಬ ನರ್ಸ್ ಆದಿತ್ಯಾ ಬಳಿ ತನ್ನ ಫೋಟೋ, ವಿಡಿಯೋಗಳಿವೆ ಎಂದು ಹೇಳಿಕೊಂಡಿದ್ದು, …

Read More »

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬಾಯಲ್ಲೇ ಚಿನ್ನ ಸಾಗಾಟ; CISF ಬಲೆಗೆ

ದುಬೈನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನೊಬ್ಬ ಬಾಯಿಯೊಳಗೆ ಅಡಗಿಸಿಕೊಂಡು ತಂದಿದ್ದ ಸುಮಾರು 82 ಗ್ರಾಂ ತೂಕದ ಎರಡು ಚಿನ್ನದ ಕ್ಯಾಪ್ಸೂಲ್‌ಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ CISF ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಮೊಹಮ್ಮದ್ ಸಿರಾಜ್ ಎಂಬ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ. IndiGo 6E-1486 ವಿಮಾನದಲ್ಲಿ ಬಂದಿದ್ದ ಸಿರಾಜ್, ಟರ್ಮಿನಲ್-1ರಲ್ಲಿ ತಪಾಸಣೆ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಹೆಚ್ಚಿನ ಪರಿಶೀಲನೆ ನಡೆಸಿದಾಗ ಬಾಯಿಯೊಳಗೆ ಎರಡು ಚಿನ್ನದ ಕ್ಯಾಪ್ಸೂಲ್‌ಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಬಾಡಿ ಸ್ಕ್ಯಾನರ್‌ನಿಂದ ತಪ್ಪಿಸಿಕೊಳ್ಳಲು …

Read More »