ಬೆಂಗಳೂರು: ಕಂಟೈನರ್ಗೆ ಬೀಗ ಹಾಕದೆ ಹೋಗಿದ್ದ ವೇಳೆ ₹30 ಲಕ್ಷ ಮೌಲ್ಯದ 130 ಮೊಬೈಲ್ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ವೈಟ್ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಮಹದೇವಪುರದ ಮೊಹಮ್ಮದ್ ಅಲಿ (43) ಬಂಧಿತ. ನಲ್ಲೂರಹಳ್ಳಿ ಬಳಿ ಪಾರ್ಸಲ್ ಬಾಕ್ಸ್ಗಳನ್ನು ಅನ್ಲೋಡ್ ಮಾಡಿದ ಸಿಬ್ಬಂದಿ ಕಂಟೈನರ್ಗೆ ಬೀಗ ಹಾಕದೆ ತೆರಳಿದ್ದರು. ಇದನ್ನು ಗಮನಿಸಿದ ಆರೋಪಿ ಮೊಬೈಲ್ಗಳಿದ್ದ ಮೂರು ಪಾರ್ಸಲ್ ಬಾಕ್ಸ್ಗಳನ್ನು ಕಳವು ಮಾಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ …
Read More »ವಿದ್ಯಾರಣ್ಯಪುರ: ಮಾರಕಾಸ್ತ್ರ ಹಿಡಿದು ಬಡಿದಾಡಿದ 2 ಗುಂಪು
ಬೆಂಗಳೂರು: ವಿದ್ಯಾರಣ್ಯಪುರದಲ್ಲಿ ಸೋಮವಾರ ಎರಡು ಪುಂಡರ ಗುಂಪುಗಳು ನಡುರಸ್ತೆಯಲ್ಲೇ ಮಾರಕಾಸ್ತ್ರಗಳನ್ನು ಹಿಡಿದು ಬಡಿದಾಡಿಕೊಂಡಿರುವ ಆರೋಪ ಕೇಳಿ ಬಂದಿದ್ದು, ಸ್ಥಳೀಯರು ಆತಂಕ ಕ್ಕೊಳಗಾಗಿದ್ದಾರೆ. ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದು ಪ್ರತ್ಯಕ್ಷಗೊಂಡ 10ಕ್ಕೂ ಅಧಿಕ ಯುವಕರ 2 ಗುಂಪುಗಳು ಸಾರ್ವಜನಿಕ ಸ್ಥಳದಲ್ಲೇ ಜಗಳ ನಡೆಸಿ ರಂಪಾಟ ಸೃಷ್ಟಿಸಿದ್ದವು. ಇದನ್ನು ಪ್ರಶ್ನಿಸಲು ಬಂದ ಸ್ಥಳೀಯರ ಜೊತೆಗೂ ಜಗಳಕ್ಕೆ ಮುಂದಾದ ಪುಂಡರು, ನಾವು ನಿಮ್ಮ ಮನೆಗೆ ಬಂದು ಗಲಾಟೆ ಮಾಡಲಿಲ್ಲ ಎಂದು ಬೆದರಿಸಿರುವ ಆರೋಪ ಕೇಳಿ ಬಂದಿದೆ. ವಿಷಯ …
Read More »ಸಿಂದಗಿ: ಹೊತ್ತಿ ಉರಿದ ಕಾರು; ಇಬ್ಬರು ಪ್ರಾಣಾಪಾಯದಿಂದ ಪಾರು
ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದ ಹಳೆ ಬಜಾರ್ನಲ್ಲಿ ಕಿಯಾ ಕಾರೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ನಡೆದಿದೆ. ಕಾರಿನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎನ್ನಲಾಗಿದ್ದು, ವಾಹನದಲ್ಲಿದ್ದ ಇಬ್ಬರು ಪ್ರಯಾಣಿಕರು ಸಮಯಪ್ರಜ್ಞೆ ಮೆರೆದು ತಕ್ಷಣವೇ ಹೊರಗೆ ಜಿಗಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಉರಿದು ಬೂದಿಯಾಗಿದೆ. ಕಾರಿನ ಮಾಲೀಕರ ಹೆಸರು ಹಾಗೂ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಸುದ್ದಿ ತಿಳಿಯುತ್ತಿದ್ದಂತೆ ಸಿಂದಗಿ ಪೊಲೀಸ್ ಠಾಣೆಯ …
Read More »ಕದ್ದ ಹಣವನ್ನು ಬಡವರಿಗೆ ದಾನ ಮಾಡುತ್ತಿದ್ದ ರಾಬಿನ್ ಹುಡ್ ಅರೆಸ್ಟ್ – ಭಾರೀ ಮೌಲ್ಯದ ಚಿನ್ನ ಜಪ್ತಿ!
ಬೆಂಗಳೂರು: ಮನೆಗಳಿಗೆ ಕನ್ನ ಹಾಕಿ ಕದ್ದ ಆಭರಣಗಳನ್ನು ಮಾರಾಟ ಮಾಡಿ ಬಂದ ಹಣದ ಅರ್ಧ ಭಾಗವನ್ನು ಬಡವರಿಗೆ ದಾನ ಮಾಡುತ್ತಿದ್ದ ಸೀಗೆಹಳ್ಳಿ ನಿವಾಸಿ ಶಿವರಸನ್ ಅಲಿಯಾಸ್ ಶಿವು (33)ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಆತನಿಂದ 8 ಮನೆಕಳವು ಪ್ರಕರಣಗಳನ್ನು ಭೇದಿಸಿ ₹26 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಚಿತ್ರಕಲಾವಿದ ಎಂದು ಹೇಳಿಕೊಳ್ಳುವ ಶಿವರಸನ್, 2018ರಿಂದ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ. ಈ …
Read More »ವಿಜಯಪುರದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಭೂತನಾಳ ಕೆರೆಯಲ್ಲಿ 6 ಶವಗಳು ಪತ್ತೆ!
ವಿಜಯಪುರ ನಗರದ ಹೊರವಲಯದ ಐತಿಹಾಸಿಕ ಬೂತನಾಳ ಕೆರೆಯಲ್ಲಿ ನಾಲ್ಕು ಮಹಿಳೆಯರು ಹಾಗೂ ಇಬ್ಬರು ಬಾಲಕರ ಸೇರಿದಂತೆ ಒಟ್ಟು ಆರು ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೆರೆಯಲ್ಲಿ ಇನ್ನಷ್ಟು ಶವಗಳು ಇರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿ ಮೃತದೇಹಗಳನ್ನು ಹೊರತೆಗೆಯುತ್ತಿದ್ದಾರೆ. ಕೆರೆಗೆ ಬಂದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಜಮಾಯಿಸಿದ್ದು, ಆದರ್ಶ …
Read More »ಇಸ್ಪೀಟ್ ಕಾರ್ಡ್ ನಲ್ಲಿ ಕೆಮೆರಾ, ಸ್ಪೀಕರ್ – ಅಂದರ್ ಬಾಹರ್ ಕಳ್ಳಾಟ ಬಯಲು!
ಬೆಂಗಳೂರು: ಇಸ್ಪೀಟ್ ಆಟದಲ್ಲಿ ರಹಸ್ಯ ಕ್ಯಾಮೆರಾ, ಸ್ಕ್ಯಾನರ್ ಹಾಗೂ ಇಯರ್ಬಡ್ಸ್ ಬಳಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಬಿಹಾರ ಮೂಲದ ಅಬು ತಲಾ, ಚಿಕ್ಕಮಗಳೂರಿನ ತಬ್ರೇಜ್ ಅಹಮದ್ ಹಾಗೂ ಶಿವಮೊಗ್ಗದ ಮೂವರು ಸೇರಿ ಐವರನ್ನು ಬಂಧಿಸಲಾಗಿದೆ. ಆರೋಪಿಗಳು ದೆಹಲಿಯಿಂದ ಡಿಜಿಟಲ್ ಸ್ಕ್ಯಾನ್ ಮಾಡಬಹುದಾದ ಇಸ್ಪೀಟ್ ಕಾರ್ಡ್ಗಳನ್ನು ತರಿಸಿಕೊಂಡು, ಮೊಬೈಲ್, ಕಾರಿನ ಕೀ, ಸ್ಮಾರ್ಟ್ವಾಚ್ ಹಾಗೂ ಕಣ್ಣಿನ ಲೆನ್ಸ್ನಂತೆ ಕಾಣುವ ರಹಸ್ಯ ಸಾಧನಗಳನ್ನು ಬಳಸುತ್ತಿದ್ದರು. ಕಾರ್ಡ್ಗಳ …
Read More »ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ದೋಖಾ: ಕೇರಳದಲ್ಲಿ ಸಿಕ್ಕಿಬಿದ್ರು ತಾಯಿ, ಮಗ!
ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳ ಮೂಲಕ ಮದುವೆ ಸಂಬಂಧ ಹುಡುಕುತ್ತಿದ್ದ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ತಾಯಿ-ಮಗನನ್ನು ಆಡುಗೋಡಿ ಪೊಲೀಸರು ಕೇರಳದ ವಯನಾಡಿನಲ್ಲಿ ಬಂಧಿಸಿದ್ದಾರೆ. ಡಾ. ಪ್ರದೀಪ್ ಜೋಸೆಫ್ ಮತ್ತು ಕಲಾವತಿ ಎಂದು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿಗಳು ಶ್ರೀಮಂತರಂತೆ ಬಿಂಬಿಸಿಕೊಂಡು ವಂಚನೆ ನಡೆಸುತ್ತಿದ್ದರು. ಮದುವೆ ಮಾತುಕತೆ ಕುದುರಿದ ಬಳಿಕ ತುರ್ತು ಹಣದ ಅಗತ್ಯವಿದೆ ಎಂದು ಹೇಳಿ ವಧುವಿನ ಕುಟುಂಬಗಳಿಂದ ಲಕ್ಷಾಂತರ ರೂಪಾಯಿ ಪಡೆದು ಪರಾರಿಯಾಗುತ್ತಿದ್ದರು. ಬೆಂಗಳೂರಿನ ಕುಟುಂಬವೊಂದರಿಂದ ₹20 ಲಕ್ಷ …
Read More »ಜಮೀನಿನ ಖಾತೆ ಮಾಡಿಕೊಡಲು ₹6.50 ಲಕ್ಷ ಲಂಚಕ್ಕೆ ಬೇಡಿಕೆ: ಗ್ರಾಮ ಲೆಕ್ಕಿಗನ ಬಂಧನ
ಚಿಕ್ಕಬಳ್ಳಾಪುರ: ಜಮೀನಿನ ಖಾತೆ ಮಾಡಿಕೊಡಲು ₹6.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ₹3 ಲಕ್ಷ ಮುಂಗಡ ಪಡೆಯುತ್ತಿದ್ದ ವೇಳೆ ಜಂಗಮಕೋಟೆ ಹೋಬಳಿಯ ನಾಡಕಚೇರಿಯ ಗ್ರಾಮ ಲೆಕ್ಕಿಗ ಮೋಹನ್ ಕುಮಾರ್ ಸಿ. ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೊಸಪೇಟೆ ಗ್ರಾಮದ 14 ಗುಂಟೆ ಜಮೀನಿನ ಖಾತೆಗಾಗಿ ರೈತ ಬೈರೇಗೌಡ ಅವರನ್ನು ಸಂಪರ್ಕಿಸಿದ್ದರು. ಮೊದಲು ₹7 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಲೆಕ್ಕಿಗ, ಬಳಿಕ ₹6.50 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದ ಎನ್ನಲಾಗಿದೆ. ಈ ಕುರಿತು …
Read More »ಮೆರವಣಿಗೆ ವೇಳೆ ಸಚಿವ ಅಜಯ್ ಸಿಂಗ್ಗೆ ಶಾಕ್ ಕೊಟ್ಟ ಕಳ್ಳ!
ಕಲಬುರಗಿ: ಯಡ್ರಾಮಿ ತಾಲೂಕಿನಲ್ಲಿ ನಡೆದ ಮೆರವಣಿಗೆ ವೇಳೆ ಸಣ್ಣ ನೀರಾವರಿ ಸಚಿವ ಡಾ. ಅಜಯ್ ಸಿಂಗ್ ಅವರ ಕೈಯಲ್ಲಿದ್ದ ಉಂಗುರ ಕದಿಯಲು ಕಳ್ಳರು ಯತ್ನಿಸಿದ ಘಟನೆ ನಡೆದಿದೆ. ಸಚಿವರಾದ ಬಳಿಕ ಮೊದಲ ಬಾರಿಗೆ ತವರು ಕ್ಷೇತ್ರಕ್ಕೆ ಆಗಮಿಸಿದ್ದ ಅಜಯ್ ಸಿಂಗ್ ಅವರನ್ನು ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿ, ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದರು. ಈ ವೇಳೆ ಜನದಟ್ಟಣೆಯ ನಡುವೆ ದುಷ್ಕರ್ಮಿಯೊಬ್ಬರು ಉಂಗುರ ಕದಿಯಲು ಯತ್ನಿಸಿದ್ದಾನೆ. ಇದರಿಂದ …
Read More »ಯುವಕನಿಂದ ಮಾನಸಿಕ ಕಿರುಕುಳ; ವಿದ್ಯಾರ್ಥಿನಿ ಆತ್ಮಹತ್ಯೆ
ಮಾಸೂರು ಗ್ರಾಮದ ವಿಶ್ವನಾಥ್ ಮತ್ತು ಮೋಹಿನಿ ದಂಪತಿಯ ಪುತ್ರಿ ಯಶಸ್ವಿ ವಿ. (17) ಮೃತ ವಿದ್ಯಾರ್ಥಿನಿ. ಸಾಗರದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯಶಸ್ವಿಗೆ ಕಳೆದ ಕೆಲ ದಿನಗಳಿಂದ ಅಡ್ಡೇರಿ ಗ್ರಾಮದ ಸುಮುಖ ಎಂಬ ಯುವಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಾನಸಿಕ ಕಿರುಕುಳ ತಾಳಲಾರದೆ ಐದು ದಿನಗಳ ಹಿಂದೆ ಯಶಸ್ವಿ ವಿಷ ಸೇವಿಸಿದ್ದರು. ತಕ್ಷಣ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಶಿವಮೊಗ್ಗ ಹಾಗೂ ಮಣಿಪಾಲ ಆಸ್ಪತ್ರೆಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





