ಜಮೀನಿನಲ್ಲಿ ಮದ್ಯಪಾನ ಮಾಡಲು ಅವಕಾಶ ನೀಡದ 50 ವರ್ಷದ ವಾಚ್ಮನ್ನನ್ನು ಮೂವರು ಆರೋಪಿಗಳು ಕೊಲೆ ಮಾಡಿರುವ ಘಟನೆ ಕೆಂಗೇರಿ ಬಳಿಯ ವಡೇರಹಳ್ಳಿಯಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಮಹೇಶ್ ಹಾಗೂ ಮೋಹನ್ ವೃತ್ತಿಯಲ್ಲಿ ಚಾಲಕರಾಗಿದ್ದು, ಪುನೀತ್ ನಿರುದ್ಯೋಗಿಯಾಗಿದ್ದಾನೆಂದು ತಿಳಿದುಬಂದಿದೆ. ಮೂವರು ಆರೋಪಿಗಳು ಮದ್ಯದ ಬಾಟಲಿಗಳೊಂದಿಗೆ ಜಮೀನಿನ ಬಳಿ ಬಂದಿದ್ದು, ಜಮೀನು ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಕಾವಲು ಕಾಯುತ್ತಿದ್ದ ನಾಗರಾಜು(50) ಅವರು ನಿರಾಕರಿಸಿದ್ದು, ಬಳಿಕ ಆರೋಪಿಗಳು ಮರದ ಹಲಗೆಯಿಂದ ಹಲ್ಲೆ …
Read More »ಬ್ಯಾನರ್ ಹರಿದ ವಿಚಾರಕ್ಕೆ ಗಲಾಟೆ: ಯುವಕನ ಕೊಲೆ!!!
ಮಾಲಾಪುರ ಗ್ರಾಮದ ಶ್ರೀ ಲಕ್ಷ್ಮಿ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಬ್ಯಾನರ್ ಅಳವಡಿಸಿದ್ದು, ಇದನ್ನು ಹರಿದು ಹಾಕಿದ ಕಾರಣಕ್ಕೆ ಗಲಾಟೆ ನಡೆದಿದೆ.ಈ ವೇಳೆ ಯುವಕನನ್ನು ಕೊಲೆ ಮಾಡಲಾಗಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಶನಿವಾರ ತಡರಾತ್ರಿ ಘಟನೆ ನಡೆದಿದೆ.ಮಾಲಾಪುರ ಜಾತ್ರೆಯಲ್ಲಿ ಬೇರೆ ಊರಿನವರಾದ ಮಂಜುನಾಥ ಬ್ಯಾನರ್ ಹಾಕಿದ್ದನ್ನು ಸಹಿಸದ ಮಾಲಾಪುರದ ಕೆಲ ಯುವಕರು ಬ್ಯಾನರ್ ಹರಿದು ಹಾಕಿದ್ದರು. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಂಜುನಾಥನನ್ನು ಕೊಲೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮುಧೋಳ ಪೊಲೀಸ್ …
Read More »ಮಹಿಳೆಯೊಬ್ಬರಿಗೆ ಬಲವಂತವಾಗಿ ಮದ್ಯ ಕುಡಿಸಿ ಕೊಲೆಗೈದು ಬಳಿಕ ಶವವನ್ನು ಯಮುನಾ ನದಿಗೆ ಎಸೆದ ಪಾಪಿಗಳು!!
ಶಿವೇಂದ್ರ ತನ್ನ ಹಣವನ್ನು ಹಿಂದಿರುಗಿಸುವ ನೆಪದಲ್ಲಿ ಅವಳನ್ನು ತನ್ನ ನಿವಾಸಕ್ಕೆ ಕರೆದಿದ್ದಾನೆ. ಬಂದ ಕೂಡಲೇ ಶಿವೇಂದ್ರ ಮತ್ತು ಅವನ ಸ್ನೇಹಿತ ಗೌರವ್ ಬಲವಂತವಾಗಿ ಅಂಜಲಿಗೆ ಮದ್ಯ ಕುಡಿಸಿ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಅವಳ ದೇಹವನ್ನು ಯಮುನಾ ನದಿಯ ಸೇತುವೆಯ ಕೆಳಗೆ ಎಸೆದಿದ್ದಾರೆ.ತನಿಖೆಯ ವೇಳೆ ಪೊಲೀಸರು ಆಕೆಯ ಕಾಣೆಯಾದ ಸ್ಕೂಟರ್ ಅನ್ನು ಸುಟ್ಟ ಸ್ಥಿತಿಯಲ್ಲಿ ಚರಂಡಿಯಿಂದ ವಶಪಡಿಸಿಕೊಂಡರು. ಅನುಮಾನದ ಆಧಾರದ ಮೇಲೆ ಶಿವೇಂದ್ರನನ್ನು ವಶಕ್ಕೆ ಪಡೆದ ನಂತರ, …
Read More »ಜಮೀನೊಂದರಲ್ಲಿ ಯುವಕನೊಬ್ಬ ಅರೆ ಬೆತ್ತಲಾಗಿ ಸತ್ತು ಬಿದ್ದಿದ್ದ ಶವ ಪತ್ತೆ!!
ಗ್ರಾಮದ ಜಮೀನೊಂದರಲ್ಲಿ ಯುವಕನೊಬ್ಬ ಅರೆ ಬೆತ್ತಲಾಗಿ ಸತ್ತು ಬಿದ್ದಿದ್ದ. ಸತ್ತವನು ಹೊನ್ನುರು ಗ್ರಾಮದವನಾಗಿರಲಿಲ್ಲ.ಹೊನ್ನೂರು ಗ್ರಾಮದ ಜಮೀನಲ್ಲಿ ಹೆಣವಾಗಿ ಬಿದ್ದವನು ಚಿತ್ರದುರ್ಗ ತಾಲೂಕಿನ ಹೆಗಡೆಹಾಳ್ ಗ್ರಾಮದವನಾದ ಶಿವಕುಮಾರ್. ಈತನನ್ನ ಕೊಂದಿದ್ದು ಹೊನ್ನೂರು ಗ್ರಾಮದ ಜಯಪ್ಪ.ಶಿವಕುಮಾರನ ಕೊಲೆಗೈದು ತಲೆಮರೆಸಿಕೊಂಡಿದ್ದ ಹಂತಕ ಜಯಪ್ಪನನ್ನ ಪತ್ತೆ ಹಚ್ಚಿದ್ದು ಪೊಲೀಸ್ ಶ್ವಾನ ತಾರಾ. ಕೊಲೆ ನಡೆದ ಸ್ಥಳಕ್ಕೆ ಶ್ವಾನದಳ ಬಂದು ಪರಿಶೀಲನೆ ನಡೆಸುತ್ತಿದ್ದಂತೆ ಶ್ವಾನ ತಾರಾ. ಕೆಲ ಕಿಲೋಮೀಟರ್ ದೂರದಲ್ಲಿ ಅಡಗಿಕೊಂಡಿದ್ದ ಜಯಪ್ಪನ ಬಳಿ ಓಡಿಹೋಗಿ, ಕೊಲೆಗಾರನನ್ನ …
Read More »ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ!!
ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಮಧ್ಯರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 75 ವರ್ಷದ ಬ್ಯಾಂಕ್ ಜನಾರ್ಧನ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಕುಟುಂಬಸ್ಥರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡ ಇವರು, ದೊಡ್ಡಣ್ಣ, ಟೆನ್ನಿಸ್ ಕೃಷ್ಣ ಅವರ ಸಮಕಾಲೀನರು ಅವರೊಂದಿಗೆ ಮಾತ್ರವಲ್ಲದೆ, ತಮ್ಮ ನಂತರ ಬಂದ ಹಾಸ್ಯನಟರಾದ ಸಾಧುಕೋಕಿಲ, ಬುಲೆಟ್ ಪ್ರಕಾಶ್ ಸೇರಿದಂತೆ ಇನ್ನೂ ಹಲವರೊಂದಿಗೆ ನಟಿಸಿ ತಮ್ಮ ಛಾಪು ಮೂಡಿಸಿದ್ದರು. …
Read More »ಹುಬ್ಬಳ್ಳಿಯಲ್ಲಿ ಬಾಲಕಿ ಕೊಲೆ ಪ್ರಕರಣ; ಕಣ್ಣೀರು ಹಾಕಿದ ಕೇಂದ್ರ ಸಚಿವ!!
ಹುಬ್ಬಳ್ಳಿ ಪ್ರಕರಣದ ಬಗ್ಗೆ ಮಾತನಾಡಲು ಬಂದಿದ್ದ ಕೇಂದ್ರ ಸಚಿವ ಪ್ರಜಾಶ್ರೀ ಅವರು ಬಹಳ ದುಃಖದಿಂದ ನುಡಿದರು. ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐದು ವರ್ಷದ ಬಾಲಕಿಯನ್ನು ಇಷ್ಟೊಂದು ಹೀನವಾಗಿ ಕೊಲೆ ಮಾಡಿದ್ದಾನೆ. ಇದು ಅತೀ ಹೀನ ಕೃತ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಣ್ಣೀರು ಹಾಕುತ್ತ ಹೇಳಿದರು. ಅಪರಾಧಿಗೆ ತಕ್ಕ ಶಿಕ್ಷೆ ನೀಡುವ ಬಗ್ಗೆ ಮಾತನಾಡಿದರು.
Read More »ಸಂಚಾರ ನಿಯಮ ಉಲ್ಲಂಘನೆ ದಂಡ ರಶೀದಿ ಕಳುಹಿಸಿ ವ್ಯಕ್ತಿಗೆ ₹7ಲಕ್ಷ ವಂಚನೆ
ಸೈಬರ್ ವಂಚಕರು ಹೊಸ ಹೊಸ ರೂಪದಲ್ಲಿ ಜನರನ್ನು ಮೋಸದ ಬಲೆಗೆ ಬೀಳಿಸುತ್ತಲೇ ಇದ್ದಾರೆ.ವ್ಯಕ್ತಿಯೊಬ್ಬರ ವಾಟ್ಸ್ಆಯಪ್ಗೆ ₹1,000 ಮೊತ್ತದ ಟ್ರಾಫಿಕ್ ಚಲನ್ ಇರುವ ಪಿಡಿಎಫ್ ಫೈಲ್ ಮಾದರಿಯ ಎಪಿಕೆ ಫೈಲ್ ಬಂದಿದೆ. ಇದರಲ್ಲಿ ಕರ್ನಾಟಕ ಸರ್ಕಾರದ ಚಿಹ್ನೆಯೂ ಕಂಡಿದ್ದರಿಂದ, ಲಿಂಕ್ ನಂಬಿದ ವ್ಯಕ್ತಿ ಅದರ ಮೇಲೆ ಕ್ಲಿಕ್ ಮಾಡಿದ್ದಾರೆ. ಬಳಿಕ ಬ್ಯಾಂಕ್ ಖಾತೆಯಿಂದ ಹಂತ- ಹಂತವಾಗಿ ಹಣ ಕಡಿತಗೊಂಡಿದ್ದರೂ ಅವರ ಗಮನಕ್ಕೆ ಬಂದಿಲ್ಲ.ಮೂರು ಬ್ಯಾಂಕ್ ಖಾತೆಗಳಿಂದ ಒಟ್ಟು ₹7.42 ಲಕ್ಷ ಹಣ …
Read More »ಬೇಸಿಗೆ ರಜೆಗೆ ಬೆಳಗಾವಿ ಮೂಲಕ ವಿಶೇಷ ರೈಲು ಸೇವೆಗಳು ಆರಂಭ..
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, ರೈಲ್ವೆ ಮಂಡಳಿ ಬೇಸಿಗೆ ಅವಧಿಯಲ್ಲಿ ವಿಶೇಷ ರೈಲುಗಳ ಓಡಾಟಕ್ಕೆ ಅನುಮೋದನೆ ನೀಡಿದೆ.ರೈಲು ಒಟ್ಟು 21 ಬೋಗಿಗಳನ್ನು ಹೊಂದಿದ್ದು, ಇದರಲ್ಲಿ 19 ಎಸಿ ಕೋಚ್ಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಗಾರ್ಡ್ ಕೋಚ್ಗಳು ಒಳಗೊಂಡಿರುತ್ತವೆ. ಪ್ರತಿ ನಿಲ್ದಾಣದಲ್ಲಿ ವಿವರವಾದ ಆಗಮನ ಮತ್ತು ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್ಸೈಟ್ www.enquiry.indianrail.gov.in ಪರಿಶೀಲಿಸಿ, NTES ಅಪ್ಲಿಕೇಶನ್ ಬಳಸಿ ಅಥವಾ 139 ಅನ್ನು ಡಯಲ್ …
Read More »ಸಂಬಳ ನೀಡದ ಕಾರಣ ಆಯಂಬುಲೆನ್ಸ್ ಚಾಲಕ ಆತ್ಮಹತ್ಯೆಗೆ ಶರಣು!!
ಓಂಕಾರ ಪವಾರ್ ಅವರು ನಗರದ ಖಾಸಗಿ ಆಸ್ಪತ್ರೆಯ ಆಯಂಬುಲೆನ್ಸ್ನ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ.ಆದರೆ ಆಸ್ಪತ್ರೆ ಆಡಳಿತ ಮಂಡಳಿ ಕಳೆದ ನಾಲ್ಕು ತಿಂಗಳ ಸಂಬಳ ನೀಡಿದೇ ಸತಾಯಿಸುತ್ತಿದ್ದರು. ಸಂಬಳಕ್ಕಾಗಿ ಮನವಿ ಮಾಡಿದ್ರೂ ಸ್ಪಂದಿಸದ ಹಿನ್ನೆಲೆಯಲ್ಲಿ ನೊಂದ ಓಂಕಾರ ಪವಾರ್ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಡೆತ್ ನೋಟ್ ಬರೆದಿಟ್ಟು, ಶಹಾಪುರದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಓಂಕಾರ್ಸಾವಿಗೆ ಆಸ್ಪತ್ರೆಯವರೇ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.
Read More »ಅಪಘಾತ: ಕಾರು ಪರಿಶೀಲನೆ ವೇಳೆ ಗಾಂಜಾ ಪತ್ತೆ!!
ಪಿರಿಯಾಪಟ್ಟಣದಿಂದ ಮಡಿಕೇರಿ ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ ಕಾರು ಮಾರ್ಗಮಧ್ಯದ ದೇವರಕೊಲ್ಲಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.ಈ ಸಂದರ್ಭ ನೆರವಿಗೆ ಧಾವಿಸಿ ಬಂದ ಸ್ಥಳೀಯರಿಗೆ ಕಾರಿನಲ್ಲಿ ಗಾಂಜಾ ಪ್ಯಾಕೇಟ್ಗಳು ಪತ್ತೆಯಾಗಿವೆ.ಕೂಡಲೇ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಕಾರಿನಲ್ಲಿದ್ದ ಪುತ್ತೂರು ನಿವಾಸಿಗಳಾದ ಫಜ್ಜುದ್ದೀನ್, ಮುಸ್ತಾಕ್, ಜಾಬಿರ್ ಎಂಬುವವರನ್ನು ಮತ್ತು ಗಾಂಜಾ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದುಕೊಂಡು ಕ್ರಮ ಕೈಗೊಂಡಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





