ಅಳುತ್ತಿರುವ ಶಬ್ದ ಕೇಳಿದ ಸ್ಥಳೀಯರು ಕಸದ ತೊಟ್ಟಿಯಲ್ಲಿ ನೋಡಿದಾಗ ನವಜಾತ ಶಿಶು ಪತ್ತೆಯಾಗಿದೆ. ಹೆಣ್ಣು ಎಂಬ ಕಾರಣಕ್ಕೆ ಜನಿಸಿದ ದಿನವೇ ಮಗುವನ್ನು ಪೋಷಕರು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.ಶಿಶುವಿಗೆ ಚಿಕಿತ್ಸೆಯ ಅಗತ್ಯವಿದ್ದು, ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಮೂರು ದಿನಗಳವರೆಗೆ ಚಿಕಿತ್ಸೆ ನೀಡಲಾಗುತ್ತದೆ. ನಂತರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗುವುದು’ ಎಂದು ಸಿಡಿಪಿಒ ಕೃಷ್ಣಮೂರ್ತಿ ತಿಳಿಸಿದರು.ಘಟನೆ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Read More »ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ;ಬಸ್ ಚಾಲಕನ ಸ್ಥಿತಿ ಗಂಭೀರ!
ಮಾಗಡಿಯ ಸೋಲೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಪಂಕ್ಚರ್ ಆಗಿ ನಿಂತಿದ್ದ ಕ್ಯಾಂಟರ್‌ಗೆ ಕೆಎಸ್‍ಆರ್‌ಟಿಸಿ ಬಸ್ ಡಿಕ್ಕಿಯಾಗಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಚಾಲಕನ ಸ್ಥಿತಿ ಗಂಭೀರವಾಗಿದ್ದು, ಬಸ್‍ನಲ್ಲಿದ್ದ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಸೋಲೂರು ಪೊಲೀಸರ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ.
Read More »ಸೂಟ್‌ಕೇಸ್ ಒಳಗೆ ಗೆಳತಿಯನ್ನು ಕೂರಿಸಿ ಹಾಸ್ಟೆಲಗೆ ಕರೆದುಕೊಂಡು ಬಂದ ಗೆಳೆಯ!!
ಸೋನಿಪತ್‌ನಲ್ಲಿರುವ ಖಾಸಗಿ ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇಲ್ಲಿನ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ತನ್ನ ಹಾಸ್ಟೆಲ್ ಗೆ ತನ್ನ ಗೆಳತಿಯನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ಕರೆದುಕೊಂಡು ಬರುವ ಪ್ಲಾನ್ ಮಾಡಿದ್ದಾನೆ ಅದರಂತೆ ದೊಡ್ಡ ಸೂಟ್‌ಕೇಸ್ ಒಳಗೆ ಗೆಳತಿಯನ್ನು ಕೂರಿಸಿ ಹಾಸ್ಟೆಲ್ ಗೆ ಕರೆದುಕೊಂಡು ಬಂದಿದ್ದಾನೆ ಈ ವೇಳೆ ಹಾಸ್ಟೆಲ್ ಸಿಬ್ಬಂದಿ ಬಳಿ ಸೂಟ್‌ಕೇಸ್ ಕೊಂಡೊಯ್ಯುವ ವೇಳೆ ಗೆಳತಿ ಕಿರುಚಿದ್ದಾಳೆ …
Read More »ದರೋಡೆಕೋರರ ಗ್ಯಾಂಗ್ ಮಠಕ್ಕೆ ಕನ್ನ!12 ಜನ ಅರೆಸ್ಟ್..
ರಾತ್ರಿ 12 ದರೋಡೆಕೋರರು ಮಠಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಕೋಟ್ಯಂತರ ರೂ. ಹಣಕ್ಕೆ ಎಲ್ಲೆಡೆ ಹುಡುಕಾಡಿದರೂ ಸಿಕ್ಕಿಲ್ಲ. ನಂತರ ಮಠದಲ್ಲಿ ಇದ್ದವರಿಗೆ ಮಾರಕಾಸ್ತ್ರ ತೋರಿಸಿ ಹಣ ಎಲ್ಲಿ ಎಂದು ಕೇಳಿದ್ದಾರೆ. ಹಣ ಎಲ್ಲಿದೆ ಎಂದು ತಿಳಿದು ಹುಡುಕಾಟಕ್ಕೆ ಇಳಿದಾಗ ಅವರಿಗೆ ಕೇವಲ 50 ಸಾವಿರ ರೂ. ಹಣ ಸಿಕ್ಕಿದೆ. ನಂತರ ಅಲ್ಲಿಂದ ಆರೋಪಿಗಳು ಕಾಲ್ಕಿತ್ತಿದ್ದಾರೆ. ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಮಾಳೂರು ಪೊಲೀಸರು ಈ ದರೋಡೆಕೋರರ …
Read More »ಮಾಳಿಗೆಯ ಮೇಲಿದ್ದ ಬಟ್ಟೆ ತೆಗೆಯಲು ಹೋಗಿ ಬಾಲಕಿ ಸಾವು!!
ಪ್ರಿಯದರ್ಶಿನಿ ನಿಂಗಪ್ಪ ಹೊಸಮನಿ ಎಂಬ ಬಾಲಕಿ ಮನೆಯ ಮಾಳಿಗೆಯ ಮೇಲಿದ್ದ ಬಟ್ಟೆ ತೆಗೆಯಲು ಬಾಲಕಿ ಹೋಗಿದ್ದಾಳೆ.ಮಳೆ-ಗಾಳಿಯ ಆರ್ಭಟ ಹೆಚ್ಚಾಗಿ ನಿಯಂತ್ರಣ ತಪ್ಪಿ ಮನೆ ಮೇಲಿಂದ ಕೆಳಗೆ ಬಿದ್ದಿದ್ದಾಳೆ. ತಕ್ಷಣ ಬಾಲಕಿಯನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಬಾಲಕಿ ತಂದೆ ನಿಂಗಪ್ಪ ಹೊಸಮನಿ ಅವರು ನೀಡಿದ ದೂರಿನನ್ವಯ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ …
Read More »ಅಪಘಾತ :ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವು!!
ಬಾಣಂತನಕ್ಕೆ ಪತ್ನಿ ತವರೂರಾದ ಮಚ್ಚೂರಳ್ಳಿಗೆ ತೆರಳಿದ್ದು, ರಾತ್ರಿ 20 ದಿನದ ಮಗು ಹಾಗೂ ಪತ್ನಿಯನ್ನು ನೋಡಿಕೊಂಡು ಬೈಕ್‌ನಲ್ಲಿ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದಾಗ ತುಮಕೂರು ಕಡೆಯಿಂದ ಮನ್ಸೂರಳ್ಳಿ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ಅವಘಡ ನಡೆದಿದೆ.ಸುದ್ದಿ ತಿಳಿಯುತ್ತಿದ್ದಂತೆ ಬೇಳೂರು ಠಾಣೆಯ ಪಿಎಸ್‌ಐ ನಾಗರಾಜು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Read More »ಮದುವೆಯಾಗಲು ಯಾರೂ ಹೆಣ್ಣು ನೀಡುತ್ತಿಲ್ಲವೆಂದು ಮನನೊಂದು ಯುವಕ ಆತ್ಮಹತ್ಯೆ!!.
ಮದುವೆಯಾಗಲು ಯಾರೂ ಹೆಣ್ಣು ನೀಡುತ್ತಿಲ್ಲವೆಂದು ಮನನೊಂದ ಮಾಡ್ಲಗೇರಿ ಗ್ರಾಮದ ಇಮಾಮ್ ಸಾಬ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈತ ಪೋಲಿಯೋ ಪೀಡಿತನಾಗಿದ್ದು, ಎಡಗಾಲಿನ ವೈಕಲ್ಯ ಹೊಂದಿದ್ದ. ಪಾಲಕರು ಮದುವೆ ಮಾಡಿಸಲು ಪ್ರಯತ್ನ ನಡೆಸಿದರೂ ಹೆಣ್ಣು ನೀಡಲು ಯಾರೂ ಮುಂದೆ ಬಂದಿಲ್ಲ.ಇದರಿಂದ ಮನನೊಂದು ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾನೆ.
Read More »ಧಾರವಾಡ: ಇಬ್ಬರು ಮಕ್ಕಳಿಗೆ ಅನ್ನದಲ್ಲಿ ವಿಷ ಹಾಕಿ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ತಾಯಿ!..
ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿ ತನ್ನ ಇಬ್ಬರು ಮಕ್ಕಳಿಗೆ ಅನ್ನದಲ್ಲಿ ವಿಷ ಹಾಕಿ ಕೊಟ್ಟಿದ್ದಾಳೆ. ಬಳಿಕ ತಾನೂ ಕೂಡ ವಿಷ ಮಿಶ್ರಿತ ಅನ್ನವನ್ನು ಸೇವಿಸಿದ್ದಾಳೆ. ಏನೂ ಅರಿಯದ ಇಬ್ಬರು ಮಕ್ಕಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ವಿಷ ಸೇವಿಸಿದ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತಾಯಿ ಮಾಲಾಂಬಿ ಅಪಾಯದಿಂದ ಪಾರಾಗಿದ್ದಾರೆ. ಫಯಾಜ್ ಆರೀಫ್ ಎಂಬ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಮೂವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ …
Read More »ಪತ್ನಿಯನ್ನು ಮನೆಗೆ ಕರೆದಿದ್ದಕ್ಕೆ ಭಾವನಿಗೆ ಬಾಮೈದ ಚಾಕುವಿನಿಂದ ಇರಿತ!!!
ಮದುವೆ ಬಳಿಕ ಪತಿ-ಪತ್ನಿ ನಡುವೆ ಜಗಳ ಶುರುವಾಗಿ ಪತ್ನಿ ಸ್ನೇಹಾ ತವರು ಮನೆ ಸೇರಿದ್ದಳು. ಆನಂದ್ ತನ್ನ ಅಣ್ಣನ ಮದುವೆಯಿದೆ ಹಾಗಾಗಿ ಮನೆಗೆ ಬರುವಂತೆ ಪತ್ನಿಯನ್ನು ಮನೆಗೆ ಕರೆದಿದ್ದಾನೆ. ಇದೇ ವಿಚಾರವಾಗಿ ಭಾವ-ಬಾಮೈದನ ನಡುವೆ ಗಲಾಟೆ ನಡೆದು ಬಾಮೈದ ಟೋನಿ ಹಾಗೂ ಆತನ ಸ್ನೇಹಿತರ ಗ್ಯಾಂಗ್ ಭಾವ ಆನಂದ್ ಗೆ ಚಾಕು ಇರಿದಿದ್ದರು. ಗಂಭೀರವಾಗಿ ಹಲ್ಲೆಗೊಳಗಾದ ಆನಂದ್ ನನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆನಂದ್ …
Read More »ಕೇರಳ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ಮತ್ತು ಇಬ್ಬರು ಮಕ್ಕಳು ಬಾವಿಗೆ ಬಿದ್ದು ಸಾವು!!
ಮಾನಸಿಕ ಅಸ್ವಸ್ಥಳಾಗಿದ್ದ ಹಿನ್ನೆಲೆ ಭಾಮಾ ಕುಟುಂಬದವರು ಸದಾ ಆಕೆಯ ಸುತ್ತಮುತ್ತಲೇ ಇರುತ್ತಿದ್ದರು. ಒಂದು ರೀತಿ ಕಾವಲು ಕಾಯುತ್ತಿದ್ದರು ಎಂದೇ ಹೇಳಬಹುದು. ಬೆಳಗಿನ ಜಾವ 2:30ಕ್ಕೆ, ಸಣ್ಣ ಶಬ್ದಕ್ಕೆ ದಿಢೀರ್ ಎಚ್ಚರಗೊಂಡ ಭಾಮಾ ಸಹೋದರಿ, ಆಕೆಯ ಕೋಣೆಯನ್ನು ನೋಡಿದ್ದಾರೆ. ಆದರೆ, ಅಲ್ಲಿ ಭಾಮಾ ಮಾತ್ರವಲ್ಲದೇ ಮಕ್ಕಳು ಇಲ್ಲದಿರುವುದು ಕಂಡು ಅಚ್ಚರಿಗೆ ಒಳಗಾಗಿದ್ದರು.ತಕ್ಷಣವೇ ನೆರೆಹೊರೆಯವರ ಸಹಾಯದಿಂದ, ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಡಿದ್ದಾರೆ. ಆದ್ರೆ, ಬಹಳ ಸಮಯದ ನಂತರ ಮನೆಯಲ್ಲಿದ್ದ ಬಾವಿಯಲ್ಲಿ ಮೂವರು ಜಿಗಿದಿರುವ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





