ಅಪಾರ್ಟ್ಮೆಂಟ್ನ ಐದನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ. ಮಂಗಳೂರಿನ ಮೇರಿಹಿಲ್ನಲ್ಲಿರುವ ಮಾತಾ ರೆಸಿಡೆನ್ಸಿ ಅಪಾರ್ಟ್ಮೆಂಟ್ನಲ್ಲಿ ಈ ದುರಂತ ಸಂಭವಿಸಿದೆ.ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
Read More »ಹುಣಸೂರು ಅರಣ್ಯ :ತೋಟದ ಬೇಲಿಗೆ ಸಿಲುಕಿ ಗಂಡು ಜಿಂಕೆ ಸಾವು.
ನಾಗರಹೊಳೆ ಅರಣ್ಯದಂಚಿನ ತಾಲ್ಲೂಕಿನ ಚಿಕ್ಕಹೆಜ್ಜೂರು ಗ್ರಾಮದಲ್ಲಿ ಹೊಲಕ್ಕೆ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಸುಮಾರು 3 ರಿಂದ 4 ವರ್ಷದ ಗಂಡು ಜಿಂಕೆ ಮೃತಪಟ್ಟಿದದೆ.ವಿಷಯ ತಿಳಿದ ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದಾಗ ಸ್ಥಳಕ್ಕೆ ಸಿಬ್ಬಂದಿ ನವೀನ್ ಭೇಟಿ ನೀಡಿ ಪರಿಶೀಲಿಸಿ ಬಳಿಕ ಅಂತ್ಯಸಂಸ್ಕಾರ ನೆರವೇರಿಸಿದರು.
Read More »ಬೋಳು ತಲೆಯವ ಎಂದು ಹೆಂಡ್ತಿ ಅಪಹಾಸ್ಯ ಮಾಡಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ!
ತಲೆಯಲ್ಲಿ ಕೂದಲಿಲ್ಲ, ಬೋಳು ತಲೆಯವ ಎಂದು ಪತ್ನಿ ಅಪಹಾಸ್ಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಚಾಮರಾಜನಗರದಲ್ಲಿ ನಡೆದಿದೆ. ಪರಶಿವಮೂರ್ತಿ ಹೊರಗೆ ಹೋದರೆ ನನಗೆ ನಾಚಿಕೆ ಆಗುತ್ತದೆ, ಎಲ್ಲರೂ ಅಪಹಾಸ್ಯ ಮಾಡುತ್ತಾರೆ, ನನ್ನ ಗಂಡ ಅಂತ ಹೇಳೋಕೆ ಮುಜುಗರ ಆಗುತ್ತದೆ ಎಂದು ಪತ್ನಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಮೃತ ದೇಹಗಳನ್ನು ಶಹಾಪುರ ಸಮುದಾಯ ಆಸ್ಪತ್ರೆಗೆ ರವಾನಿಸಲಾಗಿದೆ .
Read More »ಚಿತ್ರದುರ್ಗ:ಕಾಲು ತೊಳೆಯಲೆಂದು ನಾಲೆಗೆ ಇಳಿದ ಶಿಕ್ಷಕಿ ಜಾರಿ ಬಿದ್ದು ಸಾವು!
ಲಕ್ಷ್ಮಮ್ಮ ಬಡಾವಣೆಯ ನಿವಾಸಿ ದೇವಿರಮ್ಮನಗರದ ವಿವಿ ಸಾಗರ ಬಲನಾಲೆಗೆ ಕಾಲು ತೊಳೆಯಲೆಂದು ದೇವಿರಮ್ಮ ಇಳಿದಿದ್ದಾರೆ.ದಂಡೆಯಲ್ಲಿ ಪಾಚಿಕಟ್ಟಿದ್ದರಿಂದ ಕಾಲು ಜಾರಿ ನಾಲೆಗೆ ಬಿದ್ದು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ.ನಾಲೆಗೆ ಬಿದ್ದ ದೇವಿರಮ್ಮ ದೇಹವು ಪಟ್ರೇಹಳ್ಳಿವರೆಗೆ ಕೊಚ್ಚಿಕೊಂಡು ಹೋಗಿ ಪತ್ತೆಯಾಗಿದೆ. ಹಿರಿಯೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.
Read More »ಸ್ಯಾಂಡಲ್ ವುಡ್ ಸಂಭ್ರಮ:ಮೊಮ್ಮಗನಿಗೆ ಹೆಸರಿಟ್ಟ ಸುಮಲತಾ ಅಂಬರೀಶ್.
ಸುಮಲತಾ ಅಂಬರೀಶ್ ಮೊಮ್ಮಗ, ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ರಾಜಕೀಯ ಮತ್ತು ಚಿತ್ರರಂಗದ ಹಲವು ಗಣ್ಯರು ಈ ನಾಮಕರಣ ಮಹೋತ್ಸವದಲ್ಲಿ ಭಾಗಿ ಆಗಿದ್ದರು.ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಡಲಾಗಿದೆ. ಪವರ್ಫುಲ್ ಹೆಸರನ್ನೇ ಮಗನಿಗೆ ಆಯ್ಕೆ ಮಾಡಿದ್ದಾರೆ ದಂಪತಿ. ಇದರಲ್ಲಿ ಅಮರ್ ಎಂಬುದು ಅಂಬರೀಶ್ ಅವರ ಹೆಸರು. ಅಂಬರೀಶ್ ಅವರ ಮೂಲ ಹೆಸರು ಅಮರ್ನಾಥ್. …
Read More »ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಹತ್ಯೆ, ಭೀಕರ ಕೊಲೆ.
ಕಲಬುರ್ಗಿ ನಗರದ ರಾಜಾಪುರ ಬಡಾವಣೆಯ ಹೊಟೇಲ್ ಎದುರಲ್ಲಿ ಮೂವರು ಯುವಕರು ಸೇರಿ ಯುವಕ ರೇವಣಸಿದ್ದಪ್ಪ ಪಾಳೇಕಾರ್ಎಂಬುವವನನ್ನು ಕಲ್ಲಿನಿಂದ ಜಜ್ಜಿ-ಜಜ್ಜಿ ಭೀಕರವಾಗಿ ಮರ್ಡರ್ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
Read More »ಹೋಳಿ ಹಬ್ಬದಂದು ಕೆರೆಯಲ್ಲಿ ಮುಳುಗಿದ್ದ ಯುವಕ, ಸತತ ಮೂರುವರೆ ಗಂಟೆಗಳ ಬಳಿಕ ಶವವಾಗಿ ಪತ್ತೆ!
ಹೋಳಿ ಹಬ್ಬದಂದು ಕೆರೆಯಲ್ಲಿ ಮುಳುಗಿದ್ದ ಯುವಕ, ಸತತ ಮೂರುವರೆ. ಗಂಟೆಗಳ ಬಳಿಕ ಶವವಾಗಿ ಪತ್ತೆಯಾಗಿರುವ ಘಟನೆ ಯಾದಗಿರಿ ಕೆರೆಯಲ್ಲಿ ನಡೆದಿದೆ.ಮೃತ ದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಕೆರೆಯಿಂದ ತೆಗೆದು ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ಷಕ ದಳ ಸಿಬ್ಬಂದಿಯಿಂದಲೂ ಯುವಕನ ಪತ್ತೆ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಯುವಕ ಶವವಾಗಿ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಈ ಪ್ರಕರಣ ವಾಡಗೇರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Read More »ಒಂಬತ್ತು ತಿಂಗಳ ಅಂತರಿಕ್ಷ ಪಯಣದ ಬಳಿಕ ಕೊನೆಗೂ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್!
9 ತಿಂಗಳ ಹಿಂದೆ ಬಹಳ ಕಷ್ಟದಲ್ಲಿ ಸಿಲುಕಿರೋ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ವಾಪಸ್ ಕರೆದುಕೊಂಡು ಬರಲು ಡ್ರ್ಯಾಗನ್ ನೌಕೆಯನ್ನು ಕಳುಹಿಸಲಾಗಿದ.ಒಂಬತ್ತು ತಿಂಗಳ ಸುಧೀರ್ಘ ಪಯಣದ ಬಳಿಕ ಅಂತರಿಕ್ಷ ಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ ಮೋರ್ ಕೊನೆಗೂ ಭೂಮಿಗೆ ಸುರಕ್ಷಿತವಾಗಿ ಮರಳಲಿದ್ದಾರೆ.ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ಸುನಿತಾ ಆನಂದಭಾಷ್ಪ ಸುರಿಸುತ್ತಾ ಸಂತಸ ಪಟ್ಟಿದ್ದಾರೆ. ಇವರಿಬ್ಬರೂ ಕೃಶ ದೇಹಿಗಳಾಗಿರುವುದು ಹಾಗೂ ಬಾಹ್ಯಾಕಾಶದಲ್ಲೇ ರೋಗಕ್ಕೊಳಗಾಗಿ ಸಾವನ್ನಪ್ಪುವ ಆತಂಕದಲ್ಲಿ ನಾಸಾ ಹಗಲಿರುಳು ಇವರನ್ನು …
Read More »ಬಿದರಿನ ಎಟಿಎಂ ನಲ್ಲಿ ದರೋಡೆ: ಎರಡು ತಿಂಗಳಾದರೂ ಅಪರಾಧಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ.
ಬೀದರ್ನಲ್ಲಿ ಎಟಿಎಂ ದರೋಡೆ ಪ್ರಕರಣ 60 ದಿನ ಕಳೆದರೂ ಆರೋಪಿಗಳನ್ನು ಬಂಧಿಸಲಾಗಿಲ್ಲ ಆರೋಪಿಗಳ ಪ್ರತಿಜಾಡಿನಲ್ಲಿ ಸಿಸಿಟಿವಿ ಇದೆ ಕಳ್ಳರನ್ನು ಹಿಡಿತವೆ ಎಂದು ಗೃಹ ಸಚಿವ ಪರಮೇಶ್ವರವರು ಹೇಳಿದ್ದರು ಇದುವರೆಗೂ ದರೋಡೆಕೋರರನ್ನು ಬಂಧಿಸಲಾಗದ ಬೀದರ್ ನ ಪೊಲೀಸ್ ಪಡೆ. ಆರೋಪಿಗಳ ಮಾಹಿತಿಗಳಿದ್ದರೂ ಕೂಡ ಪೊಲೀಸರ ಹಿಂದೇಟು ತಂತ್ರಜ್ಞಾನ ಇದ್ದರೂ ಕಂಡುಹಿಡಿಯಲಾಗುತ್ತಿಲ್ಲ. ವಾಂಟೆಡ್ ಬೋರ್ಡನ್ನು ಕೂಡ ಲಗತ್ತಿಸಿ ಐದು ಲಕ್ಷ ರೂಪಾಯಿ ಕಳ್ಳರನ್ನು ಪತ್ತೆ ಹಚ್ಚಿದವರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.
Read More »ಬೆಂಗಳೂರಿನಲ್ಲಿ ವೃದ್ದೆ ಗೆ 50 ಲಕ್ಷ ರೂಪಾಯಿ ದೋಖ.
ಮೇಘನಾಪತಿ ಶಿವಪ್ರಸಾದ್ ಸ್ನೇಹಿತರ ವರದರಾಜು ಅನ್ವರ್ ಘೋಸ್ಟ್ ಸೇರಿ ಬೆಂಗಳೂರಿನಲ್ಲಿ ವಾಸವಿದ್ದ ವೃದ್ದೆಗೆ ಮೋಸ ಮಾಡಿದ್ದಾರೆ ೃದಯಗೆ ವಂಚಿಸಲು ಮೇಘನಾ ದಂಪತಿ ಕತರ್ನಾಕ್ ಸಂಚು ನಡೆಸಿ “ಎಫ್ ಡಿ” ಪೇಪರ್ ಮೇಲೆ ಸಹಿ ಮಾಡಿಸಿಕೊಳ್ಳುವ ಬದಲು “ಆರ್ಟಿಡಿಎಫ್ “ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ಹೊಸ ಅಕೌಂಟನ್ನು ಓಪನ್ ಮಾಡಿಸಿ ಎಫ್ ಡಿ ತುಂಬುತ್ತೇವೆ ಎಂದು 50 ಲಕ್ಷ ರೂ ಮೋಸ ಮಾಡಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





