ಹುಬ್ಬಳ್ಳಿ: ಪ್ರೀತ್ಸೆ ಪ್ರೀತ್ಸೆ ಅಂತ ಹುಡುಗಿಯ ಹಿಂದ ಬಿದ್ದ ಪಾಗಲ್ ಪ್ರೇಮಿ ತಾನು ಪ್ರೀತಿಸುತ್ತಿರುವ ಹುಡುಗಿಯ ತಾಯಿಗೆ ಚಾಕು ಇರಿದ ಘಟನೆ ನಗರದ ಲೋಹಿಯಾ ನಗರದಲ್ಲಿ ಇಂದು ನಡೆದಿದೆ. ಮಹೇಶ್ (24) ಎಂಬಾತನೇ ನೀಲಾ ಹಂಪಣ್ಣವರ್ ಎಂಬ ಮಹಿಳೆಗೆ ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾನೆ. ಚಾಕು ಇರಿದು ಪರಾರಿಯಾಗಿದ್ದ ಮಹೇಶ್ ನನ್ನು ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಉತ್ತಮವಾದ ಆರೋಗ್ಯ ಪದ್ಧತಿ: ಜೀವನಶೈಲಿ ಪಾಲಿಸಿ; ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ
ಧಾರವಾಡ : ಆರೋಗ್ಯದಲ್ಲಿ ದುಷ್ಪರಿಣಾಮ ಬೀರುವಂತಹ ಆಹಾರ ಪದಾರ್ಥಗಳ ಮೇಲೆ ನಿಯಂತ್ರಣವಿರಬೇಕು. ಪ್ರತಿಯೊಬ್ಬರು ಉತ್ತಮವಾದ ಆರೋಗ್ಯ ಪದ್ಧತಿ ಮತ್ತು ಜೀವನಶೈಲಿಯನ್ನು ಪಾಲಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕರ್ನಾಟಕ …
Read More »ಸರ್ಕಾರಿ ಶಾಲಾ ಮಕ್ಕಳಿಗೆ ವಾರದ ಆರೂ ದಿನ ಮೊಟ್ಟೆ ವಿತರಣೆ
ಧಾರವಾಡ: ಸರ್ಕಾರಿ ಶಾಲಾ ಮಕ್ಕಳಿಗೆ ವಾರದ ಆರೂ ದಿನ ಮೊಟ್ಟೆ ವಿತರಣೆ ಮಾಡುವ ಕಾರ್ಯಕ್ಕೆ ಇಂದು ರಾಜ್ಯದಾದ್ಯಂತ ಚಾಲನೆ ನೀಡಲಾಗಿದೆ. ವಾರದ ಎರಡು ದಿನ ಮಾತ್ರ ರಾಜ್ಯ ಸರ್ಕಾರ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುತ್ತದೆ. ಆದರೆ, ಶಾಲಾ ಮಕ್ಕಳು ಅಪೌಷ್ಠಿಕತೆಯಿಂದ ಬಳಲಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಬಾಕಿ ನಾಲ್ಕೂ ದಿನ ಮಕ್ಕಳಿಗೆ ಮೊಟ್ಟೆ ನೀಡಬೇಕು ಎಂದು ಅಜೀಂ ಪ್ರೇಮ್ ಜೀ ಫೌಂಡೇಶನ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವಾರದ ಆರೂ ದಿನ ಇಂದಿನಿಂದ …
Read More »ಕಾನೂನು ನೆರವು ರಕ್ಷಕರ ಕಛೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ
ಧಾರವಾಡ : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಡಿಯಲ್ಲಿ ರಚಿಸಲಾಗಿರುವ 2 ಉಪ ಕಾನೂನು ನೆರವು ರಕ್ಷಕರಿಂದ ಕಾನೂನು ನೆರವು ರಕ್ಷಕರ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು, 4 ಸಹಾಯಕ ಕಾನೂನು ನೆರವು ರಕ್ಷಕರ ಹುದ್ದೆಗಳಿಗೆ ವಕೀಲರು ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2 ಸಹಾಯಕ ಮತ್ತು 2 ಆಫೀಸ್ ಜವಾನ್ ಹುದ್ದೆಗಳು. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 03, 2024 ಕ್ಕೆ ಸಲ್ಲಿಸಿದ ಅರ್ಜಿಗಳನ್ನು ಧಾರವಾಡ ಎಡಿಆರ್ …
Read More »ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಕಾಯಕ ಶ್ಲಾಘನೀಯ
ನವಲಗುಂದ: ತಮ್ಮ ಆರೋಗ್ಯಕ್ಕೆ ಗಮನ ನೀಡದೆ ನಗರಕ್ಕೆ ಅಂದಚಂದ, ಆರೋಗ್ಯಕರ ಹಾಗೂ ಸೌಂದರ್ಯಿಕರಣಕ್ಕೆ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಕಾಯಕ ಶ್ಲಾಘನೀಯ ಎಂದು ಪುರಸಭಾ ಅಧ್ಯಕ್ಷ ಶಿವಾನಂದ ತಡಸಿ ಹೇಳಿದರು. ಅವರು ಪಟ್ಟಣದ ಪುರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಭಾವಂತ ಮಕ್ಕಳಿಗೆ ಸರಕಾರ ಹಾಗೂ ನನ್ನ ವಯಕ್ತಿಕ ಸಹಾಯ ಸಹಕಾರ ಇದ್ದೆ ಇರುತ್ತದೆ ಎಂದರು. ಈ ವೇಳೆ ಉಪಾಧ್ಯಕ್ಷೆ ಫರೀದಾ ಬಬರ್ಚಿ, ಸದಸ್ಯರಾದ ಮಹಾಂತೇಶ ಭೋವಿ, ಮಂಜು …
Read More »ಲಾರಿಗೆ ಹಿಂಬದಿಯಿಂದ ಟಿಟಿ ಬಸ್ ಡಿಕ್ಕಿ: ಇಬ್ಬರಿಗೆ ಗಂಭೀರವಾಗಿ ಗಾಯ
ಧಾರವಾಡ: ರಸ್ತೆ ಪಕ್ಕ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ತೇಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ದಾವಣಗೆರೆ ಕಡೆಗೆ ಹೊರಟಿದ್ದ ಟಿಟಿ ಬಸ್ನಲ್ಲಿ ಒಟ್ಟು 12 ಜನ ಪ್ರಯಾಣಿಸುತ್ತಿದ್ದರು. ಈ ವೇಳೆ ರಸ್ತೆ ಪಕ್ಕ ಕೆಟ್ಟು ನಿಂತಿದ್ದ ಲಾರಿಗೆ ಟಿಟಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟಿಟಿ ಬಸ್ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದರಿಂದ …
Read More »ಫೋನ್ ಪೇ ಮೂಲಕ ಹಣ ನೀಡಿ ‘ಡ’ ಉತಾರ ಪಡೆದ ವ್ಯಕ್ತಿ
ಕುಂದಗೋಳ : ವ್ಯಕ್ತಿ 2600 ರೂಪಾಯಿ ಫೋನ್ ಪೇ ಮಾಡಿ ‘ಡ’ ಉತಾರ ಪಡೆದಿದ್ದು ಇದೀಗ ವಿಷಯ ಬಹಿರಂಗವಾದ ಘಟನೆ ಕುಂದಗೋಳ ತಹಶೀಲ್ದಾರ್ ಸರ್ಕಾರಿ ಕಚೇರಿಯಲ್ಲಿ ನಡೆದಿದೆ. ತುರ್ತು ಅವಶ್ಯಕತೆಗೆ ‘ಡ’ ಉತಾರ ಮತ್ತು ಎಂ.ಆರ್ ಪೂರೈಸುತ್ತೇನೆ ಎಂದು ತಹಶೀಲ್ದಾರ್ ಕಚೇರಿಯಲ್ಲಿ ಓಡಾಡುವ ವ್ಯಕ್ತಿಯೋರ್ವ ಹಂತ ಹಂತವಾಗಿ 2600 ರೂಪಾಯಿ ತನ್ನ ಕುಟುಂಬದ ಸದಸ್ಯರ ಮೊಬೈಲಿಗೆ ಫೋನ್ ಪೇ ಮಾಡಿಸಿಕೊಂಡು ರೈತರಿಗೆ ಉತಾರ ನೀಡಿದ್ದಾನೆ. ಜಾಸ್ತಿ ಹಣ ಕೊಟ್ಟರೇ ತಮ್ಮ …
Read More »ಹುಬ್ಬಳ್ಳಿಯಲ್ಲಿಯೂ ಸಿಎಂ ರಾಜಿನಾಮೆ ಕೊಡುವಂತೆ ಪ್ರತಿಭಟನೆ
ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿರುವ ಮುಡಾ ಹಗರಣದಲ್ಲಿ ಹೈಕೋರ್ಟ್ ಸಿಎಂ ಅರ್ಜಿ ವಜಾ ಮಾಡಿದ್ದು, ಈ ನಿಟ್ಟಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಸಿಎಂ ರಾಜಿನಾಮೆ ಕೂಗು ದಟ್ಟವಾಗಿ ಕೇಳಿ ಬರುತ್ತಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರ ಅರ್ಜಿ ವಜಾ ಆಗಿದೆ. ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಸಿಎಂ …
Read More »ರಾಷ್ಟ್ರೀಯ ರಕ್ಷಣಾ ಅಕಾಡೆವಿ (NDA) ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ
ಧಾರವಾಡ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) ಸೆಪ್ಟೆಂಬರ್ 2024ರಲ್ಲಿ ನಡೆಸಿದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇಂಡಿಯನ್ ನೆವಲ್ ಅಕಾಡೆಮಿ ಪರೀಕ್ಷೆಯಲ್ಲಿ ಇಲ್ಲಿಯ ಅರ್ಜುನ ಎಜುಕೇಶನಲ್ ಇನ್ಸಿಟ್ಯೂಷನ್ ಇವರ ಶಾಂತಿನಿಕೇತನ (ಅರ್ಜುನ) ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಧಾರವಾಡದ ಐದು ವಿದ್ಯಾರ್ಥಿಗಳು ಉತ್ತೀರ್ಣರಾಗಿ ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿದ್ದಾರೆ. ಸಮರ್ಥ ಪ್ರಭು, ಸಮರ್ಥ್ ಪಿ ಹೆಗಡೆ, ನಂದನ್ ಹೆಗಡೆ, ಆದಿತ್ಯ ಆರ್ ಜೋಶಿ ಹಾಗೂ ಶ್ರೀಲಕ್ಷ್ಮಿ ಹೆಗಡೆ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ …
Read More »ಫ್ರೆಂಚ್ ವಿಷಯದಲ್ಲಿ ಪಿಎಚ್ ಡಿ ಪಡೆದ ರೋಸೆಟ್ ರಾಬರ್ಟ್ ದದ್ದಾಪುರಿ
ಧಾರವಾಡ: ರೆಗ್ಯುಲರ್ ಪಿಎಚ್ಡಿಯನ್ನೇ ಫ್ರೆಂಚ್ ವಿಷಯದಲ್ಲಿ ಮಾಡಿದ ರೋಸೆಟ್ ರಾಬರ್ಟ್ ದದ್ದಾಪುರಿ ಚಿನ್ನದ ಪದಕ ಲಭಿಸಿವೆ. 74ನೇ ಘಟಿಕೋತ್ಸವ ಸಮಾರಂಭದಲ್ಲಿ ರೋಸೆಟ್ಗೆ ಚಿನ್ನದ ಪದಕ ಪ್ರದಾನ ಮಾಡಲಾಗಿದೆ. ರೋಸೆಟ್ ದದ್ದಾಪುರಿ ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ರಾಬರ್ಟ್ ದದ್ದಾಪುರಿ ಅವರ ಪುತ್ರಿಯಾಗಿದ್ದಾಳೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





