Breaking News

ರೌಡಿಶೀಟರ್ ಯಾರು ? ಅಂಗವಿಕಲನಿಗೆ ಚಾಕು ಇರಿದು ಕೊಂದಿದ್ದ ಪಾಪಿ ಮರ್ಡರ್ ಮಾಡಿದವನ ರಕ್ಷಣೆ ಮಾಡಿತಾ ಖಾಕಿ ?

ಹುಬ್ಬಳ್ಳಿ : ತಾನಾಯ್ತು ತನ್ನ ಕೆಲಸ ಆಯ್ತು ಎಂದು ನೆಮ್ಮದಿಯ ಜೀವನ ನಡೆಸುತ್ತಿದ್ದ ಯುವಕನ ನೆತ್ತರು ಅಂದು ಹರಿದು ಹೋಗಿತ್ತು.. ಪುಡಿ ರೌಡಿಯೊಬ್ಬನ ಇರಿತ ಆ ಕನಸುಗಾರನ ಜೀವ ಕಳೆದಿತ್ತು.. ಸಿಸಿ ಕ್ಯಾಮರಾ ಸಾಕ್ಷಿಯಿದ್ದರೂ ಪ್ರಕರಣ ಉಲ್ಟಾ ಆಗಿತ್ತು..ಕೊಲೆಗಾರ ಆರೋಪಿ ನಂಬರ್ 3 ಆಗಿದ್ದ.. ಅಷ್ಟಕ್ಕೂ ಏನಿದು ಪ್ರಕರಣ? ಈ ಪ್ರಕರಣದ ಇಂಚಿಂಚೂ ಮಾಹಿತಿ ಬಿಚ್ಚಿಡಲಿದೆ ನಿಮ್ಮ ಬಿಗ್ ಟಿವಿ ನ್ಯೂಸ್..

ಹಿನ್ನೆಲೆ: ಅಂದು ತನ್ನ ಮನೆಗೆ ಆ ಯುವಕ ಮರುಳಿತ್ತಾಗ ಹುಬ್ಬಳ್ಳಿಯ ಅಜಂತಾ ಹೋಟೇಲ್ ಮುಂದೆ ಕಿಡಿಗೇಡಿಗಳು ಆತನ ನೆತ್ತರು ಹರಿಸಿದ್ದರು. ಬೈಕ್ ಸ್ಟಂಟ್, ಮಾಡಲಿಂಗ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದ ಫೈರೋಜ್ , ತನ್ನ ಕೆಲಸದ ನಡುವೆ ಫುಲ್ ಟೈಮ್ ಬ್ಯೂಸಿ ಆಗಿದ್ದ. ಈತನ ಬೆಳವಣಿಗೆ ಕೆಲವರಿಗೆ ಸಹಿಸಿಕೊಳ್ಳಲಾಗದ ತುತ್ತಾಗಿತ್ತು. ಇದರ ಹಿನ್ನೆಲೆಯಲ್ಲಿ ಕಾದು ಕುಳಿತಿದ್ದ ಪುಡಿ ರೌಡಿ ನಗರದ ಅಜಂತಾ ಹೋಟೇಲ್ ಬಳಿ ಈತನಿಗೆ ಚಾಕು ಇರಿದು ಪರಾರಿಯಾಗಿದ್ದ. ಕೊಲೆಗಾರನು ಹತ್ಯೆ ಮಾಡಿದ ಕುರಿತು ಸಿಸಿ ಕ್ಯಾಮೇರಾದ ಸಾಕ್ಷಿ, ಹಾಗೂ ಸ್ಥಳದಲ್ಲೇ ಕೊಲೆಯಾದ ದೃಶ್ಯ ನೋಡಿದ ಸಾಕ್ಷಿ ಕೂಡ ಇತ್ತು. ಆದ್ರೆ, ಅಚ್ಚರಿ ನಡೆದು ಹೋಯ್ತು. ಆರೋಪಿ ನಂಬರ್ ಒನ್ ಆಗಬೇಕಿದ್ದ ಕೊಲೆಗಾರಿ A3 ಯಾದ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ಮರ್ಡರ್ ತನಿಖೆ ಹಿಂದೆ ಯಾರ ಹಸ್ತಕ್ಷೇಪ ಇದೆ? ಅನ್ನೋ ಪ್ರಶ್ನೆ ಮೂಡಿದೆ. ಪೋಲಿಸ್ ರ ತನಿಖಾ ವೈಖರಿ ಕೂಡ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೊಲೆ ಮಾಡಿದ್ದು ಯಾರೋ , ಜೈಲು ಸೇರಿದ್ದು ಮತ್ಯಾರೋ ಎಂಬಾತಾಗಿದೆ. ಕೊಲೆಗಾರನ ರಕ್ಷಣೆ ಸಂಚಿನ ಕುರಿತು ಇಂಚಿಂಚೂ ಸುದ್ದಿ ಬಯಲು ಮಾಡಲಿದೆ ನಿಮ್ಮ ಬಿಗ್ ಟಿವಿ ನ್ಯೂಸ್

Share News

About BigTv News

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *