ಧಾರವಾಡ : ಇಡಿಯನ್ನು ಕೇವಲ ರಾಜಕಾರಣಕ್ಕಾಗಿ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇಡಿ ಹಾಕಿದ ಚಾರ್ಜ್ಶೀಟ್ನಲ್ಲಿ ಎಷ್ಟು ಜನರಿಗೆ ಶಿಕ್ಷೆಯಾಗಿದೆ ಹೇಳಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು. ಧಾರವಾಡದಲ್ಲಿ ಮಾತನಾಡಿದ ಅವರು, ನಮ್ಮದೂ ಸಹ ಎಸ್ಐಟಿ ತನಿಖೆ ನಡೆಯುತ್ತಿದೆ. ಅದರ ವರದಿ ಕೂಡ ಬಂದಿಲ್ಲ. ಇಡಿಯವರು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ಗೆ ಹೋಗುವುದೇ ಇಲ್ಲ. ಸಿಬಿಐನವರು ರೇಪ್ ಕೇಸ್ ಇದ್ದಾಗ ಕೋರ್ಟ್ಗೆ ಹೋಗುವುದೇ ಇಲ್ಲ. ಕೋರ್ಟಿಗೇನೇ …
Read More »ಜಾರಕಿಹೊಳಿ ಅವರು ಧಾರವಾಡದಲ್ಲಿ ಭೇಟಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಾಡ್
ಧಾರವಾಡ: ಜಾರಕಿಹೊಳಿ ಅವರು ಹಾಗೂ ನಾನು ಭೇಟಿಯಾಗಿ ಕೇವಲ ಕಾಫಿ ಕುಡಿದಿದ್ದೇವೆ. ಹೈಕೋರ್ಟ್ ಕಾರ್ಯಕ್ರಮಕ್ಕೆ ಜಾರಕಿಹೊಳಿ ಅವರು ಬಂದಿದ್ದರು. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಅವರು ಹೊರಟಿದ್ದರು. ಈ ವೇಳೆ ಧಾರವಾಡದಲ್ಲಿ ಭೇಟಿಯಾಗಿ ಕಾಫಿ ಕುಡಿದಿದ್ದೇವೆ. ರಾಜಕೀಯ ಏನಾದರೂ ಇದ್ದರೆ ಬಹಿರಂಗವಾಗಿಯೇ ನಾನು ಮಾತನಾಡುತ್ತೇನೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಸಚಿವ ಸತೀಶ್ ಜಾರಕಿಹೊಳಿ ಅವರು ಧಾರವಾಡದಲ್ಲಿ ಭೇಟಿ ಮಾಡಿದ ವಿಚಾರಕ್ಕೆ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ, ನಮ್ಮ ಅವರ …
Read More »ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ವಹಿಸಿರುವುದು ಏಕೆ: ಸುರಭಿ ಹುದಿಗೇರಿ
ಹುಬ್ಬಳ್ಳಿ: ವಾಲ್ಮೀಕಿ ಹಗರಣದಲ್ಲಿ ಇಡಿ ಚಾರ್ಜ್ ಶೀಟ್ ದಾಖಲಿಸಿದೆ. ಅದರಲ್ಲಿ ಆತಂಕಕಾರಿ ವಿಷಯವನ್ನು ಹೊರಹಾಕಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ವಹಿಸಿರುವುದು ಏಕೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹುದಿಗೇರಿ ಪ್ರಶ್ನಿಸಿದರು. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎಸ್.ಟಿ ಸಮುದಾಯಕ್ಕೆ ಸೇರಬೇಕಾದ ಹಣ ಚುನಾವಣೆಯಲ್ಲಿ ಬಳಕೆಯಾಗಿರುವ ಆತಂಕಕಾರಿ ಅಂಶ ಇಡಿ ಚಾರ್ಜ್ ಶೀಟ್ ನಲ್ಲಿ ಬಹಿರಂಗಗೊಂಡಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೌನ ವಹಿಸದೇ ರಾಜ್ಯದ ಜನತೆಗೆ …
Read More »ಫೈ ಓವರ್ ಕಾಮಗಾರಿ ವೇಳೆ ನಡೆದಿರುವ ಅವಘಡ ಸಾಕಷ್ಟು ನೋವನ್ನುಂಟು ಮಾಡಿದೆ : ಜೋಶಿ
ಹುಬ್ಬಳ್ಳಿ: ಫೈ ಓವರ್ ಕಾಮಗಾರಿ ವೇಳೆ ನಡೆದಿರುವ ಅವಘಡ ಸಾಕಷ್ಟು ನೋವನ್ನುಂಟು ಮಾಡಿದೆ. ಕಾಮಗಾರಿ ವೇಳೆಯಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಅಲ್ಲದೇ ಈ ಬಗ್ಗೆ ರಾಜ್ಯ ಸರ್ಕಾರ ವಿಶೇಷ ಗಮನ ಹರಿಸುವ ಮೂಲಕ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಫೈ ಓವರ್ ಕಾಮಗಾರಿ ಅವಘಡದಲ್ಲಿ ಎಎಸ್ಐ ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇಲ್ಲಿನ ಜನರ ಆಶೀರ್ವಾದದಿಂದ ಕೇಂದ್ರ ಸಚಿವನಾಗಿದ್ದು, …
Read More »ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಗಲಾಟೆ ವಿಷಯಕ್ಕೆ ಮುತಾಲಿಕ್ ಪ್ರತಿಕ್ರಿಯೆ
ಧಾರವಾಡ : ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿರುವ ಅವರು, ನಾಗಮಂಗಲದಲ್ಲಿ ನಡೆದ ಘಟನೆ ಅತ್ಯಂತ ಅಪರಾಧವಾದದ್ದು. ರಾತ್ರಿ ಮಸೀದಿ ಎದುರು ಗಣೇಶ ಬಂದಾಗ ಕಲ್ಲು ತೂರಾಟ ಹಾಗೂ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಇದರಿಂದ ಗಣಪತಿಗೆ ಧಕ್ಕೆಯಾಗಿದೆ. ಮುಸ್ಲಿಂ ಸಮಾಜ ಇದನ್ನು ವಿಚಾರ ಮಾಡಬೇಕು. ಮುಸ್ಲಿಂರು ಅಲ್ಲಾಹುನ್ನು ಪೂಜೆ ಮಾಡುತ್ತಾರೆ. ನಾವು ಯಾವತ್ತೂ …
Read More »ಸೂಪರ್ ಮಾರುಕಟ್ಟೆಗೆ ಭೇಟಿ ನೀಡಿದ ಸಂತೋಷ ಲಾಡ್
ಧಾರವಾಡ: ಧಾರವಾಡದ ಸೂಪರ್ ಮಾರುಕಟ್ಟೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು, ಮಾರುಕಟ್ಟೆಯಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದರು. ಇದೇ ವೇಳೆ ಅಲ್ಲಿನ ವ್ಯಾಪಾರಿಗಳಿಂದ ಸಚಿವರು ಅಹವಾಲುಗಳನ್ನು ಸ್ವೀಕರಿಸಿದರು. ಮಾರುಕಟ್ಟೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಶೆಡ್ನ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ವ್ಯಾಪಾರಿಗಳಿಗೆ ಭರವಸೆ ನೀಡಿದರು. ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗುವುದು. ಶೌಚಾಲಯವನ್ನೂ ಡಿಸೆಂಬರ್ ಒಳಗೆ ವ್ಯಾಪಾರಿಗಳಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು. …
Read More »ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ನಿಧನ
ಧಾರವಾಡ: ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಪ್ರಗತಿಪರ ರೈತ ಹಾಗೂ ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಚನ್ನಬಸಪ್ಪ ಮಸೂತಿ (67) ಅವರು ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವಿದೆ. ಚನ್ನಬಸಪ್ಪ ಮಸೂತಿ ಅವರು ಸಾವಯವ ಕೃಷಿಯಲ್ಲಿ ಹೆಸರು ಮಾಡಿದವರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದರು.
Read More »ಗಾಂ….ತಪ್ಪು ಚಾರ್ಜ್ ಶೀಟ್ ಸಲ್ಲಿಕೆ..!!
ಕೋರ್ಟ್ ನಲ್ಲೆ ಛೀಮಾರಿ ಹಾಕಿದ ಜಡ್ಜ್ … ಮನಸ್ಸಿಗೆ ದೋಚಿದ ಹಾಗೆ ಕೇಸ್ ಹಾಕುವ ಅಧಿಕಾರಿಗಳಿಗೆ ಪಾಠ ಕಲಿಸಿದ ನ್ಯಾಯಾಧೀಶರು ಸೋಷಿಯಲ್ ಮೀಡಾಯಾದಲ್ಲಿ ವಿಡಿಯೋ ಫುಲ್ ವೈರಲ್..
Read More »ಕೆಯುಡಿ ಸಿಂಡಿಕೇಟ್ ಸಭೆಯ ನಾಮನಿರ್ದೇಶನ ಸದಸ್ಯರಾಗಿ ಡಾ.ಬಾಗಡಿ ಆಯ್ಕೆ
ನವಲಗುಂದ: ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಪರಿಚ್ಛೇದ 28(1) (ಎಫ್) ರ ಅನ್ವಯ ಮತ್ತು ಮಾನ್ಯ ಕುಲಪತಿಗಳ ಆದೇಶದಂತೆ, ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಚಾರ್ಯರನ್ನು ಸಿಂಡಿಕೇಟ್ ಸಭೆಗೆ ನಾಲ್ವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಅಧಿಚೂಚಿಸನೆ ಹೊರಡಿಸಿದೆ. ಅವರಲ್ಲಿ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಾದೇವ ಬಾಗಡಿ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಗೆ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.
Read More »ಪುರಸಭೆ ಅಧ್ಯಕ್ಷರು ಕೆಲ ಸದಸ್ಯರಿಂದ ಆಕ್ರೋಶ
ಅಣ್ಣಿಗೇರಿ: ಪಟ್ಟಣದಲ್ಲಿ ಹೊಸ ಲೇಔಟ್ ಪರ್ಮಿಷನ್ ಕೊಡುವುದರಲ್ಲಿ ಪುರಸಭೆ ಅಧ್ಯಕ್ಷರು ಕೆಲ ಸದಸ್ಯರು ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಸದಸ್ಯರು ಪುರಸಭೆಯ ಮುಂಭಾಗ ಪುರಸಭೆ ಅಧ್ಯಕ್ಷ ಮೆಹಬೂಬಿ ನವಲಗುಂದ ಅವರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





