Breaking News

Shaikh BigTv

ಸಂತೋಷ ಲಾಡ್ ಹೇಳಿಕೆಗೆ ಶಾಸಕ ಮಹೇಶ ಟೆಂಗಿನಕಾಯಿ ತಿರುಗೇಟು

ಧಾರವಾಡ: ಅದಾನಿ ಬಗ್ಗೆ ಬಿಜೆಪಿಯವರು ಮಾತುಗಳನ್ನೇ ಆಡುತ್ತಿಲ್ಲ ಎಂಬ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆಗೆ ಶಾಸಕ ಮಹೇಶ ಟೆಂಗಿನಕಾಯಿ ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಅದಾನಿ ಬಗ್ಗೆ ನಾವ್ಯಾಕೆ ಮಾತನಾಡಬೇಕು. ಅವರು ನಮಗೆ ಹತ್ತಿದವರಲ್ಲ. ಅವರ ಬಗ್ಗೆ ಕೇಸ್ ಆಗಿರುವುದು ಅಮೆರಿಕದಲ್ಲಿ. ಅಲ್ಲಿನ ಕಾನೂನು ಪ್ರಕಾರ ಕ್ರಮ ಆಗುತ್ತದೆ. ನಮ್ಮ ರಾಜ್ಯದಲ್ಲೇ ವಕ್ಷ, ಮುಡಾ ಹಾಗೂ ವಾಲ್ಮೀಕಿ ಹಗರಣದ ಬಗ್ಗೆ ಕಾಂಗ್ರೆಸ್‌ನ ಎಷ್ಟು ಶಾಸಕರು, ಸಚಿವರು ಮಾತನಾಡಿದ್ದಾರೆ …

Read More »

ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ:ಟೆಂಗಿನಕಾಯಿ

ಧಾರವಾಡ: ಬರುವ ಚಳಿಗಾಲದ ಅಧಿವೇಶನ ನಡೆದ ನಂತರ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೊಸ ಬಾಂಬ್‌ ಸಿಡಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಅಭಿವೃದ್ಧಿಗೆ ಹಣವೇ ಬರುತ್ತಿಲ್ಲ ಎಂಬ ಮಾತನ್ನು ಕಾಂಗ್ರೆಸ್‌ನ ಹಿರಿಯ ಶಾಸಕರಾದ ರಾಜು ಕಾಗೆ ಸೇರಿದಂತೆ ಅನೇಕರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಹೀಗೇ ಸರ್ಕಾರ ಮುಂದುವರೆದರೆ ಬರುವ ದಿನಗಳಲ್ಲಿ ನಾವು ಕಾಂಗ್ರೆಸ್ ತೊರೆಯಬೇಕಾಗುತ್ತದೆ …

Read More »

ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕು ಎಂದು ಸಂತೋಷ ಲಾಡ್ ಗೆ ಮನವಿ ಸಲ್ಲಿಕೆ

ಧಾರವಾಡ: ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದು, ಅವರ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರವಿರಾಜ್ ಕಂಬಳಿ ಎನ್ನುವವರು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದರು. ಅಳ್ಳಾವರ ತಾಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ ರವಿರಾಜ್ ಅವರು ಲಾಡ್ ಅವರಿಗೆ ಮನವಿ ಸಲ್ಲಿಸಿ, ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವೇ ಇದೆ. ಅಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಮಹಾರಾಷ್ಟ್ರದಲ್ಲೂ …

Read More »

ರಾಜ್ಯದಾದ್ಯಂತ ವಕ್ಸ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದೆ: ಮಹೇಶ ಟೆಂಗಿನಕಾಯಿ

ಧಾರವಾಡ: ಬೆಳಗಾವಿಯ ಅಧಿವೇಶನದಲ್ಲಿ ವಕ್ಸ್ ವಿಚಾರದ ಬಗ್ಗೆ ಧ್ವನಿ ಎತ್ತುತ್ತೇವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಇಂದು ರಾಜ್ಯದಾದ್ಯಂತ ವಕ್ಸ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದೆ. ನಮ್ಮ ಸಂಘಟನಾತ್ಮಕ 39 ಜಿಲ್ಲಾ ಘಟಕಗಳಿವೆ. ಎಲ್ಲಾ ಘಟಕಗಳಿಂದ ಪ್ರತಿಭಟನೆ ನಡೆದಿದೆ. ಲವ್ ಜಿಹಾದ್‌ನಂತೆಯೇ ಈಗ ಲ್ಯಾಂಡ್ ಜಿಹಾದ್ ನಡೆದಿದೆ. ಇದನ್ನು ಸಚಿವ ಜಮೀರ್ ಅಹ್ಮದ್ ಮಾಡಿದ್ದಾರೆ ಎಂದರು. ವಕ್ಷ ವಿರುದ್ಧ ನಮ್ಮ …

Read More »

ಅನ್ನದಾತನಿಗೆ ಆರ್ಥಿಕ ಭದ್ರತೆ ಜೋತೆ ಸಾಮಾಜಿಕ ಮನ್ನಣೆ : ಮುನ್ನೂರು ರೈತರಿಗೆ ‘ ಭೂಮಿ’ ಪ್ರಶಸ್ತಿ

ಹುಬ್ಬಳ್ಳಿ: ಡಿಜಿಟಲ್ ತಂತ್ರಜ್ಞಾನವನ್ನು ಅತ್ಯಂತ ಸರಳೀಕರಣಗೊಳಿಸಿ, ರೈತರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ, ಕೃಷಿ ವಿಧಾನ ಸುಧಾರಣೆ ಸಾಮಾಜಿಕ ಭದ್ರತೆ ಮತ್ತು ಗೌರವ ಸಿಗುವ ನಿಟ್ಟಿನಲ್ಲಿ ‘ಭೂಮಿ’ ಸಂಸ್ಥೆ ಸೇವೆ ಸಲ್ಲಿಸುತ್ತಿದೆ. ಕಳೆದ ಹತ್ತು ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಹಾಗೂ ರೈತರ ಬೆಳೆಗಳಿಗೆ ಉತ್ತಮ ಆದಾಯ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ, ‘ಭೂಮಿ’ ಸಂಸ್ಥೆ, ಇದೀಗ ಇನ್ನೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ನಗರದಲ್ಲಿ ಇಂದು ಸುದ್ದಿ …

Read More »

ವಿಭಿನ್ನ ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಧಾರವಾಡ: ವಕ್ಸ್‌ ಬೋರ್ಡ್ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಇಡೀ ದಿನ ಧರಣಿ ನಡೆಸಿದರು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಟೆಂಟ್ ಹಾಕಿ ಧರಣಿ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ನಡು ರಸ್ತೆಯಲ್ಲೇ ಭಜನೆ ಮಾಡುವ ಮೂಲಕ ಗಮನ ಸೆಳೆದರು. ರೈತರ ಜಮೀನು ಹಾಗೂ ಹಿಂದೂ ಧರ್ಮದ ಕೆಲ ದೇವಾಲಯಗಳು ವಕ್ಸ್ ಬೋರ್ಡ್‌ಗೆ ಒಳಪಟ್ಟಿವೆ ಎಂದು ನಮೂದಾಗಿರುವುದನ್ನು …

Read More »

ಸರ್ಕಾರಿ ನೌಕರರು ಎಷ್ಟೇ ಕೆಲಸ ಮಾಡಿದರೂ ಕೆಲವರ ಅಪೇಕ್ಷೆಯೇ ಬೇರೆಯಾಗಿರುತ್ತದೆ: ದಿವ್ಯ ಪ್ರಭು

ಧಾರವಾಡ: ಸರ್ಕಾರಿ ನೌಕರರು ಎಷ್ಟೇ ಕೆಲಸ ಮಾಡಿದರೂ ಕೆಲವರ ಅಪೇಕ್ಷೆಯೇ ಬೇರೆಯಾಗಿರುತ್ತದೆ. ಆದರೂ ನಾವು ಅವರ ನಿರೀಕ್ಷೆಯಂತೆಯೇ ಕೆಲಸ ಮಾಡಬೇಕಾಗುತ್ತದೆ ಎಂಬುದನ್ನು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಾಯಿ ಕಥೆಯೊಂದನ್ನು ಹೇಳುವ ಮೂಲಕ ಸರ್ಕಾರಿ ನೌಕರರಿಗೆ ನೀತಿಯ ಪಾಠ ಹೇಳಿದ್ದಾರೆ. ಧಾರವಾಡ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಉಪಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ನಾಯಿ ಎಷ್ಟೇ ನಿಯತ್ತಿನಿಂದ ಕೆಲಸ ಮಾಡಿದರೂ ಒಂದು ಸಣ್ಣ ತಪ್ಪು …

Read More »

ನ.24 ರಂದು ಉಚಿತ ಆರೋಗ್ಯ ಶಿಬಿರ

ನವಲಗುಂದ : ಪಟ್ಟಣದಲ್ಲಿ ನ.24 ಭಾನುವಾರದಂದು ಅಜಾತ ನಾಗಲಿಂಗ ಮಹಾಸ್ವಾಮಿಗಳ ಭವನದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮವನ್ನು ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿ ಮಠ, ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಹಾಗೂ ತುರ್ತು ಚಿಕಿತ್ಸಾ ಕೇಂದ್ರ ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಜರುಗಲಿದೆ. ಉಚಿತ ಆರೋಗ್ಯ ಶಿಬಿರದಲ್ಲಿ ಬೋನ್ ಡೆನ್ಸಿಟಿ, ರಕ್ತದೊತ್ತಡ, ಸಕ್ಕರೆ ಖಾಯಿಲೆ ತಪಾಸಣೆ, ಫಿಜಿಶಿಯನ್ನರು, ಹೃದ್ರೋಗ, ನರರೋಗ, ಎಲುಬು-ಕೀಲು, ವಿಶೇಷವಾಗಿ ಆಹಾರ ಪದ್ಧತಿ ಮತ್ತು …

Read More »

ಅಮರಸಿದ್ದೇಶ್ವರ ಸ್ವಾಮೀಜಿಗೆ ಪಿಎಚ್‌ಡಿ ಪದವಿ ಪ್ರಧಾನ

ಧಾರವಾಡ : ಬೆಳಗಾವಿ ಜಿಲ್ಲೆಯ ಅಂಕಲಗಿ-ಕುಂದರಗಿಯ ಶ್ರೀ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಅಮರಸಿದ್ದೇಶ್ವರ ಸ್ವಾಮೀಜಿ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿದೆ. ಮೂಲತಃ ರಾಯಚೂರಿನ ಸಿರವಾರದ ಶ್ರೀಗಳು, ದಶೋಪನಿಷತ್ತು ಮತ್ತು ದಶಶರಣರ ದೃಷ್ಟಿಯಲ್ಲಿ ಈಶ್ವರ ಸ್ವರೂಪ ಎಂಬ ವಿಷಯ ಕುರಿತು ಮಹಾಪ್ರಬಂಧವನ್ನು ಕವಿವಿಯ ಸಂಸ್ಕೃತ ಅಧ್ಯಯನ ಪೀಠಕ್ಕೆ ಸಲ್ಲಿಸಿದ್ದರು. ಈ ಮಹಾಪ್ರಬಂಧ ಪುರಸ್ಕೃರಿಸಿ ಕವಿವಿಯು, ಈಗ ಅಮರಸಿದ್ದೇಶ್ವರ ಶ್ರೀಗಳಿಗೆ ಪಿಎಚ್‌ಡಿ ಪದವಿ ಘೋಷಿಸಿದೆ. …

Read More »

ಹೊತ್ತಿ ಉರಿದ ಹತ್ತಿ ಬೀಜ ಹೊತ್ತು ಸಾಗುತ್ತಿದ್ದ ವಾಹನ

ಧಾರವಾಡ: ಹತ್ತಿ ಬೀಜ ಹೊತ್ತು ಸಾಗುತ್ತಿದ್ದ ಕ್ಯಾಂಟ‌ರ್ವಾಹನಕ್ಕೆ ಆಕಸ್ಮಿಕ ಬೆಂಕಿ ತಗುಲಿ ವಾಹನ ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಧಾರವಾಡ ಬೈಪಾಸ್‌ನಲ್ಲಿ ಸಂಭವಿಸಿದೆ. ಹುಬ್ಬಳ್ಳಿಯಿಂದ ಬೆಳಗಾವಿ ಕಡೆಗೆ ಈ ಕ್ಯಾಂಟರ್ ವಾಹನ ಹೋಗುತ್ತಿತ್ತು. ಈ ವೇಳೆ ವಾಹನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ವಾಹನ ನಡು ರಸ್ತೆಯಲ್ಲೇ ಹೊತ್ತಿ ಉರಿದಿದೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಹಾಗೂ ಧಾರವಾಡ ಗ್ರಾಮೀಣ …

Read More »