Breaking News

Shaikh BigTv

ಮಾಲತಿ ಮಾಧವ ನಾಟಕ ಪ್ರರ್ದಶನ

ಧಾರವಾಡ: ರಂಗಾಯಣದ ಪಂ.ಬಸವರಾಜ ರಾಜುಗುರು ಬಯಲು ರಂಗಮಂದಿರದಲ್ಲಿ ಧಾರವಾಡ ರಂಗಾಯಣ ಹಾಗೂ ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ ಸಹಯೋಗದೊಂದಿಗೆ ಆಧುನಿಕ ಕನ್ನಡ ರಂಗಭೂಮಿ ದಿನದ ಅಂಗವಾಗಿ ಆಯೋಜಿಸಿದ್ದ 02 ನೇ ದಿನದ ನಾಟಕೋತ್ಸವದಲ್ಲಿ ಭವಭೂತಿ ರಚನೆ, ವಿದ್ಯಾ ಹೆಗಡೆ ಭಾರ್ಗವ ಕೆ.ಎನ್ ಮತ್ತು ಎಂ.ಎಚ್ ಗಣೇಶ ಸಂಗೀತ ವಿನ್ಯಾಸ, ಅಕ್ಷರ ಕೆ.ವಿ ಕನ್ನಡ ರೂಪ ನಿರ್ದೇಶನ ಮಾಡಿರುವ ಮಾಲತಿ ಮಾಧವ ನಾಟಕವನ್ನು ನೀನಾಸಂ ತಂಡದವರು ಪ್ರಸ್ತುತಪಡಿಸಿದರು. ಈ ಸಂದರ್ಭದಲ್ಲಿ ರಂಗಾಯಣದ …

Read More »

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನಿಯಮಿತ ಡ್ರೋನ್ ಆಪರೇಟರ್ ತರಬೇತಿಗಾಗಿ ಅರ್ಜಿ ಆಹ್ವಾನ

ಧಾರವಾಡ: 2024-25ನೇ ಸಾಲಿಗೆ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಅಲ್ಪಸಂಖ್ಯಾತರ ಸಮುದಾಯದ ಯುವಕ, ಯುವತಿಯರಿಗೆ ರಿಮೋಟ್ ಪೈಲಟ್ ವಿಮಾನ (ಡ್ರೋನ್ ಆಪರೇಟರ್) ತರಬೇತಿಗಾಗಿ ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿರುತ್ತದೆ. ಆಸಕ್ತರು ತರಬೇತಿಯನ್ನು ಪಡೆಯಲು ಡಿಸೆಂಬರ್ 5, 2024 ರೊಳಗಾಗಿ https://kmdconline.karnataka.gov.in ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ : 0836-2748226 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ [ನಿ] ಜಿಲ್ಲಾ ವ್ಯವಸ್ಥಾಪಕರು …

Read More »

ಅನೇಕ ಕಡೆ ಬಸ್ ಇಲ್ಲ. ಶಾಲಾ ಮಕ್ಕಳಿಗೆ ಬಸ್ ಇಲ್ಲದೆ ಅವರ ಬವಣೆ ಹೇಳತೀರದು : ಜೋಶಿ

ಹುಬ್ಬಳ್ಳಿ: ಸಿದ್ದರಾಮಯ್ಯ ಭಾಷಣ ಶುರುವಾಗೋದೆ ನುಡಿದಂತೆ ನಡೆದಿದ್ದೇವೆ ಎಂದು ಹೇಳ್ತಾರೆ. ಏನು ನುಡಿದಂತೆ ನಡೆದಿದ್ದೀರಿ! ಎಲ್ಲ ವಸ್ತುಗಳ ದರ ಜಾಸ್ತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅನೇಕ ಕಡೆ ಬಸ್ ಇಲ್ಲ. ಶಾಲಾ ಮಕ್ಕಳಿಗೆ ಬಸ್ ಇಲ್ಲದೆ ಅವರ ಬವಣೆ ಹೇಳತೀರದು. ಫ್ರೀ ಅಂತ ಹೇಳಿ ವೋಟ್ ತೆಗೆದುಕೊಂಡಿದ್ದಾರೆ. ಯಾವುದೇ ಪ್ಲಾನ್ ಇಲ್ಲದೆ …

Read More »

ನಮಗೆ ಕಾಂಗ್ರೆಸ್ ತುಷ್ಟಿಕರಣದ ವಿರುದ್ಧ ದೊಡ್ಡದಾದ ಹೋರಾಟ ಮಾಡೋ ಅವಕಾಶ ಇದೆ : ಜೋಶಿ

ಹುಬ್ಬಳ್ಳಿ: ವಕ್ಸ್‌ ವಿವಾದಕ್ಕೆ ಬೇರೆ ಬೇರೆ ತಂಡ ರಚನೆ ವಿಚಾರ, ಎಲ್ಲರೂ ಒಂದಾಗಿ ಹೋರಾಟ ಮಾಡೋದು ಒಳ್ಳೆಯದು. ನಮಗೆ ಕಾಂಗ್ರೆಸ್ ತುಷ್ಟಿಕರಣದ ವಿರುದ್ಧ ದೊಡ್ಡದಾದ ಹೋರಾಟ ಮಾಡೋ ಅವಕಾಶ ಇದೆ. ಹಿಂದೂ ಸಮಾಜಕ್ಕೆ ಕಂಟಕ ಇದೆ. ನಾನು ಎಲ್ಲರಲ್ಲೂ ಮನವಿ ಮಾಡ್ತೀನಿ… ಒಟ್ಟಾಗಿ ಹೋರಾಟ ಮಾಡಿ. ಎಲ್ಲರೂ ಕೂತು ಚರ್ಚೆ ಮಾಡಿ ಬಳಿಕ ಹೋರಾಟ ಮಾಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿವಿಮಾತು ಹೇಳಿದರು.

Read More »

ಎಪಿಎಲ್, ಬಿಪಿಎಲ್ ಕಾರ್ಡ್ ಗಳನ್ನು ಏಕೆ ರದ್ದು ಮಾಡಿದ್ದಾರೆ ನನಗೆ ಗೊತ್ತಿಲ್ಲ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಎಪಿಎಲ್, ಬಿಪಿಎಲ್ ಕಾರ್ಡ್ ಗಳನ್ನು ಏಕೆ ರದ್ದು ಮಾಡಿದ್ದಾರೆ ನನಗೆ ಗೊತ್ತಿಲ್ಲ. ನಾವು ಶೇಕಡಾ 50ರಷ್ಟು ನಗರ ಪ್ರದೇಶ, ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 75 ರಷ್ಟು ಉಚಿತವಾಗಿ ಆಹಾರ ಕೊಡ್ತೀವಿ. ಇವರು ಯಾಕೆ ಕಾರ್ಡ್ ರದ್ದು ಮಾಡಲು ತೀರ್ಮಾನ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ಸಂಪೂರ್ಣವಾಗಿ ತಿಳಿದುಕೊಳ್ಳಿನೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಆಹಾರ ಭದ್ರತೆಗಾಗಿ ನಾವು ಪ್ರತಿ ವರ್ಷ 2 ಲಕ್ಷ …

Read More »

50 ಕೋಟಿ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ

ಹುಬ್ಬಳ್ಳಿ: 50 ಕೋಟಿ ಆರೋಪದ ವಿಚಾರ, ಹುಚ್ಚು ಹುಚ್ಚರ ತರಹ ಮಾತಾಡೋದು ಪ್ರಜಾಪ್ರಭುತ್ವದ ಮೇಲೆ ಪ್ರಭಾವ ಬೀರುತ್ತೆ. 50 ಜನರಿಗೆ 50 ಕೋಟಿ ಅಂದ್ರೆ 2500 ಕೋಟಿ ಆಗುತ್ತೆ. ಏನು ಮಾತಾಡ್ತೀರಿ ಅನ್ನೋ ಸೆನ್ಸ್ ಇದೆಯಾ ನಿಮಗೆ? 50 ಕೋಟಿ ಕೊಡ್ತಾರೆ ಅನ್ನೋ ಆರೋಪ ಮಾಡ್ತೀರಿ. ನಿಮ್ಮವರು ವ್ಯಾಪಾರ ಆಗೋಕೆ ತಯಾರಾಗಿದ್ದಾರಾ? ನಿಮ್ಮ ಶಾಸಕರು ಕತ್ತೆ ಕುರಿ ಕೋಣನಾ? ನಾನು ಹಾಗೆ ಭಾವಿಸಿಲ್ಲ. ಕತ್ತೆ ಕುರಿ ಮಾರಾಟ ಮಾಡ್ತಾರೆ. ಸಿಎಮ್ …

Read More »

ಬಾಲಕಿಯೊರ್ವಳನ್ನು ಚುಡಾಯಿಸಿದ ಪ್ರಕರಣ:2 ಗಂಟೆಯಲ್ಲಿ ಬಂಧಿಸುವಲ್ಲಿ ಪೋಲಿಸರು ಯಶಸ್ವಿ

ಹುಬ್ಬಳ್ಳಿ: ಇತ್ತಿಚೆಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊರ್ವಳನ್ನು ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಆರೋಪಿಗಳನ್ನು ಘಟನೆ ನಡೆದ ಎರಡು ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಹಳೇಹುಬ್ಬಳ್ಳಿಯ ಅಯೋಧ್ಯೆ ನಗರದ ನಿವಾಸಿಗಳಾದ ಶುಭಂ ತಡಸ, ಮೆಹಬೂಬ್ ಹಿತ್ತಲಮನಿ ಎಂದು ಗುರುತಿಸಲಾಗಿದೆ. ಇವರಿಂದ ಆರು ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಇಬ್ಬರು ಆರೋಪಿಗಳಿಗೆ ಸಹಕರಿಸಿದ ಸಾಗರ ಸಾತಪುತೆ, …

Read More »

ಸಾರಿಗೆ ಸಂಸ್ಥೆಯಲ್ಲಿ 9000 ಹುದ್ದೆಗಳ ಭರ್ತಿ: ಸಚಿವ ರಾಮಲಿಂಗಾರೆಡ್ಡಿ

ಹುಬ್ಬಳ್ಳಿ: ಸಾರಿಗೆ ಸಂಸ್ಥೆಗಳಲ್ಲಿ ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದೆ. ಮುಂದಿನ ಎರಡು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಇಲ್ಲಿನ ಗೋಕುಲರಸ್ತೆಯ ಎಚ್.ಡಿ.ಬಿ.ಆ‌ರ್. ಟಿ.ಎಸ್.ಘಟಕದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಏಳೆಂಟು ವರ್ಷಗಳಿಂದ ಸಾರಿಗೆ ಸಂಸ್ಥೆಗಳಲ್ಲಿ ನೇಮಕಾತಿಯೇ ಆಗಿರಲಿಲ್ಲ. 9 ಸಾವಿರ ಹುದ್ದೆಗಳ ಜತೆಗೆ 1 ಸಾವಿರ ಹುದ್ದೆಗಳನ್ನು ಅನುಕಂಪ …

Read More »

ಸಾರ್ವಜನಿಕರೊಂದಿಗೆ ಸಂವಹನ ನಡೆಸಿ ಚರ್ಚಿಸಿದ ಕಮೀಷನರ್ ಎನ್ ಶಶಿಕುಮಾರ್

ಹುಬ್ಬಳ್ಳಿ : ಹುಬ್ಬಳ್ಳಿ ಉಪನಗರ PS ವ್ಯಾಪ್ತಿಯ ದಾಜೀಬಾನಪೇಟೆಯ ದುರ್ಗಾ ಶಾಲೆ ಆವರಣದಲ್ಲಿ ಪೊಲೀಸ್ ಆಯುಕ್ತರಾದ ಶ್ರೀ N ಶಶಿಕುಮಾರ್ IPS ರವರು Area Familiarisation ಕ್ರಮ ಕೈಗೊಂಡು, ಕಾನೂನು ಸುವ್ಯವಸ್ಥೆ, ಜನರ ಭದ್ರತೆ & ಸುರಕ್ಷತೆ ಕುರಿತು ಸಾರ್ವಜನಿಕರೊಂದಿಗೆ ಸಂವಹನ ನಡೆಸಿ ಚರ್ಚಿಸಿದರು.

Read More »

ಫೈಓವ‌ರ್ ಕಾಮಗಾರಿ ಪುನಃ ಪ್ರಾರಂಭವಾಗಿದೆ: ಲಾಡ್

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ನಡುವೆ ಬಿಆರ್‌ಟಿಎಸ್‌ (ಬಸ್‌ ಕ್ಯಾಪಿಡ್ ಟ್ರಾನ್ಸಿಸ್ಟ್ ಸಿಸ್ಟಂ) ಬದಲು ಎಲ್‌ಆರ್‌ಟಿ (ಲೈಟ್ ರೈಲ್ ಟ್ರಾನ್ಸಿಟ್) ತರುವ ಕುರಿತು ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಇಂದು ಸರ್ಕ್ಯೂಟ್ ಹೌಸ್‌ನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಎಲ್‌ಆರ್‌ಟಿ (ಲೈಟ್ ರೈಲ್ ಟ್ರಾನ್ಸಿಟ್) ಬಗ್ಗೆ ಯೋಜನೆ ರೂಪಿಸಲಾಗುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ಸ್ಪಷ್ಟತೆ …

Read More »