ಕುಂದಗೋಳ : ತಾಲೂಕಿನ ಗುಡಗೇರಿ ಗ್ರಾಮದ ಶ್ರೀ 1008 ಶಾಂತಿನಾಥ ಸ್ವಾಮಿ ಜೈನ್ ಟ್ರಸ್ಟ್ ವತಿಯಿಂದ ನೂತನ ಮಾನಸ್ತಂಭ ಪ್ರತಿಷ್ಠಾಪನೆ ಕಾರ್ಯಕ್ರಮ ನಾಳೆ ನವೆಂಬರ್ 8ರಂದು ಜರುಗಲಿದೆ. ಈ ಕಾರ್ಯಕ್ರಮಕ್ಕೆ ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನ್ ಭಟ್ಟಾರಕ ಸ್ವಾಮೀಜಿ, ಕೊಲ್ಲಾಪೂರದ ಲಕ್ಷ್ಮೀ ಸೇನ್ ಭಟ್ಟಾರಕ ಸ್ವಾಮೀಜಿ ಆಗಮಿಸುತ್ತಿದ್ದು ಈ ಕಾರ್ಯಕ್ರಮಕ್ಕೆ ಸಮಾಜದ ಶ್ರಾವಕ ಶ್ರಾವಕಿಯರು ಪಾಲ್ಗೊಳ್ಳಬೇಕೆಂದು ಸಮಿತಿಯ ಅಧ್ಯಕ್ಷ ದಯಾನಂದ ಕಂದೂರ ಪ್ರಕಟಣೆಗೆ ತಿಳಿಸಿದ್ದಾರೆ.
Read More »ವಿಶೇಷ ಅಲಂಕಾರಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜ ಆತನ ರಾಯಗಡ ಕೋಟೆ
ಕುಂದಗೋಳ : ಛತ್ರಪತಿ ಶಿವಾಜಿ ಮಹಾರಾಜ ಆತನ ರಾಯಗಡ ಕೋಟೆ ಇತಿಹಾಸ ಸಾರುವ ಅದೇ ಮಾದರಿಯ ಕೋಟೆಯೊಂದನ್ನ ಇಲ್ಲೊಂದು ಕುಟುಂಬದ ಪುಟಾಣಿಗಳು ತಯಾರಿ ಮಾಡಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಯುದ್ಧದ ವಿಜಯದ ಸಂಕೇತವಾಗಿ ಕುಂದಗೋಳ ಪಟ್ಟಣದ ಮರಾಠಾ ಸಮಾಜದವರು ದೀಪಾವಳಿ ಹಬ್ಬದಿಂದ ಗೌರಿ ಹುಣ್ಣಿಮೆವರೆಗೆ ಛತ್ರಪತಿ ಶಿವಾಜಿ ಮಹಾರಾಜ ಕೋಟೆಯನ್ನು ಅಲಂಕಾರಿಕ ವಸ್ತುಗಳಿಂದ ನಿರ್ಮಿಸಿ ಪೂಜೆ ಮಾಡುತ್ತಾರೆ. ಅದರಂತೆ ಕುಂದಗೋಳ ಪಟ್ಟಣದ ಕೈರಾಯಿ ಕುಟುಂಬದ ಭರತ್, ಶರತ್, ಮಾರ್ತಾಂಡ ಎಂಬ …
Read More »ಸಂಡೂರಿನಲ್ಲಿ ಸಂತೋಷ ಲಾಡ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯನವರು ಕ್ಷೇತ್ರದಲ್ಲಿ ಅದ್ದೂರಿಯಾಗಿ ಪ್ರಚಾರ
ಸಂಡೂರು: ಬಳ್ಳಾರಿ ಜಿಲ್ಲೆಯ ಸಂಡೂರಿನ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾವು ಜೋರಾಗಿದೆ. ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯನವರು ಕ್ಷೇತ್ರದಲ್ಲಿ ಅದ್ದೂರಿಯಾಗಿ ಪ್ರಚಾರ ನಡೆಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಅವರಿಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಬೊಮ್ಮಘಟ್ಟಿ, ಚೋರನೂರು, ಬಂಡ್ರಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಸಿಎಂ ಸಿದ್ದರಾಮಯ್ಯನವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿಲಾಗಿದೆ. ಕ್ಷೇತ್ರದಲ್ಲಿ ಮಿಂಚಿನಿ ಸಂಚಾರ ಮೂಡಿಸುವ ಮೂಲಕ ಕಾರ್ಮಿಕ ಸಚಿವ ಸಂತೋಷ ಲಾಡ್, ಸಿಎಂ …
Read More »ವಕ್ಸ್ ಬೋರ್ಡ್ ವಿರುದ್ಧವೇ ಮುಸ್ಲಿಂ ಜನರೂ ಹೋರಾಟಕ್ಕೆ ಸಜ್ಜು
ಧಾರವಾಡ: ಮುಸ್ಲಿಂ ಸಮುದಾಯಕ್ಕಾಗಿಯೇ ಇರುವ ವಕ್ಸ್ ಬೋರ್ಡ್ ಉದ್ದೇಶಪೂರ್ವಕವಾಗಿಯೇ ಸಾಮಾನ್ಯ ಜನರ ಆಸ್ತಿ ಕಬಳಿಸುವ ಹುನ್ನಾರ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಇದೇ ವಕ್ಸ್ ಬೋರ್ಡ್ ಇದೀಗ ಮುಸ್ಲಿಂ ಸಮುದಾಯದವರ ಪಹಣಿ ಪತ್ರಿಕೆಯಲ್ಲೂ ಸದರಿ ಆಸ್ತಿ ವಕ್ಸ್ ಆಸ್ತಿಗೆ ಒಳಪಟ್ಟಿದೆ ಎಂದು ನಮೂದು ಮಾಡಿದ್ದು, ತಮ್ಮ ವಕ್ಸ್ ಬೋರ್ಡ್ ವಿರುದ್ಧವೇ ಮುಸ್ಲಿಂ ಜನರೂ ಹೋರಾಟ ನಡೆಸಲು ಮುಂದಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿರುವ ಅಂದಾಜು 1500 ಮುಲ್ಲಾ, ಮುಜಾವರ್, ಮಕಾನದಾರ …
Read More »ಆರ್. ಅಶೋಕ್ ಟ್ವಿಟ್ ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಗರಂ
ಹುಬ್ಬಳ್ಳಿ: ಅನುದಾನ ಬೇಕಾದ್ರೆ ತಲೆ ತಗ್ಗಿಸಬೇಕು ವಿಚಾರ, ನಾನು ಹೇಳಿದ್ದು ತೇಜಸ್ವಿ ಸೂರ್ಯಗೆ, ನಾನು ಎಂಎಲ್ಎ ಆದ್ಮಲೆ ಬೆಂಗಳೂರು ಅಧೋಗತಿ ಆಗಿದೆ ಅಂದ್ರು. ಏನು ಅಗತ್ಯವಿದೆ ಲೆಕ್ಕ ಕೊಡಿ ಅಂತ ಹೇಳಿದೆ ಅದಕ್ಕೆ ಆರ್. ಅಶೋಕ್ ತಲೆ ಕೆಡಿಸಿಕೊಂಡಿದ್ದಾರೆಂದು ಆರ್. ಅಶೋಕ್ ಟ್ವಿಟ್ ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಗರಂ ಆಗಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಮ್ಯಾಚ್ ಫಿಕ್ಸಿಂಗ್ ಅಂತ ಅಶೋಕ ಹೇಳಿದ್ದಾರೆ. ನಮ್ಮ ಸಂಸ್ಥೆ ಸಂವಿಧಾನದ ಒಂದು …
Read More »ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಸೇರಿದಂತೆ ಶಾಸಕರು, ಮುಖಂಡರು ಭಾಗಿ
ಹುಬ್ಬಳ್ಳಿ: ಶಿಗ್ಗಾಂವಿ ಉಪಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಸೇರಿದಂತೆ ಶಾಸಕರು, ಮುಖಂಡರು ಭಾಗಿಯಾಗಿದ್ದರು. ಶಿಗ್ಗಾಂವಿ ಉಪ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲಿರೋ ಡಿ.ಕೆ. ಶಿವಕುಮಾರ್, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ರಸ್ತೆ ಮೂಲಕ ಶಿಗ್ಗಾಂವಿ ಕ್ಷೇತ್ರಕ್ಕೆ ತೆರಳಲಿದ್ದಾರೆ. ಅದಕ್ಕೂ ಮುಂಚೆ ವಿಮಾನ ನಿಲ್ದಾಣದಲ್ಲಿ ಡಿಕೆಶಿ ಅವರನ್ನು ಭೇಟಿಯಾಗಲು ಬೆಳಗಾವಿಯಿಂದ ಸಚಿವೆಲಕ್ಷ್ಮೀ ಹೆಬ್ಬಾಳ್ಳರ್ …
Read More »ವಕ್ಷದಲ್ಲಿ ಸಿಲುಕಿದ ರೈತರ ಅಹವಾಲುಗಳನ್ನು ಸ್ವೀಕಾರ
ಹುಬ್ಬಳ್ಳಿ: ರಾಜ್ಯದಲ್ಲಿ ಅತಿ ದೊಡ್ಡ ಹಾವಳಿ ಎದ್ದ ವಕ್ಸ್ ಬೋರ್ಡ್ ಆಸ್ತಿ ವಿವಾದದ ಹಿನ್ನೆಲೆಯಲ್ಲಿ, ಇಂದು ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಹುಬ್ಬಳ್ಳಿಗೆ ಆಗಮಿಸಿ, ವಕ್ಷದಲ್ಲಿ ಸಿಲುಕಿದ ರೈತರ ಅಹವಾಲುಗಳನ್ನು ಸ್ವೀಕರಿಸಿದರು. ರಾಜ್ಯ ಸರ್ಕಾರ ನೀಡಿದ ನೋಟಿಸ್ನಿಂದ ಕಂಗಾಲಾದ ರೈತರು, ಮತ್ತು ಹಳ್ಳಿ ಮುಖಂಡರು ಆಕ್ರೋಶಕ್ಕೆ ಒಳಗಾಗಿದ್ದರು. ಇದನ್ನರಿತು ಕೇಂದ್ರದಿಂದ ವಕ್ಸ್ ಬೋರ್ಡ್ ಜಾಯಿಂಟ್ ಪಾರ್ಲಿಮೆಂಟ್ ಕಮಿಟಿ ಚೇರ್ಮನ್ ಜಗದಂಬಿಕಾ ಪಾಲ್ ಅವರು ವಕ್ಷ್ಯಲ್ಲಿ ನೋಂದಣಿಯಾದ …
Read More »ರಾಜ್ಯದ ಜನರ ಸಮಸ್ಯೆ ಆಲಿಸಿ ವಿಸ್ತೃತ ವರದಿ ಸಭಾಪತಿಗೆ ಸಲ್ಲಿಸಲಾಗುವುದು: ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್
ಹುಬ್ಬಳ್ಳಿ: ವಕ್ಫ್ ಬೋರ್ಡ್ ಆಸ್ತಿ ಕಬಳಿಸುವ ಆರೋಪ ಕೇಳಿಬಂದ ಹಿನ್ನೆಲೆ ಕರ್ನಾಟಕ ಜನರ ಸಮಸ್ಯೆಗಳ ಆಲಿಸಿ ಇದರ ವಿಸ್ತೃತ ವರದಿಯನ್ನು ಸಭಾಪತಿ ಅವರಿಗೆ ಸಲ್ಲಿಸಲಾಗುವುದು ಎಂದು ಕೇಂದ್ರ ವಕ್ಫ್ ಬೋರ್ಡ್ ಸಂಸದೀಯ ಜಂಟಿ ಸಮಿತಿ (JPC)ಯ ಅಧ್ಯಕ್ಷ ಜಗದಂಬಿಕಾ ಪಾಲ್ ತಿಳಿಸಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ತೇಜಸ್ವಿ ಸೂರ್ಯ ಅವರು ಕರ್ನಾಟಕದ ರೈತರು ಹಾಗೂ ಜನಸಾಮಾನ್ಯರ ಆಸ್ತಿಗಳನ್ನು ಕಬಳಿಕೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಆದ್ದರಿಂದ ಜನರ ಅಹವಾಲು ಸ್ವೀಕರಿಸಲು …
Read More »ದೊಡ್ಡಹಳ್ಳಕ್ಕೆ ಸೇತುವೆ ಲೋಕಾರ್ಪಣೆ ಮಾಡಿದ ಕೋನರಡ್ಡಿ
ಹುಬ್ಬಳ್ಳಿ : ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ಹತ್ತಿರ ಇರುವ ದೊಡ್ಡಹಳ್ಳಕ್ಕೆ ಸೇತುವೆ ಲೋಕಾರ್ಪಣೆಯನ್ನು ನಿನ್ನೆ ಶಾಸಕ ಎನ್. ಎಚ್. ಕೋನರೆಡ್ಡಿ ಅವರು ಮಾಡಿದರು. ನಂತರ ಮಾತಾನಾಡಿದ ಅವರು, ಬ್ಯಾಹಟ್ಟಿ-ಕಿರೆಸೂರ-ಇಂಗಳಹಳ್ಳಿ ರಸ್ತೆಯಲ್ಲಿ ಗ್ರಾಮದ ರೈತರೆಲ್ಲರೂ ತಮ್ಮ ಜಮೀನುಗಳಿಗೆ ಹೋಗಿ ಬರಲು ಮಳೆ ಬಂದಾಗ ಹಳ್ಳ ಕಟ್ಟಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಸೇತುವೆ ನಿರ್ಮಾಣಕ್ಕಾಗಿ ಕಳೆದ 10-15 ವರ್ಷಗಳಿಂದ ಗ್ರಾಮಸ್ಥರು ಅಧಿಕಾರದಲ್ಲಿದ್ದ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದರು ಎಂದರು.
Read More »ಡಾ. ರಮೇಶ್ ಮಹಾದೇವಪ್ಪನವರ ಅವರಿಗೆ ರಾಜ್ಯ ಪ್ರಶಸ್ತಿ ಪ್ರಧಾನ
ಪವರ್ ಆಫ್ ಯುಥ್ ಫೌಂಡೇಶನ್ (ರಿ), ಹುಬ್ಬಳ್ಳಿ ವತಿಯಿಂದ ಕರ್ನಾಟಕದ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ನಾಡ ಹಬ್ಬ ಹಾಗೂ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ. 10 ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರಿಗೆ ರಾಜ್ಯ ಪ್ರಶಸ್ತಿ ನೀಡಿ ಸತ್ಕರಿಸಲಾಗುತ್ತ ಎಂದು ಆಯೋಜಕರು ತಿಳಿಸಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





