Breaking News

ವಕ್ಸ್ ಬೋರ್ಡ್ ವಿರುದ್ಧವೇ ಮುಸ್ಲಿಂ ಜನರೂ ಹೋರಾಟಕ್ಕೆ ಸಜ್ಜು

ಧಾರವಾಡ: ಮುಸ್ಲಿಂ ಸಮುದಾಯಕ್ಕಾಗಿಯೇ ಇರುವ ವಕ್ಸ್ ಬೋರ್ಡ್ ಉದ್ದೇಶಪೂರ್ವಕವಾಗಿಯೇ ಸಾಮಾನ್ಯ ಜನರ ಆಸ್ತಿ ಕಬಳಿಸುವ ಹುನ್ನಾರ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಇದೇ ವಕ್ಸ್ ಬೋರ್ಡ್ ಇದೀಗ ಮುಸ್ಲಿಂ ಸಮುದಾಯದವರ ಪಹಣಿ ಪತ್ರಿಕೆಯಲ್ಲೂ ಸದರಿ ಆಸ್ತಿ ವಕ್ಸ್ ಆಸ್ತಿಗೆ ಒಳಪಟ್ಟಿದೆ ಎಂದು ನಮೂದು ಮಾಡಿದ್ದು, ತಮ್ಮ ವಕ್ಸ್ ಬೋರ್ಡ್ ವಿರುದ್ಧವೇ ಮುಸ್ಲಿಂ ಜನರೂ ಹೋರಾಟ ನಡೆಸಲು ಮುಂದಾಗಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿರುವ ಅಂದಾಜು 1500 ಮುಲ್ಲಾ, ಮುಜಾವ‌ರ್, ಮಕಾನದಾರ ಎಂಬುವವರ ಕುಟುಂಬಸ್ಥರ ಪಹಣಿ ಪತ್ರಿಕೆಯ ಕಲಂ ನಂಬರ್ 9ರಲ್ಲಿ ಸದರಿ ಆಸ್ತಿ ವಕ್ಸ್ ಆಸ್ತಿ ಎಂದು ನಮೂದಾಗಿದ್ದರಿಂದ ಇದೀಗ ಈ ಕುಟುಂಬಸ್ಥರು ವಕ್ಸ್ ಬೋರ್ಡ್ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share News

About Shaikh BigTv

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *