ಧಾರವಾಡ:ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಕ್ಕೆ ಇಂದು ಆಗಮಿಸಿದದ್ದ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮೇಯರ್ ರಾಮಣ್ಣ ಬಡಗೇರ ಅವರು ಸ್ವಾಗತಿಸಿದರು. ಇದೆ ವೇಳೆಯಲ್ಲಿ ಸರಕಾರದಿಂದ ಹುಬ್ಬಳ್ಳಿ ಧಾರವಾಡ ಪಾಲಿಕೆಗೆ ಬರಬೇಕಾದ ಬಾಕಿ ಅನುದಾನ, ಅಭಿವೃದ್ಧಿ ಪರ ಕಡತಗಳು ಸರಕಾರ ಮಟ್ಟದಲ್ಲಿ ಅನುಮೋದನೆಗಾಗಿ ಇದ್ದು, ಅವುಗಳನ್ನು ಪರಿಶೀಲಿಸಿ ಅನುಮೋದನೆ ಮಾಡಿಕೊಡಲು ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.
Read More »ರೆಡ್ಡಿ ಸಹಕಾರ ಬ್ಯಾಂಕಿನ ಶತಮಾನೋತ್ಸವ ಸಮಾರಂಭದಲ್ಲಿ ಸಿಎಂ ಭಾಗಿ
ಧಾರವಾಡ: ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಭಾನುವಾರ ರೆಡ್ಡಿ ಸಹಕಾರ ಬ್ಯಾಂಕಿನ ಶತಮಾನೋತ್ಸವ ಸಮಾರಂಭ ಜರುಗಿತು. ಈ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವರಾದ ರಾಮಲಿಂಗಾ ರೆಡ್ಡಿ, ಆರ್.ಬಿ.ತಿಮ್ಮಾಪುರ, ಎಚ್.ಕೆ.ಪಾಟೀಲ, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಎನ್.ಎಚ್.ಕೋನರಡ್ಡಿ, ಪ್ರಕಾಶ ಕೋಳಿವಾಡ, ಪ್ರಸಾದ್ ಅಬ್ಬಯ್ಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಯಾವತ್ತೂ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ನನಗೆ ಸಹಕಾರಿ ಕ್ಷೇತ್ರದಲ್ಲಿ ಜ್ಞಾನ …
Read More »ಶಿವಕುಮಾರ ಮಹಾಸ್ವಾಮೀಜಿಗೆ ಡಾಕ್ಟರೇಟ್ ಪದವಿ
ಅಣ್ಣಿಗೇರಿ: ಪಟ್ಟಣದ ದಾಸೋಹ ಮಠದ ಶ್ರೀಗಳಾದ ಶಿವಕುಮಾರ ಮಹಾಸ್ವಾಮಿಗಳು ಬೆಂಗಳೂರಿನ ಚಾಮರಾಜಪೇಟೆಯ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದಿಂದ ಶ್ರೀಮದ್ ಭಗವದ್ಗೀತಾ ಕೈವಲ್ಯಪದ್ಧತ್ಯೋಃ ತೌಲನಿಕ ಮಧ್ಯಯನಮ್ ವಿಷಯದ ಕುರಿತು ಪ್ರೌಢ ಪ್ರಭಂದವನ್ನು ಮಂಡಿಸಿ ಡಾಕ್ಟರೇಟ್ ಪದವಿ (ವಿದ್ಯಾವಾರಧಿ)ಯನ್ನು ಪಡೆದಿದ್ದಾರೆ. ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ವೇದಾಂತ ವಿಭಾಗ ಸಹಾಯಕ ಪ್ರಾಧ್ಯಾಪಕರಾದ ಡಾ.ಶರತ್ ಚಂದ್ರ ಸ್ವಾಮಿ ಮಾರ್ಗದರ್ಶನ ನೀಡಿದ್ದಾರೆ ಎಂದು ದಾಸೋಹ ಮಠದ ನಿರಂತರ ಸೇವಾ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
Read More »ಮಹಾತ್ಮಾ ಗಾಂಧಿ ಪ್ರತಿಮೆಯ ಮಾಯವಾದ ಕನ್ನಡಕ
ಕಲಘಟಗಿ : ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಗಾಂಧಿ ಸರ್ಕಲ್ ನಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆ ಇರಿಸಲಾಗಿದೆ. ಆದರೆ, ಕಳೆದ ಎರಡು ತಿಂಗಳಿಂದಲೂ ಈ ಪ್ರತಿಮೆಗೆ ಹಾಕಲಾಗಿದ್ದ ಕನ್ನಡಕ “ಮಾಯ”ವಾಗಿದೆ! ಕನ್ನಡಕ ಇಲ್ಲದೇ ಇಲ್ಲಿಯ ಗ್ರಾಮ ಪಂಚಾಯತ್ ಅಧಿಕಾರಿಗಳು ಗಾಂಧಿ ಜಯಂತಿಯನ್ನು ಆಚರಿಸಿ ಮಹಾತ್ಮರಿಗೆ ಅವಮಾನಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ತಿಳಿದಿದ್ದರೂ ಈ ಬಗ್ಗೆ ಇಲ್ಲಿಯ ಗ್ರಾಮ ಪಂಚಾಯತ್ ಅಧಿಕಾರಿಗಳು ಕಂಡು ಕಾಣದಂತೆ ಕೂತಿದ್ದಾರೆ. …
Read More »ರೈತರಿಗೆ ಸಂಕಷ್ಟ ತಂದ ಮಳೆರಾಯ
ಕಲಘಟಗಿ : ಕಲಘಟಗಿ ತಾಲ್ಲೂಕಿನ ರೈತರು ಹಲವು ವರ್ಷಗಳಿಂದ ತಮ್ಮ ಹೊಲಗಳಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ಕಳೆದ ವರ್ಷ ಮಳೆ ಕಡಿಮೆಯಾಗಿದ್ದರಿಂದ ಕಬ್ಬಿನ ಬೆಳೆ ಇಳುವರಿ ಬಾರದೆ ಇರುವುದರಿಂದ ರೈತ ಸಂಕಷ್ಟ ಎದುರಿಸಿದ್ದಾನೆ. ಈ ವರ್ಷ ಅದೇ ರೀತಿ ನಷ್ಟ ಅನುಭವಿಸಬಾರದು ಎಂದು ಬಹಳಷ್ಟು ರೈತರು ಕಬ್ಬುಗಳನ್ನು ತೆಗೆದು ಗೋವಿನ ಜೋಳ ಬಿತ್ತನೆ ಮಾಡಿದ್ದಾರೆ. ಆದರೆ ರೈತನ ದುರದೃಷ್ಟಕ್ಕೆ ಈ ವರ್ಷ ಹೆಚ್ಚು ಮಳೆ ಆಗಿದ್ದು ಹೊಲಗಳಲ್ಲಿ ನೀರು ನಿಂತು ಗೋವಿನ …
Read More »ಅವಾಚ್ಯ ಪದಗಳಿಂದ ನಿಂದನೆ: ಆತನಿಗೆ ಹಿಗ್ಗಾಮುಗ್ಗಾ ಥಳಿತ
ಹುಬ್ಬಳ್ಳಿ: ಆರ್ಎಸ್ಎಸ್ ಕಾರ್ಯಕರ್ತರು ಪಥಸಂಚಲನ ಮಾಡುತ್ತಿರುವ ವೇಳೆಯಲ್ಲಿ ಸಿಬಿಟಿ ಬಾಕಳೆ ಗಲ್ಲಿಯಲ್ಲಿ ಕಿಡಿಗೇಡಿಯೊಬ್ಬ ಅಡ್ಡ ನಿಂತು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಆಗ ಅಲ್ಲೇ ಇದ್ದ ಸಾರ್ವಜನಿಕರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇಂದು ಆರ್ಎಸ್ಎಸ್ ವತಿಯಿಂದ ಹುಬ್ಬಳ್ಳಿಯ ನೆಹರೂ ಮೈದಾನದಿಂದ ಪಥಸಂಚಲನ ಆರಂಭವಾಗಿದ್ದು, ಸಿಬಿಟಿ ಬಾಕಳೆ ಗಲ್ಲಿಯಲ್ಲಿ ಕಾರ್ಯಕರ್ತರು ಪಥಸಂಚಲನ ಮಾಡುತ್ತಿದ್ದಾಗ ಕಿಡಿಗೇಡಿಯೊಬ್ಬ ಅಡ್ಡ ನಿಂತಿದ್ದಾನೆ. ಆ ಸಂದರ್ಭ ಅಲ್ಲಿದ್ದ ಸಾರ್ವಜನಿಕರು ಸೈಡ್ ಗೆ ಬಾ ಎಂದು ಸೂಚಿಸಿದ್ದಾರೆ. ಆದರೆ, ಸೈಡ್ …
Read More »ಕಪ್ಪು ಬಟ್ಟೆ ತೋರಿಸಲು ಮುಂದಾದಾಗ ಇಬ್ಬರನ್ನು ಪೊಲೀಸರು ವಶಕ್ಕೆ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಮಾಡಿದವರ ವಿರುದ್ಧ ದಾಖಲಾದ ಪ್ರಕರಣವನ್ನು ರಾಜ್ಯ ಸರ್ಕಾರಕ್ಕೆ ಹಿಂದೆ ಪಡೆದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಿಎಂ ಕಾರಿಗೆ ಮುತ್ತಿಗೆಯನ್ನು ಹಾಕಲು ಅಕ್ಷಯ ಪಾರ್ಕ್ನಲ್ಲಿ ಮುಂದಾಗಿದ್ದರು. ಈ ವೇಳೆ ಯಾವುದೇ ರೀತಿಯಾದ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಜೆಪಿ ಶಾಸಕ ಮಹೇಶ ತೆಂಗಿನಕಾಯಿ ಸೇರಿದಂತೆ ಹಲವರನ್ನು ನಾಯಕರನ್ನು ಬಂಧಿಸಿ ಎಚ್ಚರಿಕೆ ವಹಿಸಿದ್ದಾರೆ. ಆದ್ರೂ ಕೂಡಾ ವಿಮಾನ ನಿಲ್ದಾಣದಿಂದ ಧಾರವಾಡಕ್ಕೆ ರಸ್ತೆ ಮಾರ್ಗವಾಗಿ ಹೊರಟಿದ್ದ ಸಿಎಂಗೆ ಅಕ್ಷಯ …
Read More »ಸಿಎಂ , ಡಿಸಿಎಂ ಆಗಮನ : ಕಪ್ಪು ಬಾವುಟ ತೋರಿಸಲು ಮುಂದಾದ ಬಿಜೆಪಿ ಕಾರ್ಯಕರ್ತರು
ಧಾರವಾಡ: ವಿವಿಧ ಕಾರ್ಯಕ್ರಮಗಳ ಸಲುವಾಗಿ ಧಾರವಾಡ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಲು ಮುಂದಾದರು. ಸವದತ್ತಿಯಿಂದ ರಸ್ತೆ ಮಾರ್ಗವಾಗಿ ಸಿಎಂ ಹಾಗೂ ಡಿಸಿಎಂ ಧಾರವಾಡಕ್ಕೆ ಬರುತ್ತಿದ್ದರು. ಅವರು ಬರುವುದಕ್ಕಿಂತ ಮುಂಚೆಯೇ ಕಾನ್ವೆ ಹೋಗುವ ಶಿವಾಜಿ ವೃತ್ತದ ಬಳಿಯೇ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು. ಈ ವೇಳೆ ಕೆಲ ಕಾರ್ಯಕರ್ತರು ಕಪ್ಪು ಬಾವುಟ ಹೊರ ತೆಗೆದು ತೂರಾಡಲಾರಂಭಿಸಿದರು. ಕೂಡಲೇ ಪೊಲೀಸರು ಆ …
Read More »ಸಿದ್ದರಾಮಯ್ಯ ಗೆ ತಿರುಗೇಟು ನೀಡಿದ ಜೋಶಿ
ಹುಬ್ಬಳ್ಳಿ:ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಯೋತ್ಪಾದಕ ಎಂಬ ಹೇಳಿಕೆಯನ್ನು ನೀಡಿದರು. ಈ ಹಿನ್ನೆಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿದ್ದರಾಮಯ್ಯ ಮಾತಿಗೆ ತಿರುಗೇಟನ್ನು ನೀಡಿದ್ದಾರೆ. ಸಿದ್ದರಾಮಯ್ಯ ನಮಗಿಂತ 10 ವರ್ಷಗಳ ಮೊದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದವರು. ಈ ಹಿಂದೆ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗ ನಾವು ಕೂಡಾ ಸಾಕಷ್ಟು ಬಾರಿ ಅವರನ್ನು ಟೀಕೆ ಮಾಡಿದ್ದೇವೆ, ಆದ್ರೆ ಈ ಬಾರಿ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು …
Read More »42 ಪ್ರಕರಣಗಳನ್ನು ವಾಪಾಸ್ ಪಡೆದುಕೊಂಡಿದ್ದೇವೆ :ಮುಖ್ಯಮಂತ್ರಿ ಸಿದ್ದರಾಮಯ್ಯ
ಹುಬ್ಬಳ್ಳಿ: ಬಿಜೆಪಿಯವರು ಕೇವಲ ಸುಳ್ಳು, ನಿರಾಧಾರ ವಿಚಾರಗಳ ಮೇಲೆ ಪ್ರತಿಭಟನೆ ಮಾಡುತ್ತಾರೆ. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಸೇರಿದಂತೆ 42 ಪ್ರಕರಣವನ್ನು ವಾಪಾಸ್ ಪಡೆದ ವಿಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇಂತಹ ಪ್ರಕರಣಗಳಿಗಾಗಿ ಸಂಪುಟ ಖಾತೆಯ ಉಪಸಮಿತಿ ರಚನೆ ಮಾಡಲಾಗಿರುತ್ತದೆ. ಅದು ಸಲ್ಲಿಸಿದ ವರದಿ ಆಧರಿಸಿ ನಾವು 42 ಪ್ರಕರಣಗಳನ್ನು ವಾಪಾಸ್ ಪಡೆದುಕೊಂಡಿದ್ದೇವೆ. ಈ ಎಲ್ಲ ಪ್ರಕರಣಗಳು ನಂತರ ಕೋರ್ಟ್’ಗೆ ಹೋಗುತ್ತದೆ. ಅಲ್ಲಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





