Breaking News

ಸಿಎಂ , ಡಿಸಿಎಂ ಆಗಮನ : ಕಪ್ಪು ಬಾವುಟ ತೋರಿಸಲು ಮುಂದಾದ ಬಿಜೆಪಿ ಕಾರ್ಯಕರ್ತರು

ಧಾರವಾಡ: ವಿವಿಧ ಕಾರ್ಯಕ್ರಮಗಳ ಸಲುವಾಗಿ ಧಾರವಾಡ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಲು ಮುಂದಾದರು.

ಸವದತ್ತಿಯಿಂದ ರಸ್ತೆ ಮಾರ್ಗವಾಗಿ ಸಿಎಂ ಹಾಗೂ ಡಿಸಿಎಂ ಧಾರವಾಡಕ್ಕೆ ಬರುತ್ತಿದ್ದರು. ಅವರು ಬರುವುದಕ್ಕಿಂತ ಮುಂಚೆಯೇ ಕಾನ್ವೆ ಹೋಗುವ ಶಿವಾಜಿ ವೃತ್ತದ ಬಳಿಯೇ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು.

ಈ ವೇಳೆ ಕೆಲ ಕಾರ್ಯಕರ್ತರು ಕಪ್ಪು ಬಾವುಟ ಹೊರ ತೆಗೆದು ತೂರಾಡಲಾರಂಭಿಸಿದರು. ಕೂಡಲೇ ಪೊಲೀಸರು ಆ ಬಾವುಟಗಳನ್ನು ತಮ್ಮ ವಶಕ್ಕೆ ಪಡೆದರು. ನಂತರ ಕಾರ್ಯಕರ್ತರು ಶಿವಾಜಿ ವೃತ್ತದ ಬಳಿಯೇ ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸಲಾರಂಭಿಸಿದರು. ಸಿದ್ದರಾಮಯ್ಯ ಗೋ ಬ್ಯಾಕ್ ಘೋಷಣೆ ಕೂಗಿದರು. ಹುಬ್ಬಳ್ಳಿ ಗಲಭೆ ಪ್ರಕರಣವನ್ನು ವಾಪಸ್‌ ಪಡೆದಿದ್ದಕ್ಕೆ ಹಾಗೂ ಅತ್ಯಾಚಾರ ಆರೋಪ ಎದುರಿಸುತ್ತಿರುವ ಶಾಸಕ ವಿನಯ್ ಕುಲಕರ್ಣಿ ಯನ್ನು ಬಂಧನ ಮಾಡದೇ ಇರುವುದನ್ನು ವಿರೋಧಿಸಿ ಧಿಕ್ಕಾರ ಕೂಗಿದರು.

Share News

About Shaikh BigTv

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *