ಧಾರವಾಡ: ಇತ್ತೀಚೆಗೆ ಮೊಬೈಲ್ ಸಿಕ್ಕರೆ ಸಾಕು ಅದರಲ್ಲಿನ ಸಿಮ್ ತೆಗೆದೊಗೆದು ತಾವೇ ಬಳಸಿಕೊಳ್ಳುವವರ ಮಧ್ಯೆ ಇಲ್ಲೊಬ್ಬ ಆಟೋ ಚಾಲಕ ತನಗೆ ಸಿಕ್ಕ ಸ್ಮಾರ್ಟ್ ಫೋನ್ನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಧಾರವಾಡದ ಆಟೋ ಚಾಲಕ ಪ್ರಕಾಶ ಎಂಬುವವರಿಗೆ ಆಟೋ ನಿಲ್ದಾಣದ ಬಳಿ ಸ್ಮಾರ್ಟ್ ಫೋನ್ ಸಿಕ್ಕಿತ್ತು. ಕೂಡಲೇ ಅದನ್ನು ಅವರು ಧಾರವಾಡದ ಉಪನಗರ ಠಾಣೆಗೆ ತಂದು ಪೊಲೀಸರಿಗೆ ಒಪ್ಪಿಸಿ, ಫೋನ್ ಮಾಲೀಕರಿಗೆ ಅದನ್ನು ಮರಳಿಸುವಂತೆ ಮನವಿ …
Read More »ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್
ಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ)ದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು. ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳ ಸಮಾಜದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ …
Read More »ರಾಜ್ಯಹೆದ್ದಾರಿ ಸೇತುವೆ ಜಲಾವೃತ : ಸಂಚಾರ ಸ್ಥಗಿತ
ಕಲಘಟಗಿ: ತಾಲ್ಲೂಕಿನ ಮುತ್ತಗಿ ಗ್ರಾಮದ ಹತ್ತಿರದ ರಾಜ್ಯ ಹೆದ್ದಾರಿ ಸೇತುವೆ ಜಲಾವೃತ ಗೊಂಡಿದ್ದರಿಂದ ರಸ್ತೆ ಬಂದಾಗಿ ಜನರು ಹಾಗೂ ವಾಹನ ಸವಾರರರು ಭಯದಲ್ಲಿ ಸಂಚರಿಸುತ್ತಿದ್ದಾರೆ. ಈ ರಸ್ತೆ ಧಾರವಾಡ- ಕಲಘಟಗಿ, ಹುಬ್ಬಳ್ಳಿಗೆ ಕೂಡಾ ಸಂಚರಿಸುವ ಒಳ ರಸ್ತೆ ಇದಾಗಿದ್ದು ಪ್ರತಿ ವರ್ಷ ಮಳೆಗೆ ಜಲಾವೃತಗೊಂಡು ಜನರಿಗೆ ಸಮಸ್ಯೆಯಾಗುತ್ತಿದೆ.ಈ ಸೇತುವೆ ಕೆಳಮಟ್ಟದಲ್ಲಿ ಇರುವದರಿಂದ ಪ್ರತಿ ವರ್ಷ ಇದೆ ಪರಿಸ್ಥಿತಿಯಾಗುತ್ತದೆ. ಅದರಿಂದ ಮೆಲಮಟ್ಟದ ಸೇತುವೆ ನಿರ್ಮಾಣವಾಗಬೇಕು ಎಂಬುದು ಈ ಭಾಗದ ಜನರ ಹಲವು …
Read More »ಮೈಸೂರು ವಿಶ್ವವಿದ್ಯಾನಿಲಯದ ಪ್ರದವಿ ಪರೀಕ್ಷೆಗಳನ್ನು ಮುಂದೂಡುವಂತೆ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು:ಮೈಸೂರು ವಿಶ್ವವಿದ್ಯಾನಿಲಯ ಪದವಿ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ. ಸರಿಯಾಗಿ ಪಾಠ ಪ್ರವಚನ ನಡೆಯದ ಕಾರಣ ಪದವಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಎಐಡಿಎಸ್ಒ ಸಂಘಟನೆ, ಮೈಸೂರಿನ ಕ್ರಾಫರ್ಡ್ ಹಾಲ್ ಬಳಿ ಪ್ರತಿಭಟನೆ ನಡೆಸಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದಿರುವ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಶೈಲಜಾ ಪದವಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಆದೇಶಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳಿಗೆ …
Read More »ಉಯ್ಯಾಲೆಯಲ್ಲಿ ಅಡುವಾಗ ಬಿದ್ದು ಮಗು ಸಾವು.
ಬೆಳ್ತಂಗಡಿ (ದಕ್ಷಿಣ ಕನ್ನಡ) : ಉಯ್ಯಾಲೆಯಲ್ಲಿ ಆಟವಾಡುವ ವೇಳೆ ಆಕಸ್ಮಿಕವಾಗಿ ಕುತ್ತಿಗೆಗೆ ಸಿಲುಕಿ ಬಿದ್ದ ಪರಿಣಾಮ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ದಿಡುಪೆ ಬಳಿ ಭಾನುವಾರ ಸಂಜೆ ನಡೆದಿದೆ. ಮಲವಂತಿಗೆ ಗ್ರಾಮದ ಮಂಟಮೆ ನಿವಾಸಿ ಬಾಲಕೃಷ್ಣ ಎಂಬವರ ಮಗ 8ನೇ ತರಗತಿ ವಿದ್ಯಾರ್ಥಿ ಶ್ರೀಷಾ (14) ಮೃತ ಬಾಲಕ. ಮನೆಯ ಅಂಗಳದಲ್ಲಿ ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಸಿಲುಕಿ ನೆಲಕ್ಕೆ ಶ್ರೀಷಾ ಬಿದ್ದಿದ್ದು, ಇದನ್ನು ಆತನ ತಂಗಿ ನೋಡಿ …
Read More »ಪತ್ನಿ ಎದುರೇ ಪತಿಯ ಮೇಲೆ ಹಲ್ಲೆ: ದುಸ್ಕರ್ಮಿಗಳ ಹೀನಾಯ ಕೃತ್ಯ.
ಬೆಳಗಾವಿ: ಪತ್ನಿಯ ಕಣ್ಣೆದುರೇ ಪತಿಯ ಮೇಲೆ ಮಚ್ಚು, ಲಾಂಗುಗಳಿಂದ ಮನಬಂದಂತೆ ಹಲ್ಲೆ ಮಾಡಿ ಕೊಲೆಗೈದ ದುಷ್ಕರ್ಮಿಗಳು ಬಳಿಕ ಸ್ಥಳದಿಂದ ಪರಾರಿಯಾದ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಟ್ಟಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಶಂಕರ್ ಸಿದ್ದಪ್ಪ ಜಗಮುತ್ತಿ (25) ಕೊಲೆಯಾದ ವ್ಯಕ್ತಿ. ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ವಡೇರಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಪತ್ನಿ ಪ್ರಿಯಾಂಕ ಜೊತೆಗೆ ಆಗಮಿಸಿದ್ದ ಸಂದರ್ಭದಲ್ಲಿ ದಾಳಿ ಮಾಡಿ ಹತ್ಯೆ ಮಾಡಲಾಗಿದೆ. ಕಳೆದ ಮುರು ತಿಂಗಳ ಹಿಂದಷ್ಟೇ …
Read More »26 ಪ್ರತಿಪಕ್ಷ ನಾಯಕರ ಭೇಟಿ: ಕೆ .ಸಿ .ವೇಣುಗೋಪಾಲ್
ಮಹಾ ನಗರದಲ್ಲಿ 26 ಪ್ರತಿಪಕ್ಷ ನಾಯಕರು ಸೇರುತ್ತಿದ್ದೇವೆ. 2ನೇ ಸಭೆ ಇದಾಗಿದೆ ಎಂದು ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದರು. ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು “ನಾವು ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತೇವೆ. ಇದೊಂದು ಗೇಮ್ ಚೇಂಜರ್ ಸಭೆಯಾಗಲಿದೆ. ಇಲ್ಲಿ ಅಸೆಂಬ್ಲಿ ಸಮಾವೇಶ ನಡೆಯುತ್ತಿದೆ. ರಾಷ್ಟ್ರೀಯ ಪ್ರತಿಪಕ್ಷ ನಾಯಕರೆಲ್ಲ ಭಾಗವಹಿಸುತ್ತಿದ್ದು, ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದೇವೆ” ಎಂದು ತಿಳಿಸಿದರು.ಪಕ್ಷಗಳು ಒಂದೇ ಸಾಮಾನ್ಯ …
Read More »ಅಂಚೆ ಕಚೇರಿ ಬಳಿ ವ್ಯಕ್ತಿಯೋರ್ವನ ಶವ ಪತ್ತೆ.
ಧಾರವಾಡ : ಇಲ್ಲಿನ ರೇಲ್ವೆ ನಿಲ್ದಾಣ ರಸ್ತೆಯಲ್ಲಿನ ಪ್ರಧಾನ ಅಂಚೆ ಕಚೇರಿ ಬಳಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ದಾವಣಗೆರೆ ಮೂಲದ ದುರ್ಗೆಶ ಹನಮಂತಪ್ಪ ಮಂಗೋಡಿ (40) ಎಂಬುವನ ಶವ ಎಂದು ಗೊತ್ತಾಗಿದೆ. ನಗರದಲ್ಲಿ ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಈತನ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ.ಶವದ ಮೇಲೆ ಕೆಲವು ರಕ್ತದ ಕಲೆಗಳು ಕಂಡು ಬಂದಿವೆ. ಸ್ಥಳಕ್ಕೆ ವಿದ್ಯಾಗಿರಿ ಠಾಣೆಯ ಸಿಪಿಐ ಸಂಗಮೇಶ ದಿಡಿಗಿನಾಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು …
Read More »ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು
ಧಾರವಾಡ: ಕಳೆದ 6 ತಿಂಗಳಿನಿಂದ ಕರ್ನಾಟಕ ರಾಜ್ಯ ಸ ಅಭಿವೃದ್ಧಿ ಸಂಘ ಸ್ಥಾಪನೆಯಾಗಿದೆ.ಈ ಸಂಘದಲ್ಲಿ ನಿವೃತ್ತಿಯಾದ ನೌಕರರು ಒಗ್ಗೂಡಿಸಿ ಈ ಸಂಘ ಪ್ರಾರಂಭಿಸಿದಿರಿ, ಸಂಘಕ್ಕೆ ಶುಭ ಹಾರೈಸುತ್ತೇನೆಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸ ಅಭಿವೃದ್ಧಿ ಸಂಘ ವತಿಯಿಂದ ಸಾಂಸ್ಕೃತಿಕ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲರು ನಿವೃತ್ತಯಾದ ಮೇಲೂ …
Read More »ಗಾಣಿಗ ಸಮಾಜ ಸಮುದಾಯವು ನಾಡಿಗೆ ಬೆಳಕನ್ನು ನೀಡಿದ ಸಮಾಜ.ಭೂಕನಕೆರೆ ಸ್ವಾಮಿ.
ಧಾರವಾಡ ಗಾಣಿಗ ಸಮಾಜ ಸಮುದಾಯವು ಈ ನಾಡಿಗೆ ಈ ಜಗತ್ತಿಗೆ ಬೆಳಕನ್ನು ನೀಡಿದ ಸಮಾಜ,ನಮ್ಮ ಸಮಾಜವು ಶೈಕ್ಷಣಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ, ಹಾಗೂ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಕ್ಕನ್ನು ಪಡೆಯಲು ಸುವರ್ಣ ಕರ್ನಾಟಕ ಗಾಣಿಗರ ಮಹಾಸಭಾ ಹೊಸ ಪರಿಕಲ್ಪನೆಯ ಸಂಘಟನೆಯನ್ನು ಬೆಂಗಳೂರಿನಲ್ಲಿ ಹುಟ್ಟು ಹಾಕಲಾಗಿದೆ, ಈ ಸಂಘಟನೆಯ ಜೊತೆಗೆ ಕೈಜೋಡಿಸಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪುವಂತೆ ಸಂಘಟನೆಯ ಮೂಲಕ ಹೋರಾಡಲು ಮುಂದಾಗಿ ಮಂಡ್ಯ ಜಿಲ್ಲೆಯ ಭೂಕನಕೆರೆಯ ಸ್ವಾಮಿ ಧಾರವಾಡದಲ್ಲಿ ಜರುಗಿದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





