BigTv News
July 19, 2022
Uncategorized
ಬೆಂಗಳೂರು: ಗಾಲಿ ಕುರ್ಚಿಯಲ್ಲಿ ಬಂದು ಹಕ್ಕು ಚಲಾಯಿಸಿದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮತಗಟ್ಟೆ ಬಳಿ ಮುಖಾಮುಖಿಯಾದ ಸಿದ್ದರಾಮಯ್ಯ- ಶ್ರೀನಿವಾಸ ಪ್ರಸಾದ್, ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಕೊರಳಿಗೆ ಕೇಸರಿ ಶಾಲು ಇವು ನೂತನ ರಾಷ್ಟ್ರಪತಿ ಆಯ್ಕೆಗಾಗಿ ವಿಧಾನಸೌಧದಲ್ಲಿ ನಡೆದ ಮತದಾನದ ವೇಳೆ ಕಂಡ ವಿಶೇಷಗಳು. ಬಿಜೆಪಿಯ ಬಹುತೇಕ ಶಾಸಕರು ಕೇಸರಿ ಶಾಲು ಧರಿಸಿಕೊಂಡು ಬಂದು ಮತದಾನ ಮಾಡಿದರು. ರಾಜ್ಯದ 224 ಚುನಾಯಿತ ಶಾಸಕರು ವಿಧಾನಸೌಧದ ಮೊದಲ ಮಹಡಿಯಲ್ಲಿನ ಮತಗಟ್ಟೆಗೆ …
Read More »
BigTv News
July 19, 2022
Uncategorized
ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ನೆರೆ, ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ನೆರೆ ಸಂತ್ರಸ್ತರಿಗೆ ನೆರವಾಗುವ ಕಾರ್ಯಕ್ಕೂ ಸರ್ಕಾರ ಸೂಚನೆ ನೀಡಿದೆ. ಈ ಬೆನ್ನಲ್ಲೇ ಜುಲೈ.22ರಂದು ರಾಜ್ಯಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. ದಿನಾಂಕ 22-07-2022ರಂದು ಬೆಳಿಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರಲ್ಲಿ ನಿಗದಿಪಡಿಸಲಾಗಿದೆ. ಈ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ನೆರೆ ಸಂತ್ರಸ್ತರಿಗೆ ವಿವಿಧ ನೆರವು ಕಾರ್ಯಗಳ ಬಗ್ಗೆ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ.
Read More »
BigTv News
July 19, 2022
Uncategorized
ಬೆಳಗಾವಿ: ಮನೆಹಾನಿ, ಬೆಳೆ ಸಮೀಕ್ಷೆ ನಡೆಸಿ ತಕ್ಷಣ ಪರಿಹಾರ ನೀಡಲು ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ. ಅತಿವೃಷ್ಟಿ ಹಾಗೂ ಪ್ರವಾಹ ಮುಂಜಾಗ್ರತೆ ಕುರಿತು ಚಿಕ್ಕೋಡಿಯಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಳೆಯಿಂದ 877 ಹೆಕ್ಟೇರ್ ಪ್ರದೇಶ ಜಲಾವೃತಹೊಂಡಿರುವುದರಿಂದ ನೀರು ಸರಿದ ಬಳಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಹಾನಿಗೊಳಗಾಗಿರುವ 775 ಮನೆಗಳಿಗೂ ಕೂಡ ಮಾರ್ಗಸೂಚಿ ಪ್ರಕಾರ ತಕ್ಷಣವೇ ಪರಿಹಾರವನ್ನು ನೀಡಬೇಕು ಎಂದು ಹೇಳಿದರು.
Read More »
BigTv News
July 19, 2022
Uncategorized
ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ, 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಕಮೀಷನರ್ ಆಗಿದ್ದಂತ ಐಎಎಸ್ ಅಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ ಅವರನ್ನು ಹಿಂದುಳಿದ ವರ್ಗಾಗಗಳ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಿದೆ.
Read More »
BigTv News
July 19, 2022
Uncategorized
ಬೆಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು, ಪಿಯು ಕಾಲೇಜುಗಳು ಹಾಗೂ ಮದರಸಾಗಳಲ್ಲೂ ಆಗಸ್ಟ್ 11 ರಿಂದ 17 ರವರೆಗೆ ರಾಷ್ಟ್ರಧ್ವಜಾರೋಹಣ ಮಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭಾರತ ಸ್ವಾತಂತ್ರ್ಯದ ಅಮೃ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಹಾಊ ಮದರಸಾಗಳಲ್ಲಿ …
Read More »
BigTv News
July 18, 2022
Uncategorized
ಧಾರವಾಡ : ಯುವಕನಿಗೆ ಕುತ್ತಿಗೆಗೆ ಚಾಕು ಇರಿತವಾದ ಘಟನೆ ನಗರದ ಹೊರವಲಯದ ಗ್ರಾಮೀಣ ಠಾಣಾ ವ್ಯಾಪ್ತಿಯಲ ನುಗ್ಗಿಕೇರಿ ಗುಡ್ಡದ ಬಳಿ ನಡೆದಿದೆ. ಹಾವೇರಿ ಮೂಲದ ನವೀನ್ ದೊಡಮನಿ (೩೦) ಎಂಬುವವನೇ ಚಾಕು ಇರಿತಕ್ಕೆ ಒಳಗಾದವರು. ಯುವಕ ಗುಡ್ಡದಿಂದ ಕೆಳಗೆ ಬಂದು ಪ್ರಾಣ ಉಳಿಸುವಂತೆ ಗೋಗರೆದಿದ್ದಾರೆ. ಯುವಕನ ಸ್ಥಿತಿ ಕಂಡು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ಯುವಕನನ್ನ ಧಾರವಾಡದ ಸಿವಿಲ್ ಅಸ್ಪತೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ …
Read More »
BigTv News
July 18, 2022
Uncategorized
ಧಾರವಾಡ: ನಗರದ ಸಿಬಿಟಿ ಹತ್ತಿರ ಇರುವ ಆಕಳವಾಡಿ ಜನರಲ್ ಸ್ಟೋರ್‌ಗೆ ಬೆಂಕಿ ತಗುಲಿದ ಘಟನೆ ಇಂದು ಬೆಳಗಿನಜಾವ ಸಂಭವಿಸಿದೆ . ಅಂಗಡಿಯಲ್ಲಿ ಶಾರ್ಟ್ ಸರ್ಕೀಟ್ ಉಂಟಾಗಿದ್ದರಿಂದ ಇಡೀ ಅಂಗಡಿಯೇ ಹೊತ್ತಿ ಉರಿದಿದೆ . ಇದರಿಂದ ಸುಮಾರು 20 ಲಕ್ಷ ಮೌಲ್ಯದ ಸಾಮಾನುಗಳು ಸುಟ್ಟು ಕರಕಲಾಗಿವೆ . ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಭೇಟಿ ನೀಡಿ ಬೆಂಕಿ ನಂದಿಸುವ ಕೆಲಸ ಮಾಡಿದರು . ಶಹರ ಠಾಣೆ ಪೊಲೀಸರು ಸಹ …
Read More »
BigTv News
July 18, 2022
Uncategorized
ಹುಬ್ಬಳ್ಳಿ ಅದು ನಿಜಕ್ಕೂ ಸಾಕಷ್ಟು ಸಮಸ್ಯೆಗಳನ್ನು ಹೊತ್ತು ಕುಂಟುತ್ತಾ ಸಾಗುತ್ತಿರುವ ಗ್ರಾಮ. ಈ ಗ್ರಾಮದ ಜನರ ಸಮಸ್ಯೆ ನೋಡಿದರೇ ಎಂತವರಿಗೂ ಅಯ್ಯೋ ಪಾಪ ಅನಿಸುವುದು ಖಂಡಿತ. ಹೀಗೆ ಎಲ್ಲೆಂದರಲ್ಲಿ ಕೆಸರು ಗದ್ದೆಯಾಗಿರುವ ರಸ್ತೆಗಳು. ನಡೆದಾಡಲು ಹರಸಾಹಸ ಮಾಡುತ್ತಿರುವ ಗ್ರಾಮಸ್ಥರು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮ. ಈ ಗ್ರಾಮದ ಜನರ ಸಂಕಷ್ಟವನ್ನ ಕೇಳುವವರು ಯಾರು..? ಜವಾಬ್ದಾರಿ ವಹಿಸಬೇಕಿದ್ದ ಜನಪ್ರತಿನಿಧಿಗಳು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿರುವುದು ನಿಜಕ್ಕೂ ಬೇಸರದ …
Read More »
BigTv News
July 18, 2022
Uncategorized
ಕಲಘಟಗಿ : ಕಲಘಟಗಿ ತಾಲೂಕಿನ ನೀರಸಾಗರದ ಜಲಾಶಯದ ಬಳಿ ಸೆಲ್ಸಿ ತೆಗೆದುಕೊಳ್ಳಲು ಹೋಗಿ ಯುವಕ ನೀರುಪಾಲಾಗಿರುವ ಘಟನೆ ನಿನ್ನೆ ( ಭಾನುವಾರ ) ನಡೆದಿದೆ . ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ನಿವಾಸಿ ಕಿರಣ ರಜಪೂತ ( 22 ) ನೀರು ಪಾಲಾದ ಯುವಕ . ಇಂದು ಗೆಳೆಯರ ಜೊತೆಗೆ ಪ್ರವಾಸಕ್ಕೆಂದು ಹೋಗಿದ್ದಾಗ ಈ ವೇಳೆ ಸೆಲ್ಸಿಗಾಗಿ ಜಲಾಶಯದ ದಡದಲ್ಲಿ ನಿಂತಿದ್ದನು . ಏಕಾಏಕಿ ನೀರಿನ ರಭಸಕ್ಕೆ ಯುವಕ ಕೊಚ್ಚಿ …
Read More »
BigTv News
July 18, 2022
Uncategorized
ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಮಸೀದಿ ಬಳಿ , ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ನಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗೆ ಅಕ್ರಮವಾಗಿ ಅನಿಲ ವರ್ಗಾವಣೆ ಮಾಡುತ್ತಿದ್ದ ಅಡ್ಡೆ ಮೇಲೆ ಕಸಬಾಪೇಟೆ ಪೊಲೀಸರು ದಾಳಿ ಮಾಡಿ ಓರ್ವನನ್ನು ಬಂಧಿಸಿದ್ದಾರೆ . ಮೊಹಮ್ಮದ್ ಮದರಂಗಿ ಬಂಧಿತ ಆರೋಪಿ . ಈತನಿಂದ ಅಂದಾಜು 1,32,400 ರೂ . ಮೌಲ್ಯದ ಅನಿಲ ತುಂಬಿದ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ತಲಾ 6 ಸಿಲಿಂಡರ್ ಹಾಗೂ ಗೃಹ …
Read More »