Breaking News

Uncategorized

ಕಿಚ್ಚನ ವಿರುದ್ಧ ಅವಹೇಳನಕಾರಿ ಪದ ಬಳಕೆ : ಸೈಬರ್ ಕ್ರೈಂ ಆಯಕ್ತರಿಗೆ ಫಿಲ್ಮ್ ಚೇಂಬರ್ ದೂರು

ಬೆಂಗಳೂರು: ನಟ ಕಿಚ್ಚ ಸುದೀಪ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಆಯಕ್ತರಿಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಬಾ.ಮಾ ಹರೀಶ್ ದೂರು ನೀಡಿದ್ದಾರೆ. ಆಹೋರಾತ್ರಿ ಮತ್ತು ಚರಣ್ ಎಂಬುವರ ವಿರುದ್ದ ದೂರು ನೀಡಿದ್ದಾರೆ. ಆಹೋರಾತ್ರ ಮತ್ತು ಚರಣ್ ಇಬ್ಬರು ಸೋಷಿಯಲ್ ಮೀಡಿಯಾದ ಮೂಲಕ ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಆನ್‌ ಲೈನ್‌ ಗೇಮ್ ಗಳ ಪ್ರಚಾರದ ವಿಚಾರವಾಗಿ ಅವಹೇಳನಕಾರಿ ಹೇಳಿಕೆ ನೀಡಿದಿದ್ದರು. ಸುದೀಪ್ ಭಾರತೀಯ ಚಿತ್ರರಂಗದಲ್ಲಿ …

Read More »

ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಉರುಸು :ಯತ್ನಾಳ್

ವಿಜಯಪುರ : ಸಿದ್ದರಾಮೋತ್ಸವ  ವಿಚಾರಕ್ಕೆ ಬಿಜೆಪಿ ನಾಯಕರು ವ್ಯಂಗ್ಯ ಮಾಡುತ್ತಲೇ ಇದ್ದಾರೆ. ದಿನ ಒಬ್ಬ ಒಬ್ಬ ನಾಯಕರು ಸಿದ್ದರಾಮೋತ್ಸವದ ಬಗ್ಗೆ ಕಿಡಿಕಾರುತ್ತಿದ್ದಾರೆ. ಕಾಂಗ್ರೆಸ್​ನವರು  ಮಾಡುತ್ತಿರುವುದು ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಉರುಸು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವ್ಯಂಗ್ಯ ಮಾಡಿದ್ದಾರೆ. ವಿಜಯಪುರದಲ್ಲಿ ಮಾತಾಡಿದ ಬಸನಗೌಡ ಪಾಟೀಲ ಯತ್ನಾಳ್, ಸಿದ್ದರಾಮಯ್ಯ ಕುಂಕುಮ ಹಚ್ಚಿಕೊಳ್ಳಲಿ, ಪೇಟ ಧರಿಸಲಿ ಹಿಂದೂ ಧರ್ಮದಲ್ಲಿ ಹುಟ್ಟಿದ್ದಾರೆ ಅನ್ನೋ ಕಬರ್ (ಎಚ್ಚರಿಕೆ) ಇರ್ಲಿ ಎಂದ ಯತ್ನಾಳ್ ಹೇಳಿದ್ದಾರೆ. …

Read More »

ಚಾಮುಂಡಿ ದೇವಿಯ ದರ್ಶನ ಪಡೆಯುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಮೈಸೂರು: ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ತೆರಳುವ ಭಕ್ತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದ್ದು, ಬಸ್ ಗಳಲ್ಲಿ ಬೆಟ್ಟಕ್ಕೆ ಹೋಗಿ ಬರಲು ಅವಕಾಶ ಕಲ್ಪಿಸಲಾಗಿದೆ. ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಬೆಟ್ಟಕ್ಕೆ ತೆರಳುವ ವಾಹನಗಳಿಗೆ ನೀಡಲಾಗಿದ್ದ ಪಾಸ್ ರದ್ದುಪಡಿಸಲಾಗಿದೆ. ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ಭಕ್ತರು ಬೆಟ್ಟಕ್ಕೆ ತೆರಳಲು ಉಚಿತ ಬಸ್ …

Read More »

ರಾಜ್ಯದಲ್ಲಿ ಮುಂದುವರೆದ ವರುಣ ಆರ್ಭಟ

ಬೆಂಗಳೂರು : ರಾಜ್ಯದ ಬಹುತೇಕ ಕಡೆ ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಕಳೆದ 10 ದಿನಗಳಿಂದ ಕರಾವಳಿ ಭಾಗದಲ್ಲಿ ವರುಣ ಆರ್ಭಟಿಸುತ್ತಿರುವ ಕಾರಣ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಉಡುಪಿಯಲ್ಲಿ ಪಾಪನಾಶಿನಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಠದ ಕುದ್ರು, ವಿಭುದೇಶ ತೀರ್ಥ ನಗರಕ್ಕೆ ನೀರುನುಗ್ಗಿದೆ. ಮಳೆ ನೀರಲ್ಲಿ ನಾಯಿಗಳು ಪರದಾಡಿವೆ. ಜನ ದೋಣಿ ಅವಲಂಬಿಸಿದ್ದಾರೆ. ಬೆಳ್ಳಾಲ, ನಂದ್ರೊಳ್ಳಿ ಕ್ಷೇತ್ರಪಾಲದಲ್ಲಿ ಮನೆ, ಉಪ್ಪುಂದದಲ್ಲಿ ಶಾಲಾ ಮೇಲ್ಛಾವಣಿ ಕುಸಿದಿವೆ. ದಕ್ಷಿಣ ಕನ್ನಡದ ಮೊಗೆರ್ ಕುದ್ರುನಲ್ಲಿ …

Read More »

ಬಿಜೆಪಿ ವಿರುದ್ಧ ಆರೋಪ ಮಾಡಿದ ಕುಮಾರಸ್ವಾಮಿ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್‌ ಡಿ ಕುಮಾರಸ್ವಾಮಿ ಅವರು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದು, ʻಬಿಜೆಪಿ ಶ್ರೀಮಂತರ ಪರವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆʼ ಎಂದು ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ. ನಾನು ಯಾವುದೇ ಪರಭಕ್ಷಕ ಸಂಸ್ಥೆಗಳನ್ನು ನಡೆಸುತ್ತಿಲ್ಲ. ಈ ಪಕ್ಷಗಳು ನಿಮಗಾಗಿ ಮತ್ತೊಂದು ಶ್ರೀಲಂಕಾವನ್ನು ಸೃಷ್ಟಿಸುತ್ತವೆ. …

Read More »

ಕೊಡುಗುನಲ್ಲಿ ಶಾಲೆಗಳಿಗೆ ರಜೆ

ಕೊಡುಗು :  ಜಿಲ್ಲೆಯಾದ್ಯಂತ ಮುಂದುವರೆದ ಭಾರಿ ಗಾಳಿ, ಮಳೆ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿ ಸೇರಿದಂತೆ 1ರಿಂದ 10ನೇ ತರಗತಿಗಳಿಗೆ ಇಂದು ಒಂದು ದಿನ ಶಾಲೆಗಳಿಗೆ ರಜೆ ಘೋಷಿಸುವಂತೆ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್ ಆದೇಶ ಹೊರಡಿಸಿದ್ದಾರೆ. ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೋಮಾ ತರಗತಿಗಳು ಎಂದಿನಂತೆ ನಡೆಯಲಿದ್ದು, ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಮುಂದುವರೆದಿದೆ.

Read More »

ಶಿವಮೊಗ್ಗ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಣೆ

ಶಿವಮೊಗ್ಗ :  ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಇಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ದಿನಾಂಕ 12-07-2022 ರಂದು ಶಾಲೆಗೆ ರಜೆ ಘೋಷಿಸಲಾಗಿದೆ.

Read More »

ಗೋವಾ ಕಾಂಗ್ರೆಸ್‌ನ 12 ಶಾಸಕರು ಹೊರಬರಲು ತಯಾರಾಗಿದ್ದಾರೆ

ಕೋಲಾರ: ಗೋವಾ ಕಾಂಗ್ರೆಸ್‌ನ 12 ಶಾಸಕರು ಗಂಟು‌ಮೂಟೆ ಕಟ್ಟಿಕೊಂಡು ಹೊರಬರಲು ತಯಾರಾಗಿದ್ದಾರೆ. ಕರ್ನಾಟಕದಲ್ಲೂ ಹಲವರು ಸಂಪರ್ಕದಲ್ಲಿದ್ದು, ಟೆಂಟ್‌ ಸಮೇತ ಕಿತ್ತುಕೊಂಡು ಬರಲಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಕ್ಷೇತ್ರದ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಅವರ ಬೆಂಬಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ‌ದ ಅವರು, ‌ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಗೂಟ ಇಟ್ಟುಕೊಂಡು ಬಡಿದಾಡಬೇಕು ಅಷ್ಟೆ ಎಂದು ಹೇಳಿದರು.’ರಾಜ್ಯದಲ್ಲೂ ರಾಜಕೀಯ ಧ್ರುವೀಕರಣ ನಡೆಯಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು …

Read More »

ನಿಗಮ ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷರ ರಾಜೀನಾಮೆಗೆ ಸಿಎಂ ಮೌಖಿಕ ಸೂಚನೆ

ಬೆಂಗಳೂರು: ನಿಗಮ- ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷರ ರಾಜೀನಾಮೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಮೌಖಿಕ ಸೂಚನೆ ನೀಡಿರುವುದು ಬಿ.ಎಸ್.ಯಡಿಯೂರಪ್ಪ ಬಣದ ಕಣ್ಣು ಕೆಂಪಾಗಿಸಿದೆ. ಯಡಿಯೂರಪ್ಪ ವಿದೇಶ ಪ್ರವಾಸ ತೆರಳಿದ್ದ ವೇಳೆ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಆಪ್ತ ಸಚಿವರ ಜತೆ ಸೇರಿ ನಿಗಮ – ಮಂಡಳಿಗೆ ಹೊಸ ಅಧ್ಯಕ್ಷ ಉಪಾಧ್ಯಕ್ಷರ ಹೊಸ ಪಟ್ಟಿ ತಯಾರಿಸಿದ್ದರು. ಯಡಿಯೂರಪ್ಪ ಆಗಮನದವರೆಗೂ ಕಾಯ್ದ ಸಿಎಂ ಬೊಮ್ಮಾಯಿ ಈಗ ಪಟ್ಟಿ ಬಿಡುಗಡೆಗೆ ಸಿದ್ದರಾಗಿದ್ದಾರೆ. ನಿರ್ಗಮನಗೊಳ್ಳುವವರ ಪಟ್ಟಿಯಲ್ಲಿ ಯಡಿಯೂರಪ್ಪ …

Read More »

ವಾಹನ ಚಲಾಯಿಸುತ್ತಿದ್ದಾಗ ಹೃದಯಘಾತ: ವ್ಯಕ್ತಿ ಸಾವು

ನವಲಗುಂದ : ಹುಬ್ಬಳ್ಳಿ – ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಕಾಲವಾಡ ಹಾಗೂ ಕರ್ಲವಾಡ ಗ್ರಾಮಗಳ ಮಧ್ಯೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹೃದಯಘಾತವಾಗಿ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಪಟ್ಟಿದ್ದಾನೆ . ಮೃತ ವ್ಯಕ್ತಿಯನ್ನು ಹಾವೇರಿ ಜಿಲ್ಲೆಯ ಕಾಕೋಳ ಗ್ರಾಮದ 28 ವರ್ಷ ವಯಸ್ಸಿನ ಲೋಕನಾಥ್ ಉಮೇಶ್ ಗುತ್ತಲ ಎನ್ನಲಾಗಿದ್ದು , ನವಲಗುಂದ ಜಿಲ್ಲಾ ಪಂಚಾಯತ್ ಇಂಜನೀಯರ ಆಗಿ ಕಾರ್ಯ ನಿರ್ವಹಿಸುತ್ತಿದ್ದರು . ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು , …

Read More »