Breaking News

Uncategorized

ಬೆಂಗಳೂರಲ್ಲಿ ನಿನ್ನೆ 696 ಮಂದಿಗೆ ಕೋವಿಡ್ ಸೋಂಕು ದೃಢ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ನಿನ್ನೆ 696 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 18,07,412 ಕ್ಕೆ ಏರಿಕೆ ಆಗಿದೆ. ಇಂದು 869 ಮಂದಿ ಬಿಡುಗಡೆಯಾಗಿದ್ದು, ಈವರೆಗೂ 17,84,367 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಲ್ಲಿ ಇಂದಿನ ಕೋವಿಡ್ ಸಾವಿನ ಸಂಖ್ಯೆ ಶೂನ್ಯ. ಇನ್ನು ಸಕ್ರಿಯ ಪ್ರಕರಣಗಳು 6,075 ಇವೆ. ಅದರಂತೆ ರಾಜ್ಯದಲ್ಲಿ ನಿನ್ನೆ 17,979 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 749 ಜನರಿಗೆ ಸೋಂಕು ದೃಢಪಟ್ಟಿದೆ. ನಿನ್ನೆ …

Read More »

ಭಾಷಣ ವೇಳೆ ತೀವ್ರ ಭಾವೋದ್ವೇಗಕ್ಕೆ ಒಳಗಾದ ಏಕನಾಥ ಶಿಂದೆ

ಮುಂಬೈ : ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಗೆದ್ದ ಬಳಿಕ ಮುಖ್ಯಮಂತ್ರಿಯಾಗಿ ತನ್ನ ಮೊದಲ ಭಾಷಣ ಮಾಡಿದ ಏಕನಾಥ ಶಿಂದೆ ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು.ತನ್ನ ಬಂಡಾಯಕ್ಕಾಗಿ ತನ್ನ ಕುಟುಂಬಕ್ಕೆ ಬೆದರಿಕೆಗಳು ಬಂದಿದ್ದವು ಎಂದ ಶಿಂದೆ ಮೃತಪಟ್ಟಿರುವ ತನ್ನಿಬ್ಬರು ಮಕ್ಕಳನ್ನು ನೆನೆದುಕೊಂಡು ದುಃಖವನ್ನು ತಡೆಯದೆ ಉಮ್ಮಳಿಸಿದರು. ‘ಅವರು ನನ್ನ ಕುಟುಂಬದ ಮೇಲೆ ದಾಳಿ ಮಾಡಿದ್ದರು. ನನ್ನ ತಂದೆ ಬದುಕಿದ್ದಾರೆ,ತಾಯಿ ಮೃತ ಪಟ್ಟಿದ್ದಾರೆ. ನಾನು ನನ್ನ ಹೆತ್ತವರಿಗೆ ಹೆಚ್ಚಿನ ಸಮಯ ನೀಡಲಾಗಲಿಲ್ಲ. ನಾನು …

Read More »

ಎಡಿಜಿಪಿ ದರ್ಜೆಯ ಉನ್ನತ ಅಧಿಕಾರಿಯನ್ನೇ ಬಂಧನ ಐತಿಹಾಸಿಕ ದಿನ : ಕುಮಾರಸ್ವಾಮಿ

ಬೆಂಗಳೂರು: ಪಿಎಸ್‌ಐ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದು, ಇಂದು ಎಡಿಜಿಪಿ ದರ್ಜೆಯ ಉನ್ನತ ಅಧಿಕಾರಿಯನ್ನೇ ಬಂಧಿಸಿರುವ ಘಟನೆ ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲೇ ಐತಿಹಾಸಿಕ ದಿನ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಐಡಿ ತನಿಖಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿಐಡಿ ನೇತೃತ್ವ ವಹಿಸಿರುವ ದಕ್ಷ ಅಧಿಕಾರಿ, ಪಿ.ಎಸ್.ಸಂಧು ಅವರು ಎಷ್ಟೇ ರಾಜಕೀಯ ಮತ್ತು ಅಧಿಕಾರಿಶಾಹಿ ಮಟ್ಟದಲ್ಲಿ ಒತ್ತಡ ಎದುರಾದರೂ ಮಣಿಯದೇ ತನಿಖಾ ತಂಡವನ್ನು …

Read More »

ಅಮೃತ್‌ ಪಾಲ್‌ ಬಂಧನದಿಂದ ಸರ್ಕಾರಕ್ಕೆ ಮುಜುಗರ ಆಗುವ ಪ್ರಶ್ನೆಯೇ ಇಲ್ಲ : ಆರಗ ಜ್ಞಾನೇಂದ್ರ

ಬೆಂಗಳೂರು : ಪಿಎಸ್‌ಐ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್‌ ಪಾಲ್‌ ಬಂಧನದಿಂದ ಸರ್ಕಾರಕ್ಕೆ ಮುಜುಗರ ಆಗುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದನದಲ್ಲಿ ಉತ್ತರ ನೀಡುವ ವೇಳೆ ಆಗ ಸೂಕ್ತ ಸಾಕ್ಷ್ಯಾಧಾರ ಇರಲಿಲ್ಲ.ತಿದ್ದಿದ್ದ ಒಎಂಆರ್‌ ಶಿಟ್‌ ದೊರಕಿದ ತಕ್ಷಣ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉನ್ನತ ತನಿಖೆಗಾಗಿ ಸಿಐಡಿಗೆ ನೀಡಲಾಯಿತು. ಎರಡು ಗಂಟೆಯಲ್ಲಿ ಓರ್ವ …

Read More »

ಜಿಲ್ಲೆಯಾದ್ಯಂತ ಇಂದು ಬೆಳಿಗ್ಗೆಯಿಂದ ಜಿಟಿ ಜಿಟಿ‌ ಮಳೆ

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಇಂದು ಬೆಳಿಗ್ಗೆಯಿಂದ ಜಿಟಿ ಜಿಟಿ‌ ಮಳೆಯಾಗುತ್ತಿದೆ. ನಿರಂತರವಾಗಿ ‌ಸುರಿಯುತ್ತಿರುವ ಮಳೆಯಿಂದಾಗಿ ಜನರ ಓಡಾಟ, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಎಲ್ಲ ತಾಲ್ಲೂಕುಗಳಲ್ಲೂ ಮಳೆಯಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಬೆಳಿಗ್ಗೆ ತುಂತುರು ಮಳೆ ಆರಂಭವಾಯಿತು.10 ಗಂಟೆಯ ‌ಬಳಿಕ ಸ್ವಲ್ಪ ಮಳೆ ಚುರುಕು ಪಡೆದುಕೊಂಡಿದೆ

Read More »

ಪ್ಪಾರಾಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿ ನೇಣುಗೆ ಶರಣು

ಹುಬ್ಬಳ್ಳಿ: ಹುಬ್ಬಳಿ ತಾಲುಕು ಅಣ್ಣಿಗೇರಿ ಪಟ್ಟಣದ ಬನಶಂಕರಿ ನಗರದ ನಿವಾಸಿ ಪ್ಪಾರಾಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿ ಮನೆಯಲ್ಲಿಯೇ ಸೀರೆಯಿದ ನೇಣು ಹಾಕಿಕೊಂಡಿದೆ ಘಟನೆ ನಡದಿದ ಪಟ್ಟಣದ ಬನಶಂಕರಿ ನಗರದ ನಿಶ್ಚಿತ ಗಂಗಯ್ಯಾ ಹಿರೇಮಠ ೨೨ ನೇಣು ಹಾಕಿಕೊಂಡಿರುವ ವಿದ್ಯಾರ್ಥಿನಿಯಾಗಿದ್ದಾಳಿ ಇನ್ನೊ ಚಿಕಿತ್ಸೆಗೆಂದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು ಕುಡಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ವಿದ್ಯಾರ್ಥಿನಿ ಪ್ಪಾರಾಮೆಡಿಕಲ್ ಒಂದು ವಿಷಯ ಫಲೇ ಆಗಿದ್ದರಿಂದ ಮಾನಸಿಕವಾಗಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆಪ್ರಕರಣ ಸಂಬಂಧಿಸಿದಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ …

Read More »

ಜು.8ರವರೆಗೂ ಭಾರೀ ಮಳೆ :ರಾಜ್ಯದಲ್ಲಿ ಅಲರ್ಟ್ ಜಾರಿ

ರಾಜ್ಯದ ಕರಾವಳಿ ಭಾಗದ ಮಳೆಯ ಅಬ್ಬರ ಮುಂದುವರೆದಿದ್ದು, ಜುಲೈ 8ರವರೆಗೂ ಗುಡುಗು ಸಹಿತ ಭಾರೀ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಮತ್ತು ‘ಯೆಲ್ಲೋ ಅಲರ್ಟ್’ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ಮುಂಗಾರು ಮಾರುತಗಳು ಹೆಚ್ಚು ಸಕ್ರಿಯವಾಗಿದ್ದರಿಂದ ಮಳೆ ಕಳೆದೊಂದು ವಾರದಿಂದ ಆ ಭಾಗದಲ್ಲಿ ಸುರಿಯುತ್ತಲೇ ಇದೆ. ಇದೀಗ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ …

Read More »

ಹುಬ್ಬಳ್ಳಿಯಲ್ಲಿ ಜನಸ್ನೇಹಿ ಕರಿ ಮಂಗ

ಕಪ್ಪಗಿರೋ ಮೂಷ್ಯಾ ಗಳು ಒಂದಷ್ಟು ಡೇಂಜರ್. ಅವು ಕಚ್ಚೋಕೆ ಆರಂಭಿಸಿದ್ವು ಅಂದ್ರೆ, ಮನುಷ್ಯನ ಜೀವವನ್ನೂ ಬಲಿಪಡಿಯೋಷ್ಟು ಶಕ್ತಿ ಅವಕ್ಕಿವೆ. ಆದ್ರೆ ಇಲ್ಲೊಂದು ಕರಿ ಮಂಗ ಕಾಡು ಬಿಟ್ಟು ನಾಡು ಸೇರಿಕೊಂಡಿದೆ . ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬಂದಿರೋ ಈ ಮಂಗ ಹೋಟೆಲ್ ಮಾಲೀಕನಂತೆಯೇ ವರ್ತಿಸ್ತಿದೆ. ಹೋಟೆಲ್ ನ ಕೌಂಟರ್ ಬಳಿ ಕೂಡೋದು, ಅಡುಗೆ ಮನೆಯಲ್ಲಿ ಕೆಲಸ ಮಾಡೋದ್ರ ಪರಿಶೀಲನೆ ಮಾಡೋದು ಎಲ್ಲಾನೂ ಮಾಡುತ್ತೆ ಈ ಕೋತಿ. ಹೋಟೆಲ್ ನಲ್ಲಿ ಕೊಡೋ …

Read More »

ಮಂಗಳೂರು ಮೂಲದ ಸಿನಿ ಶೆಟ್ಟಿಗೆ ‘ಫೆಮಿನಾ ಮಿಸ್ ಇಂಡಿಯಾ 2022’ ಕಿರೀಟ

ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ಭಾನುವಾರ ನಡೆದ ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾದ ಗ್ರ್ಯಾಂಡ್ ಫಿನಾಲೆಯಲ್ಲಿ ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ ಅವರು ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 (Femina Miss India World 2022) ಪ್ರಶಸ್ತಿ ಗೆದ್ದಿದ್ದಾರೆ. ರಾಜಸ್ಥಾನದ ರೂಬಲ್ ಶೇಖಾವತ್, ಫೆಮಿನಾ ಮಿಸ್ ಇಂಡಿಯಾ 2022 ರ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಉತ್ತರ ಪ್ರದೇಶದ ಶಿನಾತಾ ಚೌಹಾನ್ ಅವರು …

Read More »

ಟ್ಯಾಂಕರ್ , ಕಾರ್ ಮಧ್ಯೆ ಡಿಕ್ಕಿ : ಇಬ್ಬರು ಸ್ಥಳದಲ್ಲೇ ಸಾವು

ಕಲಬುರಗಿ: ಆಯಿಲ್ ಟ್ಯಾಂಕರ್ ಮತ್ತು ಸ್ವಿಫ್ಟ್ ಕಾರೊಂದರ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನೊಬ್ಬರ ತೀವ್ರ ಗಾಯಗೊಂಡಿದ್ದು ಪರಿಸ್ಥಿತಿ ಗಂಭೀರವಾಗಿದೆ. ಕಲಬುರಗಿ ಹೊರವಲಯದಲ್ಲಿ ಈ ಅಪಘಾತ ಸಂಭವಿಸಿದೆ. ಕಲಬುರಗಿ ಹೊರವಲಯದ ಶಹಬಾದ್ ರಸ್ತೆಯ ಶೆಟ್ಟಿ ಕಾಲೇಜು ಬಳಿ ಕಾರು-ಟ್ಯಾಂಕರ್ ಡಿಕ್ಕಿ ಆಗಿವೆ. ಅಪಘಾತದ ತೀವ್ರತೆಗೆ ಕಲಬುರಗಿ ನಿವಾಸಿಗಳಾದ ಅಮಿತ್ (21), ಆದಶ್೯ (22) ಎಂಬಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಮಹಾಂತೇಶ್ ಎಂಬವರ ಪರಿಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುವನ್ನು ಕಲಬುರಗಿ …

Read More »