ಆ್ಯಂಕರ್:- ಮಿಟು ಅಭಿಯಾನದ ಬಗ್ಗೆ ಖುಷಿಯಾಗುತ್ತಿದೆ. ಈಗಲಾದರೂ ಮಹಿಳೆಯರು ಧ್ವನಿ ಎತ್ತುತ್ತಿರುವದು ಸ್ವಾಗತಾರ್ಹವಾಗಿದೆ ಎಂದು ಸ್ಯಾಂಡಲವುಡ್ ನಟಿ ಶೃತಿ ಹರಿಹರನ್ ಹೇಳಿದ್ದಾರೆ.ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಿಟು ಅಭಿಯಾನ ಮುಂದುವರೆಯುತ್ತಿದೆ. ಇದರಲ್ಲಿ ದೊಡ್ಡ ದೊಡ್ದವರ ಹೆಸರು ಬಹಿರಂಗೊಳುತ್ತಿದ್ದು, ಕೆಲವರಲ್ಲಿ ಆತಂಕ ಶುರುವಾಗಿದೆ. ಈ ಅಭಿಯಾನ ಗೆಮ್ ಚೆಂಜರ್ ಆಗಲಿದೆ. ಲೈಂಗಿಕ ದೌರ್ಜನ್ಯ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರದಲ್ಲಿಯೂ ಕೂಡ ಗೋಚರಿಸುತ್ತಿದೆ. ಸತ್ಯ ಯಾವಾಗ ಹೇಳಿದರು ಸತ್ಯ ಸತ್ಯವೇ. ಒಬ್ಬ ಮಹಿಳೆಗೆ ಲೈಂಗಿಕ ದೌರ್ಜನ್ಯ ಸಹಿಸಿಕೊಳ್ಳುವದು ಕಷ್ಟಕರ ಸಂಗತಿಯಾಗಿದೆ.ವಿಪರ್ಯಾಸವೆನೆಂದರೆ ಮಿಟು ಅಭಿಯಾನದಲ್ಲಿ ಮಿಡಿಯಾ ಸೆನ್ಸೆಸನಲ್ ಆಗುತ್ತಿದೆ. ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಆಗದಿದ್ದರೂ ಕೆಲವರಿಗಾದರೂ ಶಿಕ್ಷೆಯಾಗಲಿ ಎಂದರು. ಮುಂದಿನ ದಿನಗಳಲ್ಲಿ ದೌರ್ಜನ್ಯ ಮಾಡುವರು ವಿಚಾರ ಮಾಡುವಂತಾಗಿದೆ. ಇದು ಗಂಡು ಮತ್ತು ಹೆಣ್ಣಿನ ಪ್ರಶ್ನೆಯಲ್ಲ. ಅಧಿಕಾರ ಬಲ ಹಾಗೂ ಹಣಬಲದಿಂದ ಇಂತ ಕೃತ್ಯ ನಡೆಯುತ್ತಿವೆ ಎಂದರು. ಇದನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿಟ್ಟಿನಲ್ಲಿ ಪೈರ್ ಸಮಿತಿ ರಚನೆ ಮಾಡುತ್ತಿದ್ದು, ಸಮಿತಿಯಲ್ಲಿ ಪ್ರೀಯಾಂಕ, ಕವಿತಾ ಲಂಕೇಶ ಹಾಗೂ ನಾನು ಸೇರಿದಂತೆ ಹಲವರಿದ್ದಾರೆ ಎಂದರು..
bigtvnews | Hubli Dharwad News | Kannada News | Karnataka News Hubli News | News In Hubli | Local news





