Breaking News

Uncategorized

ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ

ಬೆಂಗಳೂರು : ಸ್ನೇಹಿತರು, ಹಿತೈಷಿಗಳು ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆಗಸ್ಟ್ ನಲ್ಲಿ ತಮ್ಮ 75 ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಿದ್ದರಾಮೋತ್ಸವ ಇದು ಶಕ್ತಿ ಪ್ರದರ್ಶನವಲ್ಲ. ನಾನು ಯಾರ ವಿರುದ್ಧ ಶಕ್ತಿಯನ್ನು ತೋರಿಸಬೇಕು? ಆಗಸ್ಟ್ 3 ರಂದು, ನಾನು 75 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದೇನೆ. ಇದು ಒಂದು ಮೈಲಿಗಲ್ಲು. ಆದ್ದರಿಂದ ನನ್ನ ಸ್ನೇಹಿತರು ಮತ್ತು ಹಿತೈಷಿಗಳು …

Read More »

ಸಮನ್ವಿ ನೆನಪಿನಲ್ಲಿ ಗಂಡು ಮಗುವಿಗೆ ಜನ್ಮ‌ನೀಡಿದ ಅಮೃತಾ ರೂಪೇಶ್

ಅಮೃತಾ ರೂಪೇಶ್ ತಮ್ಮ‌ ಮೊದಲ ಮಗುವನ್ನು ಕಳೆದುಕೊಂಡಿದ್ದರು. ಎರಡನೇ ಮಗಳು ಸಮನ್ವಿ ಅವರ ಎಲ್ಲ ನೋವುಗಳಿಗೆ ಉತ್ತರವಾಗಿದ್ದಳು. ಕಿರುತೆರೆಯ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ಕರುನಾಡಿನ ಮನೆಮಾತಾಗಿದ್ದಳು. ಆದರೆ ದ್ವಿಚಕ್ರವಾಹನ ಅಪಘಾತದಲ್ಲ ಸಮನ್ವಿ ಇನ್ನೆಂದೂ ಬಾರದ ಲೋಕಕ್ಕೆ ತೆರಳಿದ್ದಳು. ಈ ಘಟನೆ ಅಮೃತಾ ರೂಪೇಶ್ ಅವರ ಬದುಕಿನಲ್ಲಿ ಕತ್ತಲೆ ಮೂಡಿಸಿತ್ತು.‌ ಸಮನ್ವಿ ಸಾಯುವಾಗ ಅಮೃತಾ ಎರಡು ತಿಂಗಳ ಗರ್ಭಿಣಿ ಯಾಗಿದ್ದು, ಈಗ ಸಮನ್ವಿ ಸಾವಿನ ಏಳು ತಿಂಗಳ ಬಳಿಕ …

Read More »

ನೂತನ ಸಿಎಂ ಏಕನಾಥ ಶಿಂಧೆ ಇಂದು ವಿಶ್ವಾಸಮತ ಸಾಬೀತು

ಮುಂಬೈ: ಶಿವಸೇನೆ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಹೊರ ನಡೆದಿದ್ದಂತ ಏಕನಾಥ ಶಿಂಧೆ, ಮಹಾರಾಷ್ಟ್ರ ನೂತನ ಸಿಎಂ ಆಗಿ ಬಿಜೆಪಿಯ ಜೊತೆಗೆ ಸೇರಿ ಸರ್ಕಾರ ರಚಿಸಿದ್ದರು. ಅಂತಹ ಅವರು, ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲಿದ್ದಾರೆ. ಇನ್ನೂ ಸಿಎಂ ಏಕನಾಥ ಶಿಂಧೆ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ, ಬಂಡಾಯ ಶಾಸಕ ಭರತ್ ಗೊಂಗಾವಲೆ ಅವರನ್ನು ವಿಧಾನಸಭೆಯ ಮುಖ್ಯ ಸಚೇತಕ ಎಂಬುದಾಗಿ ಮಾನ್ಯ ಮಾಡಲಾಗಿದೆ. ಹೀಗಾಗಿ ಇಂದು ಉದ್ಧವ್ ಠಾಕ್ರೆ …

Read More »

ದೇಶದಲ್ಲಿ ಕಾಂಗ್ರೆಸ್ ಪಕ್ಷ ICU ನಲ್ಲಿರುವ ಪರಿಸ್ಥಿತಿಗೆ ಬಂದಿದೆ : ರಾಮುಲು ವ್ಯಂಗ್ಯ

ಚಿತ್ರದುರ್ಗ: ರಾಜ್ಯ , ದೇಶದಲ್ಲಿ ಕಾಂಗ್ರೆಸ್ ಪಕ್ಷ ICU ನಲ್ಲಿರುವ ಪರಿಸ್ಥಿತಿಗೆ ಬಂದಿದೆ, ದೇಶದ ಜನರು ಬಿಜೆಪಿ ಪಕ್ಷವನ್ನ ಸ್ವೀಕರ ಮಾಡಿ, ಬಿಜೆಪಿ ನಮ್ಮ ಪಕ್ಷ ಎಂದು ಕಾಂಗ್ರೆಸ್ ಪಕ್ಷವನ್ನ ಜನ ತಿರಸ್ಕಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಾವು ಬಿಡಲ್ಲ, ಅವರನ್ನ ಸಿಎಂ ಆಗಲು ಬಿಡಲ್ಲ, ರಾಜ್ಯದಲ್ಲಿ ಇನ್ನೂ 20 ವರ್ಷ ಅಧಿಕಾರಕ್ಕೆ ಬಾರದ ಹಾಗೇ ನಮ್ಮ ಪಕ್ಷದ ಕಾರ್ಯಕರ್ತರು ನೋಡಿಕೊಳ್ಳುತ್ತಾರೆ ಎಂದು ಸಾರಿಗೆ ಸಚಿವ ಬಿ. …

Read More »

ಮಕ್ಕಳೊಂದಿಗೆ ಪ್ರಾಣ ಬಿಟ್ಟ ತಾಯಿ

ವಿಜಯಪುರ: ಇಬ್ಬರು ಮಕ್ಕಳೊಂದಿಗೆ ತಾಯಿ ಸಾವಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರನಾಳ ಗ್ರಾಮದ ತೋಟದ ವಸ್ತಿಯಲ್ಲಿ ನಡೆದಿದೆ. ಶ್ರೀದೇವಿ ಸಂತೋಷ್ ಬಿರಾದಾರ (31), ಮಕ್ಕಳಾದ ಶ್ರೀಶೈಲ ಬಿರಾದಾರ (7) ಮತ್ತು ಮಹೇಶ ಬಿರಾದಾರ (5) ಮೃತ ದುರ್ದೈವಿಗಳು.ಶ್ರೀದೇವಿ ತನ್ನ ಎರಡು ಮಕ್ಕಳೊಂದಿಗೆ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More »

ಮನೆಗೆ ಬಾರದ ವ್ಯಕ್ತಿ‌ ಸ್ಮಶಾನ ಸೇರಿದ

ಶಿವಮೊಗ್ಗ:  ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಡುಬ ಬಳಿ ತಂದೆಯೊಬ್ಬರು ತಮ್ಮ ಮಗನನ್ನು ವಸತಿ ಶಾಲೆಗೆ ಸೇರಿಸಿ ಪತ್ನಿ ಹಾಗೂ ಮಗಳೊಂದಿಗೆ ವಾಪಸ್ ಬರುವಾಗ ನಿಯಂತ್ರಣ ತಪ್ಪಿದ ಕಾರು ಉರುಳಿ ಬಿದ್ದ ಪರಿಣಾಮ ತಂದೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃತ ದುರ್ದೈವಿ ತರೀಕೆರೆಯ ವಕೀಲ ಸಂಪತ್ ಎಂಬವರು ತಮ್ಮ ಮಗನನ್ನು ಮೂಡುಬಿದರೆಯ ವಸತಿ ಶಾಲೆಗೆ ಸೇರಿಸಿ ಭಾನುವಾರದಂದು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ವಾಪಸ್ ಊರಿಗೆ ತೆರಳುತ್ತಿದ್ದರು. ಮಧ್ಯಾಹ್ನದ …

Read More »

ಶ್ರೀಮಂತ ಭಂಗಲೆಗಳ ಮೇಲೆ ಬುಲ್ಡೋಜರ್‌ʼಗಳು ಹೋಗುವುದಿಲ್ಲ. ಆದರೆ, ಬಡವರು ದರ್ಬಾರ್ : ಕುಮಾರಸ್ವಾಮಿ

ಬೆಂಗಳೂರು: ರಾಜಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಮಾಲ್‌ʼಗಳು, ಅರಮನೆಯಂಥ ಭಂಗಲೆಗಳ ಮೇಲೆ ಬುಲ್ಡೋಜರ್‌ʼಗಳು ಹೋಗುವುದಿಲ್ಲ. ಆದರೆ, ಬಡವರು ಯಾರಾದರೂ ಸಣ್ಣ ಮನೆ, ಗುಡಿಸಲು ಕಟ್ಟಿಕೊಂಡಿದ್ದರೆ ಅವರ ಮನೆಗಳ ಮೇಲೆ ಬುಲ್ಡೋಜರ್‌ʼಗಳು ನಿರ್ದಯವಾಗಿ ಹರಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೆಬ್ಬಾಳ ವಿಧಾನಸಭೆ ಕ್ಷೇತ್ರದ ನಾಗೇನಹಳ್ಳಿಯಲ್ಲಿ ಇಂದು ಸಂಜೆ ನಡೆದ ʼಜನತಾಮಿತ್ರʼ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರಗಳ ವಿರುದ್ಧ ತೀವ್ರ …

Read More »

ಸಾಗರದಲ್ಲಿ ಪವರ್ ಸ್ಟಾರ್ ಸ್ಮಾರಕ ನಿರ್ಮಾಣ

ಸಾಗರ : ರಾಜರತ್ನ ಪುನೀತ್ ರಾಜ್​ಕುಮಾರ್ ಅಭಿಮಾನಿಗಳು ಅವರ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಳಗೆರೆ ಗ್ರಾಮದಲ್ಲಿ ಅಭಿಮಾನಿಗಳು ನೆಚ್ಚಿನ ನಟ ಪುನೀತ್ ರಾಜ್​ಕುಮಾರ್ ಸ್ಮಾರಕ ನಿರ್ಮಿಸಿದ್ದಾರೆ. ಅಗಲಿದ ಅಪ್ಪುವಿನ ನೆನಪಿಗೆ ಗ್ರಾಮಸ್ಥರು ಸ್ಮಾರಕ ನಿರ್ಮಾಣ ಮಾಡಿದ್ದು, ವಿಶೇಷ ಗೌರವ ನೀಡಿದ್ದಾರೆ. ಅತ್ಯಾಕರ್ಷಕವಾಗಿ ಸ್ಮಾರಕವನ್ನು ಪುನೀತ್ ಅಭಿಮಾನಿಗಳು ನಿರ್ಮಿಸಿದ್ದು, ಜೊತೆಗೆ ಕಾರಂಜಿಯನ್ನು ಸಹ ನಿರ್ಮಾಣ ಮಾಡಿದ್ದಾರೆ. ಗ್ರಾಮದವರೆಲ್ಲರೂ ಸೇರಿ ಈ ಅದ್ಭುತ ಕಾರ್ಯವನ್ನು ಮಾಡಿದ್ದು, ಗ್ರಾಮದ …

Read More »

ವಿಶೇಷ ರೀತಿಯಲ್ಲಿ ಹುಬ್ಬಳ್ಳಿ ಹುಡುಗ ಹುಟ್ಟು ಹಬ್ಬ ಆಚರಣೆ

ಹುಬ್ಬಳ್ಳಿ: ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಹುಬ್ಬಳ್ಳಿಯ 9 ವರ್ಷದ ಹುಡುಗ ಹುಟ್ಟು ಹಬ್ಬ ಆಚರಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾನೆ.‌ ಲಕ್ಷಯ್ ಅಂಬಾತನೇ ಹುಟ್ಟು ಹಬ್ಬ ಆಚರಣೆ ಮಾಡಿದ್ದು, ಈತ ಹುಬ್ಬಳ್ಳಿಯ ಪಡದಯ್ಯನ ಹಕ್ಕಲದ ನಿವಾಸಿಯಾಗಿದ್ದಾನೆ. ಶಂಕ್ರಣ ದೊಡ್ಡಮನಿ, ಶಿಲ್ಪಾ ದೊಡ್ಡಮನಿ ದಂಪತಿಗಳ ಮಗನಾದ ಲಕ್ಷಯ್ ನಾಲ್ಕು ವರ್ಷವನಿದ್ದಾಗಿನಿಂದ ಸಾಮಾಜಿಕ ಸೇವೆ ಮಾಡುತ್ತಾ ಬರುತ್ತಿದ್ದಾನೆ. ಅದರಂತೆ ಇದೀಗ ತನ್ನ 9 ವರ್ಷದ ಹುಟ್ಟು ಹಬ್ಬವನ್ನು ರಕ್ತದಾನ ಶಿಬಿರವನ್ನು ಆಯೋಜಿಸಿ ಆಚರಣೆ …

Read More »

ವಿರೋಧ ಪಕ್ಷದ ನಾಯಕರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ

ಪ್ರವಾದಿ ಮುಹಮ್ಮದ್ ಅವರ ಹೇಳಿಕೆಗಾಗಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಛೀಮಾರಿ ಹಾಕಿದೆ. ಬಳಿಕ ವಿರೋಧ ಪಕ್ಷದ ನಾಯಕರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಅಧಿಕಾರದಲ್ಲಿರುವ ಪಕ್ಷ ನಾಚಿಕೆಯಿಂದ ತಲೆ ತಗ್ಗಿಸಬೇಕು” ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಯನಾಡಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, “ಆಡಳಿತದ ಮೂಲಕ ದೇಶದಲ್ಲಿ ವಾತಾವರಣವನ್ನು ಸೃಷ್ಟಿಸಲಾಗಿದೆ. …

Read More »