ಚಿತ್ರದುರ್ಗ: ರಾಜ್ಯ , ದೇಶದಲ್ಲಿ ಕಾಂಗ್ರೆಸ್ ಪಕ್ಷ ICU ನಲ್ಲಿರುವ ಪರಿಸ್ಥಿತಿಗೆ ಬಂದಿದೆ, ದೇಶದ ಜನರು ಬಿಜೆಪಿ ಪಕ್ಷವನ್ನ ಸ್ವೀಕರ ಮಾಡಿ, ಬಿಜೆಪಿ ನಮ್ಮ ಪಕ್ಷ ಎಂದು ಕಾಂಗ್ರೆಸ್ ಪಕ್ಷವನ್ನ ಜನ ತಿರಸ್ಕಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಾವು ಬಿಡಲ್ಲ, ಅವರನ್ನ ಸಿಎಂ ಆಗಲು ಬಿಡಲ್ಲ, ರಾಜ್ಯದಲ್ಲಿ ಇನ್ನೂ 20 ವರ್ಷ ಅಧಿಕಾರಕ್ಕೆ ಬಾರದ ಹಾಗೇ ನಮ್ಮ ಪಕ್ಷದ ಕಾರ್ಯಕರ್ತರು ನೋಡಿಕೊಳ್ಳುತ್ತಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಕಾಂಗ್ರೇಸ್ ನಾಯಕರ ಸಮೀಕ್ಷೆ ಕುರಿತ ಹೇಳಿಕೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕೋನಸಾಗರ ಗ್ರಾಮದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರುತ್ತದೆ ಎಂಬ ಕಾಂಗ್ರೇಸ್ ನಾಯಕರ ಹೇಳಿಕೆ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ರಾಜ್ಯ , ದೇಶದಲ್ಲಿ ಕಾಂಗ್ರೆಸ್ ಪಕ್ಷ ICU ನಲ್ಲಿರುವ ಪರಿಸ್ಥಿತಿಗೆ ಬಂದಿದೆ, ದೇಶದ ಜನರು ಬಿಜೆಪಿ ಪಕ್ಷವನ್ನ ಸ್ವೀಕರ ಮಾಡಿ, ಬಿಜೆಪಿ ನಮ್ಮ ಪಕ್ಷ ಎಂದು ಕಾಂಗ್ರೆಸ್ ಪಕ್ಷವನ್ನ ಜನ ತಿರಸ್ಕಾರ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಾವು ಬಿಡಲ್ಲ ಕಾಂಗ್ರೆಸ್ ಪಕ್ಷದ ಸರ್ವೇಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ರಿಪೋರ್ಟ್ ನೀಡಲು ಸಾಧ್ಯನಾ,? ರಾಜ್ಯದ ಜನ ನಮ್ಮ ಕಡೆ ಇದ್ದಾರೆ ಎಂದು ತೋರಿಸಲು ಸರ್ವೆ ಮಾಡಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





