BigTv News
July 2, 2022
Uncategorized
ಧಾರವಾಡ ಜು.02: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಂದು ಧಾರವಾಡದಲ್ಲಿ ಆಚರಿಸುತ್ತಿರುವ ಡಾ.ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆಯ ರಾಜ್ಯ ಮಟ್ಟದ ಕಾರ್ಯಕ್ರಮ ನಿಮಿತ್ಯ ಹಮ್ಮಿಕೊಂಡಿರುವ ಡಾ.ಫ.ಗು.ಹಳಕಟ್ಟಿ ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಮಹಾಪೌರ ಈರೇಶ ಅಂಚಟಗೇರಿ ಹಾಗೂ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಚಾಲನೆ ನೀಡಿದರು. ಮೆರವಣಿಗೆಯು ಡಾ.ಫ.ಗು.ಹಳಕಟ್ಟಿ ಅವರ ಹುಟ್ಟಿದ ಮನೆ ಧಾರವಾಡ ಹೊಸಯಲ್ಲಾಪುರದ ಶುಕ್ರವಾರಪೇಟೆಯಲ್ಲಿರುವ ಮನೆ ವಚನ ದಿಂದ ಇಂದು ಬೆಳಿಗ್ಗೆ …
Read More »
BigTv News
July 2, 2022
Uncategorized
ಹುಬ್ಬಳ್ಳಿ: ನವವಿವಾಹಿತೆಯೊಬ್ಬಳನ್ನು ಅಪಹರಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾರ್ಪೋರೆಟರ್ ವಿರುದ್ಧ ಕೋರ್ಟ್ ಅರೆಸ್ಟ್ ವಾರೆಂಟ್ ಮಾಡಿದ ಬೆನ್ನಲ್ಲೇ ಪೊಲೀಸರು ಕಾರ್ಪೊರೇಟರ್ ಚೇತನ ಹಿರೇಕೇರೂರನನ್ನು ಬಂಧಿಸಿದ್ದಾರೆ. ನವವಿವಾಹಿತೆ ಸಹನಾ ಎಂಬುವವರನ್ನು ಅಪಹರಣ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ನಿಖಿಲ್ ದಾಂಡೇಲಿ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಎಫ್ ಐ ಆರ್ ಆಗಿದ್ದರೂ ಕೂಡ ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ನಿಖಿಲ್ ದಾಂಡೇಲಿ ಹಾಗೂ ಸಹನಾ ಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು …
Read More »
BigTv News
July 1, 2022
Uncategorized
ಮೈಸೂರು : ಸೇವಾ ನಿವೃತ್ತಿ ದಿನವೇ ಮೈಸೂರು ವಿಶ್ವವಿದ್ಯಾಲಯದನೌಜರನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರಂ ನ ಬೂತಾಳೆ ಮೈದಾನದಲ್ಲಿ ನಡೆದಿದೆ. ವಿವಿಯ ಇಂಜಿನಿಯರಿಂಗ್ ವಿಭಾಗದ ಕೃಷ್ಣೇಗೌಡ (60) ಮೃತ ದುರ್ದೈವಿ. ಗುರುವಾರ ಬೆಳಗ್ಗೆ 5 ಗಂಟೆಯ ಸಮಯದಲ್ಲಿ ವಿದ್ಯಾರಣ್ಯಪುರಂ ಬಳಿ ಇರುವ ಬೂತಾಳೆ ಮೈದಾನದಲ್ಲಿ ವಾಯುವಿಹಾರಕ್ಕೆ ತೆರಳಿದ್ದಾರೆ.ರಕ್ತದ ಮಡುವಿನಲ್ಲಿದ್ದ ಕೃಷ್ಣಗೌಡರನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು …
Read More »
BigTv News
July 1, 2022
Uncategorized
ತುಮಕೂರು: ದೇವೇಗೌಡ್ರು ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎನ್ನುವ ಕಾಂಗ್ರೆಸ್ ನಾಯಕ ಕೆ.ಎನ್ ರಾಜಣ್ಣ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ರಾಜಣ್ಣಗೆ ಏಕವಚನದಲ್ಲೇ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅದು ಅವರ ಸಂಸ್ಕೃತಿ ತೋರುತ್ತದೆ. ಅವತ್ತು ಅವರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಾಗ ದೇವೇಗೌಡರು ಪ್ರಚಾರಕ್ಕೆ ಬರಲೇಬೇಕು ಅಂತಾ ಹಠ ಹಿಡಿದಿದ್ರು. ಅವತ್ತು ದೇವೇಗೌಡರು, ಪ್ರಚಾರಕ್ಕೆ …
Read More »
BigTv News
July 1, 2022
Uncategorized
ಮಂಗಳೂರು : ನಗರದ ಪದವಿನಂಗಡಿ ಸಮೀಪ ಬಹುಮಹಡಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ. ಬಾಂದೊಟ್ಟು ದ್ವಾರದ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ 5 ಅಂತಸ್ತಿನ ಕಟ್ಟಡದಲ್ಲಿ 4ನೇ ಅಂತಸ್ತಿನಲ್ಲಿ ಕೆಲಸ ಮಾಡುತ್ತಿದ್ದ ರವಿರಾಜ್ (53) ಅವರು ಅಲ್ಲಿಂದ 3ನೇ ಅಂತಸ್ತಿಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜಾರ್ಜ್ ಟಿ.ವಿ. ಅವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಕಂಟ್ರಾಕ್ಟರ್ ಪ್ರಶಾಂತ್ ಅವರ ನೇತೃತ್ವದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ …
Read More »
BigTv News
July 1, 2022
Uncategorized
ಶಿವಮೊಗ್ಗ : ಜಿಲ್ಲೆಯ ಉಂಬ್ಳೇಬೈಲು ಸಮೀಪ ಭೀಕರ ಬಸ್ ಅಪಘಾತ ಸಂಭವಿಸಿದ್ದು, ಸರಕಾರಿ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಅವಘಡದಲ್ಲಿ 40 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಖಾಸಗಿ ಬಸ್ ಚಾಲಕನ ಸ್ಥಿತಿ ಗಂಭೀರ ವಾಗಿದೆ ಎಂದು ತಿಳಿದು ಬಂದಿದೆ. ಚಾಲಕ ಶ್ರೀಧರ್ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಂಬ್ಳೇಬೈಲು ಸಮೀಪದ ತೋಟದಕೆರೆ ಕ್ರಾಸ್ ಬಳಿ ನಡೆದ ಘಟನೆಯಲ್ಲಿ ಎರಡು ಬಸ್ ಗಳ ಮುಂಭಾಗ …
Read More »
BigTv News
July 1, 2022
Uncategorized
ನವದೆಹಲಿ : ದೈನಂದಿನ ಕೇಸ್ ಗಳ ಸಂಖ್ಯೆ ಹೆಚ್ಚಾಗ್ತಿದೆ.. ಕಳೆದ 24 ಗಂಟೆಗಳಲ್ಲಿ 17,070 ಹೊಸ ಪ್ರಕರಣಗಳು ವರದಿಯಾಗಿದ್ದು, 23 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 1.07 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 4 ಕೋಟಿ 34 ಲಕ್ಷಕ್ಕೆ ತಲುಪಿದೆ. ಈ ಪೈಕಿ 4 ಕೋಟಿ 28 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಕೋವಿಡ್‌ನಿಂದಾಗಿ ಇದುವರೆಗೆ 5,25,139 ಮಂದಿ ಮೃತಪಟ್ಟಿದ್ದಾರೆ. ಕಳೆದ …
Read More »
BigTv News
July 1, 2022
Uncategorized
ಚಂಡೀಗಢ: ʻಗರ್ಭದಲ್ಲಿರುವ ಮಗುವನ್ನು ದತ್ತು ತೆಗೆದುಕೊಳ್ಳುವಂತಿಲ್ಲʼ ಎಂದು ಪಂಜಾಬ್-ಹರಿಯಾಣ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಪಟಿಯಾಲ ನಿವಾಸಿ ಪೂಜಾ ರಾಣಿ ಎಂಬ ಮಹಿಳೆ ದತ್ತು ಪಡೆದ ಪೋಷಕರಿಂದ ತನ್ನ ನವಜಾತ ಶಿಶುವನ್ನು ಮರಳಿ ಕೊಡಿಸಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.ನನ್ನ ಮಗು ಗರ್ಭದಲ್ಲಿದ್ದಾಗಲೇ ಅದನ್ನು ದತ್ತು ಪಡೆಯಲು ದಂಪತಿಗಳಿಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ನಾನು ಕೂಡ ಸಮ್ಮತಿಸಿದ್ದೆ. ಮಗು 23 ಮೇ 2022 ರಂದು ಜನಿಸಿದಾಗಿನಿಂದ ದಂಪತಿಗಳ ಬಳಿಯೇ ಇದೆ. …
Read More »
BigTv News
July 1, 2022
Uncategorized
ಕೊಚ್ಚಿ: ಮದರಸಾದಲ್ಲಿ ವ್ಯಾಸಂಗಮಾಡುತ್ತಿದ್ದ ಬಾಲಕನನ್ನು ಒತ್ತೆಯಾಳಾಗಿಟ್ಟುಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೇರಳದ ತ್ವರಿತ ನ್ಯಾಯಾಲಯವು ಗುರುವಾರ ಮದರಸಾ ಶಿಕ್ಷಕನಿಗೆ ಒಟ್ಟು 67 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆಯು ಏಕಕಾಲದಲ್ಲಿ ಜಾರಿಯಾಗುವುದರಿಂದ ಅಪರಾಧಿ ಕೇವಲ 20 ವರ್ಷಗಳನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ.ವಿಶೇಷ ನ್ಯಾಯಾಧೀಶ ಸತೀಶ್ ಕುಮಾರ್ ವಿ ಅವರು 52 ವರ್ಷದ ಶಿಕ್ಷಕನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. ಶಿಕ್ಷಣ ಸಂಸ್ಥೆಯೊಂದರ ಸಿಬ್ಬಂದಿಯಾಗಿ ವಿದ್ಯಾರ್ಥಿಯ ಮೇಲೆ ಲೈಂಗಿಕ …
Read More »
BigTv News
July 1, 2022
Uncategorized
ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಶಿರಚ್ಛೇದ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ಇಡೀ ಅಪರಾಧದ ಹಿಂದಿನ ಸಂಚು ರೂಪಿಸುವಲ್ಲಿ ಹಾಗೂ ಸಿದ್ಧತೆಯಲ್ಲಿ ಭಾಗಿಯಾಗಿದ್ದರು ಎಂದು ಉದಯಪುರ ಐಜಿ ಪ್ರಫುಲ್ಲ ಕುಮಾರ್ ಮಾಹಿತಿ ನೀಡಿದ್ದಾರೆ. ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಕನ್ಹಯ್ಯಲಾಲ್ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಇದರಿಂದ ಕೆರಳಿದ ದುಷ್ಕರ್ಮಿಗಳು ಬಟ್ಟೆ ಹೊಲಿಸುವ ನೆಪದಲ್ಲಿ …
Read More »