BigTv News
July 26, 2022
Uncategorized
ಉತ್ತರಪ್ರದೇಶ: ಟ್ರಕ್- ಪೊಲೀಸ್ ವಾಹನ ಡಿಕ್ಕಿ ಹೊಡೆದು, ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಸುಲ್ತಾನ್‌ಪುರ ನಗರದ ಬಳಿ ನಡೆದಿದೆ. ಮೃತರನ್ನು ಪೊಲೀಸ್ ಕಾನ್ಸಟೇಬಲ್‌ಗಳಾದ ಮೊಯಿನ್ ಖಾನ್, ಅರುಣ್ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ಅಪಘಾತಕ್ಕೆ ವೇಗವಾಗಿ ವಾಹನ ಚಾಲನೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.
Read More »
BigTv News
July 26, 2022
Uncategorized
ಸವದತ್ತಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಬಸಿಡೋಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ , ಕಬ್ಬಿಣಾಂಶ (ಪಾಲಿಕ್ ಆಸಿಡ್)ವುಳ್ಳ ಮಾತ್ರೆಗಳನ್ನು ಸೇವಿಸಿದ ಬಳಿಕ 55 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಎಲ್ಲರನ್ನೂ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 239 ಮಕ್ಕಳು ಬಿಸಿಯೂಟ ಮಾಡಿದರು. ಊಟದ ಬಳಿಕ ಪ್ರತಿ ಸೋಮವಾರ ಕಬ್ಬಿಣಾಂಶದ ಮಾತ್ರೆ ನೀಡುವುದು ರೂಢಿ. ಅದೇ ರೀತಿ ಈ ಸೋಮವಾರ ಕೂಡ ಎಲ್ಲ ಮಕ್ಕಳಿಗೂ ಊಟದ ಬಳಿಕ ಮಾತ್ರೆ ನೀಡಲಾಗಿತ್ತು. ಸಂಜೆ 7.30ರ ಸುಮಾರಿಗೆ …
Read More »
BigTv News
July 26, 2022
Uncategorized
ನವದೆಹಲಿ: ಮಾದಕ ವ್ಯಸನಿಯಾಗಿದ್ದ ಪುತ್ರನನ್ನು ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಚೆಲ್ಲಿದ್ದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾತ ನ ಅಹ್ಮದಾಬಾದ್ ನಿವಾಸಿ ನೀಲೇಶ್ ಜೋಶಿ(65) ಬಂಧಿತ ಆರೋಪಿ. ಈತನ ಪುತ್ರ ಸ್ವಯಂ ಜೋಶಿ(21) ಕೊಲೆಯಾದವ. ಮಾದಕ ವ್ಯಸನದ ದಾಸನಾಗಿದ್ದ ಸ್ವಯಂ ಜೋಶಿ ಮದ್ಯ ಸೇವಿಸಲು ಹಣ ಕೊಡುವಂತೆ ಪೀಡಿಸಿದಾಗ ಕೋಪಗೊಂಡ ತಂದೆ ರುಬ್ಬು ಗುಂಡಿನಿಂದ ಹೊಡೆದು ಮಗನನ್ನು ಹತ್ಯೆ ಮಾಡಿದ್ದಾನೆ. ನಂತರ ಎಲೆಕ್ಟ್ರಿಕ್ ಕಟರ್ ನಿಂದ ತುಂಡಾಗಿ ದೇಹವನ್ನು …
Read More »
BigTv News
July 26, 2022
Uncategorized
ಕೊಪ್ಪಳ: ಕುಕನೂರು ತಾಲ್ಲೂಕಿನ ಭಾನಾಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪುಟ್ಟರಾಜು ಹಲಗೇರಿ (7) ಹಾಗೂ ಭೂಮಿಕಾ ಹಲಗೇರಿ (5) ಇಬ್ಬರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ಸೋಮವಾರ ಸ್ಥಳಾಂತರಿಸಲಾಗಿದೆ. ಇನ್ನುಳಿದ ಪಲ್ಲವಿ ಕರಿಗಾರ (20) ಅವರಿಗೆ ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
Read More »
BigTv News
July 26, 2022
Uncategorized
ನಾಗರಕರ್ನೂಲ್ : ಹೃದಯವಿದ್ರಾವಕ ಘಟನೆಯೊಂದರಲ್ಲಿ ಮಡಿಲಲ್ಲಿದ್ದ ಮಗುವಿಗೆ ಹಾಲುಣಿಸುತ್ತಿರುವಾಗಲೇ ತಾಯಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ತಿಮ್ಮಾಜಿಪೇಟ್ ಮಂಡಲದ ನೆರೆಲ್ಲಪಲ್ಲಿಯಲ್ಲಿ ನಡೆದಿದೆ. ಕುಟುಂಬಸ್ಥರ ಪ್ರಕಾರ 25 ವರ್ಷದ ಜಯಶ್ರೀ ತನ್ನ ಮೊದಲ ಹೆರಿಗೆಗೆ ತನ್ನ ತಾಯಿಯ ಮನೆಗೆ ಬಂದಿದ್ದರು. 2 ತಿಂಗಳ ಕೆಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಯ ಪತಿ ಪ್ರಶಾಂತ್ ಶನಿವಾರ ತಿರ್ಮಲಾಪುರದಿಂದ ಬಂದು ಆಕೆಯ ಮೈಬಣ್ಣ ಬದಲಾಗಿ ಕಪ್ಪಾಗಿದ್ದರಿಂದ ಮಹಬೂಬನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. …
Read More »
BigTv News
July 26, 2022
Uncategorized
ಹಾವೇರಿ: ‘ರಾಜ್ಯದಲ್ಲಿ ಬಿಜೆಪಿ ಹಿಂದೂ-ಮುಸ್ಲಿಮರ ಮಧ್ಯೆ ವಿಷಬೀಜ ಬಿತ್ತಿ ಭಾವೈಕ್ಯಕ್ಕೆ ಧಕ್ಕೆ ತರುತ್ತಿದೆ. ಬ್ರಿಟಿಷರ ಒಡೆದಾಳುವ ನೀತಿಯನ್ನೇ ಆರ್‌ಎಸ್‌ಎಸ್ ಜೊತೆಗೆ ಸೇರಿ ಬಿಜೆಪಿ ಮಾಡುತ್ತಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಕೊಡುಗೆಯಿದೆ’ ಎಂದು ಶಾಸಕ ಜಮೀರ ಅಹಮದ್ ಖಾನ್ ಹೇಳಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಅಮೃತ ಮಹೋತ್ಸವ ಆಚರಣೆ ಪೂರ್ವಭಾವಿಯಾಗಿ ನಗರದ ಶಿವಶಕ್ತಿ ಪ್ಯಾಲೇಸ್‍ನಲ್ಲಿ ಸೋಮವಾರ ಆಯೋಜಿಸಿದ್ದ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ನಾವೂ ಹಿಂದೂಸ್ತಾನಿಗಳೇ. …
Read More »
BigTv News
July 26, 2022
Uncategorized
ಕೊಪ್ಪಳ: ಮದುವೆಯಾಗಿ ಮುದ್ದಾದ ಎರಡು ಮಕ್ಕಳಿದ್ದರು. ಆಕೆಗೆ ಬೇರೆ ಊರಿನಲ್ಲಿರುವ ಪ್ರಿಯಕರ ಮೇಲೆ ಆಸೆ, ಮೊದಲು ಗಂಡನ ಕಣ್ಣು ತಪ್ಪಿಸಿ ಪ್ರಿಯಕರನೊಂದಿಗೆ ಅಕ್ರಮ ಸಂಬಂಧ ಹೊಂದುತ್ತಿದ್ದಳು. ಈ ಬಗ್ಗೆ ಗಂಡ ಸಾಕಷ್ಟು ಬಾರಿ ಬುದ್ದಿ ಹೇಳಿದ್ರು ಪ್ರಯೋಜನವಾಗಲಿಲ್ಲ. ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಿರುವುದಕ್ಕೆ ಆಗಾಗ ಜಗಳು ಕೂಡ ಮಾಡುತ್ತಿದ್ದಳು. ಮೊನ್ನೆ ಹೆಂಡತಿಯೊಂದಿಗೆ ಆಕೆ ಪ್ರಿಯಕರ ಇರುವುದನ್ನು ನೋಡಿ ಬೇಸತ್ತು ಗಂಡ ನೇಣಿಗೆ ಶರಣಾಗಿದ್ದಾನೆ.
Read More »
BigTv News
July 26, 2022
Uncategorized
ನವದೆಹಲಿ : ಪ್ರಸ್ತುತ ರಾಜಕೀಯದ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂವೇದನಾಶೀಲ ಹೇಳಿಕೆ ನೀಡಿದ್ದಾರೆ. ‘ಇಂದಿನ ರಾಜಕೀಯವು ಅಧಿಕಾರದ ಗುರಿಯಾಗಿ ಮುಂದುವರಿಯುತ್ತಿದೆ. ಹಾಗಾಗಿ ಕೆಲವೊಮ್ಮೆ ರಾಜಕೀಯವನ್ನ ತೊರೆಯುವ ಮನಸ್ಸಾಗುತ್ತೆ’ ಎಂದು ಗಡ್ಕರಿ ಹೇಳಿದರು.ಇನ್ನು ಇತ್ತಿಚಿಗೆ ಗಡ್ಕರಿ ನೀಡಿದ ಈ ರೀತಿಯ ಕೆಲವೊಂದು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ‘ನಾನು ರಾಜಕೀಯವನ್ನ ತ್ಯಜಿಸಬೇಕೇ ಅಥವಾ ಬೇಡವೇ ಎಂದು ನನಗೆ ಹಲವು ಬಾರಿ ಅನಿಸುತ್ತೆ, ಜೀವನದಲ್ಲಿ ರಾಜಕೀಯಕ್ಕಿಂತ ಹೆಚ್ಚಿನದನ್ನ ಮಾಡಬೇಕಾಗಿದೆ’ …
Read More »
BigTv News
July 26, 2022
Uncategorized
ನವದೆಹಲಿ : ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಲಾಗಿದ್ದ ಆಸನ ವ್ಯವಸ್ಥೆ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಸ್ಥಾನಮಾನಕ್ಕೆ ಅನುಗುಣವಾದ ಆಸನ ವ್ಯವಸ್ಥೆಯನ್ನು ಅವರಿಗೆ ಮಾಡಿರಲಿಲ್ಲ. ಅವಮಾನ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಲಾಗಿತ್ತು’ ಎಂದು ರಾಜ್ಯಸಭೆ ಸಭಾಪತಿಗೆ ಕಾಂಗ್ರೆಸ್, ಟಿಎಂಸಿ ಹಾಗೂ ಇತರ ವಿಪಕ್ಷಗಳು ಜಂಟಿ ದೂರು ನೀಡಿದೆ. ದ್ರೌಪದಿ ಅವರು ಪ್ರಮಾಣವಚನ ಸ್ವೀಕರಿಸುವ ವೇಳೆ ಖರ್ಗೆ ಮೊದಲ …
Read More »
BigTv News
July 26, 2022
Uncategorized
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಿದ್ದರಾಮೋತ್ಸವದ ಅಗತ್ಯವಿರಲಿಲ್ಲ. ಬದಲಿಗೆ ಕಾಂಗ್ರೆಸ್ ಉತ್ಸವ ನಡೆಯಬೇಕಿತ್ತು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು. ತಮ್ಮ ಹುಟ್ಟುಹಬ್ಬಕ್ಕೆ ಸ್ನೇಹಿತರೊಬ್ಬರು ಉಡುಗೊರೆಯಾಗಿ ನೀಡಿದ್ದ ಆಯಂಬುಲೆನ್ಸ್ ಅನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಮೊನ್ನೆ ಕಲಾಮಂದಿರದಲ್ಲಿ ಸಿದ್ದರಾಮಯ್ಯ ಸಾಧನೆ ಕುರಿತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಯಾರೊಬ್ಬರೂ ಕಾಂಗ್ರೆಸ್ ಬಗ್ಗೆ ಮಾತನಾಡಲಿಲ್ಲ. ಸ್ವತಃ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ಹೆಸರೇಳಲಿಲ್ಲ. ಬರೀ …
Read More »