Breaking News

ಬಾಗಲಕೋಟೆ

ಸಮವಸ್ತ್ರದಲ್ಲೇ ಸ್ವಾಮೀಜಿ ಕಾಲಿಗೆ ಬಿದ್ದ ಆರು ಮಂದಿ ಪೊಲೀಸರಿಗೆ‌ ವರ್ಗಾವಣೆ ಶಿಕ್ಷೆ

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಸಮವಸ್ತ್ರ ಧರಿಸಿ ಪೊಲೀಸರು ಸ್ವಾಮೀಜಿಯ ಕಾಲಿಗೆ ಬಿದ್ದು ಆಶೀರ್ವಾದದ ಜೊತೆಗೆ ಅವರಿಂದ ಬಕ್ಷಿಸಾಗಿ ಹಣವನ್ನು ಪಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ವೈರಲಾಗಿತ್ತು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಆರು ಮಂದಿ ಪೊಲೀಸರನ್ನು ಇಂದು ವರ್ಗಾವಣೆ ಮಾಡಿದೆ. ಈ ಬಗ್ಗೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಅಮರನಾಥ್ ರೆಡ್ಡಿ ಆರು ಮಂದಿಯನ್ನು ವರ್ಗಾವಣೆ ಮಾಡಲು ಆದೇಶ ನೀಡಿದ್ದಾರೆ.

Read More »

ಸ್ವಾಮೀಜಿ ಕಾಲಿಗೆ ಬಿದ್ದು ಹಣ ಪಡೆದ ಪೊಲೀಸರನ್ನು ಎತ್ತಂಗಡಿ ಮಾಡಿದ SP! ಆ ಸ್ವಾಮೀಜಿ ಯಾರು?

ನಿನ್ನೆಯಷ್ಟೇ ಸ್ವಾಮೀಜಿ ಓರ್ವರ ಕಾಲಿಗೆ ಸಮವಸ್ತ್ರದಲ್ಲೇ ಪೊಲೀಸರು ನಮಸ್ಕಾರ ಮಾಡಿ ನೋಟು ಪಡೆದುಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಕಾಲಿಗೆ ಪೊಲೀಸರು ನಮಸ್ಕಾರ ಮಾಡಿ, ಹಣ ಪಡೆದಿದ್ದ ವಿಡಿಯೋವೊಂದು ನಿನ್ನೆ ವೈರಲ್ ಆಗಿತ್ತು. ವಿಡಿಯೋ ವೈರಲ್ ಬೆನ್ನಲ್ಲೇ ಆರು ಜನ ಪೊಲೀಸರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಬಾಗಲಕೋಟೆಯಲ್ಲಿ ಸ್ವಾಮೀಜಿಗೆ ನಮಸ್ಕಾರ ಮಾಡಲಿ, ಆದರೆ ಸಮವಸ್ತ್ರದಲ್ಲಿ ನಮಸ್ಕಾರ ಮಾಡುವುದಲ್ಲದೇ ಹಣ ಕೂಡ ಪಡೆದಿದ್ದು ಎಷ್ಟರ …

Read More »

3.70 ಕೋಟಿ ಬಿಲ್ ಬಾಕಿಯಿಂದ ಪೂರ್ಣಗೊಳ್ಳದ ಮನೆಗಳು. ಬಾಗಲಕೋಟೆಯಲ್ಲಿ ನಡೆದ ಘಟನೆ

ವಾಂಬೆ ಕಾಲೋನಿ ಯಲ್ಲಿ ಮೂರು ವರ್ಷ ಆದರೂ ಮುಗಿಯದ ಕಾಮಗಾರಿ ಬಾಗಲಕೋಟೆಯಲ್ಲಿ ನಡೆದ ಘಟನೆ ಸ್ಲಂ ಬೋರ್ಡ್ ಮನೆಗಳ ಕಾಮಗಾರಿ ಕಾಲಮ್ ಹಂತದಲ್ಲಿ ನಿಂತ ಮನೆಗಳು ಬಡವರಿಗೆ ಕಟ್ಟಿಸಿದ ಮನೆಗಳ ಅಧೋಗತಿ ಇದನ್ನು ಕೇಳುವವರು ಯಾರೆಲ್ಲ ಹೇಳುವವರು ಯಾರಿಲ್ಲದಂತಾಗಿದೆ ಅರ್ಧಂಬಂದ ಕಟ್ಟಿದ 500 ಮನೆಗಳು 3.70 ಕೋಟಿ ರೂ ಬಾಕಿ ಬೋರ್ಡ್ ನಿಂದ ಕೊಡುವುದಿದೆ. ಅರ್ಜಿ ಹಾಕಿದ ಎಷ್ಟೋ ಜನರು ಹೇಳಿಕೆಯನ್ನು ನೀಡಿದ್ದಾರೆ. 55,000ಗಳನ್ನು ನೀಡಿದ ಕಾರ್ಮಿಕರು ಮನೆಗಳು ಪೂರ್ಣಗೊಳ್ಳದೆ …

Read More »

ಕೃಷ್ಣಾ ಮೇಲ್ದಂಡೆ ಯೋಜನೆ: 10 ವರ್ಷಗಳಲ್ಲಿ ಅವಿಭಜಿತ ಆಂಧ್ರಕ್ಕೆ ಹರಿದ 5,611 ಟಿಎಂಸಿ ಅಡಿ ನೀರು

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಕಾಮಗಾರಿ ನನೆಗುದಿಗೆ ಬಿದ್ದಿದ್ದು, 10 ವರ್ಷಗಳಲ್ಲಿ 5,611 ಟಿಎಂಸಿ ಅಡಿ ನೀರು ಅವಿಭಜಿತ ಆಂಧ್ರ ಪ್ರದೇಶಕ್ಕೆ ಹರಿದು ಹೋಗಿದೆ. ರಾಜ್ಯಕ್ಕೆ ತನ್ನ ಪಾಲಿನ 1,170 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಕೃಷ್ಣಾ ನ್ಯಾಯಮಂಡಳಿ 2010ರಲ್ಲಿ ನೀಡಿದ ತೀರ್ಪಿನಲ್ಲಿ ಪ್ರತಿ ವರ್ಷ 177 ಟಿಎಂಸಿ ಅಡಿ ನೀರು ಬಳಕೆಗೆ ಅವಕಾಶ ನೀಡಿದೆ. ಮೂರನೇ ಹಂತದ ಯೋಜನೆ ಜಾರಿಯಾಗಿದ್ದರೆ ಕಲಬುರಗಿ, ವಿಜಯಪುರ, …

Read More »

ಬಾಗಲಕೋಟೆಯಲ್ಲಿ ಅಮಾನವೀಯ ಕೃತ್ಯ: ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ

ಬಾಗಲಕೋಟೆ: ದೇವಸ್ಥಾನ ಪ್ರವೇಶಿದ್ದಕ್ಕೆ ದಲಿತ ಯುವಕನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ನಡೆದಿದೆ. ದ್ಯಾಮವ್ವನ ಗುಡಿ ಪ್ರವೇಶಿದ್ದಕ್ಕೆ ಸವರ್ಣೀಯರು ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕ ಅರ್ಜುನ್‌ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ದೇವಸ್ಥಾನದ ಮುಂದಿನ ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದಾರೆ ಎಂಬ ಮಾಹಿತಿ …

Read More »

ಮೆಡಿಕಲ್ ಕಾಲೇಜ್ ನಲ್ಲಿ ಓಣಂ ಹಬ್ಬ ಆಚರಣೆ: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು

ಬಾಗಲಕೋಟೆ: ಅದು ಪಕ್ಕಾ ಕನ್ನಡ ನೆಲ, ಅದರಲ್ಲೂ ಜವಾರಿ ನಾಡು ಉತ್ತರ ಕರ್ನಾಟಕ. ಇಂತಹ ನಾಡಲ್ಲಿ ಕೇರಳ ಕುಟ್ಟಿಗಳು ಒಂದೇ ಸಮನೆ ಹೆಜ್ಜೆ ಹಾಕುತ್ತಿದ್ದರು‌. ಚಂಡೆ ಮದ್ದಳೆ ಸದ್ದಿಗೆ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದರು. ಉತ್ತರ ಕರ್ನಾಟಕದಲ್ಲಿ ಕೇರಳ ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದರು. ಹುರುಪಿನಿಂದ ಚಂಡೆ ಬಾರಿಸುತ್ತಿರುವ ಕಲಾವಿದರು ಚಂಡೆ ಮದ್ದಳೆ ಸದ್ದಿಗೆ ಯುವತಿಯರ ಭರ್ಜರಿ ಕುಣಿತ. ಕೇರಳ ಸಾಂಪ್ರದಾಯಿಕ ಉಡುಗೆಯಲ್ಲಿ ಕಲರ್ ಪುಲ್ ಸಂಭ್ರಮ. ಈ ದೃಶ್ಯ …

Read More »

ಫಲಾನುಭವಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಪಿ.ಸಿ.ಗದ್ದಿಗೌಡರ ಸೂಚನೆ

ಬಾಗಲಕೋಟೆ: ಫಲಾನುಭವಿಗಳನ್ನು ಅನಗತ್ಯವಾಗಿ ಅಲೆದಾಡಿಸಬೇಡಿ, ಪ್ರಾಥಮಿಕ ಹಂತದಲ್ಲೇ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಲೀಡ್ ಬ್ಯಾಂಕ್ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಯೋಜನೆಯಡಿ ನೀಡಲಾಗುವ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಇಲಾಖೆಯ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು. ರೈತರ ಮಕ್ಕಳು …

Read More »

ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕೆ ಎಸ್ ಆರ್ ಟಿ ಸಿ ನೌಕರ ಆತ್ಮಹತ್ಯೆ

ಬಾಗಲಕೋಟೆ: ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕ ಕಮ್​ ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನಲ್ಲಿ ನಡೆದಿದೆ. ಮೃತರನ್ನು ಶ್ರೀಶೈಲ ವಿಭೂತಿ (45) ಎಂದು ಗುರುತಿಸಲಾಗಿದ್ದು, ಬೀಳಗಿಯ ತಮ್ಮ ಮನೆಯಲ್ಲಿ ಶನಿವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೀಳಗಿ ಕೆಎಸ್​ಆರ್​ಟಿಸಿ ಬಸ್ ಡಿಪೋ ಮ್ಯಾನೇಜರ್​​​​​​​ ಮತ್ತು ಜಿಲ್ಲಾ ಕಂಟ್ರೋಲರ್​ ಕಿರುಕುಳ ನೀಡಿದ್ದಾರೆ …

Read More »

ಅನಧಿಕೃತವಾಗಿ ಶ್ರೀಗಂಧದ ಮರ ಸಾಗಾಟ: ಇಬ್ಬರನ್ನು ಬಂಧಿಸಿದ ಪೋಲಿಸರು

ಬಾಗಲಕೋಟೆ: ಸರ್ಕಾರದಿಂದ ಯಾವುದೇ ಪರವಾನಗೆ ಪಡೆಯದೇ ಅನಧಿಕೃತವಾಗಿ ಶ್ರೀಗಂಧದ ಹಸಿ ಮರದ ತುಂಡನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಾಗಲಕೋಟ ಜಿಲ್ಲೆಯ ಇಳಕಲ್ ನಗರ ಪೋಲಿಸರು ಬಂಧಂದಿಸಿದ್ದಾರೆ ಪಿಎಸ್ಐ ಎಸ್.ಆರ್. ನಾಯಕ್ ರವರು ಖಚಿತ ಮಾಹಿತಿ ಮೇರೆಗೆ ಇಳಕಲ್ ದಿಂದ ಕಂದಗಲ್ಲ ಮಾರ್ಗದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಹತ್ತಿರ ಟಮ್ ಟಂ ವಾಹನದಲ್ಲಿ ಸಾಗಿಸುತ್ತಿದ್ದ 70 ಕೆಜಿ ತೂಕದ ಶ್ರೀಗಂಧದ ಮರದ ದಿಣ್ಣೆ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಕುರಿತು ಕಂದಗಲ್ಲದ …

Read More »

ಹಳದಿ ರೋಗದಿಂದ ಹೆಸರುಕಾಳು ಬೆಲೆ ಕುಸಿತ

ಬಾಗಲಕೋಟೆ: ಸತತ ಮಳೆ ಸುರಿಯುತ್ತಿರುವುದರಿಂದ ಹೆಸರುಕಾಳಿಗೆ ಹಳದಿ ರೋಗ ಕಾಡುತ್ತಿದ್ದು, ಬೆಲೆ ಕುಸಿದಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಬಾಗಲಕೋಟೆ, ಗದಗ, ಯಾದಗಿರಿ, ಧಾರವಾಡ, ಕೊಪ್ಪಳ, ವಿಜಯಪುರ, ರಾಯಚೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಹೆಸರುಕಾಳು ಪ್ರಮುಖ ಬೆಳೆಯಾ‌ಗಿದೆ. 2.50 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗಿದೆ. ಬಾಗಲಕೋಟೆ, ಗದಗ, ಯಾದಗಿರಿ, ಹುಬ್ಬಳ್ಳಿ ಸೇರಿ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಸರುಕಾಳು ಆವಕ ಆಗುತ್ತಿದೆ. ಕ್ವಿಂಟಲ್‌ಗೆ ₹2,004ರಿಂದ ₹8,400ರ ವರೆಗೆ ಬೆಲೆ ಇದೆ. …

Read More »