Warning: Undefined array key "wpdb" in /home/eamphica/public_html/wp-content/mu-plugins/blaze-curator-hq.php on line 4442
ಹಾಸನ - bigtvnews | Hubli Dharwad News | Kannada News | Karnataka News - Page 4
Breaking News

ಹಾಸನ

ಮಳೆ ಆರ್ಭಟಕ್ಕೆ ಹಾಸನ ಜನತೆ ತತ್ತರ

ಹಾಸನ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಂಗಳವಾರ ಮಧ್ಯಾಹ್ನ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ 3 ಗಂಟೆಗೆ ಶುರುವಾದ ಮಳೆ ಅರ್ಧ ತಾಸಿಗೂ ಹೆಚ್ಚು ಸುರಿಯಿತು. ಶಾಲಾ ಆವರಣದಲ್ಲಿ ನೀರು ನಿಂತು ಮಕ್ಕಳ ಓಡಾಟಕ್ಕೂ ತೊಂದರೆ ಆಯಿತು. ಬಿ.ಎಂ. ರಸ್ತೆಯಲ್ಲಿ ನೀರು ನಿಂತು ಪಾದಚಾರಿಗಳು ಹಾಗೂ ವಾಹನ ಸಂಚಾರಕ್ಕೂ ಅಡ್ಡಿಯಾಯಿತು. ಹಲವರು ಮರದ ಕೆಳಗೆ ನಿಂತು ಮಳೆಯಿಂದ ರಕ್ಷಣೆ ಪಡೆದರು. ನಿರಂತರ ಮಳೆಯಿಂದಾಗಿ ಜನರು ಚಳಿಯಿಂದ ನಡುಗುತ್ತಿದ್ದಾರೆ. ಮಕ್ಕಳು …

Read More »

ಜನತಾ ಜಲಧಾರೆ ಕಾರ್ಯಕ್ರಮ : ಇಬ್ಬರು ಶಾಸಕರು ಗೈರುಹಾಸ

ಹಾಸನ: ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಜನತಾ ಜಲಧಾರೆ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ತವರು ಕ್ಷೇತ್ರದಿಂದ ಇಬ್ಬರು ಶಾಸಕರು ಹಾಜರಾಗಿರುವುದು ಕಂಡು ಬಂದಿತ್ತು. ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ ಅವರು ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದರು. ಜೆಡಿಎಸ್ ಮುಖಂಡರಾದ ಎಚ್.ಡಿ.ರೇವಣ್ಣ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಜತೆಗಿನ ಭಿನ್ನಾಭಿಪ್ರಾಯದಿಂದ ಶಿವಲಿಂಗೇಗೌಡ ಎರಡು ತಿಂಗಳಿಂದ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.

Read More »

ಪಿಎಸ್‌ಐ ನೇಮಕಾತಿ ಪ್ರಕರಣ : ಬಂಧಿತ ಆರೋಪಿಯ ಅಣ್ಣ ಆತ್ಮಹತ್ಯೆ

ಹಾಸನ: ಪಿಎಸ್‌ಐ ನೇಮಕಾತಿ ಹಗರಣದ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ತಿದೆ. ಇದೀಗ ಆರೋಪಿಯ ಅಣ್ಣನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಸನದ ಹೊಳೆನರಸೀಪುರ ತಾಲ್ಲೂಕಿನ ಗುಂಜೇವು ಗ್ರಾಮದ ಮನುಕುಮಾರ್ ಎಂಬಾತ ಪಿಎಸ್‌ಐ ಪರೀಕ್ಷೆ ಬರೆದು 50 ನೇ ರ್ಯಾಂಕ್ ಪಡೆದು ಆಯ್ಕೆಯಾಗಿದ್ದ, ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಪಿಎಸ್‌ಐ ಅಭ್ಯರ್ಥಿಗಳನ್ನು ವಿಚಾರಣೆ ನಡೆಸಿದ್ದ ಸಿಐಡಿ ಪೊಲೀಸರು ಕೆಲವರನ್ನು ಬಂಧನ ಮಾಡಿದ್ದರು. ಈ ಹಂತದಲ್ಲಿ ಸಿಐಡಿ ಅಧಿಕಾರಿಗಳು ಅಭ್ಯರ್ಥಿ ಮನುಕುಮಾರ್‌ನನ್ನ ಬಂಧಿಸಿದ್ದರು. …

Read More »

ಪಿಎಸ್‌ಐ ಅಕ್ರಮ : ಕಿಂಗ್‌ಪಿನ್ ಹೆಸರು ಹೇಳಿದರೆ ರಾಜ್ಯ ಸರ್ಕಾರವೇ ಬಿದ್ದುಹೋಗುತ್ತದೆ

ಹಾಸನ: ಪಿಎಸ್‌ಐ ನೇಮಕಾತಿಯ ಅಕ್ರಮದ ಕಿಂಗ್‌ಪಿನ್ ಹೆಸರು ಹೇಳಲು ಸಾಧ್ಯನಾ..? ಕಿಂಗ್‌ಪಿನ್ ಹೆಸರು ಹೇಳಿದರೆ ರಾಜ್ಯ ಸರ್ಕಾರವೇ ಬಿದ್ದುಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಚನ್ನರಾಯಪಟ್ಟಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿದ ಅವರು. ಪಿಎಸ್ ಐ ಹಗರಣದ ಬಗ್ಗೆ ಯಾರೂ ಬಿಜೆಪಿಯಲ್ಲಿ ಮಾತನಾಡುತ್ತಿಲ್ಲ. ಅಲ್ಲಿನ ಭವಿಷ್ಯತ್ ನಾಯಕನ ಬಗ್ಗೆ ಮಾತನಾಡುವ ಧೈರ್ಯ ಯಾರಿಗೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಕುಟುಕಿದರು.

Read More »

ರಸ್ತೆ ಅಪಘಾತದಲ್ಲಿ ಯೋಧ ಸಾವು

ಹಾಸನ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ದಾಸರಕೊಪ್ಪಲು ಗ್ರಾಮದ ಯೋಧ ಸಂಜಯ್ (22) ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ. ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಜಯ್, ರಜೆಯ ಮೇಲೆ ತವರಿಗೆ ಬಂದಿದ್ದರು.ಮೂರು ದಿನಗಳ ಹಿಂದೆ ಹಾಸನದ ಎಂ.ಜಿ ರಸ್ತೆಯಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಬೆಂಗಳೂರಿನ ಕಮಾಂಡೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೇಶ ಸೇವೆ ಮಾಡಬೇಕು ಎಂಬ ಮಹದಾಸೆಯಿಂದ ಭಾರತೀಯ ಸೇನೆ ಸೇರಿದ್ದ ಸಂಜಯ್, …

Read More »

ಮಹಿಳೆ ಕೊಲೆ ಪ್ರಕರಣ : ಆರೋಪಿ‌ ಬಂಧನ

ಹಾಸನ: ಅರಸೀಕೆರೆ ರಸ್ತೆಯ ದೊಡ್ಡಪುರದ ರೇವತಿ ಕೊಲೆ ಪ್ರಕರಣದಲ್ಲಿ ಆರೋಪಿ ಲತೇಶ ಎಂಬಾತನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಾರ್ಚ್‌ 16ರಂದು ಸಂಜೆ ಮನೆ ಬಳಿ ಒಬ್ಬರೇ ಇದ್ದ ರೇವತಿಯನ್ನು ಲತೇಶ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ.ಅದಾದ ಬಳಿಕ ಸ್ಥಳಕ್ಕಾಗಮಿಸಿದ ಶ್ವಾನದಳ ನೇರವಾಗಿ ಲತೇಶನ ಮನೆ ಬಳಿಗೆ ಹೋಗಿ ನಿಂತಿತ್ತು.ಇದರ ಆಧಾರದ ಮೇಲೆ ಆತನನ್ನು ವಶಕ್ಕೆ ಪಡೆದಿದ್ದ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಆರೋಕಿಯಪ್ಪ ಹಾಗೂ ತಂಡ, ತೀವ್ರ ವಿಚಾರಣೆಗೆ …

Read More »

ಚುನಾವಣೆ ನಡೆದರೆ ಮನೆಯಲ್ಲಿ ಮಲಗಿಕೊಳ್ಳೋದಕ್ಕೆ ಆಗಲ್ಲ :ಎಚ್.ಡಿ.ದೇವೇಗೌಡ

ಹಾಸನ: ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಇದೆ. ಅದರ ಜೊತೆಗೆ ಕರ್ನಾಟಕದ ಚುನಾವಣೆ ನಡೆಯಲಿದೆ ಎನ್ನಲಾಗುತ್ತಿದೆ. ಚುನಾವಣೆ ನಡೆದರೆ ಮನೆಯಲ್ಲಿ ಮಲಗಿಕೊಳ್ಳೋದಕ್ಕೆ ಆಗಲ್ಲ. ಸೋಲೋ, ಗೆಲುವೋ ನಾವೂ ಕೂಡ ಹೋರಾಟ ಮಾಡುತ್ತೇವೆ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು. ಹೊಳೆನರಸೀಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಬಿಜೆಪಿ ಬಲ ಹೆಚ್ಚಬಹುದು ಅಥವಾ ಕುಗ್ಗಬಹುದು. ರಾಜ್ಯಗಳ ಚುನಾವಣೆಗೂ, …

Read More »

ಹಿಜಾಬ್ ವಿವಾದದ ಅಂತಿಮ ತೀರ್ಪು ಬರುವವರೆಗೂ ಕಾಯಬೇಕು : ಕುಮಾರಸ್ವಾಮಿ

ಹಾಸನ: ಹಿಜಾಬ್ ವಿವಾದದ ಬಗ್ಗೆ ಅಂತಿಮ ತೀರ್ಪು ಬರುವವರೆಗೂ ಸಮಾಧಾನದಿಂದ ಇರಬೇಕು ಎಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಾಗರಹಳ್ಳಿ ಗ್ರಾಮದ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದ ವೇದಿಕೆಯಲ್ಲಿ ಮಾತಾನಾಡಿದ ಅವರು, ನನಗೆ ಜನ್ಮ ಕೊಟ್ಟ ಜಿಲ್ಲೆ ಹಾಸನ, ರಾಜಕೀಯಕ್ಕೆ ಜನ್ಮ ಕೊಟ್ಟ ಜಿಲ್ಲೆ ರಾಮನಗರ ಎಂದರು.

Read More »

ಮುತ್ತು ಕೊಟ್ಟು ಅಮಾನತು ಆದ ಪ್ರಾಧ್ಯಪಕ ಡಾ. ಲೋಕೇಶ್

ಹಾಸನ: ತರಬೇತಿ ನಿರತ ವೈದ್ಯೆಗೆ ಲಿಫ್ಟ್​ನಲ್ಲಿ ಬಲವಂತವಾಗಿ ಮುತ್ತುಕೊಟ್ಟು ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಹಿಮ್ಸ್ ಆಸ್ಪತ್ರೆಯ ವೈದ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಪಕ ಡಾ. ಲೋಕೇಶ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಡಾ.ಲೋಕೇಶ್ ಅವರನ್ನ ಅಮಾನತು ಮಾಡಲಾಗಿದೆ. ಜ.12ರಂದು ಲಿಫ್ಟ್​ನಲ್ಲಿ ತೆರಳುತ್ತಿದ್ದ ತರಬೇತಿ ನಿರತ ವೈದ್ಯೆಗೆ ಡಾ.ಲೋಕೇಶ್​ ಏಕಾಏಕಿ ಮುತ್ತು ಕೊಟ್ಟಿದ್ದಾಗಿ ಸಂತ್ರಸ್ತೆಯು ಹಾಸನ‌ ವೈದ್ಯಕೀಯ ಸಂಸ್ಥೆಗೆ ಜ.14ರಂದು ದೂರು ನೀಡಿದ್ದರು. ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ …

Read More »

ಸಿಎಂ ಮನೆ ಮುಂದೆ ರೇವಣ್ಣ ಏಕಾಂಗಿ ಧರಣಿ

ಹಾಸನ: ಇಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣ ಎದುರು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಏಕಾಂಗಿಯಾಗಿ ಧರಣಿ ನಡೆಸಲಿದ್ದಾರೆ. ಹೆಚ್.ಡಿ.ರೇವಣ್ಣ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಎಂ.ಎಸ್ಸಿ ಫುಡ್ ಅಂಡ್ ನ್ಯೂಟ್ರಿಷಿಯನ್ ಕೋರ್ಸ್ ತೆರೆಯಲು ವಿಶ್ವವಿದ್ಯಾಲಯ ಅನುಮತಿ ಕೋರಿದ್ದರು. ವಿಶ್ವವಿದ್ಯಾಲಯ ಅನುಮತಿ ಕೊಟ್ಟರೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಒಪ್ಪಿಗೆ ಕೊಡುತ್ತಿಲ್ಲ ಎಂದು ಈ ಹಿಂದೆ ಆರೋಪಿಸಿದ್ದರು.

Read More »